ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jimmy Tata: ಶ್ರೀಮಂತಿಕೆ ಬಳುವಳಿಯಾಗಿ ಬಂದರೂ 2BHK ಮನೆಯಲ್ಲಿ ಬದುಕುತ್ತಿರುವ ಟಾಟಾ ಕುಟುಂಬದ ಈ ಕುಡಿ!

ದೇಶದ ಅತ್ಯಂತ ಪ್ರಮುಖ ಕೈಗಾರಿಕೆಗಳಲ್ಲಿ ಟಾಟಾ (TATA Group) ಹೆಸರು ಮೊದಲಿಗೆ ಕೇಳಿ ಬರುವಂತದ್ದು. ಟಾಟಾ ಕುಟುಂಬವು ಹಲವಾರು ದಶಕಗಳಿಂದ ಇದನ್ನು ಮುನ್ನಡೆಸಿಕೊಂಡು ಬರುತ್ತಿದೆ. ಜಗತ್ತಿನಾದ್ಯಂತ ಹೆಸರು ಮಾಡಿರುವ ಟಾಟಾ ಗ್ರೂಪ್ ಉಕ್ಕಿನಿಂದ ಸಾಫ್ಟ್‌ವೇರ್‌ವರೆಗೆ, ಹೊಟೇಲ್ ಗಳಿಂದ ಆಟೋಮೊಬೈಲ್‌ಗಳವರೆಗೆ ವಿಶಾಲವಾದ ಕಂಪನಿಗಳ ಜಾಲವನ್ನು ಹೊಂದಿದೆ.

ಶ್ರೀಮಂತಿಕೆಯ ಜೀವನದಿಂದ ದೂರವೇ ಉಳಿದ ಜಿಮ್ಮಿ ಟಾಟಾ

ಮುಂಬೈ: ದೇಶದ ಅತ್ಯಂತ ಶ್ರೀಮಂತ ಮನೆತನದಿಂದ (Richest family of india) ಬಂದ ವ್ಯಕ್ತಿಯೊಬ್ಬರು ಎರಡು ಬಿಎಚ್ ಕೆ ಮನೆಯಲ್ಲಿ ಅತ್ಯಂತ ಸರಳ ಜೀವನ ನಡೆಸುತ್ತಿದ್ದಾರೆ ಎಂದು ಕೇಳಿದರೆ ಯಾರಿಗೂ ಆಶ್ಚರ್ಯವಾಗಬಹುದು. ಹಾಗಂತ ಇವರು ತಮ್ಮ ಕುಟುಂಬದೊಂದಿಗೆ ಸಂಪರ್ಕ ಕಡಿದುಕೊಂಡಿಲ್ಲ. ತಮ್ಮ ಕುಟುಂಬ ನಡೆಸುತ್ತಿರುವ ಹಲವಾರು ಕಂಪೆನಿಗಳಲ್ಲಿ (TATA Group) ಗಣನೀಯ ಪ್ರಮಾಣದಲ್ಲಿ ಷೇರುಗಳನ್ನು (TATA Group Shares) ಹೊಂದಿದ್ದಾರೆ. ಪ್ರಚಾರದಿಂದ ದೂರವಿರುವ ಇವರು ಬೇರೆಯರೂ ಅಲ್ಲ ಟಾಟಾ ಕಂಪೆನಿಯ ಮಾಲೀಕರಾಗಿದ್ದ ರತನ್ ಟಾಟಾ (Ratan Tata) ಅವರ ಸಹೋದರ ಜಿಮ್ಮಿ ಟಾಟಾ (Jimmy Tata).

