Chikkaballapur News: ಶಿಕ್ಷಕರ ಸೇವೆ ಸಮಾಜದ ಶಾಶ್ವತ ಸಂಪತ್ತು: ಹರೀಶ್ ಕೆ.ರೆಡ್ಡಿ
ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಹೆಚ್. ನಾಗರಾಜ್ ಅವರು ಸಲ್ಲಿಸಿರುವ ಸೇವೆ ಅನುಕರಣೀಯವಾಗಿದೆ. ಅವರ ಶಿಸ್ತು, ಬದ್ಧತೆ ಹಾಗೂ ಶಿಕ್ಷಣದ ಮೇಲಿನ ಪ್ರೀತಿ ಮುಂದಿನ ಪೀಳಿಗೆಯ ಶಿಕ್ಷಕರಿಗೂ ಪ್ರೇರಣೆಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
-
ಚಿಕ್ಕಬಳ್ಳಾಪುರ: ಶಿಕ್ಷಕರು ನಿವೃತ್ತಿಯಾಗುವುದು ಕೇವಲ ಸರ್ಕಾರಿ ಸೇವೆಯಿಂದ ಮಾತ್ರ. ಅವರು ರೂಪಿಸಿದ ವಿದ್ಯಾರ್ಥಿಗಳ ಸಾಧನೆ ಮತ್ತು ಸಮಾಜಕ್ಕೆ ನೀಡಿದ ಮೌಲ್ಯಯುತ ಸೇವೆ ಎಂದಿಗೂ ನಿವೃತ್ತಿಯಾಗುವುದಿಲ್ಲ ಎಂದು ಶ್ರೀ ಹರಿಕೃಷ್ಣ ಫೌಂಡೇಶನ್ ಅಧ್ಯಕ್ಷ ಗೋದಾನಿ ಹರೀಶ್ ಕೆ. ರೆಡ್ಡಿ ಹೇಳಿದರು.
ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿಯ ಶ್ರೀ ಚಿತ್ರ ಪಿನಾಕಿನಿ ಶಾಲೆಯಲ್ಲಿ 1993ರಿಂದ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಶಿಕ್ಷಕ ಹೆಚ್. ನಾಗರಾಜ್ ಅವರ ಬೀಳ್ಕೊಡುಗೆ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದರು.
ಇದನ್ನೂ ಓದಿ: Chikkaballapur News: ತೋಟಗಾರಿಕೆ ಯೋಜನೆಗಳ ಪ್ರಗತಿ ಪರಿಶೀಲನೆ: ಗುರಿ ಸಾಧನೆಗೆ ಸಿಇಒ ಸೂಚನೆ
ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಹೆಚ್. ನಾಗರಾಜ್ ಅವರು ಸಲ್ಲಿಸಿರುವ ಸೇವೆ ಅನುಕರಣೀಯವಾಗಿದೆ. ಅವರ ಶಿಸ್ತು, ಬದ್ಧತೆ ಹಾಗೂ ಶಿಕ್ಷಣದ ಮೇಲಿನ ಪ್ರೀತಿ ಮುಂದಿನ ಪೀಳಿಗೆಯ ಶಿಕ್ಷಕರಿಗೂ ಪ್ರೇರಣೆಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಕರ ಪರಿಶ್ರಮದಿಂದಲೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಅಂತಹ ಮಹನೀಯರ ಸೇವೆ ಯನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನಿವೃತ್ತಿಯ ನಂತರವೂ ಅವರು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯರಾಗಿದ್ದು ಯುವಜನತೆಗೆ ಮಾರ್ಗದರ್ಶನ ನೀಡುವಂತಾಗಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ಗಣ್ಯರು ಹೆಚ್. ನಾಗರಾಜ್ ಅವರನ್ನು ಸನ್ಮಾನಿಸಿ ಗೌರವ ಸಲ್ಲಿಸಿದರು. ಅವರ ವಯೋ ನಿವೃತ್ತಿ ಜೀವನ ಸುಖ, ನೆಮ್ಮದಿ ಮತ್ತು ಉತ್ತಮ ಆರೋಗ್ಯದಿಂದ ಕೂಡಿರಲೆಂದು ಶುಭ ಹಾರೈಸಿದರು.