ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೆನ್ಸೆಕ್ಸ್‌ 1700 ಅಂಕ ಕುಸಿತ 9 ಲಕ್ಷ ಕೋಟಿ ನಷ್ಟ ಕಾರಣವೇನು?

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಸೆನ್ಸೆಕ್ಸ್‌ 1,700 ಅಂಕಗಳ ಭಾರಿ ಪತನಕ್ಕೀಡಾಯಿತು. ನಿಫ್ಟಿ 486 ಅಂಕ ಕುಸಿಯಿತು. ಸೆನ್ಸೆಕ್ಸ್‌ 73,583ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 22,819ಕ್ಕೆ ಸ್ಥಿರವಾಯಿತು. ಜಾಗತಿಕ ಮಟ್ಟದಲ್ಲಿ ಸ್ಟಾಕ್‌ ಮಾರ್ಕೆಟ್‌ ದುರ್ಬಲವಾಗಿತ್ತು. ಕೊರಿಯಾ, ಜಪಾನ್‌ನಲ್ಲೂ ಸೂಚ್ಯಂಕ ಕುಸಿದಿತ್ತು.

ಸೆನ್ಸೆಕ್ಸ್‌ 1700 ಅಂಕ ಕುಸಿತ 9 ಲಕ್ಷ ಕೋಟಿ ನಷ್ಟ ಕಾರಣವೇನು?

ಸಂಗ್ರಹ ಚಿತ್ರ -

ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಸೆನ್ಸೆಕ್ಸ್‌ 1,700 ಅಂಕಗಳ ಭಾರಿ ಪತನಕ್ಕೀಡಾಯಿತು. ನಿಫ್ಟಿ 486 ಅಂಕ ಕುಸಿಯಿತು. (Stock Market) ಸೆನ್ಸೆಕ್ಸ್‌ 73,583ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 22,819ಕ್ಕೆ ಸ್ಥಿರವಾಯಿತು. ಸೆನ್ಸೆಕ್ಸ್‌ ಮತ್ತು ನಿಫ್ಟಿ ಸತತ 5 ವಾರಗಳಲ್ಲಿ ನಷ್ಟಕ್ಕೀಡಾಗಿದೆ. ಹೂಡಿಕೆದಾರರು 9 ಲಕ್ಷ ಕೋಟಿ ರುಪಾಯಿ ನೋಶನಲ್‌ ನಷ್ಟ ಅನುಭವಿಸಿದರು. ಬಿಎಸ್‌ಇ ಲಿಸ್ಟೆಡ್‌ ಷೇರುಗಳ ಬಂಡವಾಳ ಮಾರುಕಟ್ಟೆ ಮೌಲ್ಯವು 431 ಲಕ್ಷ ಕೋಟಿ ರುಪಾಯಿಗಳಿಂದ 422 ಲಕ್ಷ ಕೋಟಿ ರುಪಾಯಿಗೆ ಕುಸಿಯಿತು.

ಇಂದು ಸೆನ್ಸೆಕ್ಸ್‌ ಕುಸಿತಕ್ಕೆ ಕಾರಣವೇನು?

