ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಿಂಗಳ ಸಂಬಳ ಪಡೆಯುವವರು ಹೂಡಿಕೆ ಯೋಜನೆ ಮಾಡುವುದು ಹೇಗೆ? ಏನಂತಾರೆ ತಜ್ಞರು ?

ಪ್ರತಿ ತಿಂಗಳು ನಿಗದಿತ ಸಂಬಳ ಪಡೆದರೂ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಮಧ್ಯಮ ವರ್ಗದ ಜನರು ಕೂಡ ಸರಿಯಾದ ಯೋಜನೆ ರೂಪಿಸಿದರೆ ನಿರ್ದಿಷ್ಟ ಮೊತ್ತವನ್ನು ಉಳಿತಾಯ ಮಾಡಬಹುದು. ಸಾಮಾನ್ಯ ಜನರು ಉಳಿತಾಯ ಮಾಡಲು ಸಾಧ್ಯವಾಗದೇ ಇರುವುದಕ್ಕೆ ಹಲವಾರು ಕಾರಣಗಳಿವೆ. ಅವುಗಳು ಯಾವುದು? ಇಲ್ಲಿದೆ ಖ್ಯಾತ ಹೂಡಿಕೆ ತಜ್ಞರಾದ ಅಶೋಕ್ ದೇವನಾಂಪ್ರಿಯ ಅವರು ನೀಡಿರುವ ಮಾಹಿತಿ.

ಉಳಿತಾಯ ಯೋಜನೆ ದಾರಿ ತಪ್ಪಲು ಕಾರಣವೇನು?

ಅಶೋಕ್ ದೇವಾನಾಂಪ್ರಿಯ -

ಬೆಂಗಳೂರು: ಇವತ್ತು ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೇ ನಮ್ಮ ಜೀವನ ಶೈಲಿ. ಖರ್ಚಿನ ಮೇಲೆ ಅನಿಯಂತ್ರಣವೇ ಇದಕ್ಕೆಲ್ಲಾ ಮೂಲ ಕಾರಣ ಎನ್ನುತ್ತಾರೆ ಖ್ಯಾತ ಹೂಡಿಕೆ ತಜ್ಞ, ಕೌಟಿಲ್ಯ ಕ್ಯಾಪಿಟಲ್ ಸಂಸ್ಥಾಪಕ (Founder of cautilya Capital) ಅಶೋಕ್ ದೇವನಾಂಪ್ರಿಯ (Ashok Devanampriya) 'ವಿಶ್ವವಾಣಿ ಮನಿ' (Vishwavani money) ಯುಟ್ಯೂಬ್‌ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು ಯಾವತ್ತೂ ಕೂಡ ಹಣ ಶ್ರೀಮಂತನಿಂದ ಬಡವನಿಗೆ ಬರಬೇಕು. ಆದರೆ ಈಗ ಬಡವನಿಂದ ಶ್ರೀಮಂತನಿಗೆ ಹೋಗುತ್ತಿದೆ ಎಂದು ಹೇಳಿದರು.

ಪ್ರತಿ ತಿಂಗಳು ಸಂಬಳ ಪಡೆದು ಜೀವನ ನಡೆಸುವ ಮಾಧ್ಯಮ ವರ್ಗದ ಜನರಿಗೆ ಉಳಿತಾಯ ಮಾಡುವುದು ಸಾದ್ಯವಾಗುತ್ತಿಲ್ಲ. ಸಂಬಳ ಹೆಚ್ಚಾಗುವುದರೊಂದಿಗೆ ಅವರ ಖರ್ಚು ಕೂಡ ಹೆಚ್ಚಾಗುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ಜೀವನ ಶೈಲಿಯೇ ಆಗಿದೆ ಎಂದರು.



ಹಿಂದೆಲ್ಲ ನಮ್ಮ ಹಿರಿಯರು ಕೆಲಸಕ್ಕೆ ಸೇರಿದ ತಕ್ಷಣ ಮನೆ, ಬಂಗಾರ, ಆಸ್ತಿ ಖರೀದಿ ಬಗ್ಗೆ ಯೋಚನೆ ಮಾಡುತ್ತಿದ್ದರು. ಆದರೆ ಈಗ ಮಕ್ಕಳು ಐಫೋನ್, ಬೈಕ್, ಕಾರಿನ ಬಗ್ಗೆ ಯೋಚನೆ ಮಾಡುತ್ತಾರೆ. ಹೀಗಾಗಿ ಉದ್ಯೋಗಕ್ಕೆ ಸೇರಿದ ಮೊದಲ ತಿಂಗಳ ಸಂಬಳದ ಜೊತೆಗೆ ಇಎಂಐ ಸೇರಿಕೊಳ್ಳುತ್ತಿದೆ ಎಂದು ತಿಳಿಸಿದರು.

ಸಂಪೂರ್ಣ ನಗದು ರಹಿತ ಆರ್ಥಿಕತೆ; ಸಾಧಕ-ಬಾಧಕಗಳ ಬಗ್ಗೆ ತಜ್ಞರು ಹೇಳುವುದೇನು?

ಇವತ್ತು ಕೆಲವೊಂದು ಕಂಪನಿಗಳು ಉದ್ಯೋಗಿಗಳ ಗುಣಮಟ್ಟ ಚೆನ್ನಾಗಿಲ್ಲ ಎಂದರೆ ಸೇರಿದ ಮೂರೇ ತಿಂಗಳಿಗೆ ಮನೆಗೆ ಕಳುಹಿಸುತ್ತಾರೆ. ಆದ್ದರಿಂದ ಇಎಂಐ ಅನ್ನು ನಾವು ಯಾವುದಕ್ಕೆ ಬಳಸಬೇಕು, ಯಾವುದಕ್ಕೆ ಬಳಸಬಾರದು ಎಂಬುದನ್ನು ಮೊದಲು ತಿಳಿದಿರಬೇಕು ಎಂದು ಅವರು ತಿಳಿಸಿದರು.

