Kichcha Sudeepa: 'ಅತ್ಯುತ್ತಮ ನಕಲಿ ಸುದ್ದಿ ಪ್ರಶಸ್ತಿ ಏನಾದ್ರೂ ಇದ್ಯಾ? ಸೈಮಾ ವಿರುದ್ಧ ಕಿಚ್ಚ ಗರಂ ಆಗಿದ್ದೇಕೆ?
SIIMA: ಸೈಮಾ ಸಂಸ್ಥೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇತ್ತೀಚೆಗೆ ನಟ ಕಿಚ್ಚ ಸುದೀಪ್ ಮತ್ತು ಉಪೇಂದ್ರ ಅವರ ಫೋಟೊವೊಂದನ್ನು ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್‌ನಲ್ಲಿ, ನಟ ಸಿಂಬು ಅವರ ಬಹುನಿರೀಕ್ಷಿತ ಚಿತ್ರ ‘ಅರಸನ್’ನಲ್ಲಿ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಬರೆಯಲಾಗಿತ್ತು. ಆದರೆ ಇದೀಗ ಆ ಟ್ವೀಟ್ ತೆಗೆದುಹಾಕಲಾಗಿದ್ದು. ಕಿಚ್ಚ ಸುದೀಪ್ ಅವರು ಕೂಡ ಸೈಮಾವನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ.

ಕಿಚ್ಚ ಸುದೀಪ್ -

ಬೆಂಗಳೂರು: ಇತ್ತೀಚೆಗೆ ಸೋಷಿಯಲ್ ಮೀಡಿಯಾ(Social Media)ಗಳಲ್ಲಿ ಸಿನಿಮಾ ನಟ, ನಟಿಯರ ಬಗ್ಗೆ ಗಾಸಿಪ್‌ಗಳು ಕಾಮನ್ ಆಗಿ ಬಿಟ್ಟಿವೆ. ಇವಗಳನ್ನು ನೋಡಿದ ಅಭಿಮಾನಿಗಳು, ನೆಟ್ಟಿಗರು ಅದನ್ನೇ ನಿಜ ಎಂದು ನಂಬಿ ಬಿಡುತ್ತಾರೆ. ವದಂತಿಗಳ ಬಗ್ಗೆ ಖುದ್ದಾಗಿ ಆ ನಟ, ನಟಿಯರೇ ಅಧಿಕೃತವಾಗಿ ಹೇಳಿದಾಗ ಮಾತ್ರ ಅಸಲಿ ಸತ್ಯ ಬಯಲಾಗುತ್ತದೆ. ಇದೇ ರೀತಿಯಾಗಿ ನಿರ್ದೇಶಕ ವೆಟ್ರಿಮಾರನ್ (Vetrimaaran) ಅವರ ಬಹುನಿರೀಕ್ಷಿತ ತಮಿಳು ಚಿತ್ರ(Tamil Movies) 'ಅರಸನ್' (Arasan)ನಲ್ಲಿ ಖಳನಾಯಕನ ಪಾತ್ರದಲ್ಲಿ ಕಿಚ್ಚ ಸುದೀಪ್ (Kiccha Sudeep) ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ವದಂತಿಯನ್ನು ಕಿಚ್ಚ ತಳ್ಳಿಹಾಕಿದ್ದಾರೆ.
