Astro Tips: ಬುಧವಾರ ಗಣೇಶನ ಈ ಮಂತ್ರಗಳನ್ನ ಪಠಿಸಿದರೆ ಬುಧ ದೋಷ ನಿವಾರಣೆಯಾಗುತ್ತದೆ
ಬುಧವಾರ ಗಣೇಶನಿಗೆ ಸಮರ್ಪಿತವಾದ ದಿನವಾಗಿದ್ದು, ಈ ವಿಶೇಷ ದಿನದಂದು ಗಣಪನಿಗೆ ಪೂಜೆ ಮಾಡುವುದರಿಂದ ಬುಧ ಗ್ರಹದ ದುರ್ಬಲತೆಗಳು ನಿವಾರಣೆಗೊಳ್ಳುತ್ತವೆ. ಈ ದಿನ ಗಣೇಶನ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಸಮೃದ್ಧಿ, ಶಾಂತಿ ಮತ್ತು ಯಶಸ್ಸು ಸಿಗುತ್ತದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಗಣಪ -
ಬೆಂಗಳೂರು: ಹಿಂದೂ ಧರ್ಮದಲ್ಲಿ (Hindu Religion) ಯಾವುದೇ ಶುಭಕಾರ್ಯವನ್ನು ಪ್ರಾರಂಭಿಸುವ ಮೊದಲು ವಿಘ್ನ ನಿವಾರಕ ಗಣಪತಿಯನ್ನು(Lord Ganesha) ಪೂಜಿಸುವ ಸಂಪ್ರದಾಯವಿದೆ. ಈ ಕಾರಣಕ್ಕಾಗಿ ಅವನನ್ನು ಮೊದಲ ಆರಾಧಕ ಎಂದು ಕರೆಯುತ್ತಾರೆ. ಗಣಪತಿಗೆ ಪ್ರಿಯವಾದ ನೈವೇದ್ಯಗಳನ್ನು ಅರ್ಪಿಸಿ, ಅವನನ್ನು ಸಂತುಷ್ಟಗೊಳಿಸುವ ಮೂಲಕ ಬುಧ ದೋಷದ ನಿವಾರಣೆ ಮಾಡಬಹುದು. ಇದರಿಂದ ನಿಮ್ಮ ಬದುಕಿನಲ್ಲಿ ಎದುರಾಗುವ ಎಲ್ಲ ಅಡೆತಡೆಗಳು ದೂರವಾಗುತ್ತವೆ. ಹಾಗೇ ಯಾರಿಗೆ ಗಣೇಶನ ಅನುಗ್ರಹ ದೊರೆಯುತ್ತದೆಯೋ ಅಂತವರು ಯಾವ ಕೆಲಸಕ್ಕೆ ಕೈ ಹಾಕಿದರೂ ಯಾವುದೇ ತೊಂದರೆ ತಾಪತ್ರಯಗಳಿಲ್ಲದೆ ಶೀಘ್ರವಾಗಿ ನೆರವೇರುತ್ತದೆ ಎಂಬ ನಂಬಿಕೆ ಇದೆ.
ಇನ್ನು ಬುಧವಾರ ಗಣೇಶನಿಗೆ ಸಮರ್ಪಿತವಾದ ದಿನವಾಗಿದ್ದು, ಈ ವಿಶೇಷ ದಿನದಂದು ಗಣಪನಿಗೆ
ಪೂಜೆ ಮಾಡುವುದರಿಂದ ಬುಧ ಗ್ರಹದ ದುರ್ಬಲತೆಗಳು ನಿವಾರಣೆಗೊಳ್ಳುತ್ತವೆ ಮತ್ತು ವ್ಯಕ್ತಿಯ ಅದೃಷ್ಟ ಬಲಿಷ್ಠವಾಗುತ್ತದೆ. ಬುಧವಾರ ಹಸಿರು ಬಣ್ಣದ ವಸ್ತುಗಳನ್ನು ಧರಿಸುವುದು, ಹೆಸರು, ಬೇಳೆ ಅಥವಾ ಹಸಿರು ಬಣ್ಣದ ವಸ್ತುಗಳನ್ನು ದಾನ ಮಾಡುವುದೂ ಶುಭವೆಂದು ನಂಬಲಾಗಿದೆ.
