Gold Price Today On October 15th, 2026: ಚಿನ್ನದ ಬೆಲೆಯಲ್ಲಿಂದು ಭಾರೀ ಇಳಿಕೆ; ಬೆಂಗಳೂರಿನಲ್ಲಿ ಬೆಲೆ ಎಷ್ಟಿದೆ?
ನವರಾತ್ರಿ ಪ್ರಾರಂಭವಾದ ದಿನದಿಂದಲೂ ಇಲ್ಲಿಯವರೆಗೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಗುರುವಾರವೂ ಚಿನ್ನದ ಬೆಲೆ ಕಡಿಮೆಯಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರಟ್ನ 1 ಗ್ರಾಂ ಚಿನ್ನದ ದರದಲ್ಲಿ 75 ರೂ. ಇಳಿಕೆಯಾಗಿ 13,515 ರೂ. ಆದರೆ, 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ 82 ರೂ. ಇಳಿಕೆಯಾಗಿ 14,744 ರೂ. ಇದೆ.
ಚಿನ್ನದ ದರದಲ್ಲಿಂದು ಇಳಿಕೆ (ಸಂಗ್ರಹ ಚಿತ್ರ) -
Vishakha Bhat Heggar
Oct 15, 2026 2:33 PM
ಬೆಂಗಳೂರು: ನವರಾತ್ರಿ ಪ್ರಾರಂಭವಾದ ದಿನದಿಂದಲೂ ಇಲ್ಲಿಯವರೆಗೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಗುರುವಾರವೂ ಚಿನ್ನದ ಬೆಲೆ (Gold Price Today On October 15th, 2026) ಕಡಿಮೆಯಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರಟ್ನ 1 ಗ್ರಾಂ ಚಿನ್ನದ ದರದಲ್ಲಿ 75 ರೂ. ಇಳಿಕೆಯಾಗಿ 13,515 ರೂ. ಆದರೆ, 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ 82 ರೂ. ಇಳಿಕೆಯಾಗಿ 14,744 ರೂ. ಇದೆ. ಇನ್ನು 22 ಕ್ಯಾರಟ್ನ 8 ಗ್ರಾಂ ಚಿನ್ನದ ಬೆಲೆ 1,08,120 ರೂ ಹಾಗೂ 10 ಗ್ರಾಂಗೆ 1,35,150 ರೂ. ಹಾಗೂ 100 ಗ್ರಾಂಗೆ 13,51,500 ರೂಪಾಯಿ ಪಾವತಿಸಬೇಕು 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,17,952 ರೂಪಾಯಿ, 10 ಗ್ರಾಂಗೆ 1,47,440 ರೂಪಾಯಿ ಹಾಗೂ 100 ಗ್ರಾಂಗೆ 14,74,400 ರೂಪಾಯಿ ಇದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,515 ರೂ. | 14,744 ರೂ. |
| ಮುಂಬೈ | 13,515 ರೂ. | 14,744 ರೂ. |
| ದೆಹಲಿ | 13,515 ರೂ. | 14,744 ರೂ. |
| ಕೋಲ್ಕತಾ | 13,515 ರೂ. | 14,744 ರೂ. |
| ಹೈದರಾಬಾದ್ | 13,515 ರೂ. | 14,744 ರೂ. |
ಬೆಳ್ಳಿ ದರದಲ್ಲಿ ಯಥಾಸ್ಥಿತಿ ಇದೆ. ಬೆಂಗಳೂರಿನಲ್ಲಿ ಬೆಳ್ಳಿ ಗ್ರಾಂಗೆ 230 ರೂಪಾಯಿ ಇದೆ. ಇನ್ನು ಬೆಳ್ಳಿ 10 ಗ್ರಾಂಗೆ 2,300 ರೂಪಾಯಿ ಹಾಗೂ 1 ಕೆಜಿಗೆ 2,30,000 ರೂಪಾಯಿ ಪಾವತಿಸಬೇಕು.