Rashmika Mandanna: ಬ್ಯಾಚುಲರೇಟ್ ಪಾರ್ಟಿಯ ಗುಂಗಲ್ಲಿ ಇದ್ದಾರಾ ರಶ್ಮಿಕಾ? ಫ್ರೆಂಡ್ಸ್ ಜೊತೆ ಶ್ರೀಲಾಂಕಾದಲ್ಲಿ ನ್ಯಾಶನಲ್ ಕ್ರಶ್
Bachelorette Party: ರಶ್ಮಿಕಾ ಮಂದಣ್ಣ ಫೆಬ್ರವರಿ 2026ರಲ್ಲಿ ಉದಯಪುರದಲ್ಲಿ ವಿಜಯ್ ದೇವರಕೊಂಡ ಅವರನ್ನು ವಿವಾಹವಾಗಲಿದ್ದಾರೆ ಎಂದು ವದಂತಿಗಳಿವೆ. ಮದುವೆಯ ವದಂತಿಗಳ ನಡುವೆ, ರಶ್ಮಿಕಾ ಇತ್ತೀಚೆಗೆ ಹುಡುಗಿಯರ ಜೊತೆ ಶ್ರೀಲಂಕಾಕ್ಕೆ ಹೋಗಿದ್ದಾರೆ. ಬ್ಯಾಚುಲರೇಟ್ ಪ್ರವಾಸ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.
ರಶ್ಮಿಕಾ ಮಂದಣ್ಣ -
ರಶ್ಮಿಕಾ ಮಂದಣ್ಣ (Rashmika Mandanna) ಫೆಬ್ರವರಿ 2026ರಲ್ಲಿ ಉದಯಪುರದಲ್ಲಿ ವಿಜಯ್ ದೇವರಕೊಂಡ (Vijay Devarakonda) ಅವರನ್ನು ವಿವಾಹವಾಗಲಿದ್ದಾರೆ ಎಂದು ವದಂತಿಗಳಿವೆ. ಮದುವೆಯ ವದಂತಿಗಳ ನಡುವೆ, ರಶ್ಮಿಕಾ ಇತ್ತೀಚೆಗೆ ಹುಡುಗಿಯರ ಜೊತೆ ಶ್ರೀಲಂಕಾಕ್ಕೆ (Shrilanka) ಹೋಗಿದ್ದಾರೆ. ಬ್ಯಾಚುಲರೇಟ್ ಪ್ರವಾಸ ( Bachelorette) ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.
ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನಟಿ 2025 ಅನ್ನು ಛಾವಾ, ಕುಬೇರಾ ಮತ್ತು ದಿ ಗರ್ಲ್‌ಫ್ರೆಂಡ್‌ನಂತಹ ಹಿಟ್‌ಗಳೊಂದಿಗೆ ಮುಗಿಸುತ್ತಿರುವುದರಿಂದ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ವಿರಾಮ ತೆಗೆದುಕೊಂಡರು.
ನಟಿ ತನ್ನ ಆಪ್ತ ಸ್ನೇಹಿತರೊಂದಿಗೆ ಶ್ರೀಲಂಕಾ ಪ್ರವಾಸದ ಫೋಟೋಗಳನ್ನು ಪೋಸ್ಟ್ ಮಾಡಿ, ಇದನ್ನು ತುಂಬಾ ಅಗತ್ಯವಿರುವ "ಹುಡುಗಿಯರ ಪ್ರವಾಸ" ಎಂದು ಕರೆದಿದ್ದಾರೆ. ತನ್ನ ಆಪ್ತ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕಳೆದಾಗ ಸ್ವಲ್ಪ ವಿಹಾರವೂ ಅಸಾಧಾರಣವಾಗಿ ಕಾಣುತ್ತದೆ ಎಂದು ರಶ್ಮಿಕಾ ಹೇಳಿದ್ದಾರೆ.
ಇದನ್ನೂ ಓದಿ: Vijay Deverakonda: ಪ್ರೇಕ್ಷಕರ ಮನಗೆದ್ದ ವಿಜಯ್ ದೇವರಕೊಂಡ ನಟನೆಯ ʼಕಿಂಗ್ ಡಮ್ʼ - ಮೂರು ದಿನದ ಕಲೆಕ್ಷನ್ ಎಷ್ಟು ಗೊತ್ತಾ?
ಚಿತ್ರಗಳ ಜೊತೆಗೆ, ರಶ್ಮಿಕಾ "ಇತ್ತೀಚೆಗೆ ನನಗೆ 2 ದಿನಗಳ ರಜೆ ಸಿಕ್ಕಿತು ಮತ್ತು ನನ್ನ ಹುಡುಗಿಯರೊಂದಿಗೆ ಸಮಯ ಕಳೆಯಲು ನನಗೆ ಈ ಅವಕಾಶ ಸಿಕ್ಕಿತು ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ.
