ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold Price Today on 20th December 2025: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ; ಬೆಳ್ಳಿ ದರದಲ್ಲಿ ಏರಿಕೆ

Gold Silver Price Today: ಚಿನ್ನದ ದರ ಇಂದು (ಡಿಸೆಂಬರ್‌ 20) ಯಥಾಸ್ಥಿತಿ ಕಾಯ್ದುಕೊಂಡಿದೆ. ಶನಿವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 12,300 ರುಪಾಯಿ ಇದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ ನೀವು 13,418 ರೂ. ಪಾವತಿಸಬೇಕಾಗುತ್ತದೆ.

ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ

ಕೃತಿ ಶೆಟ್ಟಿ (ಇನ್‌ಸ್ಟಾಗ್ರಾಂ ಚಿತ್ರ). -

Ramesh B
Ramesh B Dec 20, 2025 12:58 PM

ಬೆಂಗಳೂರು, ಡಿ. 20: ಕೆಲವು ದಿನಗಳಿಂದ ಗ್ರಾಹಕರ ನೆಮ್ಮದಿ ಗೆಡಿಸಿದ ಚಿನ್ನದ ದರ ಇಂದು (ಡಿಸೆಂಬರ್‌ 20) ಯಥಾಸ್ಥಿತಿ ಕಾಯ್ದುಕೊಂಡಿದೆ (Gold Price Today on 15th December 2025). ಶನಿವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 12,300 ರುಪಾಯಿ ಇದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ ನೀವು 13,418 ರೂ. ಪಾವತಿಸಬೇಕಾಗುತ್ತದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 98,400 ರುಪಾಯಿಯಾದರೆ 10 ಗ್ರಾಂಗೆ ನೀವು 1,23,000 ರುಪಾಯಿ ಮತ್ತು 100 ಗ್ರಾಂಗೆ 12,30,000 ರುಪಾಯಿ ನೀಡಬೇಕಾಗುತ್ತದೆ. ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನ 80,512 ರುಪಾಯಿ ಬೆಲೆ ಬಾಳಿದರೆ, 10 ಗ್ರಾಂಗೆ ನೀವು 1,00,640 ರುಪಾಯಿ ಮತ್ತು 100 ಗ್ರಾಂಗೆ ನೀವು 10,06,400 ರುಪಾಯಿ ಪಾವತಿ ಮಾಡಬೇಕು.

ಪ್ರಮುಖ ನಗರಗಳಾದ ಚೆನ್ನೈಯಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 12,400 ರುಪಾಯಿ, 24 ಕ್ಯಾರಟ್‌ನ 1 ಗ್ರಾಂಗೆ 13,528 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 12,300 ರುಪಾಯಿ, 24 ಕ್ಯಾರಟ್‌ನ 1 ಗ್ರಾಂಗೆ 13,418 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 12,315 ರುಪಾಯಿ, 24 ಕ್ಯಾರಟ್‌ನ 1 ಗ್ರಾಂಗೆ 13,433 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 12,300 ರುಪಾಯಿ, 24 ಕ್ಯಾರಟ್‌ನ 1 ಗ್ರಾಂಗೆ 13,418 ರುಪಾಯಿ ಹಾಗೂ ಹೈದರಾಬಾದ್‌ನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 12,300 ರುಪಾಯಿ, 24 ಕ್ಯಾರಟ್‌ನ 1 ಗ್ರಾಂಗೆ 13,418 ರುಪಾಯಿ ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ದರ

ದರ ಪಟ್ಟಿ ಹೀಗಿದೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 12,400 ರುಪಾಯಿ 13,528 ರುಪಾಯಿ
ಮುಂಬೈ 12,300 ರುಪಾಯಿ 13,528 ರುಪಾಯಿ
ದೆಹಲಿ 12,315 ರುಪಾಯಿ 13,433 ರುಪಾಯಿ
ಕೋಲ್ಕತ್ತಾ 12,300 ರುಪಾಯಿ 13,418 ರುಪಾಯಿ
ಹೈದರಾಬಾದ್‌ 12,300 ರುಪಾಯಿ 13,418 ರುಪಾಯಿ

ಬೆಳ್ಳಿ ದರ

ಬೆಳ್ಳಿ ದರದಲ್ಲಿ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ ದರ ಇಂದು 214 ರುಪಾಯಿ ಇದ್ದು, 10 ಗ್ರಾಂಗೆ 2,140 ರುಪಾಯಿ ಮತ್ತು 1 ಕೆಜಿಗೆ 2,14,000 ರುಪಾಯಿ ಪಾವತಿ ಮಾಡಬೇಕು.

ತಿಂಗಳಿಗೆ 10,000 ರೂ SIP ; 5 ವರ್ಷದಲ್ಲಿ 10 ಲಕ್ಷ ರೂಪಾಯಿಗಳಿಕೆ ಮಾಡಬಹುದಾ?

ಚಿನ್ನದ ಹಾಲ್‌ ಮಾರ್ಕ್‌ ಎಂದರೇನು?

ಚಿನ್ನದ ಹಾಲ್‌ ಮಾರ್ಕ್‌ ಎಂಬುದು ಚಿನ್ನದ ಶುದ್ಧತೆ ಮತ್ತು ಸೂಕ್ಷ್ಮತೆಯನ್ನು ಪ್ರಮಾಣೀಕರಿಸುವ ಅಧಿಕೃತ ವ್ಯವಸ್ಥೆ. ಚಿನ್ನದ ಅಗತ್ಯ ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಭಾರತೀಯ ಮಾನದಂಡಗಳ ಬ್ಯೂರೋ (BIS) ಹಾಲ್‌ ಮಾರ್ಕಿಂಗ್ ಮಾಡುವ ಜವಾಬ್ದಾರಿಯನ್ನು ಹೊಂದಿದೆ. ಖರೀದಿದಾರರಿಗೆ ರಕ್ಷಣೆ ನೀಡುತ್ತದೆ.