ಹಾಗೇ ಈ ದಿನ ಗಣೇಶನ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಸಮೃದ್ಧಿ, ಶಾಂತಿ ಮತ್ತು ಯಶಸ್ಸು ಸಿಗುತ್ತದೆ. ಗಣಪತಿಯ ಪೂಜೆಯ ಸಂದರ್ಭದಲ್ಲಿ ಕೆಲವು ವಿಶೇಷ ಮಂತ್ರಗಳನ್ನು ಪಠಿಸುವುದರಿಂದ ಬುಧ ದೋಷ ನಿವಾರಣೆ ಆಗಲಿದ್ದು, ವಿಘ್ನಹರ್ತಾ ಅನುಗ್ರಹವನ್ನು ಪಡೆಯುತ್ತಾರೆ. ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ಗಣಪತಿ ಮಂತ್ರಗಳನ್ನು ಪಠಿಸುವುದರಿಂದ ಗ್ರಹದೋಷಗಳ ಶಮನ, ಮನಸ್ಸಿನ ಶಾಂತಿ ಮತ್ತು ಕಾರ್ಯಗಳಲ್ಲಿ ಯಶಸ್ಸು ದೊರಕುತ್ತದೆ ಎಂದು ತಿಳಿಸಲಾಗಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದಲ್ಲಿ ಬುಧ ಗ್ರಹ ದುರ್ಬಲವಾಗಿದ್ದರೆ ವ್ಯಕ್ತಿಯ ಸಂವಹನ ಕೌಶಲ್ಯ, ವ್ಯವಹಾರ, ಹಾಗೂ ಉದ್ಯೋಗದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. ಇದರಿಂದ ಅಭಿವೃದ್ಧಿ ಕುಂಠಿತಗೊಂಡು ನೆಮ್ಮದಿ ಇಲ್ಲದಂತಾಗುತ್ತದೆ. ಹಾಗಾಗಿ ಬುಧವಾರದಂದು ಬುದ್ಧ ದೋಷದ ದುಷ್ಪರಿಣಾಮದಿಂದ ಪಾರಾಗಲು ಈ ಮಂತ್ರ ಸಹಾಯ ಮಾಡಲಿದ್ದು, ಬುಧ ದೋಷ ನಿವಾರಣೆಗೆ ಪಠಿಸಬೇಕಾದ ಮಂತ್ರಗಳು ಹೀಗಿದೆ:
ಇಂದು ಹನುಮನಿಗೆ ಈ ವಸ್ತುಗಳನ್ನು ಅರ್ಪಿಸಿದರೆ ನಿಮ್ಮಾಸೆಗಳೆಲ್ಲ ಈಡೇರುತ್ತೆ
ಬೀಜ ಮಂತ್ರ:
“ಓಂ ಬ್ರಾಂ ಬ್ರೀಂ ಬ್ರೌನ್ ಸಃ ಬುಧಾಯ ನಮಃ”
ಬುಧವಾರ ಈ ಮಂತ್ರವನ್ನು 108 ಬಾರಿ ಪಠಿಸಿ. ಈ ಮಂತ್ರವನ್ನು ಪಠಿಸುವುದರಿಂದ ಎಲ್ಲ ಅಡೆತಡೆಗಳು ದೂರವಾಗುತ್ತವೆ ಮತ್ತು ನೀವು ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ.
ಬುಧ ಗ್ರಹ ಮಂತ್ರ:
“ಓಂ ಐಂ ಬುಧಾಯ ನಮಃ”
ಬುಧವಾರ ನೀವು ಬುಧ ಗ್ರಹದ ಈ ಮಂತ್ರವನ್ನು ಸಹ ಪಠಿಸಬೇಕು. ಈ ಮಂತ್ರವನ್ನು 108 ಬಾರಿ ಜಪಿಸಬೇಕು. ಇದರೊಂದಿಗೆ, ವ್ಯಕ್ತಿಯ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಮತ್ತು ಅವನು ಸಾಲದಿಂದ ಮುಕ್ತನಾಗುತ್ತಾನೆ ಎನ್ನುವ ನಂಬಿಕೆಯಿದೆ.
“ಓಂ ಏಂ ಹ್ವೀಂ ಕ್ಲೀಂ ಚಾಮುಂಡಾಯೈ ವಿಜ್ಚೇ”:
ಜ್ಯೋತಿಷ್ಯರ ಪ್ರಕಾರ, ಈ ಮಂತ್ರವನ್ನು ನಿಷ್ಠೆಯಿಂದ ಪಠಿಸುವುದರಿಂದ ಜಾತಕದಲ್ಲಿರುವ ಬುಧ ದೋಷ ಪರಿಹಾರಗೊಂಡು, ನಿಮ್ಮೆಲ್ಲ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಮತ್ತು ಸಾಲದಿಂದ ಮುಕ್ತರಾಗುತೀರಿ ಎನ್ನುವ ನಂಬಿಕೆಯಿದೆ.