ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IAS- IPS ದಂಪತಿಯ ಆಸ್ತಿ ನೋಡಿ ಎಸಿಬಿ ಅಧಿಕಾರಿಗಳೇ ಶಾಕ್‌; ಅಕ್ರಮ ಸಂಪತ್ತಿನ ಸತ್ಯ ಬಯಲಾಗಿದ್ದೇಗೆ?

ರಾಜಸ್ಥಾನದ ಆಡಳಿತಾರೂಢ ವಲಯದಲ್ಲಿ ತಲ್ಲಣ ಸೃಷ್ಟಿಸಿರುವ ಹಿರಿಯ ಐಎಎಸ್ ಅಧಿಕಾರಿ ಶಿಖರ್ ಅಗರ್ವಾಲ್ ಹಾಗೂ ಅವರ ಪತ್ನಿ, ಹಿರಿಯ ಐಪಿಎಸ್ ಅಧಿಕಾರಿ ಪ್ರಶಾಖಾ ಮಾಥುರ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಸತ್ಯಗಳು ಹೊರಬರುತ್ತಿವೆ.

IAS- IPS ದಂಪತಿಯ ಆಸ್ತಿ ನೋಡಿ ಎಸಿಬಿ ಅಧಿಕಾರಿಗಳೇ ಶಾಕ್‌

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 1, 2026 11:20 AM

ಜೈಪುರ: ರಾಜಸ್ಥಾನದ ( Rajasthan) ಆಡಳಿತಾರೂಢ ವಲಯದಲ್ಲಿ ತಲ್ಲಣ ಸೃಷ್ಟಿಸಿರುವ ಹಿರಿಯ ಐಎಎಸ್ ಅಧಿಕಾರಿ ಶಿಖರ್ ಅಗರ್ವಾಲ್ ಹಾಗೂ ಅವರ ಪತ್ನಿ, ಹಿರಿಯ ಐಪಿಎಸ್ ಅಧಿಕಾರಿ ಪ್ರಶಾಖಾ ಮಾಥುರ್ ವಿರುದ್ಧದ ಭ್ರಷ್ಟಾಚಾರ (Viral News) ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಸತ್ಯಗಳು ಹೊರಬರುತ್ತಿವೆ. ಉದ್ಯಮಗಳಿಗೆ ನೀಡಬೇಕಿದ್ದ ಕೋಟ್ಯಂತರ ರೂಪಾಯಿ ತೆರಿಗೆ ವಿನಾಯಿತಿ ಮತ್ತು ರಿಯಾಯಿತಿ ಪ್ಯಾಕೇಜ್‌ಗಳಿಗೆ ಸರ್ಕಾರದಿಂದ ವೇಗದ ಮಂಜೂರಾತಿ ಕೊಡಿಸಿದ ಬೆನ್ನಲ್ಲೇ, ಈ ಅಧಿಕಾರಶಾಹಿ ದಂಪತಿಗಳ ಕುಟುಂಬಕ್ಕೆ ಒಟ್ಟು 40 ಐಷಾರಾಮಿ ವಿಲ್ಲಾಗಳು ಮತ್ತು ಕಾಟೇಜ್‌ಗಳು ಜಮಾವಣೆಯಾಗಿರುವುದು ಭ್ರಷ್ಟಾಚಾರ ನಿರೋಧಕ ದಳದ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ.

ವರದಿಯ ಪ್ರಕಾರ, ಕೈಗಾರಿಕಾ ಇಲಾಖೆಯಿಂದ ಸ್ವೀಕರಿಸಿದ ಮಾಹಿತಿ ಮತ್ತು ಗೌಪ್ಯ ಮೂಲಗಳಿಂದ ಸಂಗ್ರಹಿಸಿದ ವಿವರಗಳನ್ನು ಆಧರಿಸಿ ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳವು (ACB) ನಡೆಸಿದ ಪ್ರಾಥಮಿಕ ತನಿಖೆಯ ನಂತರ, ರಾಜ್ಯ ಸರ್ಕಾರವು ಈ ತನಿಖೆಗೆ ಅನುಮೋದನೆ ನೀಡಿದೆ. ಎಸಿಬಿ ಮೂಲಗಳ ಪ್ರಕಾರ, ಶಿಖರ್ ಅಗರ್ವಾಲ್ ಅವರು ಉದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ACS) ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ ಕಂಪನಿಯೊಂದಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

