ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cooking oil: ಲೀಟರ್ ಆಧಾರಿತ ಪ್ಯಾಕಿಂಗ್ ಕಡ್ಡಾಯಗೊಳಿಸಲು ಅಡುಗೆ ಎಣ್ಣೆ ಕಂಪನಿಗಳ ಆಗ್ರಹ

ಅಡುಗೆ ಎಣ್ಣೆಗಳನ್ನು (Cooking oil) ಲೀಟರ್ ಆಧಾರದಲ್ಲಿ ಪ್ಯಾಕೇಜಿಂಗ್ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿ ಕೈಗಾರಿಕಾ ಸಂಸ್ಥೆ, ದ್ರಾವಕ ಹೊರತೆಗೆಯುವವರ ಸಂಘ ( Solvent Extractors' Association) ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದೆ. ಸಾಮಾನ್ಯವಾಗಿ ಒಂದೇ ಗಾತ್ರ, ವಿನ್ಯಾಸದಲ್ಲಿರುವ ಎಣ್ಣೆಯ ಪ್ಯಾಕೇಟ್ ಗಳು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಪ್ರಮಾಣಿತವಲ್ಲದ ತೂಕಗಳಲ್ಲಿ ಲಭ್ಯವಿದೆ. ಇದರಿಂದ ಗ್ರಾಹಕರು ಗೊಂದಲಕ್ಕೆ ಒಳಗಾಗುತ್ತಾರೆ ಹಾಗು ಕೆಲವು ವ್ಯಾಪಾರಿಗಳು ಇದನ್ನು ಲಾಭಕ್ಕಾಗಿ ಬಳಸಿಕೊಂಡು ಗ್ರಾಹಕರನ್ನು ವಂಚಿಸುತ್ತಾರೆ. ಅದ್ದರಿಂದ ಅಡುಗೆ ಎಣ್ಣೆಗಳನ್ನು ಗ್ರಾಂಗಳಲ್ಲಿ ಮಾತ್ರವಲ್ಲ ಲೀಟರ್‌ಗಳಲ್ಲಿಯೂ ಪ್ಯಾಕ್ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಹೇಳಿದೆ.

ಅಡುಗೆ ಎಣ್ಣೆಗಳಿಗೆ ಲೀಟರ್ ಆಧಾರಿತ ಪ್ಯಾಕೇಜಿಂಗ್ ಒತ್ತಾಯ

ಎಣ್ಣೆಗಳನ್ನು ಲೀಟರ್ ಆಧಾರಿತ ಪ್ಯಾಕಿಂಗ್ ಕಡ್ಡಾಯಗೊಳಿಸುವಂತೆ ಅಡುಗೆ ಎಣ್ಣೆ ಕಂಪೆನಿಗಳ ಆಗ್ರಹಿಸಿವೆ. (ಸಂಗ್ರಹ ಚಿತ್ರ) -

ನವದೆಹಲಿ: ಅಡುಗೆ ಎಣ್ಣೆಗಳ (Cooking oil) ವಿವಿಧ ಮಾದರಿಯ ಪ್ಯಾಕೇಜ್ ಗಳಿಂದ ಗ್ರಾಹಕರಿಗೆ ಉಂಟಾಗುವ ಗೊಂದಲವನ್ನು ತಪ್ಪಿಸಲು ಲೀಟರ್ ಆಧಾರಿತ ಪ್ಯಾಕೇಜಿಂಗ್ (litre based packag) ಅನ್ನು ಕಡ್ಡಾಯಗೊಳಿಸುವಂತೆ ಅಡುಗೆ ಎಣ್ಣೆ ಉದ್ಯಮವು (cooking oil industray) ಸರ್ಕಾರವನ್ನು ಒತ್ತಾಯಿಸಿದೆ. ಸಾಮಾನ್ಯವಾಗಿ ಒಂದೇ ರೀತಿ ಕಾಣುವ ಎಣ್ಣೆಗಳ ವಿಭಿನ್ನ ತೂಕದ ಪ್ಯಾಕೇಟ್ ಗಳಿಂದ ಗ್ರಾಹಕರಿಗೆ ಗೊಂದಲ ಉಂಟಾಗುತ್ತದೆ. ಹೀಗಾಗಿ ಅಡುಗೆ ಎಣ್ಣೆಗಳಿಗೆ ಲೀಟರ್ ಆಧಾರಿತ ಪ್ಯಾಕೇಜಿಂಗ್ ಅನ್ನು ಕಡ್ಡಾಯಗೊಳಿಸಬೇಕು ಎಂದು ಕೈಗಾರಿಕಾ ಸಂಸ್ಥೆ, ದ್ರಾವಕ ಹೊರತೆಗೆಯುವವರ ಸಂಘ (Solvent Extractors Association) ಸರ್ಕಾರವನ್ನು ಆಗ್ರಹಿಸಿವೆ.

