ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

News Rules: ಇಂದಿನಿಂದ ನಿಮ್ಮ ಜೇಬಿಗೆ ಹೊರೆಯಾಗುತ್ತವೆ ಈ ಬದಲಾವಣೆಗಳು

ಆಧಾರ್, ಬ್ಯಾಂಕ್ ನಿಯಮಗಳು ಸೇರಿದಂತೆ ನವೆಂಬರ್‌ 1ರಂದು ಪ್ರಮುಖ ಬದಲಾವಣೆಗಳು ಕಂಡು ಬರುತ್ತವೆ. ಇವು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತವೆ. ಆಧಾರ್ ಕಾರ್ಡ್ ನವೀಕರಣ, ಬ್ಯಾಂಕ್ ನಾಮನಿರ್ದೇಶನಗಳಲ್ಲಿನ ಬದಲಾವಣೆಗಳು, ಹೊಸ ಜಿಎಸ್‌ಟಿ ಶುಲ್ಕಗಳು, ಕಾರ್ಡ್ ಶುಲ್ಕಗಳು ಸೇರಿದಂತೆ ಹಲವು ನಿಯಮಗಳು ಶನಿವಾರದಿಂದಲೇ ದೇಶಾದ್ಯಂತ ಜಾರಿಯಾಗಲಿವೆ. ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ 1 ಕರ್ನಾಟಕದಲ್ಲಿ ಸರ್ಕಾರಿ ರಜೆ ಇರುವುದರಿಂದ ಈ ನಿಯಮಗಳು ಸೋಮವಾರದಿಂದ ಗ್ರಾಹಕರ ಅನುಭವಕ್ಕೆ ಬರಲಿವೆ. ಒಟ್ಟಿನಲ್ಲಿ ಹೊಸ ನಿಯಮಗಳು ನೇರವಾಗಿ ಜನರ ಜೇಬಿಗೆ ಒರೆಯಾಗಲಿದೆ. ಅದು ಯಾವ ರೀತಿಯಾಗಿ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಇಂದಿನಿಂದ ಯಾವೆಲ್ಲ ನಿಯಮದಲ್ಲಿ ಬದಲಾವಣೆ?

-

ಬೆಂಗಳೂರು: ಹಣಕಾಸು ವ್ಯವಹಾರಕ್ಕೆ ಸಂಬಂಧಿತವಾಗಿ ನವೆಂಬರ್ 1ರಿಂದ ಹಲವು ಪ್ರಮುಖ ಬದಲಾವಣೆಗಳು ಆಗಲಿವೆ. ಇದು ಜನರ ದೈನಂದಿನ ಹಣಕಾಸು ವಹಿವಾಟಿನ ಮೇಲೆ ನೇರ ಪರಿಣಾಮ ಬೀರಲಿದೆ. ಹೊಸ ಹಣಕಾಸು ನಿಯಮಗಳು (News Rules) ಶನಿವಾರದಿಂದ ಜಾರಿಗೆ ಬರಲಿದ್ದು, ಇದರಲ್ಲಿ ಆಧಾರ್ ನವೀಕರಣ (Aadhaar update charges), ಬ್ಯಾಂಕ್ ನಾಮನಿರ್ದೇಶನ ಬದಲಾವಣೆಗಳು, ಹೊಸ ಜಿಎಸ್‌ಟಿ ಸ್ಲ್ಯಾಬ್‌ (GST), ಕಾರ್ಡ್ ಶುಲ್ಕಗಳು ಸೇರಿವೆ. ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದಂತೆ ನವೆಂಬರ್ 1ರಿಂದ ಜಾರಿಯಾಗುವಂತೆ ಹಣಕಾಸು ಸಚಿವಾಲಯ ಬ್ಯಾಂಕಿಂಗ್ ಕಾನೂನು ತಿದ್ದುಪಡಿ ಕಾಯ್ದೆ 2025 ಅನ್ನು ಹೊರಡಿಸಿದೆ. ಇದರ ಅಡಿಯಲ್ಲಿ ಮಾಡಿರುವ ಬದಲಾವಣೆಯಿಂದಾಗಿ ಗ್ರಾಹಕರ ಬ್ಯಾಂಕ್ ಖಾತೆಗಳು, ಲಾಕರ್‌ಗಳು ಮತ್ತು ಸುರಕ್ಷಿತ ಕಸ್ಟಡಿಯಲ್ಲಿರುವ ಸ್ವತ್ತುಗಳ ಮೇಲೆ ನೇರ ಪರಿಣಾಮ ಬೀರಲಿದೆ.

ಆಧಾರ್ ನವೀಕರಣ ಶುಲ್ಕ ಪರಿಷ್ಕರಣೆ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಮಕ್ಕಳಿಗಾಗಿ ಆಧಾರ್ ಕಾರ್ಡ್‌ಗಳ ಬಯೋಮೆಟ್ರಿಕ್ ನವೀಕರಣಗಳಿಗಾಗಿ 125 ರೂ. ಶುಲ್ಕವನ್ನು ಮನ್ನಾ ಮಾಡಿದೆ. ಇದು ಒಂದು ವರ್ಷದವರೆಗೆ ಉಚಿತವಾಗಿರುತ್ತದೆ. ವಯಸ್ಕರಿಗೆ, ಹೆಸರು, ಜನ್ಮ ದಿನಾಂಕ, ವಿಳಾಸ ಅಥವಾ ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ನವೀಕರಿಸಲು 75 ರೂ., ಫಿಂಗರ್‌ಪ್ರಿಂಟ್‌ಗಳು ಅಥವಾ ಐ ಸ್ಕ್ಯಾನ್‌ಗಳಂತಹ ಬಯೋಮೆಟ್ರಿಕ್ ನವೀಕರಣಗಳಿಗೆ 125 ರೂ. ಶುಲ್ಕ ವಿಧಿಸಲಾಗುತ್ತದೆ.