ದೇಶದ ಅತ್ಯಂತ ಪ್ರಮುಖ ಕೈಗಾರಿಕೆಗಳಲ್ಲಿ ಟಾಟಾ ಹೆಸರು ಮೊದಲಿಗೆ ಕೇಳಿ ಬರುವಂತದ್ದು. ಟಾಟಾ ಕುಟುಂಬವು ಹಲವಾರು ದಶಕಗಳಿಂದ ಇದನ್ನು ಮುನ್ನಡೆಸಿಕೊಂಡು ಬರುತ್ತಿದೆ. ಜಗತ್ತಿನಾದ್ಯಂತ ಹೆಸರು ಮಾಡಿರುವ ಟಾಟಾ ಗ್ರೂಪ್ ಉಕ್ಕಿನಿಂದ ಸಾಫ್ಟ್‌ವೇರ್‌ವರೆಗೆ, ಹೊಟೇಲ್ ಗಳಿಂದ ಆಟೋಮೊಬೈಲ್‌ಗಳವರೆಗೆ ವಿಶಾಲವಾದ ಕಂಪನಿಗಳ ಜಾಲವನ್ನು ಹೊಂದಿದೆ. ಕುಟುಂಬದ ಅನೇಕ ಸದಸ್ಯರು ಇದರ ಪಾಲುದಾರರಾಗಿದ್ದರೆ. ಈ ನಡುವೆ ಸಾಮಾಜಿಕವಾಗಿ, ವ್ಯಾವಹಾರಿಕವಾಗಿ ಸಕ್ರಿಯರಾಗಿದ್ದರೂ ಪ್ರಚಾರದಿಂದ ದೂರವೇ ಉಳಿದಿದ್ದಾರೆ ಜಿಮ್ಮಿ ಟಾಟಾ.

ರತನ್ ಟಾಟಾ ಅವರ ಕಿರಿಯ ಸಹೋದರ ಜಿಮ್ಮಿ ಟಾಟಾ ಅವರು ಶ್ರೀಮಂತ ಕುಟುಂಬದ ಪರಂಪರೆಯನ್ನು ಬಿಟ್ಟು ಸಾಮಾನ್ಯ ಜೀವನ ಶೈಲಿಯನ್ನು ಆಯ್ದುಕೊಂಡಿದ್ದಾರೆ. ಅವರು ಸುಮಾರು 80ರ ದಶಕದಿಂದಲೇ ಮುಂಬೈನ ಕೊಲಾಬಾದಲ್ಲಿರುವ ಹ್ಯಾಂಪ್ಟನ್ ಕೋರ್ಟ್‌ನ ಆರನೇ ಮಹಡಿಯಲ್ಲಿರುವ ಸಾಮಾನ್ಯವಾದ ಎರಡು ಬೆಡ್‌ರೂಮ್‌ನ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದಾರೆ. ಅವರ ಹೆಸರಲ್ಲಿ ಟಾಟಾ ಎಂದು ಇದ್ದರೂ ಅವರು ಅದನ್ನು ಎಲ್ಲಿಯೂ ಲಾಬಿಗಾಗಿ ಬಳಸಿಲ್ಲ.

ನೇವಲ್ ಟಾಟಾ ಮತ್ತು ಅವರ ಮೊದಲ ಪತ್ನಿ ಸೂನಿ ಕಮಿಷರಿಯಟ್ ದಂಪತಿಯ ಮಗನಾಗಿ ಜನಿಸಿದ ಜಿಮ್ಮಿ ಮತ್ತು ರತನ್ ಬಾಲ್ಯದಲ್ಲಿ ಹೆಚ್ಚು ಆತ್ಮೀಯರಾಗಿದ್ದರು. ತಂದೆ ನೇವಲ್ ಅವರು ಬಳಿಕ ಸಿಮೋನ್ ಟಾಟಾ ಅವರನ್ನು ಮದುವೆಯಾಗಿ ಅವರಿಗೆ ನೋಯೆಲ್ ಟಾಟಾ ಎಂಬ ಇನ್ನೊಬ್ಬ ಮಗ ಜನಿಸಿದನು. ಟಾಟಾ ಕುಟುಂಬದ ಅತ್ಯಂತ ಗೌರವಾನ್ವಿತ ವ್ಯಾಪಾರ ಸಮೂಹಗಳಲ್ಲಿ ರತನ್ ಟಾಟಾ ಗುರುತಿಸಲ್ಪಟ್ಟರೂ ಜಿಮ್ಮಿ ಇದರಿಂದ ದೂರವೇ ಉಳಿದರು.