ಈ ಸುದ್ದಿಯನ್ನು ಓದಿ: Amit Shah: ಅಕ್ರಮ ಬಾಂಗ್ಲಾ, ಪಾಕ್ ವಲಸಿಗರಿಂದಾಗಿ ಮುಸ್ಲಿಂ ಜನಸಂಖ್ಯೆ ಶೇ.24.6ಕ್ಕೆ ಏರಿಕ್ಕೆ: ಅಮಿತ್ ಶಾ
SIIMA ಎಂಬ ಎಕ್ಸ್ ಖಾತೆಯಲ್ಲಿ, "ಸಿಂಬು ಅವರ ಬಹುನಿರೀಕ್ಷಿತ ಸಿನಿಮಾ 'ಅರಸನ್'ನಲ್ಲಿ ಕಿಚ್ಚ ಸುದೀಪ್ ಹಾಗೂ ನಟ ಉಪೇಂದ್ರ (Upendra) ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ," ಎಂದು ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್‌ಗೆ ಕಿಚ್ಚ ಹಾಸ್ಯದಿಂದಲೇ ತಿರುಗೇಟು ನೀಡಿದ್ದಾರೆ. " ನೀವು ಆಯೋಜಿಸುವ ಅದ್ದೂರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಆದರೆ ನೀವು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುವ ಮಾಹಿತಿಗಳಿಗೆ ಸಂಬಂಧಪಟ್ಟಂತೆ ಒಂದು ಸಲಹೆ. ಅದೇನಪ್ಪಾ ಅಂದ್ರೆ ಮುಂದಿನ ಬಾರಿಯಿಂದ ನಿಮ್ಮ ಸುದ್ದಿ ಮೂಲಗಳನ್ನು ಬದಲಾಯಿಸಿಕೊಳ್ಳಿ. ಇಲ್ಲದಿದ್ದರೆ ಮುಂದಿನ ಸೈಮಾ ಅವಾರ್ಡ್ ನಲ್ಲಿ ಅತ್ಯುತ್ತಮ ನಕಲಿ ಸುದ್ದಿ ಪ್ರಶಸ್ತಿ (Fake Award) ಇದೆಯಾ ಎಂದು ತಿಳಿದುಕೊಳ್ಳಿ," ಎಂದು ಸುದೀಪ್ ವ್ಯಂಗ್ಯವಾಗಿ ಟೀಕಿಸಿದ್ದಾರೆ.
Well @siima ...
— Kichcha Sudeepa (@KicchaSudeep) October 10, 2025
Huge respect for wat u do wth ua awards evenings.
As for these news are concerned I have a suggestion.
Whisper🤫: change ur sources.
🤗
Also wanted to know if there is a "Best Fake News Award" coming up next SIIMA!! 😁 https://t.co/ydkA7k1E4W
ಸುದೀಪ್ ಅವರಿಂದ ರಿಟ್ವೀಟ್ ಬರುತ್ತಿದ್ದಂತೆ, SIIMA ಖಾತೆಯಲ್ಲಿ ಕಿಚ್ಚ ಹಾಗೂ ಉಪೇಂದ್ರ ಅವರ ಫೋಟೋದೊಂದಿಗ ಹಂಚಿಕೊಳ್ಳಲಾಗಿದ್ದ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದೆ. ಅಷ್ಟೇ ಅಲ್ಲದೇ ಸುದೀಪ್ ಅವರ ಟ್ವೀಟ್‌ಗೆ ಪ್ರತಿಕ್ರಿಯೆಯನ್ನೂ ನೀಡಲಾಗಿದ್ದು, "ಅರ್ಥವಾಯಿತು ಚೀಫ್, ಖಂಡಿತವಾಗಿಯೂ ನಿಮ್ಮ ಸಲಹೆಯನ್ನು ನಾವ ಅಳವಡಿಸಿಕೊಳ್ಳುತ್ತೇವೆ. ಜೊತೆಗೆ ನಮ್ಮ ಕಾರ್ಯಕ್ರಮ ಬಗ್ಗೆ ಅನುಕಂಪದ ಜೊತೆಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಕ್ಕೆ ಧನ್ಯವಾದಗಳು," ಎಂದು SIIMA ರಿಟ್ವೀಟ್ ಮಾಡಿದೆ.
ಇನ್ನು.. ಅರಸನ್ ನಿರ್ಮಾಪಕರು, ಸಮಂತಾ (Samanta) ಅಥವಾ ಕೀರ್ತಿ ಸುರೇಶ್ (Keerthi Suresh) ಅವರನ್ನು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡುಲು ಯೋಚಿಸುತ್ತಿದ್ದಾರೆ ಎಂದು ಶ್ವಾಸಾರ್ಹ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೇ ಈಗಾಗಲೇ ಚಿತ್ರತಂಡವು ನಟಿ ಸಮಂತಾ ಅವರೊಂದಿಗೆ ಮಾತುಕತೆಯನ್ನು ಸಹ ನಡೆಸುತ್ತಿದೆ ಎಂದು IANS ತಿಳಿಸಿದೆ. ಚಿತ್ರದಲ್ಲಿ ಸಿಂಬು (Simbu) ಜತೆಗೆ ಆಂಡ್ರಿಯಾ ಜೆರೆಮಿಯಾ (Andrea Jeremiah), ಸಮುಥಿರಕನಿ (Samuthirakani) ಮತ್ತು ಕಿಶೋರ್ (Kishor) ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.