ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೈಟ್‌ vs ಫ್ಲಾಟ್ – ಯಾವುದು ಉತ್ತಮ? ಖರೀದಿಗೂ ಮುನ್ನ ಇದು ನಿಮ್ಮ ಗಮನದಲ್ಲಿರಲಿ!

ಸೈಟ್ vs ಫ್ಲಾಟ್ ಇದರಲ್ಲಿ ಯಾವುದು ಉತ್ತಮ? ಈ ಪ್ರಶ್ನೆ ಹಲವರ ಮನಸ್ಸಿನಲ್ಲಿ ಬರುತ್ತದೆ. ಈ ಲೇಖನದಲ್ಲಿ ಪ್ಲಾಟ್ ಮತ್ತು ಫ್ಲಾಟ್ ಹೂಡಿಕೆಯಲ್ಲಿ ಇರುವ ಲಾಭ-ನಷ್ಟಗಳನ್ನು ಸರಳವಾಗಿ ವಿವರಿಸಲಾಗಿದೆ. ಯಾವ ಹೂಡಿಕೆ ನಿಮ್ಮ ಅಗತ್ಯಗಳಿಗೆ ಸೂಕ್ತ ಎನ್ನುವುದನ್ನು ಈ ಲೇಖನ ಓದಿದ ಬಳಿಕ ತಿಳಿದುಕೊಳ್ಳಬಹುದು. ಸೈಟ್‌ ಖರೀದಿ ಮಾಡಿದರೆ ಅದರದ್ದೇ ಆದ ಲಾಭಗಳಿವೆ. ಅಂತೆಯೇ ಫ್ಲಾಟ್‌ ಖರೀದಿ ಮಾಡಿದರೆ ಅದರಿಂದ ಜೀವನ ಶೈಲಿಗೆ ಸಿಗುವ ಪುಷ್ಠಿಯನ್ನು ಇಲ್ಲಿ ವಿವರವಾಗಿ ನೀಡಲಾಗಿದೆ.

ಸೈಟ್‌ vs ಫ್ಲಾಟ್ – ಯಾವುದು ಉತ್ತಮ? ಇದು ನಿಮ್ಮ ಗಮನದಲ್ಲಿರಲಿ!

ಸೈಟ್‌ ಮತ್ತು ಫ್ಲಾಟ್‌ ಖರೀದಿಯಲ್ಲಿ ಹೂಡಿಕೆಗೆ ಯಾವುದು ಸರಿ ಇಲ್ಲಿದೆ ಮಾಹಿತಿ. -

Vijeth Kumar DN Vijeth Kumar DN Oct 31, 2025 3:49 PM

ಬೆಂಗಳೂರು: ನೀವು ಇನ್ವೆಸ್ಟ್‌ಮೆಂಟ್‌ ಮಾಡಬೇಕೆಂದು ಯೋಚಿಸುತ್ತಿದ್ದೀರಾ? ಆದರೆ, ಸೈಟ್‌ ಖರೀದಿಸೋದು ಲಾಭದಾಯಕವೇ? ಅಥವಾ ಫ್ಲಾಟ್ ಖರೀದಿ ಮಾಡಿದರೆ ಹೆಚ್ಚು ಲಾಭ ಕೊಡುತ್ತದೆಯೇ? ಎಂಬ ದ್ವಂದ್ವ ಕಾಡುತ್ತಿದೆಯೇ? ಹಾಗಿದ್ದರೆ ಈ ಎರಡರ ನಡುವಿನ ವ್ಯತ್ಯಾಸ, ಲಾಭ-ನಷ್ಟಗಳ ಬಗ್ಗೆ ತಿಳಿದುಕೊಳ್ಳೋಣ. ಈ ಲೇಖನ ಓದಿ ಮುಗಿಸುವಷ್ಟರಲ್ಲಿ ಯಾವ ಹೂಡಿಕೆ ನಿಮಗೆ ಸೂಕ್ತ ಎಂಬುದರ ಸ್ಪಷ್ಟ ಉತ್ತರ ನಿಮಗೆ ಖಂಡಿತಾ ಸಿಗುತ್ತದೆ.

