ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕ್ವಿಂಟಲ್ ಗೆ 26 ಸಾವಿರದಿಂದ 30 ಸಾವಿರ ದಾಟಿದ ಕೊಬ್ಬರಿ ಬೆಲೆ

ತಿಪಟೂರು, ಅರಸೀಕೆರೆ, ತುಮಕೂರು ತೆಂಗು ಬೆಳೆಗಾರರಿಗೆ ಹೊಸ ವರ್ಷದಲ್ಲಿ ಮಾತೆ ಶುಕ್ರದೆಶೆ ಶುರು ವಾಗಿದೆ. ಉಂಡೆ ಕೊಬ್ಬರಿ ಬೆಲೆ ಮತ್ತೆ ಜಿಗಿದಿದೆ. ಜನವರಿಯಿಂದ ಹಂತ ಹಂತವಾಗಿ ಏರಿಕೆ ಕಂಡು ನಿನ್ನೆ ಗುರುವಾರ ತಿಪಟೂರು ಮಾರುಕಟ್ಟೆಯಲ್ಲಿ ನಡೆದ ಹರಾಜಿನಲ್ಲಿ ಕ್ವಿಂಟಲ್ ಗೆ 30 ಸಾವಿರ ದಾಟಿದೆ. ಅಂದರೆ 30,188 ರು. ಗೆ ಹಾರಾಜಾಗಿದೆ.

ಕ್ವಿಂಟಲ್ ಗೆ 26,00 ನಿಂದ 30,000 ದಾಟಿದ ಕೊಬ್ಬರಿ ಬೆಲೆ

-

Ashok Nayak
Ashok Nayak Feb 4, 2026 1:32 PM

ಹೂವಪ್ಪ ಐ ಹೆಚ್.

ಕೇರಳ, ತಮಿಳುನಾಡು, ಮತ್ತು ಉತ್ತರ ಭಾರತಕ್ಕೆ ಕೊಬ್ಬರಿ ರವಾನೆ.

ಈ ಹಿಂದೆ ಎಳೆನೀರಿಗೆ ಕಾಯಿಗೆ ಹೆಚ್ಚು ಕಟಾವು ಆಗಿದ್ದರಿಂದ ಕೊಬ್ಬರಿ ಅಭಾವ ಸೃಷ್ಟಿ.

ಮಾರುಕಟ್ಟೆಗೆ 50 ರಷ್ಟು ಆವಕ ಕುಸಿತ

ತೆಂಗು ಶೇ, 60 ಇಳುವರಿ ಖುಷಿತ.

30 ಸಾವಿರ ದಾಟಿದ ಕೊಬ್ಬರಿ ಬೆಲೆ ಏರಿಕೆ.

ಬೆಂಗಳೂರು: ತಿಪಟೂರು, ಅರಸೀಕೆರೆ, ತುಮಕೂರು ತೆಂಗು ಬೆಳೆಗಾರರಿಗೆ ಹೊಸ ವರ್ಷದಲ್ಲಿ ಮಾತೆ ಶುಕ್ರದೆಶೆ ಶುರುವಾಗಿದೆ. ಉಂಡೆ ಕೊಬ್ಬರಿ ಬೆಲೆ ಮತ್ತೆ ಜಿಗಿದಿದೆ. ಜನವರಿಯಿಂದ ಹಂತ ಹಂತವಾಗಿ ಏರಿಕೆ ಕಂಡು ನಿನ್ನೆ ಗುರುವಾರ ತಿಪಟೂರು ಮಾರುಕಟ್ಟೆಯಲ್ಲಿ ನಡೆದ ಹರಾಜಿ ನಲ್ಲಿ ಕ್ವಿಂಟಲ್ ಗೆ 30 ಸಾವಿರ ದಾಟಿದೆ. ಅಂದರೆ 30,188 ರು. ಗೆ ಹಾರಾಜಾಗಿದೆ.