ವಿಚಾರಣೆಯಲ್ಲಿ ಉದಯಪುರದ ಬುಜ್ಡಾ ಮತ್ತು ಅಲ್ವಾರ್‌ನ ಅಜಬ್‌ಗಢದಲ್ಲಿರುವ ಅನಂತ ರೆಸಾರ್ಟ್‌ಗಳ ವಿಲ್ಲಾಗಳ ಖರೀದಿ ವಿವರಗಳು ಬೆಳಕಿಗೆ ಬಂದಿವೆ. ಮಾರ್ಚ್ 2026ರಲ್ಲಿ ಒಟ್ಟು 20 ವಿಲ್ಲಾಗಳನ್ನು ಖರೀದಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಪೈಕಿ 10 ವಿಲ್ಲಾಗಳು ಶಿಖರ್ ಅಗರವಾಲ್ ಅವರ ಹೆಸರಿನಲ್ಲಿ ಹಾಗೂ ಉಳಿದ 10 ವಿಲ್ಲಾಗಳು ಅವರ ಪತ್ನಿ, ಐಪಿಎಸ್ ಅಧಿಕಾರಿ ಪ್ರಶಾಖಾ ಮಾಥುರ್ ಅವರ ಹೆಸರಿನಲ್ಲಿ ನೋಂದಣಿಯಾಗಿವೆ ಎನ್ನಲಾಗಿದೆ.

ಒಂದು ಎಐ ಲವ್‌ ಸ್ಟೋರಿ: ಆನ್‌ಲೈನ್‌ ಪ್ರೇಯಸಿಗಾಗಿ ಆಸ್ತಿ ಮಾರಿ 2,000 ಕಿಲೋ ಮೀಟರ್‌ ಪ್ರಯಾಣಿಸಿದ ವ್ಯಕ್ತಿಗೆ ಕಾದಿತ್ತು ಆಘಾತ; ಕಣ್ಣೀರು ಹಾಕುತ್ತ ಮರಳಿದ್ದೇಕೆ?

ಪ್ರತಿ ವಿಲ್ಲಾವನ್ನು ಸುಮಾರು 15 ಲಕ್ಷ ರೂ.ಗೆ ಖರೀದಿಸಲಾಗಿದೆ ಎಂದು ವರದಿಯಾಗಿದೆ. ಈ 20 ವಿಲ್ಲಾಗಳ ಒಟ್ಟು ಮೌಲ್ಯ ಸುಮಾರು 3 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅಜಬ್‌ಗಢದಲ್ಲಿರುವ ಅನಂತ ರೆಸಾರ್ಟ್‌ನಲ್ಲಿ ಒಟ್ಟು 16 ವಿಲ್ಲಾಗಳನ್ನು ಅಗರವಾಲ್ ಕುಟುಂಬದವರು ಖರೀದಿಸಿದ್ದಾರೆ ಎಂಬ ಆರೋಪವಿದೆ. ಅಗರವಾಲ್ ಮತ್ತು ಅವರ ಪತ್ನಿಯ ಹೆಸರಿನಲ್ಲಿ ತಲಾ ನಾಲ್ಕು ವಿಲ್ಲಾಗಳಿವೆ. ಇಬ್ಬರು ಪುತ್ರರ ಹೆಸರಿನಲ್ಲಿ ತಲಾ ಎರಡು ವಿಲ್ಲಾಗಳಂತೆ ಒಟ್ಟು ನಾಲ್ಕು ವಿಲ್ಲಾಗಳಿವೆ.