ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಎಐ ಶೃಂಗಸಭೆ 2026 ಮುಕ್ತಾಯ; 'ಎಲ್ಲರಿಗೂ ಎಐ' ಭಾರತದ ದೃಷ್ಟಿಕೋನಕ್ಕೆ 88 ರಾಷ್ಟ್ರಗಳ ಬೆಂಬಲ

ನವದೆಹಲಿಯಲ್ಲಿ ನಡೆದ ಎಐ ಶೃಂಗಸಭೆ 2026ಕ್ಕೆ ಶನಿವಾರ ತೆರೆ ಎಳೆಯಲಾಗಿದೆ. ಸೋಮವಾರ ಪ್ರಾರಂಭವಾದ ಶೃಂಗಸಭೆಯಲ್ಲಿ ವಿಶ್ವದ ಹಲವಾರು ನಾಯಕರು ಪಾಲ್ಗೊಂಡಿದ್ದರು. ಬಹುತೇಕ ಎಲ್ಲರೂ ಕೂಡ ಕೃತಕ ಬುದ್ದಿ ಮತ್ತೆಯಲ್ಲಿ ಭಾರತದ ದೃಷ್ಟಿಕೋನವನ್ನು ಬೆಂಬಲಿಸಿದ್ದಾರೆ. ಸಾಕಷ್ಟು ಉದ್ಯಮಿಗಳು ಭಾರತದಲ್ಲಿ ಹೂಡಿಕೆಗೆ ಆಸಕ್ತಿ ತೋರಿದ್ದಾರೆ.

ಎಐ ಶೃಂಗಸಭೆ 2026 ಮುಕ್ತಾಯ

ಸಂಗ್ರಹ ಚಿತ್ರ -

ನವದೆಹಲಿ: ಕೃತಕ ಬುದ್ದಿಮತ್ತೆಯ (Artificial intelligence) ಕುರಿತಾಗಿ ಭಾರತದ ದೃಷ್ಟಿಕೋನವನ್ನು ವಿಶ್ವದ 88 ರಾಷ್ಟ್ರಗಳು ಸ್ವಾಗತಿಸಿವೆ. ದೆಹಲಿಯ ಭಾರತ್ ಮಂಟಪದಲ್ಲಿ ಸೋಮವಾರ ಪ್ರಾರಂಭವಾಗಿರುವ ಎಐ ಶೃಂಗಸಭೆ 2026ಕ್ಕೆ (AI Impact Summit 2026) ಶನಿವಾರ ತೆರೆ ಎಳೆಯಲಾಗಿದೆ. ಈ ಶೃಂಗಸಭೆಯು ಎಐ ಕ್ಷೇತ್ರಕ್ಕೆ ಭಾರತದಲ್ಲಿರುವ ಅವಕಾಶ, ಕೈಗೆಟುಕುವಿಕೆ ಮತ್ತು ಜಾಗತಿಕ ಸಹಕಾರದ ಮೇಲೆ ಕೇಂದ್ರೀಕೃತವಾಗಿತ್ತು. ಪ್ರಜಾಸತ್ತಾತ್ಮಕ ಮತ್ತು ಎಲ್ಲರನ್ನೂ ಒಳಗೊಂಡ ಕೃತಕ ಬುದ್ಧಿಮತ್ತೆ ಚೌಕಟ್ಟಿನ ಕುರಿತಾದ ಎಲ್ಲರಿಗೂ ಎಐ (AI For All Vision) ಭಾರತದ ದೃಷ್ಟಿಕೋನಕ್ಕೆ ಜಾಗತಿಕ ಅನುಮೋದನೆ ದೊರೆತಿದೆ.

ಎಲ್ಲರಿಗೂ ಎಐ ಎನ್ನುವ ಭಾರತದ ಅಂತಿಮ ಘೋಷಣೆಯೊಂದಿಗೆ ಶೃಂಗಸಭೆಗೆ ತೆರೆ ಎಳೆಯಲಾಗಿದ್ದು, ಇದನ್ನು 88 ದೇಶಗಳು ಮತ್ತು ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳು ಬೆಂಬಲಿಸಿದೆ. ಈ ಘೋಷಣೆಯು "ಸರ್ವಜನ್ ಹಿತಾಯ, ಸರ್ವಜನ್ ಸುಖಾಯ" ತತ್ತ್ವದಿಂದ ರೂಪಿಸಲಾಗಿದೆ.