ನವೆಂಬರ್ ಡಿಸೇಂಬೆರ್ ನಲ್ಲಿ 26,000 ರು. ಇತ್ತು. ಎರಡೂ ತಿಂಗಳ ಅಂತರದಲ್ಲಿ 4,000 ರು. ಏರಿಕೆ ಕಂಡಂತಾಗಿದೆ.

ತಮಿಳುನಾಡು, ಕೇರಳ ತೆಂಗು ಇಳುವರಿ ಕಡಿಮೆಯಾಗಿದ್ದು, ಅಲ್ಲಿಗೆ ಹೆಚ್ಚು ಕೊಬ್ಬರಿ ಹೋಗು ತ್ತಿರುವುದೂ ಇಷ್ಟು ಬೆಲೆ ಏರಲು ಕಾರಣವಾಗಿದೆ ಹಾಗೂ ಮಾರುಕಟ್ಟೆಯಲ್ಲಿ ಯಥೇಚ್ಛವಾಗಿ ನಡೆಯುತ್ತಿದ್ದ ಸೆಕೆಂಡ್ಸ್‌ ವ್ಯಾಪಾರಕ್ಕೆ ಕಡಿವಾಣ ಹಾಕಿರುವುದು ಇಷ್ಟು ಬೆಲೆ ಏರಿಕೆಗೆ ಇದು ಕುಡಾ ಕಾರಣ ಎನ್ನಲಾಗುತ್ತಿದೆ.

ಮಾರುಕಟ್ಟೆಯಲ್ಲಿ ತೆಂಗಿನಕಾಯಿ, ಕೊಬ್ಬರಿಗೆ ಬೇಡಿಕೆ ಇರುವುದರಿಂದ ತೆಂಗು ಬೆಳೆಯುವ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಆದರೆ, ಇಳುವರಿ ಕಡಿಮೆ ಇರುವುದರಿಂದ ಬೆಲೆ ಹೆಚ್ಚಳದ ಲಾಭ ದೊಡ್ಡ ಮಟ್ಟದಲ್ಲಿ ಬೆಳೆಗಾರರಿಗೆ ಸಿಗುತ್ತಿಲ್ಲ ನಿರಾಶೆ ಇದೆ.

ಇದನ್ನೂ ಓದಿ: Coconut Price Rise: ತೆಂಗಿನಕಾಯಿ ಬೆಲೆ ಕಿಲೋಗೆ ರು.70ಕ್ಕೆ ಏರಿಕೆ

ಕೊಬ್ಬರಿಯನ್ನು ಸಂಗ್ರಹಿಸಿ ಇಟ್ಟುಕೊಂಡಿರುವ ಮಧ್ಯವರ್ತಿಗಳು, ನಾಫೆಡ್‌ಗೆ ಇದರ ಲಾಭ ಸಿಗುವಂತಾಗಿದೆ. ರೈತರಿಗೆ ಇಳುವರಿಯಲ್ಲಿ ಆಗುವ ನಷ್ಟ ಬರುವ ಲಾಭದಲ್ಲಿ ಸರಿದೂಗುತ್ತಿದೆ’ ಎಂದು ಹೇಳುತ್ತಾರೆ ತೆಂಗು ಕೃಷಿಕರು.