ಇಎಂಐ ಎನ್ನುವುದು ಬ್ರಹ್ಮಾಸ್ತ್ರ. ಅದನ್ನು ಬೆಲೆ ಹೆಚ್ಚಾಗುವಂತ ವಸ್ತುಗಳಿಗೆ ಖರ್ಚು ಮಾಡಲು ಮತ್ತು ಅನಿವಾರ್ಯ ಉದ್ದೇಶಗಳಿಗೆ ಮಾತ್ರ ಬಳಸಬೇಕು. ಆದರೆ ಇವತ್ತು ಇಎಂಐ ಅನ್ನು ಹೆಚ್ಚಿನವರು ತಮ್ಮ ಜೀವನ ಶೈಲಿಯನ್ನು ಚೆನ್ನಾಗಿ ಮಾಡಲು ಬಳಕೆ ಮಾಡುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಮನೆ, ಬಂಗಾರ ಇವುಗಳಿಗೆ ಇಎಂಐ ಬಳಕೆಯಾದರೆ ಪರವಾಗಿಲ್ಲ. ಯಾಕೆಂದರೆ ಇವೆಲ್ಲ ನಮ್ಮ ಅವಶ್ಯಕತೆಗಳು. ಆದರೆ ವಾಷಿಂಗ್ ಮೆಷಿನ್, ಟಿವಿ, ಫಾರಿನ್ ಟೂರ್ ಗೆ ಇಎಂಐ ಬಳಸುವುದು ಸರಿಯಲ್ಲ. ಯಾಕೆಂದರೆ ಇವು ನಮ್ಮ ಬೇಡಿಕೆಗಳು ಅವಶ್ಯಕತೆಗಳಲ್ಲ ಎಂದರು.

ಇವತ್ತು ನಮಗೆ ಖರ್ಚಿನ ಮೇಲೆ ನಿಯಂತ್ರಣವೇ ಇಲ್ಲ. ಖರ್ಚು ಮಾಡಲೇ ಬೇಕು ಅನಿವಾರ್ಯತೆಯನ್ನು ಸಮಾಜ ಸೃಷ್ಟಿಸಿದೆ. ಮನೆಯಿಂದ ಹೊರಗೆ ಕಾಲಿಟ್ಟ ತಕ್ಷಣ ನೂರಾರು ಮಂದಿ ನಮ್ಮ ಜೇಬಿನ ಮೇಲೆ ಕಣ್ಣು ಹಾಕಿಕೊಂಡು ಕೂತಿರುತ್ತಾರೆ ಎಂದು ಹೇಳಿದರು.

ನಮ್ಮ ಹಣ ಶ್ರೀಮಂತರ ಕೈಗೆ ಹೋಗುತ್ತಿದೆ. ಆದರೆ ಹಣ ಯಾವತ್ತೂ ಕೂಡ ಶ್ರೀಮಂತರಿಂದ ಬಡವರಿಗೆ ಬರಬೇಕು. ಆದರೆ ನಮ್ಮ ಅನಗತ್ಯ ಖರ್ಚುಗಳ ಕಾರಣದಿಂದ ಬಡವರ ಹಣ ಶ್ರೀಮಂತರಿಗೆ ಹೋಗುತ್ತಿದೆ ಎಂದು ಅವರು ಹೇಳಿದರು.

ಸಂಪೂರ್ಣ ನಗದು ರಹಿತ ಆರ್ಥಿಕತೆ; ಸಾಧಕ-ಬಾಧಕಗಳ ಬಗ್ಗೆ ತಜ್ಞರು ಹೇಳುವುದೇನು?

ನಮ್ಮ ಬೇಡಿಕೆ ತಿಂಗಳ ಸಂಬಳದಲ್ಲಿ ಶೇಕಡಾ 10ನ್ನು ಮಿರಲೇಬಾರದು. ಆದರೆ ಇವತ್ತು ನಮ್ಮ ಬೇಡಿಕೆ ಕನಿಷ್ಠ ಶೇ. 20ರಷ್ಟು ಇದೆ. ಕಾರು ಖರೀದಿ ಯೋಜನೆ ನಮ್ಮ ಆರು ತಿಂಗಳ ಸಂಬಳದ ಒಟ್ಟು ಮೊತ್ತವಾಗಿರಬೇಕು. ಅದಕ್ಕಿಂತ ಹೆಚ್ಚು ಖರ್ಚು ಮಾಡುವುದು ಮೂರ್ಖತನ ಎಂದರು.

ನಿಯಮಿತವಾಗಿ ಖರ್ಚಿನ ಲೆಕ್ಕಾಚಾರ ಮಾಡಿಕೊಂಡರೆ ಅನಗತ್ಯವಾಗಿ ಹಣ ಎಲ್ಲಿ ಹೋಯಿತು ಎಂಬುದನ್ನು ತಿಳಿಯಬಹುದು. ಬೇಡಿಕೆಯನ್ನು ಕಡಿಮೆಗೊಳಿಸಿದರೆ ಉಳಿತಾಯ ಮಾಡಬಹುದು. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ವಸ್ತುವನ್ನು ಮಾಲ್ ಗಳಲ್ಲಿ ಖರೀದಿ ಮಾಡಿದರೆ ಹಣ ಬಡವರಿಂದ ಶ್ರೀಮಂತರಿಗೆ ಹೋಗುತ್ತದೆ. ಇದರಿಂದ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾರೆ ಎಂದು ಅವರು ತಿಳಿಸಿದರು.