Actress Karishma Kapoor: ನಟಿ ಕರಿಷ್ಮಾ ಮತ್ತು ಸಂಜಯ್ ಡಿವೋರ್ಸ್ಗೆ ಅಸಲಿ ಕಾರಣ ಏನು ಗೊತ್ತಾ?
ನಟಿ ಕರಿಷ್ಮಾ ಅವರು 2003ರಲ್ಲಿ ಉದ್ಯಮಿ ಸಂಜಯ್ ಅವರನ್ನು ವಿವಾಹವಾಗಿ ಬಳಿಕ 2005ರಲ್ಲಿ ಇವರ ನಡುವೆ ವೈಮನಸ್ಸು ಮೂಡಿ ವಿಚ್ಛೇದನದ ನಿರ್ಧಾರ ತೆಗೆದುಕೊಂಡಿದ್ದರಂತೆ. ಹಾಗಿದ್ದರೂ ಬಳಿಕ 2016ರ ತನಕವು ಇಬ್ಬರು ಸಹ ಬಾಳ್ವೆ ನಡೆಸಿದ್ದಾರೆ. ಬಳಿಕ ಸಂಜಯ್ ಕಪೂರ್ ಮತ್ತು ಕರಿಷ್ಮಾ ಕಪೂರ್ 2016ರಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದಿದ್ದಾರೆ. ವಿಚ್ಛೇದನ ಬಳಿಕ ಡಿವೋರ್ಸ್ ಪಡೆದ ಅಸಲಿ ಕಾರಣ ಕೂಡ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Karisma and Sanjay divorce

ನವದೆಹಲಿ: ಪ್ರೇಮ್ ಖೈದಿ, ಓಂ ಶಾಂತಿ ಓಂ, ಹಮ್ ಸಾಥ್ ಸಾಥ್ ಹೈ ಸೇರಿದಂತೆ ಅನೇಕ ಹಿಟ್ ಸಿನಿಮಾ ನೀಡಿದ್ದ ಬಾಲಿವುಡ್ ನ ಖ್ಯಾತ ನಟಿ ಕರಿಷ್ಮಾ ಕಪೂರ್ (Karishma Kapoor) ಅವರು ತಮ್ಮ ವಿಶೇಷ ಅಭಿನಯದ ಮೂಲಕವೇ ಅಪಾರ ಅಭಿಮಾನಿಗಳ ಮನಗೆದ್ದಿದ್ದರು. ನಟಿ ಕರಿಷ್ಮಾ ಕಪೂರ್ ಅವರು ಮಾಜಿ ಪತಿ, ಉದ್ಯಮಿ ಸಂಜಯ್ ಕಪೂರ್ ಅವ ರನ್ನು ಜೂನ್ 12 , 2003ರಂದು ಯುಕೆಯಲ್ಲಿ ಮದುವೆಯಾದರು.13 ವರ್ಷಗಳ ದಾಂಪತ್ಯ ಜೀವನವನ್ನು ಜೊತೆಯಾಗಿ ಕಳೆದ ನಂತರ ಸಂಜಯ್ ಕಪೂರ್ ಮತ್ತು ಕರಿಷ್ಮಾ 2016ರಲ್ಲಿ ವಿಚ್ಛೇದನ ಪಡೆದರು. ಇದೀಗ ನಟಿ ಕರಿಷ್ಮಾ ಅವರ ಮಾಜಿ ಪತಿಯ ನಿಧನದ ಬೆನ್ನಲ್ಲೆ ನಟಿ ಕರಿಷ್ಮಾ ಮತ್ತು ಸಂಜಯ್ ಅವರ ವಿಚ್ಛೇದನದ ವಿಚಾರ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.