ರಾಜ್ಯದಲ್ಲಿ ಅಂದಾಜು 5.65 ಲಕ್ಷ ಹೆಕ್ಟೇರ್‌ಗೂ (14 ಸಾವಿರ ಎಕರೆ) ಹೆಚ್ಚು ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಅಂದಾಜು ಎಂಟು ಲಕ್ಷಕ್ಕೂ ಹೆಚ್ಚು ಕೃಷಿಕರು ತೆಂಗು ಕೃಷಿಯಲ್ಲಿ ತೊಡಗಿ ಕೊಂಡಿದ್ದಾರೆ. ತುಮಕೂರು, ಹಾಸನ, ಮಂಡ್ಯ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ರೈತರು ತೆಂಗಿನಕಾಯಿ, ಕೊಬ್ಬರಿಗಿಂತ ಎಳನೀರು ಮಾರಾಟಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಶಿವರಾತ್ರಿ ಕಳೆದನಂತರ ಊರು ಜಾತ್ರೆಗಳು, ಮದುವೆ ಸಮಾರಂಭಗಳು ಭರಾಟೆ ಜೋರು ಇರುವುದರಿಂದ ತೆಂಗಿನಕಾಯಿ ಉತ್ಪನ್ನಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗುವ ವುದರಿಂದ ದಾಸ್ತಾನು ಇಡುತ್ತಿದ್ದಾರೆ ಹೀಗಾಗಿ ಇನ್ನಷ್ಟು ಸಮಯ ಬೆಲೆ ಹೀಗೆಯೇ ಏರುಮುಖವಾಗಿರಲಿದೆ ಎಂದು ಹೇಳುತ್ತಾರೆ ತಿಪಟೂರು, ಅರಸೀಕೆರೆ ಕೊಬ್ಬರಿ ವ್ಯಾಪಾರಿಗಳು

ಯಾಕಾಗಿ ಹೆಚ್ಚು ಬೇಡಿಕೆ : ಉತ್ತರ ಭಾರತದ ರಾಜ್ಯಗಳಲ್ಲಿ ಕೊಬ್ಬರಿಗೆ ಬೇಡಿಕೆ ಇದ್ದು,ಸಿಹಿ ತಿನಿಸು, ಅಡುಗೆಯಲ್ಲಿ ಕೊಬ್ಬರಿ ಎಣ್ಣೆಯ ಬಳಕೆ ಹೆಚ್ಚಾಗಿದೆ. ತಿಪಟೂರು ಭಾಗದ ಕೊಬ್ಬರಿಯಲ್ಲಿ ಎಣ್ಣೆ ಹಾಗೂ ಸಿಹಿ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಆಹಾರದಲ್ಲಿ ಹೆಚ್ಚು ಬಳಸುತ್ತಾರೆ. ಪರಿಣಾಮ ರಾಜ್ಯದ ವಿವಿಧ ಭಾಗಗಳಿಂದ ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿ, ಜಮ್ಮು–ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಿಗೆ ರವಾನೆಯಾಗುತ್ತಿದೆ ಇದು ಸದ್ಯದ ಬೇಡಿಕೆಗೆ ಕಾರಣವಾಗಿದೆ.

ಪೂರೈಕೆ ಕಡಿಮೆ, ಬೇಡಿಕೆ ಹೆಚ್ಚು: ಈ ಬಾರಿ ತೆಂಗಿನಕಾಯಿಗೂ ಉತ್ತಮ ಬೆಲೆ ಇದೆ. ಒಂದು ದಪ್ಪ ಕಾಯಿ 50ರಿಂದ 60ರವರೆಗೂ ಮಾರಾಟವಾಗುತ್ತಿದೆ. ಕಾಯಿ ಕೊಬ್ಬರಿಯಾಗಲು ಒಂದು ವರ್ಷ ಕಾಯಬೇಕು. ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರು ತೆಂಗಿನಕಾಯಿಯನ್ನೇ ಮಾರಾಟ ಮಾಡುತ್ತಿದ್ದಾರೆ.

ರೋಗ ಬಾಧೆಯೂ ತೆಂಗಿನ ಮರಗಳನ್ನು ಕಾಡುತ್ತಿದೆ. ಗರಿ ಒಣಗುವುದು, ಕಪ್ಪುಮೂತಿ ಹುಳು ಕಾಟದಿಂದ ಬೆಳೆ ಹಾಳಾಗುತ್ತಿರುವುದು ಇಳುವರಿ ಕಡಿಮೆಯಾಗುವುದಕ್ಕೆ ಕಾರಣವಾಗಿದೆ.

