ಡಿ.21ರಂದು ಎಲುಬು ಸಾಂದ್ರತೆ ಪರೀಕ್ಷೆ
ನಗರದ ಕೆಎಸ್‌ಆರ್‌ಟಿಸಿ ಡಿಪೋ ಸಮೀಪದ ಅಮೃತ ಪಾಲಿ ಕ್ಲಿನಿಕ್‌ನಲ್ಲಿ ಡಿ.21 ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 12 ರವರೆಗೆ ಉಚಿತ ಎಲುಬು ಸಾಂದ್ರತೆ ಹಾಗೂ ಮೊಣಕಾಲು ಮತ್ತು ಬೆನ್ನುಮೂಳೆ ನೋವು ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ಕ್ಯೂರಾ ಆಸ್ಪತ್ರೆ ಮೊಣಕಾಲು ನೋವು ತಜ್ಞ ಡಾ.ಅಬ್ರಾರ್ ಮಹ ಮ್ಮದ್ ತಿಳಿಸಿದರು.
-
ಚಿಕ್ಕಬಳ್ಳಾಪುರ: ನಗರದ ಕೆಎಸ್‌ಆರ್‌ಟಿಸಿ ಡಿಪೋ ಸಮೀಪದ ಅಮೃತ ಪಾಲಿ ಕ್ಲಿನಿಕ್‌ನಲ್ಲಿ ಡಿ.21 ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 12 ರವರೆಗೆ ಉಚಿತ ಎಲುಬು ಸಾಂದ್ರತೆ ಹಾಗೂ ಮೊಣಕಾಲು ಮತ್ತು ಬೆನ್ನುಮೂಳೆ ನೋವು ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ಕ್ಯೂರಾ ಆಸ್ಪತ್ರೆ ಮೊಣಕಾಲು ನೋವು ತಜ್ಞ ಡಾ.ಅಬ್ರಾರ್ ಮಹ ಮ್ಮದ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮೊಣಕಾಲು ನೋವು 50 ವರ್ಷದ ನಂತರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸೂಕ್ತಸಮಯದಲ್ಲಿ ಚಿಕಿತ್ಸೆ ಪಡೆದರೆ ಶಸ್ತ್ರಚಿಕಿತ್ಸೆ ಅಗತ್ಯ ವಿಲ್ಲದೇ ಗುಣಮುಖರಾಗಬಹುದು.
ಇದನ್ನೂ ಓದಿ: Chintamani News: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಎರಡು ಉಚಿತ ಆರೋಗ್ಯ ಶಿಬಿರ ನಡೆಸಲಾಗಿದ್ದು, ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.
ಈ ಬಾರಿ ಮೊಣಕಾಲು ಮತ್ತು ಬೆನ್ನುಮೂಳೆ ನೋವಿನಿಂದ ಬಳಲುತ್ತಿರುವ ಜಿಲ್ಲೆಯ ಜನರಿಗೆ ಅನುಕೂಲವಾಗುವಂತೆ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಶಿಬಿರ ದಲ್ಲಿ ಭಾಗವಹಿಸಿದವರಿಗೆ ಉಚಿತ ಔಷಧ ವಿತರಣೆ ಮಾಡಲಾಗುವುದಲ್ಲದೆ, ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಹೇಳಿದರು. ಅಮೃತ ಪಾಲಿ ಕ್ಲಿನಿಕ್‌ನ ಮಂಜುನಾಥ್ ಇದ್ದರು.