ಪ್ಲಾಟ್ಸ್-ಸೈಟು: ಲಾಭ ಮತ್ತು ಕುಂದು ಕೊರತೆಗಳು

ಪ್ಲಾಟ್‌ನ ಅಂದರೆ ಸೈಟ್‌ಗಳ ಬೆಲೆ ಸಾಮಾನ್ಯವಾಗಿ ಕಾಲ ಕಳೆದಂತೆ ಏರುತ್ತದೆ. ವಿಶೇಷವಾಗಿ ಸಿಟಿ ಹೊರಭಾಗದ ಅಂಚಿನಲ್ಲಿ ಮೂಲಭೂತ ಸೌರ್ಯಗಳು ಬೆಳೆದಂತೆ ಲ್ಯಾಂಡ್‌ ವ್ಯಾಲ್ಯೂ ಜಿಗಿಒಯುತ್ತದೆ. ನಮ್ಮ ಇಷ್ಟಕ್ಕೆ ತಕ್ಕಂತೆ ಮನೆಯನ್ನು ಕಟ್ಟಿಕೊಳ್ಳುವ ಸ್ವಾತಂತ್ರ್ಯ ಇರುತ್ತದೆ. ಭವಿಷ್ಯದಲ್ಲಿ ಮಾರಾಟ ಮಾಡಲು ದಾಖಲೆಗಳ ಹಾದಿ ಸುಲಭವಾಗುತ್ತದೆ. ನಮ್ಮದೇ ಸೈಟ್‌ ಆದ ಕಾರಣ ಯಾವುದೇ ನಿರ್ವಹಣಾ ವೆಚ್ಚ ನೀಡುವ ತಲೆಬಿಸಿ ಇರುವುದಿಲ್ಲ.

ಪ್ಲಾಟ್/ ಸೈಟ್‌ ಖರೀದಿಯಲ್ಲಿನ ಕುಂದು ಕೊರತೆಗಳು

ಪ್ಲಾಟ್ ಬೇಗ ಮಾರಾಟ ಆಗುವುದಿಲ್ಲ. ಖರೀದಿದಾರ ಸಿಗಲು ಸಮಯ ಬೇಕಾಗುತ್ತದೆ. ಪ್ಲಾಟ್ ಖರೀದಿಸಿದರೆ ತಕ್ಷಣವೇ ಬಾಡಿಗೆ ಅಥವಾ ಯಾವುದೇ ರಿಟರ್ನ್ಸ್‌ ಸಿಗುವುದಿಲ್ಲ. ಸೈಟ್‌ನ ಮೌಲ್ಯ ಹೆಚ್ಚಲು ಕೆಲ ವರ್ಷಗಳ ಕಾಲ ಕಾಯಬೇಕಾಗುತ್ತದೆ. ಖರೀದಿಸಿದ ಸೈಟ್‌ನ ಖಾತೆ, ಟೈಟಲ್ ಡೀಡ್‌ ಮತ್ತು ಮಾನ್ಯತೆ ಸರಿಯಾಗಿಲ್ಲದಿದ್ದರೆ ಸಮಸ್ಯೆ ಕಟ್ಟಿಟ್ಟಬುತ್ತಿ.

ಫ್ಲಾಟ್‌ ಖರೀದಿಯಲ್ಲಿನ ಲಾಭ ಮತ್ತು ಕುಂದು ಕೊರತೆಗಳು

ತಕ್ಷಣ ವಾಸಿಸಲು ಅಥವಾ ಬಾಡಿಗೆಗೆ ಕೊಡಲು ಸಾಧ್ಯ. ಖರೀದಿಸಿದ ಬಳಿಕ ಬಾಡಿಗೆಗೆ ಕೊಟ್ಟು ಹಣ ಗಳಿಸಬಹುದು. ಜಿಮ್‌, ಕ್ಲಬ್‌ ಹೌಸ್‌, ಸೆಕ್ಯೂರಿಟಿ, ಪಾರ್ಕಿಂಗ್‌ ಮತ್ತು ಲೈಫ್‌ಸ್ಟೈಲ್‌ ಸೌಲಭ್ಯಗಳು. ಫ್ಲಾಟ್‌ ಖರೀದಿಗೆ ಬ್ಯಾಂಕ್‌ಗಳಿಂದ ಲೋನ್‌ ಸುಲಭವಾಗಿ ಲಭ್ಯವಾಗುತ್ತದೆ.