ಅಡಿಕೆಯ ಬೆಲೆ ಹೆಚ್ಚುತ್ತಿರುವುದರಿಂದ ತೆಂಗಿನ ಬೆಳೆ ನಿರ್ವಹಣೆ ಕಡಿಮೆ ಮಾಡಿ, ಅಡಿಕೆ ಬೆಳೆಯತ್ತ ರೈತರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಹೊಸದಾಗಿ ತೆಂಗು ನೆಡುತ್ತಿಲ್ಲ. ನಿಧಾನವಾಗಿ ತೆಂಗಿನ ಜಾಗವನ್ನು ಅಡಿಕೆ ಬೆಳೆ ಆವರಿಸಿಕೊಳ್ಳುತ್ತಿರುವುದು ಕೂಡ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ.

ಬೆಳೆಗಾರರು ಹೇಳುವುದೇನು: ಬೆಲೆ ಹೆಚ್ಚಾಗಿದೆ. ಆದರೆ, ರೈತರ ಬಳಿ ತೆಂಗಿನಕಾಯಿ, ಕೊಬ್ಬರಿಯೇ ಇಲ್ಲದಾಗಿದೆ. ಬೆಲೆ ಏರಿಕೆಯ ಪ್ರಯೋಜನ ಬೆಳೆಗಾರರಿಗೆ ಸಿಗುತ್ತಿಲ್ಲ. ಬೆಲೆ ಕುಸಿತದಿಂದ ಕಂಗಾ ಲಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿಸಿತ್ತು. ಆಗ, ಸಿಕ್ಕಷ್ಟು ಸಿಗಲಿ ಎಂದು ರಾತ್ರಿಯಿಡೀ ಸರದಿಯಲ್ಲಿ ನಿಂತು ನೋಂದಣಿ ಮಾಡಿದ್ದೆವು. ನಂತರ ಅಷ್ಟೇ ಕಷ್ಟಪಟ್ಟು ಮಾರಾಟವನ್ನೂ ಮಾಡಿದ್ದೆವು. ಈಗ ಪಶ್ಚಾತ್ತಾಪ ಪಡುವಂತಾಗಿದೆ

ಸದ್ಯದ ಪರಿಸ್ಥಿತಿಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಕೊಬ್ಬರಿಯನ್ನು ಮಾರುಕಟ್ಟೆಗೆ ತಂದರೆ ಬೆಲೆಯಲ್ಲಿ ಸ್ಥಿರತೆ ಕಾಣಬಹುದು ಎಂದು ರೈತ ಮುಖಂಡರು ಹೇಳುತ್ತಾರೆ.

ವಿರೂಪಾಕ್ಷಪ್ಪ, ಅರಸೀಕೆರೆ ತಾಲ್ಲೂಕು,

ದಾಖಲೆ ಬೆಲೆ: ನನ್ನ 30 ವರ್ಷಗಳ ಕೊಬ್ಬರಿ ವ್ಯಾಪಾರದಲ್ಲಿ ಈ ಮಟ್ಟದಲ್ಲಿ ಬೆಲೆ ಏರಿಕೆ ನೋಡಿರಲಿಲ್ಲ. ಈ ಬಾರಿ ದಾಖಲೆ ಬರೆದಿದೆ. ಬೇಡಿಕೆಯಷ್ಟು ಆವಕ ಇಲ್ಲದೆ ಬೆಲೆ ಹೆಚ್ಚಳವಾಗಿದೆ. ರೈತರು ಹಂತ ಹಂತವಾಗಿ ಕೊಬ್ಬರಿಯನ್ನು ಮಾರುಕಟ್ಟೆಗೆ ತಂದರೆ ಧಾರಣೆ ಇದೇ ಮಟ್ಟದಲ್ಲಿ ಮುಂದುವರಿಯಬಹುದು. ಅವಸರವಾಗಿ ಎಲ್ಲರೂ ಒಟ್ಟಿಗೆ ತಂದರೆ ಬೆಲೆಯಲ್ಲಿ ಏರಿಳಿತ ಉಂಟಾಗಬಹುದು

