ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಾಕಿಸ್ತಾನದಲ್ಲೂ ಸಂಭ್ರಮದ ನವರಾತ್ರಿ ಆಚರಣೆ: ಕರಾಚಿಯ ದೇವಸ್ಥಾನದಲ್ಲಿ ದೇವಿ ಆರಾಧನೆ ಹೇಗಿತ್ತು? ವಿಡಿಯೋ ನೋಡಿ

Viral Video: ಎಲ್ಲೆಡೆ 9 ದಿನಗಳ ಕಾಲ ಪ್ರತಿಯೊಂದು ದಿನವೂ ದುರ್ಗಾ ದೇವಿಯ ವಿವಿಧ ರೂಪಗಳನ್ನು ಪೂಜಿಸುವ ಪದ್ಧತಿ ಹಿಂದು ಸಂಪ್ರದಾಯದಲ್ಲಿದೆ. ಆದರೆ ಇದೀಗ ಭಾರತ ಮಾತ್ರವಲ್ಲದೆ ಪಾಕಿಸ್ತಾನದ ಕರಾಚಿಯಲ್ಲಿರುವ ಐತಿಹಾಸಿಕ ಶ್ರೀ ರತ್ನೇಶ್ವರ ಮಹಾದೇವ ದೇವಸ್ಥಾನದಲ್ಲಿ ನಡೆದ ನವರಾತ್ರಿ ಉತ್ಸವದ ವೀಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಪಾಕಿಸ್ತಾನದ ದೇವಾಲಯದಲ್ಲೂ ಜನರು ಒಗ್ಗೂಡಿ ಸಾಂಪ್ರಾದಾಯಿಕವಾಗಿ ಆಚರಣೆ ಮಾಡಿದ್ದಾರೆ.

ಪಾಕಿಸ್ತಾನದ ಕರಾಚಿಯಲ್ಲಿ ನವರಾತ್ರಿ ಆಚರಣೆ: ವಿಡಿಯೊ ವೈರಲ್!

ಪಾಕಿಸ್ತಾನದ ಕರಾಚಿಯಲ್ಲಿ ನವರಾತ್ರಿ ಆಚರಣೆ -

Profile
Pushpa Kumari Oct 13, 2026 2:59 PM

​ಪಾಕಿಸ್ತಾನ,ಅ.13: ನಾಡಿನಾದ್ಯಂತ ಈಗ ನವರಾತ್ರಿ ಹಬ್ಬದ ಸಂಭ್ರಮ. ಎಲ್ಲೆಡೆ 9 ದಿನಗಳ ಕಾಲ ಪ್ರತಿಯೊಂದು ದಿನವೂ ದುರ್ಗಾ ದೇವಿಯ ವಿವಿಧ ರೂಪಗಳನ್ನು ಪೂಜಿಸುವ ಪದ್ಧತಿ ಹಿಂದು ಸಂಪ್ರದಾಯದಲ್ಲಿದೆ. ಆದರೆ ಇದೀಗ ಭಾರತ ಮಾತ್ರವಲ್ಲದೆ ಪಾಕಿಸ್ತಾನದ ಕರಾಚಿಯಲ್ಲಿರುವ ಐತಿಹಾಸಿಕ ಶ್ರೀ ರತ್ನೇಶ್ವರ ಮಹಾದೇವ ದೇವಸ್ಥಾನದಲ್ಲಿ ನಡೆದ ನವರಾತ್ರಿ ಉತ್ಸವದ ವೀಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ. ಪಾಕಿಸ್ತಾನದ ದೇವಾಲಯದಲ್ಲೂ ಜನರು ಒಗ್ಗೂಡಿ ಸಾಂಪ್ರಾದಾಯಿಕವಾಗಿ ಆಚರಣೆ ಮಾಡಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ಜನರು ಗರ್ಬಾ ಪ್ರದರ್ಶಿಸುವುದು, ಹಾಗೂ ಪ್ರಾರ್ಥನೆ ಸಲ್ಲಿಸುವ ದೃಶ್ಯ ತೋರಿಸುತ್ತದೆ. ಅನೇಕರು ಗಡಿಯುದ್ದಕ್ಕೂ ಹಿಂದೂ ಸಮುದಾಯವು ಹಬ್ಬವನ್ನು ಆಚರಿಸುವುದನ್ನು ನೋಡಿ ಸಂತೋಷ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿ:

ವೀಡಿಯೊದಲ್ಲಿ ಮಾತಾ ರಾಣಿಯ ವಿಗ್ರಹವನ್ನೂ ಸೆರೆಹೆಡಿಯಲಾಗಿದ್ದು ಅನೇಕ ಭಕ್ತರು 'ಜೈ ಮಾತಾ ಜಿ' ಎಂದು ಬರೆದಿದ್ದ ಪಟ್ಟಿಗಳನ್ನು ಧರಿಸಿರುವುದು ಕಂಡುಬರುತ್ತದೆ. ಜನರು ಒಟ್ಟಾಗಿ ಪ್ರಸಾದವನ್ನು ಸವಿಯುತ್ತಾ ಸಂಭ್ರಮಾಚರಣೆಯಲ್ಲಿ ಪಾಲ್ಗೊಗೊಂಡಿದ್ದಾರೆ. ಇದು ಪಾಕಿಸ್ತಾನದ ಕರಾಚಿಯಲ್ಲಿಯೂ ಹಿಂದೂ ಹಬ್ಬವನ್ನು ಹೇಗೆ ಆಚರಿಸುತ್ತದೆ ಎಂಬುದರ ಝಲಕ್ ನೀಡುತ್ತದೆ.

Viral Video: ಒಂದೇ ಬೈಕ್‌ನಲ್ಲಿ 6 ವಿದ್ಯಾರ್ಥಿಗಳ ಅಪಾಯಕಾರಿ ಸವಾರಿ; ಇದೇನಾ ಶಿಕ್ಷಣ? ಎಂದು ಪ್ರಶ್ನಿಸಿದ ನೆಟ್ಟಿಗರು

ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದು ಪಾಕಿಸ್ತಾನದಲ್ಲೂ ಇಷ್ಟು ವಿಜೃಂಭಣೆಯಿಂದ ನವರಾತ್ರಿ ಆಚರಿಸುತ್ತಿರುವುದನ್ನು ಕಂಡು ನೆಟ್ಟಿಗರು ಖುಷಿ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು ಭಾರತದ ಸಂಪ್ರದಾಯ ಏನು ಎಂಬುದು ಇದರಿಂದ ಸಾಕ್ಷಿಯಾಗಿದೆ ಎಂದು ಬರೆದಿದ್ದಾರೆ. ಮತ್ತೊಬ್ಬರು ​ಈ ಸುಂದರ ದೃಶ್ಯವು ಕೋಮು ಸೌಹಾರ್ದತೆ ಬಗ್ಗೆ ಸಕಾರಾತ್ಮಕ ಚರ್ಚೆಗಳಿಗೆ ನಾಂದಿ ಹಾಡಿದೆ.