ಸೈಟ್‌/ಫ್ಲಾಟ್‌ ಖರೀದಿಯಲ್ಲಿನ ಕುಂದು ಕೊರತೆಗಳು

ಫ್ಲಾಟ್‌ನ ಮೌಲ್ಯ ಕಾಲ ಕಳೆದಂತೆ ಕಡಿಮೆಯಾಗುತ್ತದೆ. ಮಾಸಿಕ ನಿರ್ವಹಣಾ ವೆಚ್ಚ ಭರಿಸಬೇಕಾಗುತ್ತದೆ. ಜೊತೆಗೆ ಅಲ್ಲಿನ ಸೊಸೈಟಿ ನಿಯಮಗಳಿಗೆ ಭದ್ದರಾಗಿ ಇರಬೇಕಾಗುತ್ತದೆ. ಕೆಲ ಫ್ಲಾಟ್‌ಗಳ ಮೌಲ್ಯ ಹೆಚ್ಚುತ್ತದೆ. ಪ್ರೈಂ ಲೊಕೇಷನ್‌ನಲ್ಲಿರುವ ಫ್ಲಾಟ್‌ಗಳ ಮೌಲ್ಯ ನಿಧಾನವಾಗಿ ಹೆಚ್ಚುತ್ತದೆ. ಸೈಟ್‌ಗೆ ಹೋಲಿಸಿದರೆ ಈ ಪ್ರಮಾಣ ಬಹಳಾ ಕಡಿಮೆ ಆಗಿರುತ್ತದೆ.

ಇಷ್ಟೆಲ್ಲಾ ಲಾಭ-ನಷ್ಟಗಳ ನಡುವೆ ಯಾವುದರ ಮೇಲೆ ಹೂಡಿಕೆ ಉತ್ತಮ? ಎಂದು ಆಲೋಚಿಸಿದಾಗ ಈ ಅಂಶಗಳನ್ನು ಪರಿಗಣಿಸಬಹುದು.

ಮನೆ ರೀ-ಸೇಲ್‌ ವ್ಯಾಲ್ಯೂ ಹೆಚ್ಚಿಸಲು ಇಲ್ಲಿದೆ ಟಿಪ್ಸ್‌

ಒಟ್ಟಾರೆ, ಸೈಟ್‌ ಮೇಲಿನ ಹೂಡಿಕೆ ಉತ್ತಮ ಲಾಂಗ್‌-ಟರ್ಮ್ ಇನ್ವೆಸ್ಟ್‌ಮೆಂಟ್‌ ಆಗುತ್ತದೆ. ಫ್ಲಾಟ್ ಖರೀದಿಯು ಉತ್ತಮ ಶಾರ್ಟ್‌-ಟರ್ಮ್‌ ಯುಟಿಲಿಟಿ + ರೆಂಟಲ್ ಇನ್ಕಮ್‌ ಸಿಗುತ್ತದೆ. ನೀವು ಹೂಡಿಕೆ ಮಾಡಿ ಲಾಭ ಪಡೆಯಲು ಹೆಚ್ಚು ಸಮಯ ಕಾಯಲು ಸಿದ್ಧರಿದ್ದರೆ ಪ್ಲಾಟ್ ಸೂಕ್ತ. ತಕ್ಷಣ ವಾಸಿಸಲು ಅಥವಾ ಬಾಡಿಗೆ ಆದಾಯ ಬೇಕು ಎಂದರೆ ಫ್ಲಾಟ್ ಸೂಕ್ತ.

ಹಳ್ಳಿ ಮನೆಗೆ ಇ-ಖಾತಾ ಮಾಡಿಸುವುದು ಹೇಗೆ?

ಉದಾಹರಣೆ ಸಹಿತ ಹೇಳುವುದಾದರೆ

'ಹರೀಶ್‌' – 2010ರಲ್ಲಿ ₹20 ಲಕ್ಷಕ್ಕೆ ಸೈಟ್‌ ತೆಗೆದುಕೊಂಡವರು, ಈಗ ಅದರ ಮೌಲ್ಯ ₹1.2 ಕೋಟಿ ಇರುತ್ತದೆ. ಅದೇ ಮಾದರಿ 'ಮಹೇಶ್‌' – 2010ರಲ್ಲಿ ₹25 ಲಕ್ಷಕ್ಕೆ ಫ್ಲಾಟ್‌ ಒಂದನ್ನು ಕೊಂಡರು, ಅದರ ರೀ-ಸೇಲ್ ಬೌಲ್ಯ ಈಗ ₹45 ಲಕ್ಷ. ಆದರೆ ಬಾಡಿಗೆ ಮೂಲಕ ಅವರು ಈವರೆಗೆ ₹15 ಲಕ್ಷ ಆದಾಯ ಪಡೆದಿರುತ್ತಾರೆ. ಅಂತಿಮವಾಗಿ, ನಿಮ್ಮ ಆರ್ಥಿಕ ಪರಿಸ್ಥಿತಿ, ಗುರಿ, ಅಗತ್ಯಗಳಿಗೆ ತಕ್ಕಂತೆ ಆಯ್ಕೆ ಮಾಡುವುದು ಜಾಣ್ಮೆ.