ಅಡುಗೆ ಎಣ್ಣೆಯಲ್ಲಿ ಸದ್ಯ ಮಾರುಕಟ್ಟೆಗೆ ಬರುತ್ತಿರುವ 800 ಅಥವಾ 870 ಗ್ರಾಂನಂತಹ ಪ್ರಮಾಣಿತವಲ್ಲದ ಪ್ಯಾಕ್‌ಗಳು ಗ್ರಾಹಕರನ್ನು ದಾರಿ ತಪ್ಪಿಸುತ್ತವೆ. ಕೆಲವೊಮ್ಮೆ ಬೆಲೆ ಸರಿಯಾಗಿ ಕಾಣುವುದಿಲ್ಲ ಎಂದು ಕೈಗಾರಿಕಾ ಸಂಸ್ಥೆ, ದ್ರಾವಕ ಹೊರತೆಗೆಯುವವರ ಸಂಘ (SEA) ಹೇಳಿದೆ.

ಇದನ್ನೂ ಓದಿ: Kolhar News: ತಾಲೂಕ ಆಡಳಿತದಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ಅದು, ಅಡುಗೆ ಎಣ್ಣೆಗಳಲ್ಲಿ ಲೀಟರ್ ಆಧಾರಿತ ಪ್ಯಾಕೇಜಿಂಗ್‌ನಿಂದ ವ್ಯಾಪಾರದಲ್ಲಿ ನ್ಯಾಯಯುತ ವಹಿವಾಟು ನಡೆಸಬಹುದು. ಅಲ್ಲದೇ ಇದರಿಂದ ಗ್ರಾಹಕರಿಗೂ ಗೊಂದಲವಾಗುವುದಿಲ್ಲ ಎಂದು ತಿಳಿಸಿದೆ.

ಅಡುಗೆ ಎಣ್ಣೆಗಳನ್ನು ಗ್ರಾಂಗಳಲ್ಲಿ ಮಾತ್ರವಲ್ಲ ಲೀಟರ್‌ಗಳಲ್ಲಿಯೂ ಪ್ಯಾಕ್ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿರುವ ದ್ರಾವಕ ಹೊರತೆಗೆಯುವವರ ಸಂಘ, ಬಹುತೇಕ ಒಂದೇ ರೀತಿಯ ಪ್ಯಾಕೇಜಿಂಗ್ ಗಳಲ್ಲಿ ವಿಭಿನ್ನ ತೂಕದ ಅಡುಗೆ ಎಣ್ಣೆಗಳನ್ನು ಪ್ಯಾಕ್ ಮಾಡುವುದರಿಂದ ಗ್ರಾಹಕರಲ್ಲಿ ಗೊಂದಲ ಉಂಟಾಗುತ್ತದೆ. ಅಲ್ಲದೇ ಬೆಲೆ ಹೋಲಿಕೆಗಳ ಬಗ್ಗೆಯು ಅನಗತ್ಯ ಚರ್ಚೆಗೆ ಕಾರಣ ಮಾಡುತ್ತದೆ ಎಂದು ಹೇಳಿದೆ.