ಮೋಹನ ಕುಮಾರ ವರ್ತಕ, ತಿಪಟೂರು, ತುಮಕೂರು ಜಿಲ್ಲೆ

ಶೇ 50ರಷ್ಟು ಇಳುವರಿ ಕುಸಿತ

ಹೊಂಬಾಳೆಯಲ್ಲಿ ಗುಳ್ಳು ನಿಲ್ಲುತ್ತಿಲ್ಲ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆಯಂತೆ ಕೀಟನಾಶಕ, ಗೊಬ್ಬರ, ನೀರು ಕೊಟ್ಟಿದ್ದೇವೆ. ಆದರೂ ಮರಗಳಲ್ಲಿ ಫಲ ಇಲ್ಲದಾಗಿದೆ. ಈ ವರ್ಷ ಶೇ 50ರಷ್ಟು ಇಳುವರಿ ಕುಸಿದಿದೆ. ಬೆಳೆ ಹೆಚ್ಚಿಲ್ಲದಿರುವುದರಿಂದ ಧಾರಣೆ ಜಾಸ್ತಿ ಇದ್ದರೂ ಲಾಭ ಸಿಕ್ಕಿಲ್ಲ ಎನ್ನುತ್ತಾರೆ.

ನೇರ ಮಾರಾಟದಲ್ಲಷ್ಟೇ ಲಾಭ: ದರ ಏರಿಕೆಯಾದ ಮೇಲೆ ರೈತರಿಗೆ, ತೆಂಗಿನಕಾಯಿಗೆ ಕೆ.ಜಿ.ಗೆ ಕನಿಷ್ಠ 60 ರು. ರವರೆಗೆ ಬೆಲೆ ಸಿಗುತ್ತಿದೆ. ನೇರ ಮಾರಾಟ ಮಾಡಿದರೆ ಮಾತ್ರ ಈ ಲಾಭ ಸಿಗುತ್ತದೆ. ಆದರೆ, ತೋಟದಲ್ಲಿ ಇಳುವರಿ ಶೇ 40ರಷ್ಟು ಕಡಿಮೆ ಇದೆ. ಇಳುವರಿಯ ನಷ್ಟ ಈ ಲಾಭದಲ್ಲಿ ಸರಿದೂಗುತ್ತಿದೆ. ರೈತನಿಗೆ ನಿಜವಾಗಿ ಲಾಭ ಸಿಗಬೇಕಾದರೆ, ಇಳುವರಿ ಹೆಚ್ಚಬೇಕು.

*

ಈ ಬಾರಿ ತೆಂಗಿನಕಾಯಿ, ಎಳೆನೀರಿಗೆ ಉತ್ತಮ ಬೆಲೆ ಇದೆ. ರೈತರು ತೆಂಗಿನಕಾಯಿ,ಎಳೆನೀರು ಹೆಚ್ಚು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಕೊಬ್ಬರಿಗೆ ಅಭಾವ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತಿದೆ.

ತಿಪಟೂರು ಎಪಿಎಂಸಿ ಕೊಬ್ಬರಿ ವರ್ತಕ, ಶ್ರೀನಿವಾಸ್.

ತೆಂಗಿನಕಾಯಿ, ಕೊಬ್ಬರಿಗೆ ಬೇಡಿಕೆ ಇರುವುದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಆದರೆ, ಇಳುವರಿ ಕಡಿಮೆ ಇರುವುದರಿಂದ ಬೆಲೆ ಹೆಚ್ಚಳದ ಲಾಭ ದೊಡ್ಡ ಮಟ್ಟದಲ್ಲಿ ಬೆಳೆಗಾರರಿಗೆ ಸಿಗುತ್ತಿಲ್ಲವೆಂಬುವುದು ನಿರಾಶೆ ಇದೆ.

ತೆಂಗು ಬೆಳೆಗಾರ ರವಿಕುಮಾರ ಸಂತೆಮಾರನಹಳ್ಳಿ ತಿಪಟೂರು ತಾಲೂಕು.