ಮೋದಿ‌ ನಮ್ಮನ್ನು ದೋಚುತ್ತಿದ್ದರು: ಸುಂಕ ರದ್ದುಗೊಂಡ ನಡುವೆ ಭಾರತ-ಯುಎಸ್ ವ್ಯಾಪಾರ ಒಪ್ಪಂದವನ್ನು ಹೊಗಳಿದ ಟ್ರಂಪ್

ಎಲ್ಲರಿಗೂ ಎಐ ದೃಷ್ಟಿಕೋನವು ಎಐ ಮಾನವೀಯತೆಗೆ ದೊಡ್ಡ ಪ್ರಮಾಣದಲ್ಲಿ ಸೇವೆ ಸಲ್ಲಿಸಬೇಕು ಎಂಬುದನ್ನು ಸಾರುತ್ತದೆ. ಇದು ಪ್ರಜಾಪ್ರಭುತ್ವವಾಗಿ ಆರ್ಥಿಕ ಬೆಳವಣಿಗೆ, ಸಾಮಾಜಿಕ ಒಳಿತಿಗೆ ಆದ್ಯತೆ, ಸುರಕ್ಷಿತ, ವಿಶ್ವಾಸಾರ್ಹ ಎಐ ಖಚಿತಪಡಿಸುವಿಕೆ, ವಿಜ್ಞಾನದಲ್ಲಿ ಎಐ ವಿಸ್ತರಣೆ, ಸಾಮಾಜಿಕ ಸಬಲೀಕರಣ, ಮಾನವ ಬಂಡವಾಳ ಅಭಿವೃದ್ಧಿ, ಸ್ಥಿತಿಸ್ಥಾಪಕ, ಇಂಧನ ಸಮರ್ಥ ವ್ಯವಸ್ಥೆಗಳ ನಿರ್ಮಾಣವನ್ನು ಒಳಗೊಂಡಿದೆ.

ಆರ್ಥಿಕ ಬೆಳವಣಿಗೆ, ಸಾಮಾಜಿಕ ಕಲ್ಯಾಣಕ್ಕಾಗಿ ಎಐ ಎಂಬುದಕ್ಕೆ ವಿಶಾಲವಾದ ಜಾಗತಿಕ ಒಮ್ಮತ ಮತ್ತು ಅದರ ಪ್ರಯೋಜನಗಳನ್ನು ಸಮಾನವಾಗಿ ವಿತರಿಸುವುದನ್ನು ಒಳಗೊಂಡಿದೆ. ಈ ಮೂಲಕ ಇದಕ್ಕೆ ಅಂತಾರಾಷ್ಟ್ರೀಯ ಸಹಯೋಗವನ್ನು ಉತ್ತೇಜಿಸುವುದರ ಜೊತೆಗೆ ರಾಷ್ಟ್ರೀಯ ಸಾರ್ವಭೌಮತ್ವವನ್ನು ಗೌರವಿಸುವುದಕ್ಕೂ ಆದ್ಯತೆ ನೀಡಲಾಗುತ್ತದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಮಣ್ಣು ಮುಕ್ಕಿಸಿದ ಭಾರತೀಯ ಮೂಲದ ವಕೀಲ; ತೆರಿಗೆ ವಿರುದ್ಧ ಕೋರ್ಟ್‌ನಲ್ಲಿ ವಾದಿಸಿದ ನೀಲ್ ಕತ್ಯಾಲ್ ಯಾರು?

ಶೃಂಗಸಭೆಯ ಕುರಿತು ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಇದೊಂದು ಹೆಮ್ಮೆಯ ಕ್ಷಣ. ಮಾನವ ಕೇಂದ್ರಿತ ಎಐ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನದೊಂದಿಗೆ ಜಗತ್ತು ಹೊಂದಿಕೊಂಡಿದೆ. ಎಐ ಸಂಪನ್ಮೂಲಗಳಿಗೆ ಪ್ರವೇಶವನ್ನು ಪ್ರಜಾಪ್ರಭುತ್ವಗೊಳಿಸುವುದು ಮತ್ತು ಸುರಕ್ಷತೆ, ವಿಶ್ವಾಸವನ್ನು ಖಚಿತಪಡಿಸಿಕೊಳ್ಳುವುದು ಚರ್ಚೆಗಳ ಕೇಂದ್ರಬಿಂದುವಾಗಿದೆ ಎಂದು ತಿಳಿಸಿದರು.