Gold Price Today On 23 February: ಮತ್ತೆ ಏರಿದ ಚಿನ್ನ; ಇಂದಿನ ಬೆಲೆಯೆಷ್ಟಿದೆ?
ಚಿನ್ನದ ದರದಲ್ಲಿಂದು ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಸೋಮವಾರ (ಫೆಬ್ರವರಿ 23) 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 190 ರೂ. ಏರಿಕೆ ಕಂಡು ಬಂದಿದ್ದು, 14,790 ರೂ. ಇದೆ. 24 ಕ್ಯಾರಟ್‌ನ ಒಂದು ಗ್ರಾಂಗೆ 207 ರೂ. ಏರಿಕೆಯಾಗಿ, 16,135 ರೂ. ಆಗಿದೆ.
ಸಂಗ್ರಹ ಚಿತ್ರ -
Vishakha Bhat Heggar
Feb 23, 2026 12:11 PM
ಬೆಂಗಳೂರು: ಚಿನ್ನದ ದರದಲ್ಲಿಂದು ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಸೋಮವಾರ (ಫೆಬ್ರವರಿ 23) 22 ಕ್ಯಾರಟ್‌ನ 1 ಗ್ರಾಂ (Gold Price Today On 23 February) ಚಿನ್ನದ ಬೆಲೆಯಲ್ಲಿ 190 ರೂ. ಏರಿಕೆ ಕಂಡು ಬಂದಿದ್ದು, 14,790 ರೂ. ಇದೆ. 24 ಕ್ಯಾರಟ್‌ನ ಒಂದು ಗ್ರಾಂಗೆ 207 ರೂ. ಏರಿಕೆಯಾಗಿ, 16,135 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,18,320 ರೂ. ಹಾಗೂ 10 ಗ್ರಾಂಗೆ ನೀವು 1,47,900 ರೂ. ನೀಡಿದರೆ, 100 ಗ್ರಾಂಗೆ ನೀವು 14,79,000 ರೂ. ಪಾವತಿ ಮಾಡಬೇಕು. 24 ಕ್ಯಾರಟ್‌ನ 8 ಗ್ರಾಂಗೆ ನೀವು 1,29,080 ರೂ. ಹಾಗೂ 10 ಗ್ರಾಂಗೆ ನೀವು 1,61,350 ರೂ. ಹಾಗೂ 100 ಗ್ರಾಂಗೆ 16,13,500 ರೂ. ಪಾವತಿ ಮಾಡಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,600 ರೂ. | 15,928 ರೂ. |
| ಮುಂಬೈ | 14,600 ರೂ. | 15,928 ರೂ. |
| ಹೈದರಾಬಾದ್ | 14,600 ರೂ. | 15,928 ರೂ. |
| ಕೋಲ್ಕತ್ತಾ | 14,600 ರೂ. | 15,928 ರೂ. |
ಬೆಳ್ಳಿ ದರದಲ್ಲಿಯೂ ಇಂದು ಏರಿಕೆ ಕಂಡು ಬಂದಿದೆ. ಒಂದು ಗ್ರಾಂ ಬೆಳ್ಳಿ ದರದಲ್ಲಿ 25 ರೂ. ಏರಿಕೆ ಬಂದಿದ್ದು, ಬೆಲೆ 300 ರೂ. ಇದೆ. 10 ಗ್ರಾಂ ಬೆಳ್ಳಿಗೆ 3000 ರೂ. ಹಾಗೂ 1 ಕೆಜಿ ಬೆಳ್ಳಿಗೆ ನೀವು 300,000 ರೂಪಾಯಿ ಪಾವತಿಸಬೇಕು.