ಬ್ಯಾಚುಲರೇಟ್ ಪಾರ್ಟಿ?
'ವೆಲ್ಕಮ್ ಟು ಶ್ರೀಲಂಕಾ' ಎಂಬ ಫಲಕದ ಮುಂದೆ ಪೋಸ್ ನೀಡುತ್ತಿರುವ ಚಿತ್ರದೊಂದಿಗೆ ರಶ್ಮಿಕಾ ಪೋಟೋ ಶೇರ್ ಮಾಡಿದ್ದಾರೆ.
ಯಾವುದೇ ದೃಢೀಕರಣ ಅಥವಾ ಅಧಿಕೃತ ಘೋಷಣೆ ಇಲ್ಲದಿದ್ದರೂ, ರಶ್ಮಿಕಾ ಅವರ ಪ್ರವಾಸ ಕಂಡು ಇದು ಬ್ಯಾಚುಲರೇಟ್ ಪಾರ್ಟಿನೇ ಇರಬಹುದು ಅಂತ ಕಮೆಂಟ್ ಮಾಡುತ್ತಿದ್ದಾರೆ. ರಶ್ಮಿಕಾ ಮತ್ತು ವಿಜಯ್ ಇಬ್ಬರೂ ತಮ್ಮ ವದಂತಿಯ ಡೇಟಿಂಗ್ ಜೀವನವನ್ನು ಖಾಸಗಿಯಾಗಿ ಇಟ್ಟುಕೊಂಡಿದ್ದಾರೆ. ಆದರೆ ರಶ್ಮಿಕಾ ಮತ್ತು ವಿಜಯ್ ಫೆಬ್ರವರಿ 26, 2026 ರಂದು ಉದಯಪುರ ಅರಮನೆಯಲ್ಲಿ ವಿವಾಹವಾಗಲಿದ್ದಾರೆ ಎಂಬ ವದಂತಿಗಳಿವೆ.
ರಶ್ಮಿಕಾ- ವಿಜಯ್ ಮದುವೆಯೂ ಫೆಬ್ರವರಿ 26, 2026 ರಂದು ನಡೆಯಲಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ, ಈ ಜೋಡಿ ರಾಜಸ್ಥಾನದ ಪ್ರಸಿದ್ಧ ಪ್ರವಾಸಿ ತಾಣವಾದ ಉದಯಪುರದಲ್ಲಿ ಅದ್ದೂರಿ 'ರಾಯಲ್ ವೆಡ್ಡಿಂಗ್'ಗೆ ಪ್ಲಾನ್ ಕೂಡ ಮಾಡಿ ಕೊಂಡಿದ್ದಾರಂತೆ.
ಕಳೆದ ತಿಂಗಳು, ಅಂದರೆ ಅಕ್ಟೋಬರ್ 3, 2025 ರಂದು ವಿಜಯ್ ಅವರ ಹೈದರಾಬಾದ್ ನಿವಾಸದಲ್ಲಿ ಕೇವಲ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಖಾಸಗಿ ನಿಶ್ಚಿತಾರ್ಥ ನಡೆದಿದೆ. 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಚಿತ್ರಗಳಲ್ಲಿ ಒಟ್ಟಿಗೆ ನಟಿಸುವ ಮೂಲಕ ಈ ಜೋಡಿಯ ಕೆಮಿಸ್ಟ್ರಿ ಇಷ್ಟವಾಗಿತ್ತು.
ಇದನ್ನೂ ಓದಿ: Rashmika-Vijay Deverakonda: ಮತ್ತೆ ರಶ್ಮಿಕಾ-ವಿಜಯ್ ದೇವರಕೊಂಡ ಭರ್ಜರಿ ವೆಕೇಶನ್? ವೈರಲ್ ಆಗಿರೋ ವಿಡಿಯೊದಲ್ಲೇನಿದೆ?
ಸದ್ಯ ಅವರ ಆಫ್-ಸ್ಕ್ರೀನ್ ಪ್ರೀತಿಯು ಈಗ ಮದುವೆಯ ಹಂತಕ್ಕೆ ತಲುಪಿದ್ದು ಈ ಸುದ್ದಿಗಾಗಿ ಅಭಿಮಾನಿಗಳು ಕಾತರದಿಂದ ಕಾಯು ತ್ತಿದ್ದಾರೆ. ಸದ್ಯ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.