ನಟಿ ಕರಿಷ್ಮಾ ಅವರು 2003ರಲ್ಲಿ ಉದ್ಯಮಿ ಸಂಜಯ್ ಅವರನ್ನು ವಿವಾಹವಾಗಿ ಬಳಿಕ 2005ರಲ್ಲಿ ಇವರ ನಡುವೆ ವೈಮ ನಸ್ಸು ಮೂಡಿ ವಿಚ್ಛೇದನದ ನಿರ್ಧಾರ ತೆಗೆದುಕೊಂಡಿದ್ದರಂತೆ. ಹಾಗಿದ್ದರೂ ಬಳಿಕ 2016ರ ತನಕವು ಇಬ್ಬರು ಸಹ ಬಾಳ್ವೆ ನಡೆಸಿದ್ದಾರೆ. ಬಳಿಕ ಸಂಜಯ್ ಕಪೂರ್ ಮತ್ತು ಕರಿಷ್ಮಾ ಕಪೂರ್ 2016ರಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದಿದ್ದಾರೆ. ವಿಚ್ಛೇದನ ಬಳಿಕ ಡಿವೋರ್ಸ್ ಪಡೆದ ಅಸಲಿ ಕಾರಣ ಕೂಡ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನು ಓದಿ: Monk the Young Movie: ವಿಭಿನ್ನ ಕಥಾಹಂದರವುಳ್ಳ ʼಮಾಂಕ್ ದಿ ಯಂಗ್ʼ ಚಿತ್ರ ಫೆ.28ಕ್ಕೆ ರಿಲೀಸ್
ಕೌಟುಂಬಿಕ ಹಿಂಸಾಚಾರದ ಆರೋಪ ಮಾಡಿ ನಟಿ ಕರಿಷ್ಮಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸಂಜಯ್ ತಾಯಿ (ಅತ್ತೆ) ಮತ್ತು ಗಂಡನ ವಿರುದ್ಧ ಅವರು ಕಿರುಕುಳದ ಆರೋಪ ಮಾಡಿದ್ದರು. ಸಂಜಯ್ ಜೊತೆ ಹನಿಮೂನ್ ಗೆ ತೆರಳಿದ್ದಾಗ ಸ್ನೇಹಿತ ರೊಬ್ಬರ ಜೊತೆ ಮಲಗಲು ಹೇಳಿದ್ದರು. ಅದಕ್ಕೆ ನಿರಾಕರಿಸಿದಾಗ, ಸಂಜಯ್ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಅತ್ತೆ ಹಾಗೂ ಪತಿ ಕೂಡ ತನಗೆ ಹಲವು ಬಾರಿ ಥಳಿಸಿದ್ದಾರೆ ಎಂದು ಎಂದು ದೂರಿದ್ದರು.
ತಾನು ಗರ್ಭಿಣಿಯಾಗಿದ್ದಾಗ, ಸಂಜಯ್ ತಾಯಿ ಉಡುಗೊರೆಯಾಗಿ ನೀಡಿದ ಉಡುಪು ಧರಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ಕಪಾಳಮೋಕ್ಷ ಮಾಡಿ ಹಿಂಸಿಸಿದ್ದಾರೆ ಎಂದು ಕರಿಷ್ಮಾ ತನ್ನ ಅರ್ಜಿಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕರಿಷ್ಮಾಗೆ ಸಂಜಯ್ - ಸಮೈರಾ ಮತ್ತು ಕಿಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ವಿಚ್ಛೇದನದ ನಂತರ, ಇಬ್ಬರೂ ತಮ್ಮ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ.
ಕರಿಷ್ಮಾ ಅವರ ವಿವಾಹಕ್ಕೂ ಮುನ್ನ, ಸಂಜಯ್ ಅವರು ಫ್ಯಾಷನ್ ಡಿಸೈನರ್ ನಂದಿತಾ ಮಹತಾನಿ ಅವರನ್ನು ವಿವಾಹ ವಾಗಿದ್ದರು. ಅವರಿಂದ ವಿಚ್ಛೇದನ ಪಡೆದು ಬಳಿಕ ಕರಿಷ್ಮಾ ಅವರನ್ನು ಮರುವಿವಾಹವಾಗಿದ್ದರು. ಈ ನಡುವೆ ಅವರು ಪ್ರಿಯಾ ಸಚ್ದೇವ್ ಜೊತೆ 2010 ರಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಬಳಿಕ ಕರಿಷ್ಮಾ ಜೊತೆ ವಿಚ್ಛೇದನ ಪಡೆದ ಬಳಿಕ ಪ್ರಿಯಾ ಸಚ್ ದೇವ್ ಅವರನ್ನು ಮೂರನೇ ಬಾರಿಗೆ ವಿವಾಹವಾದರು, ಅವರಿಗೆ ಅಜಾರಿಯಾಸ್ ಎಂಬ ಮಗನು ಕೂಡ ಇದ್ದಾನೆ. ಜೂನ್ 12 ರಂದು ಇಂಗ್ಲೆಂಡ್ನಲ್ಲಿ ತನ್ನ ಸ್ನೇಹಿತರೊಂದಿಗೆ ಪೋಲೋ ಆಡುತ್ತಿದ್ದಾಗ ಸಂಜಯ್ ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದಾರೆ.