ಐಟಿ ಸೇವೆಯ ವಲಯದ ಆದಾಯ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ1.4%, ನಿವ್ವಳ ಆದಾಯ ₹3120 ಕೋಟಿ
ವಿಪ್ರೊ ಇಂದು ಡಿಸೆಂಬರ್ 31, 2025ಕ್ಕೆ ಅಂತ್ಯವಾದ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು ರೂ. 23560 ಕೋಟಿ ಆದಾಯ ಗಳಿಸಿದೆ ಮತ್ತು ರೂ.3,120 ಕೋಟಿ ಲಾಭ ಗಳಿಸಿದೆ ಎಂದು ಪ್ರಕಟಿಸಿದೆ. ಈ ತ್ರೈಮಾಸಿಕಕ್ಕೆ ಐಟಿ ಸೇವೆಗಳ ಆಪರೇಟಿಂಗ್ ಮಾರ್ಜಿನ್ 17.6% ಇದ್ದು ಇದನ್ನು ತ್ರೈಮಾಸಿಕದಂದ ತ್ರೈಮಾಸಿಕಕ್ಕೆ 0.9% ವಿಸ್ತರಿಸಿದೆ.
-
ಆಪರೇಟಿಂಗ್ ಮಾರ್ಜಿನ್ 17.6%; ತ್ರೈಮಾಸಿಕದಿಂದ ತ್ರೈಮಾಸಿಕ್ಕೆ 0.9% ವಿಸ್ತರಣೆ
ಒಟ್ಟಾರೆ ಡೀಲ್ ಬುಕಿಂಗ್ ಗಳು $3.3 ಬಿಲಿಯನ್; ಲಾರ್ಜ್ ಡೀಲ್ ಬುಕಿಂಗ್ ಬಿಲಿಯನ್
ಪ್ರತಿ ಷೇರಿಗೆ ಮಧ್ಯಂತರ ಡಿವಿಡೆಂಡ್ ರೂ.6 ಘೋಷಣೆ
ಬೆಂಗಳೂರು: ಮುಂಚೂಣಿಯ ಎಐ-ಪವರ್ಡ್ ತಂತ್ರಜ್ಞಾನ ಸೇವೆಗಳು ಮತ್ತು ಕನ್ಸಲ್ಟಿಂಗ್ ಕಂಪನಿ ವಿಪ್ರೊ ಲಿಮಿಟೆಡ್ (NYSE: WIT, BSE: 507685, NSE: WIPRO) ಡಿಸೆಂಬರ್ 31, 2025ಕ್ಕೆ ಅಂತ್ಯವಾದ ತ್ರೈಮಾಸಿಕದ ಆರ್ಥಿಕ ಫಲಿತಾಂಶಗಳನ್ನು ಇಂಟರ್ನ್ಯಾಷನಲ್ ಫೈನಾನ್ಷಿಯಲ್ ರಿಪೋರ್ಟಿಂಗ್ ಸ್ಟಾಂಡರ್ಡ್ಸ್ ಅಡಿಯಲ್ಲಿ ಪ್ರಕಟಿಸಿದೆ.
ಫಲಿತಾಂಶಗಳ ಪ್ರಮುಖಾಂಶಗಳು:
- ನಿವ್ವಳ ಆದಾಯ ₹23560 ಕೋಟಿ ($2,622.0) ಇದ್ದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 3.8% ಮತ್ತು ವರ್ಷದಿಂದ ವರ್ಷಕ್ಕೆ 5.5% ಹೆಚ್ಚಳ ಕಂಡಿದೆ
- ಐಟಿ ಸೇವೆಗಳ ವಲಯದ ಆದಾಯ $2635.4 ಮಿಲಿಯನ್ ಆಗಿದ್ದಯ ಸಿಸಿಯಲ್ಲಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 1.4% ಹೆಚ್ಚಳ
- ಈ ತ್ರೈಮಾಸಿಕದ ನಿವ್ವಳ ಆದಾಯ ₹3,120 ಕೋಟಿ ($347.2 ಮಿಲಿಯನ್), ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 3.9% ಕುಸಿದಿದೆ
- ಕ್ಯೂ3’ 26ರ ಐಟಿ ಸೇವೆಗಳ ಆಪರೇಟಿಂಗ್ ಮಾರ್ಜಿನ್ 17.6% ಇದ್ದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 0.9% ವಿಸ್ತರಣೆ ಕಂಡಿದೆ
- ವಿಪ್ರೊ ಪ್ರತಿ ಷೇರಿಗೆ ರೂ.6 ಮಧ್ಯಂತರ ಡಿವಿಡೆಂಡ್ ಪ್ರಕಟಿಸಿದೆ.
ವಿಪ್ರೊ ಇಂದು ಡಿಸೆಂಬರ್ 31, 2025ಕ್ಕೆ ಅಂತ್ಯವಾದ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು ರೂ. 23560 ಕೋಟಿ ಆದಾಯ ಗಳಿಸಿದೆ ಮತ್ತು ರೂ.3,120 ಕೋಟಿ ಲಾಭ ಗಳಿಸಿದೆ ಎಂದು ಪ್ರಕಟಿಸಿದೆ. ಈ ತ್ರೈಮಾಸಿಕಕ್ಕೆ ಐಟಿ ಸೇವೆಗಳ ಆಪರೇಟಿಂಗ್ ಮಾರ್ಜಿನ್ 17.6% ಇದ್ದು ಇದನ್ನು ತ್ರೈಮಾಸಿಕದಂದ ತ್ರೈಮಾಸಿಕಕ್ಕೆ 0.9% ವಿಸ್ತರಿಸಿದೆ.
ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀನಿ ಪಲ್ಲಿಯ, “ಕ್ಯೂ3ರಲ್ಲಿ ನಾವು ವಿಸ್ತಾರವಾದ ಪ್ರಗತಿ ಸಾಧಿಸಿದ್ದು ಅದು ನಮ್ಮ ನಿರೀಕ್ಷೆಗಳಿಗೆ ಪೂರಕವಾಗಿದೆ. ಎಐ ಕಾರ್ಯತಂತ್ರೀಯ ಅಗತ್ಯವಾಗಿದೆ.
ವಿಪ್ರೊ ಇಂಟೆಲಿಜೆನ್ಸ್ ಡಿಫರೆನ್ಷಿಯೇಟರ್ ಆಗಿ ಹೊರಹೊಮ್ಮಿದೆ ಮತ್ತು ಈ ತ್ರೈಮಾಸಿಕದಲ್ಲಿ ಹಲವಾರು ಗೆಲುವುಗಳಿಗೆ ಕಾರಣವಾಗಿದೆ. ನಾವು ನಮ್ಮ ಎಐ-ಸನ್ನದ್ಧ ಪ್ಲಾಟ್ ಫಾರಂಗಳು ಮತ್ತು ಪರಿಹಾರಗಳಲ್ಲಿ ಮಹತ್ತರ ಅಳವಡಿಕೆ ಕಂಡಿದ್ದು ವಿಂಗ್ಸ್ (WINGS) ಮತ್ತು ವೆಗಾ(WEGA) ಮೂಲಕ ಎಐ- ಪ್ರೇರಿತ ಪೂರೈಕೆ ವಿಸ್ತರಿಸಿದ್ದೇವೆ ಮತ್ತು ಜಾಗತಿಕ ತಾಣಗಳಿಎ ನಮ್ಮ ಆವಿಷ್ಕಾರಕ ಜಾಲ ವನ್ನು ವಿಸ್ತರಿಸಿದ್ದೇವೆ” ಎಂದರು.