ವಿಭಿನ್ನ ರೀತಿಯ ಪ್ಯಾಕೇಜಿಂಗ್ ಗಳು ಅನಾರೋಗ್ಯಕರ ಸ್ಪರ್ಧೆಗೆ ಕಾರಣವಾಗಿದೆ. ಕೆಲವು ಮಾರಾಟಗಾರರು ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ. ವ್ಯಾಪಾರದಲ್ಲಿ ಅನಾರೋಗ್ಯಕರ ಸ್ಪರ್ಧೆ ಉಂಟಾಗುತ್ತಿದೆ ಎಂದು ಕೈಗಾರಿಕಾ ಸಂಸ್ಥೆ ದ್ರಾವಕ ಹೊರತೆಗೆಯುವವರ ಸಂಘ ತಿಳಿಸಿದೆ.

ಈ ಕುರಿತು ಮಾತನಾಡಿರುವ ಎಡಬ್ಲ್ಯೂಎಲ್ ಅಗ್ರಿ ಬ್ಯುಸಿನೆಸ್ ಲಿಮಿಟೆಡ್‌ನ ಸಿಇಒ ಅಂಗ್ಶು ಮಲ್ಲಿಕ್, ಗ್ರಾಹಕರು ಲೀಟರ್‌ಗಳಲ್ಲಿ ಅಡುಗೆ ಎಣ್ಣೆಯನ್ನು ಖರೀದಿಸಲು ಒಗ್ಗಿಕೊಂಡಿರುವ ಕಾರಣ ಸರ್ಕಾರವು ಲೀಟರ್‌ಗಳಲ್ಲಿ ಅಡುಗೆ ಎಣ್ಣೆಗಳನ್ನು ಪ್ಯಾಕ್ ಮಾಡುವುದು ಒಳ್ಳೆಯದು. ಇದನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Gubbi News: ವಿಶೇಷ ಪೌಷ್ಟಿಕ ಆಹಾರ ವಿತರಣೆಯಲ್ಲಿ ಲೋಪ ಬರಬಾರದು : ಶಾಸಕ ಎಸ್.ಆರ್.ಶ್ರೀನಿವಾಸ್

ಅಡುಗೆ ಎಣ್ಣೆಗಳನ್ನು ವಿಭಿನ್ನ ಗ್ರಾಂಗಳಲ್ಲಿ ಹೊರತರುವ ಬದಲು 1 ಲೀಟರ್ ಗಳಲ್ಲಿ ತರಬೇಕು. ವಿಭಿನ್ನ ಗ್ರಾಂ ಚೀಲಗಳು ಗ್ರಾಹಕರಿಗೆ ಮೋಸ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಎಣ್ಣೆಗಳಲ್ಲಿ 800 ಗ್ರಾಂ, 810 ಗ್ರಾಂ, 870 ಗ್ರಾಂ ಇತ್ಯಾದಿ ಪ್ರಮಾಣಿತವಲ್ಲದ ಪ್ಯಾಕ್‌ಗಳು ಮಾರುಕಟ್ಟೆಯಲ್ಲಿವೆ. ಇದು ಗ್ರಾಹಕರಲ್ಲಿ ಗೊಂದಲವನ್ನು ಉಂಟು ಮಾಡುತ್ತಿದೆ. ವಿಭಿನ್ನ ಬೆಲೆ ನಿಗದಿ ಮಾಡಿ ವ್ಯಾಪಾರಿಗಳು ಗ್ರಹಕರಿಗೆ ಮೋಸ ಮಾಡುತ್ತಾರೆ. ಇದರಲ್ಲಿರುವ ಲೇಬಲ್ ವಿವರಗಳು ಮತ್ತು ಅಪೂರ್ಣ ಮಾಹಿತಿಗಳು ಗ್ರಾಹಕರನ್ನು ದಾರಿ ತಪ್ಪಿಸುತ್ತದೆ. ಅವರಿಗೆ ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಲು ಕಷ್ಟವಾಗುತ್ತದೆ ಎಂದು ಅಂಗ್ಶು ಮಲ್ಲಿಕ್ ಅವರು ತಿಳಿಸಿದ್ದಾರೆ.