ಅಣ್ಣನಂತೆ ಇವರೂ ಮದುವೆಯಾಗಿಲ್ಲ. ಆಧುನಿಕ ಸೌಲಭ್ಯಗಳನ್ನು ಬಳಸುತ್ತಿಲ್ಲ. ಸಾಮಾನ್ಯ ಜೀವನ ಶೈಲಿಯನ್ನು ಆಯ್ಕೆ ಮಾಡಿಕೊಂಡಿರುವ ಜಿಮ್ಮಿ ಟಾಟಾ ಮೊಬೈಲ್ ಫೋನ್ ಕೂಡ ಬಳಸುವುದಿಲ್ಲ. ಇದರ ಬದಲಾಗಿ ಇವರು ಪುಸ್ತಕ ಮತ್ತು ಪತ್ರಿಕೆಗಳನ್ನು ಇಷ್ಟ ಪಡುತ್ತಾರೆ. ಸಾರ್ವಜನಿಕವಾಗಿ ವಿರಳವಾಗಿ ಕಾಣಿಸಿಕೊಳ್ಳುವ ಇವರು ಅತೀ ಕಡಿಮೆ ಜನರನ್ನು ಮಾತ್ರ ಭೇಟಿಯಾಗುತ್ತಾರೆ. ದಶಕಗಳಿಂದಲೂ ಹೀಗೆ ಜೀವನ ನಡೆಸುತ್ತಿರುವ ಇವರು ತಮ್ಮ ಜೀವನದಲ್ಲಿ ಶಾಂತಿ ಮತ್ತು ಸರಳತೆಯನ್ನು ಇಷ್ಟ ಪಡುತ್ತಾರೆ.

ಏಕಾಂತವಾಗಿರಲು ಇಷ್ಟಪಡುವ ಜಿಮ್ಮಿ ಟಾಟಾ ಅವರು ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS), ಟಾಟಾ ಪವರ್, ಟಾಟಾ ಕೆಮಿಕಲ್ಸ್ ಮತ್ತು ಇಂಡಿಯನ್ ಹೊಟೇಲ್ಸ್ ಸೇರಿದಂತೆ ಹಲವಾರು ಟಾಟಾ ಗ್ರೂಪ್ ಕಂಪೆನಿಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ. ತಂದೆಯ ಮರಣದ ಬಳಿಕ ಸರ್ ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿಯಾಗಿಯೂ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: Sonu Nigam: ಕನ್ನಡ ಹಾಡು ಹೇಳಿ ಎಂದದ್ದಕ್ಕೆ ಪಹಲ್ಗಾಂ ದಾಳಿ ಲಿಂಕ್‌ ಮಾಡಿದ ಸೋನು ನಿಗಮ್!‌



ಇತ್ತೀಚೆಗೆ ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷರಾದ ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಜಿಮ್ಮಿಯವರ ಅಪರೂಪದ ಜೀವನ ಶೈಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದರು. ಇದು ಬಹುಬೇಗನೆ ಎಲ್ಲರ ಗಮನ ಸೆಳೆದಿದ್ದು, ಸಾಕಷ್ಟು ಮೆಚ್ಚುಗೆಗಳೂ ಬಂದಿವೆ. ಜೀವನಕ್ಕೆ ಬೇಕಾಗುವ ಎಲ್ಲ ಶ್ರೀಮಂತಿಕೆಯ ಸೌಲಭ್ಯಗಳು ವಂಶಪಾರಂಪರಿಕವಾಗಿ ಸಿಕ್ಕಿದರೂ ಅವರು ಅದನ್ನು ಬಯಸಲಿಲ್ಲ. ಜೀವನದ ಇನ್ನೊಂದು ಮುಖವನ್ನು ತಮ್ಮ ಜೀವನದ ಮೂಲಕ ತೋರಿಸಿಕೊಟ್ಟರು.