ಜಾಗತಿಕ ಮಟ್ಟದಲ್ಲಿ ಸ್ಟಾಕ್‌ ಮಾರ್ಕೆಟ್‌ ದುರ್ಬಲವಾಗಿತ್ತು. ಕೊರಿಯಾ, ಜಪಾನ್‌ನಲ್ಲೂ ಸೂಚ್ಯಂಕ ಕುಸಿದಿತ್ತು. ಇರಾನ್‌ ವಾರ್‌ ನಕಾರಾತ್ಮಕ ಪ್ರಭಾವ ಬೀರಿತು. ಬ್ರಿಟನ್‌, ಜರ್ಮನಿ, ಫ್ರಾನ್ಸ್‌ ನಲ್ಲಿ ಸೂಚ್ಯಂಕ ಇಳಿಯಿತು. ಪಶ್ಚಿಮ ಏಷ್ಯಾ ಬಿಕ್ಕಟ್ಟು ತೀವ್ರ ಪ್ರಭಾವ ಬೀರಿತು. ಇರಾನ್‌ ನ ಎನರ್ಜಿ ಮೂಲಸೌಕರ್ಯಗಳ ಮೇಲೆ ಏಪ್ರಿಲ್‌ 6ರ ತನಕ ಅಮೆರಿಕ ದಾಳಿ ನಡೆಸುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಹೀಗಿದ್ದರೂ, ಗೊಂದಲ ಪರಿಹರಿದಿಲ್ಲ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರುಪಾಯಿ ಮೌಲ್ಯ 94 ರುಪಾಯಿಗೆ ಇಳಿದಿದೆ. ಇದರಿಂದ ವಿದೇಶಿ ಬಂಡವಾಳದ ಹೊರ ಹರಿವು ಹೆಚ್ಚುವ, ಆಮದು ವೆಚ್ಚ ಹೆಚ್ಚುವ ನಿರೀಕ್ಷೆ ಇದ್ದು, ನಕಾರಾತ್ಮಕ ಪ್ರಭಾವ ಬೀರಿತು. ಬ್ರೆಂಟ್‌ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ ಗೆ 110 ಡಾಲರ್‌ಗೆ ಏರಿತು. ಇದು ಸ್ಟಾಕ್‌ ಮಾರ್ಕೆಟ್‌ ನಲ್ಲಿ ಆತಂಕ ಸೃಷ್ಟಿಸಿದೆ.

ವಿದೇಶಿ ಪೋರ್ಟ್‌ಫೋಲಿಯೊ ಹೂಡಿಕೆದಾರರು ಭಾರತದ ಷೇರು ಮಾರುಕಟ್ಟೆಗಳಿಂದ ಮಾರ್ಚ್‌ 25ರ ತನಕ 1 ಲಕ್ಷದ 23 ಸಾವಿರ ಕೋಟಿ ರುಪಾಯಿ ಹಿಂತೆಗೆದುಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರ ಏರಿಕೆ ಸವಾಲಾಗಿ ಪರಿಣಮಿಸಿದೆ. ಮಾಕ್ವೈರ್‌ ಗ್ರೂಪ್‌ ಪ್ರಕಾರ ಪ್ರತಿ ಬ್ಯಾರಲ್‌ಗೆ 200 ಡಾಲರ್‌ಗೆ ದರ ಏರಿಕೆಯಾಗುವ ನಿರೀಕ್ಷೆ ಇದೆ.

ವಿಜ್ಞಾನಿ ಐಸಾಕ್ ನ್ಯೂಟನ್ ಷೇರು ಮಾರುಕಟ್ಟೆಯಲ್ಲಿ ಸೋತಿದ್ದು ಯಾಕೆ?

ಕೇಂದ್ರ ಸರಕಾರವು ಪ್ರತಿ ಲೀಟರ್‌ ಪೆಟ್ರೋಲ್-ಡೀಸೆಲ್‌ಗೆ ಅಬಕಾರಿ ಸುಂಕದಲ್ಲಿ 10 ರುಪಾಯಿ ಕಡಿತ ಮಾಡಿದೆ. ಇದರಿಂದ ರಿಟೇಲ್‌ ದರದಲ್ಲಿ ವ್ಯತ್ಯಾಸವಾಗುವುದಿಲ್ಲ. ಆದರೆ ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ರಿಲೀಫ್‌ ಸಿಗಲಿದೆ. ಇದರ ಪರಿಣಾಮ ಕೇಂದ್ರ ಸರಕಾರದ ಬೊಕ್ಕಸಕ್ಕೆ 15 ದಿನಗಳಲ್ಲಿ 7,000 ಕೋಟಿ ರುಪಾಯಿ ನಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.