ಇದನ್ನೂ ಓದಿ: Supreme Court: ವೃದ್ಧೆಯ ಅತ್ಯಾಚಾರ, ಕೊಲೆ: ಸರಿಯಾದ ಸಾಕ್ಷಿ ಇಲ್ಲ ಎಂದ ಸುಪ್ರೀಂ ಕೋರ್ಟ್, ಆರೋಪಿ ಖುಲಾಸೆ

ಹೊಸ ಜಿಎಸ್‌ಟಿ ಸ್ಲ್ಯಾಬ್‌

ಪರೋಕ್ಷ ತೆರಿಗೆ ರಚನೆಯನ್ನು ಸರಳಗೊಳಿಸುವ ಉದ್ದೇಶದಿಂದ ಶೇ. 5, ಶೇ.12, ಶೇ.18 ಮತ್ತು ಶೇ. 28 ನಾಲ್ಕು ಸ್ಲ್ಯಾಬ್ ವ್ಯವಸ್ಥೆಯಲ್ಲಿ ಶೇ. 12 ಮತ್ತು ಶೇ. 28 ಸ್ಲ್ಯಾಬ್‌ಗಳನ್ನು ತೆಗೆದುಹಾಕಲಾಗಿದೆ. ಶೇ. 40ರಷ್ಟು ಶುಲ್ಕಗಳನ್ನು ಐಷಾರಾಮಿ ಸರಕುಗಳಿಗೆ ಮಾತ್ರ ಅನ್ವಯಿಸಲಾಗಿದೆ.

ಎನ್‌ಪಿಎಸ್‌ಯಿಂದ ಯುಪಿಎಸ್ ಗಡುವು ವಿಸ್ತರಣೆ

ಕೇಂದ್ರ ಸರ್ಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು (NPS) ಏಕೀಕೃತ ಪಿಂಚಣಿ ಯೋಜನೆ (UPS)ಗೆ ಬದಲಾಯಿಸಾಲು ನವೆಂಬರ್ 30ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಇದಕ್ಕಾಗಿ ಪಿಂಚಣಿದಾರರು ಜೀವ ಪ್ರಮಾಣಪತ್ರವನ್ನು ಸಲ್ಲಿಸಬೇಕು. ನಿವೃತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ನವೆಂಬರ್ ಅಂತ್ಯದೊಳಗೆ ತಮ್ಮ ಜೀವ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಇದನ್ನು ಅವರ ಬ್ಯಾಂಕ್ ಶಾಖೆಯಲ್ಲಿ ಅಥವಾ ಜೀವನ ಪ್ರಮಾಣ ಪೋರ್ಟಲ್ ಮೂಲಕವು ಸಲ್ಲಿಸಬಹುದಾಗಿದೆ. ಒಂದು ವೇಳೆ ಗಡುವು ಮೀರಿದರೆ ಪಿಂಚಣಿ ಪಾವತಿ ವಿಳಂಬ ಅಥವಾ ಸ್ಥಗಿತಗೊಳ್ಳಲು ಕಾರಣವಾಗಬಹುದು.

ಇದನ್ನೂ ಓದಿ: Self Harming: ಅರ್ಚಕರ ಕುಟುಂಬ ಸಾಮೂಹಿಕ ಆತ್ಮಹತ್ಯೆ ಯತ್ನ, ಇಬ್ಬರ ಸಾವು, ಇನ್ನಿಬ್ಬರು ಗಂಭೀರ

ಲಾಕರ್ ಶುಲ್ಕ ಪರಿಷ್ಕರಣೆ

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಶೀಘ್ರದಲ್ಲೇ ಭಾರತದಾದ್ಯಂತ ತನ್ನ ಲಾಕರ್ ಶುಲ್ಕಗಳನ್ನು ಪರಿಷ್ಕರಿಸಲಿದೆ. ಹೊಸ ದರಗಳು ಲಾಕರ್ ಗಾತ್ರ ಮತ್ತು ವರ್ಗವನ್ನು ಅವಲಂಬಿಸಿರುತ್ತದೆ. ನವೀಕರಿಸಿದ ಶುಲ್ಕಗಳನ್ನು ನವೆಂಬರ್‌ನಲ್ಲಿ ಘೋಷಣೆಯಾಗಲಿದ್ದು, ಇದು ಡಿಸೆಂಬರ್ ತಿಂಗಳಲ್ಲಿ ಜಾರಿಗೆ ಬರಲಿದೆ.

ಎಸ್‌ಬಿಐ ಕಾರ್ಡ್‌ಗಳಿಗೆ ಹೊಸ ಶುಲ್ಕ

ಎಸ್‌ಬಿಐ ಕಾರ್ಡ್ ಬಳಕೆದಾರರು ನವೆಂಬರ್ 1 ರಿಂದ ಶಿಕ್ಷಣ ಸಂಬಂಧಿತ ಪಾವತಿಗಳಿಗೆ ಹಾಗೂ ಡಿಜಿಟಲ್ ವ್ಯಾಲೆಟ್‌ಗೆ 1,000 ರೂ.ಗಿಂತ ಹೆಚ್ಚಿನ ಹಣ ಹಾಕುವಾಗ ಶೇ. 1ರಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ.