ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs SA: ʻಪವರ್‌ಪ್ಲೇನಲ್ಲಿ ವಿಕೆಟ್‌ ಕಳೆದುಕೊಂಡೆವುʼ-ಭಾರತದ ಸೋಲಿಗೆ ಕಾರಣ ತಿಳಿಸಿದ ಸೂರ್ಯಕುಮಾರ್‌!

Suryakumar yadav on India's Defeat: ದಕ್ಷಿಣ ಆಪ್ರಿಕಾ ವಿರುದ್ಧ ಭಾರತ ತಂಡ, 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌-8ರ ಹಂತದ ಪಂದ್ಯದಲ್ಲಿ 76 ರನ್‌ಗಳಿಂದ ಸೋಲು ಅನುಭವಿಸಿತು. ಪಂದ್ಯದ ಬಳಿಕ ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು, ತಮ್ಮ ತಂಡದ ಸೋಲಿಗೆ ಬಲವಾದ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.

ಭಾರತ ತಂಡದ ಸೋಲಿನ ಬಲವಾದ ಕಾರಣ ತಿಳಿಸಿದ ಸೂರ್ಯಕುಮಾರ್‌!

ಪಂದ್ಯದ ಸೋಲಿನ ಬಗ್ಗೆ ಸೂರ್ಯಕುಮಾರ್‌ ಯಾದವ್‌ ಹೇಳಿಕೆ. -

Profile
Ramesh Kote Feb 22, 2026 11:54 PM

ಅಹಮದಾಬಾದ್‌: ದಕ್ಷಿಣ ಆಫ್ರಿಕಾ ವಿರುದ್ಧ ಬ್ಯಾಟಿಂಗ್‌ ವೈಫಲ್ಯದಿಂದಾಗಿ ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026, ಟೂರ್ನಿಯ ಸೂಪರ್‌-8ರ ಹಂತದ ಪಂದ್ಯದಲ್ಲಿ (IND vs SA Match Highlights) 76 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ಈ ಪಂದ್ಯದ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar yadav), ತಮ್ಮ ತಂಡದ ಸೋಲಿಗೆ ನೈಜ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ಬೃಹತ್‌ ಮೊತ್ತದ ಗುರಿಯನ್ನು ಹಿಂಬಾಲಿಸಿದ ನಾವು ಪವರ್‌ಪ್ಲೇನಲ್ಲಿ ಹಲವು ವಿಕೆಟ್‌ಗಳನ್ನು ಕಳೆದುಕೊಂಡೆವು. ಇದರ ಪರಿಣಾಮವಾಗಿ ನಾವು ಸೋಲು ಅನುಭವಿಸಬೇಕಾಯಿತು ಎಂದು ಹೇಳಿದ್ದಾರೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ, ಡೇವಿಡ್‌ ಮಿಲ್ಲರ್‌ (63 ರನ್‌) ಅವರ ಅರ್ಧಶತಕ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 187 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಬ್ಯಾಟಿಂಗ್‌ ವೈಫಲ್ಯದಿಂದಾಗಿ 18.5 ಓವರ್‌ಗಳಿಗೆ 111 ರನ್‌ಗಳಿಗೆ ಆಲ್‌ಔಟ್‌ ಆಯಿತು.ಆ ಮೂಲಕ ಸೂಪರ್‌-8ರ ಹಂತದಲ್ಲಿ ಭಾರತ ಕಳಪೆ ಆರಂಭವನ್ನು ಪಡೆಯಿತು. ಸೋಲಿನ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಸೂರ್ಯಕುಮಾರ್‌ ಯಾದವ್‌, ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

IND vs SA: ಸೂಪರ್‌-8ರಲ್ಲಿ ಭಾರತ ತಂಡದ ವಿಶ್ವಾಸವನ್ನು ಕುಗ್ಗಿಸಿದ ದಕ್ಷಿಣ ಆಫ್ರಿಕಾ!

ಭಾರತ ತಂಡದ ಸೋಲಿಗೆ ಕಾರಣ ತಿಳಿಸಿದ ಸೂರ್ಯ

ಭಾರತ ತಂಡ 188 ರನ್‌ಗಳ ಗುರಿಯನ್ನು ಹಿಂಬಾಲಿಸುವ ವೇಳೆ ಶೂನ್ಯ ಸಂಪಾದನೆಯಲ್ಲಿಯೇ ಇಶಾನ್‌ ಕಿಶನ್‌ ವಿಕೆಟ್‌ ಕಳೆದುಕೊಂಡಿತು. ಬಳಿಕ ತಿಲಕ್‌ ವರ್ಮಾ ಕೂಡ ಔಟ್‌ ಆದರು. ನಂತರ ಅಭಿಷೇಕ್‌ ಶರ್ಮಾ ಅವರು 15 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಭಾರತ ತಂಡ ಪವರ್‌ಪ್ಲೇನಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಿಂದ ಭಾರತ ತಂಡ ಕಮ್‌ಬ್ಯಾಕ್‌ ಮಾಡಲು ಸಾಧ್ಯವಾಗಿಲ್ಲ. ಇದು ಭಾರತ ತಂಡದ ದೊಡ್ಡ ಹಿನ್ನಡೆಯನ್ನು ತಂದುಕೊಟ್ಟಿತು. ಈ ಬಗ್ಗೆ ಸೂರ್ಯಕುಮಾರ್‌ ಯಾದವ್‌ ಪ್ರತಿಕ್ರಿಯೆ ನೀಡಿದ್ದಾರೆ.



"ಕೆಲವೊಮ್ಮೆ ನಾನು ಯೋಚನೆ ಮಾಡಿದ್ದನ್ನು, ನೀವು ಕೂಡ ಯೋಚಿಸಬಹುದು. ನೀವು 180 ರಿಂದ 185 ರನ್‌ಗಳನ್ನು ಚೇಸ್‌ ಮಾಡುವಾಗ, ಪವರ್‌ಪ್ಲೇನಲ್ಲಿ ಗೆಲ್ಲಲು ಸಾಧ್ಯವಿಲ್ಲ ಆದರ, ಪವರ್‌ಪ್ಲೇನಲ್ಲಿ ನೀವು ಪಂದ್ಯವನ್ನು ಸೋಲಬಹುದು. ಪವರ್‌ಪ್ಲೇನಲ್ಲಿ ನಾವು ಹಲವು ವಿಕೆಟ್‌ಗಳನ್ನು ಕಳೆದುಕೊಂಡೆವು, ಇದರ ಜೊತೆಗೆ ನಮಗೆ ಯಾವುದೇ ಸಣ್ಣ-ಸಣ್ಣ ಜೊತೆಯಾಟಗಳು ಕೂಡ ಮೂಡಿ ಬರಲಿಲ್ಲ. ಆದರೆ, ಇದೆಲ್ಲವೂ ಆಟದ ಒಂದು ಭಾಗ. ಇದರಿಂದ ಕಲಿಯುತ್ತೇವೆ ಹಾಗೂ ಹಿಂದಕ್ಕೆ ಹೋಗಿ, ಮುಂದಿನ ಪಂದ್ಯದಲ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡುತ್ತೇವೆ," ಎಂದು ಸೂರ್ಯಕುಮಾರ್‌ ಯಾದವ್‌ ಭರವಸೆ ಮೂಡಿಸಿದ್ದಾರೆ.



ಜಸ್‌ಪ್ರೀತ್‌ ಬುಮ್ರಾ-ಅರ್ಷದೀಪ್‌ಗೆ ಸೂರ್ಯ ಮೆಚ್ಚುಗೆ

ದಕ್ಷಿಣ ಆಫ್ರಿಕಾ ತಂಡದ ಇನಿಂಗ್ಸ್‌ನಲ್ಲಿ ಮಾರಕ ಬೌಲಿಂಗ್‌ ದಾಳಿ ನಡೆಸಿದ ಜಸ್‌ಪ್ರೀತ್‌ ಬುಮ್ರಾ ಹಾಗೂ ಅರ್ಷದೀಪ್‌ ಸಿಂಗ್‌ ಕೇವಲ 20 ರನ್‌ಗಳಿಗೆ 3 ವಿಕೆಟ್‌ ಕಿತ್ತು ಭಾರತಕ್ಕೆ ಶುಭಾರಂಭ ತಂದಕೊಟ್ಟಿದ್ದರು. ಬುಮ್ರಾ ಪವರ್‌ಪ್ಲೇನಲ್ಲಿ ಕ್ವಿಂಟನ್‌ ಡಿ ಕಾಕ್‌ ಹಾಗೂ ರಯಾನ್‌ ರಿಕೆಲ್ಟನ್‌ ಅವರನ್ನು ಔಟ್‌ ಮಾಡಿದ್ದರೆ, ಅರ್ಷದೀಪ್‌ ಸಿಂಗ್‌ ಅವರು ಏಡೆನ್‌ ಮಾರ್ಕ್ರಮ್‌ ಅವರನ್ನು ಔಟ್‌ ಮಾಡಿದ್ದರು. ಈ ಬಗ್ಗೆಯೂ ಸೂರ್ಯಕುಮಾರ್‌ ಯಾದವ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತ-ಪಾಕ್‌ ಆಟಗಾರರು ಶೇಕ್‌ ಹ್ಯಾಂಡ್‌ ಮಾಡಬೇಕು, ಇದು ಕ್ರೀಡಾ ಮನೋಭಾವ: ದಿಗ್ವಿಜಯ ಸಿಂಗ್‌!

"ನಾವು ಪಂದ್ಯದ ಆರಂಭದಿಂದಲೂ ಆಟದಲ್ಲಿದ್ದೆವು. ಆರಂಭದಲ್ಲಿ ನಾವು ಉತ್ತಮವಾಗಿ ಬೌಲ್‌ ಮಾಡಿದ್ದೆವು ಎಂದು ನಾನು ಭಾವಿಸುತ್ತೇನೆ. 21 ಕ್ಕೆ 3 ವಿಕೆಟ್‌ ಕಬಳಿಸಿದ್ದೆವು. ಆದರೆ, ದಕ್ಷಿಣ ಆಫ್ರಿಕಾ ತಂಡ 7 ರಿಂದ 15ಓವರ್‌ವರೆಗೆ ಉತ್ತಮವಾಗಿ ಬ್ಯಾಟ್‌ ಮಾಡಿತು. ಜಸ್‌ಪ್ರೀತ್‌ ಬುಮ್ರಾ ಹಾಗೂ ಅರ್ಷದೀಪ್‌ ಸಿಂಗ್‌ ಉತ್ತಮ ಸಂಯೋಜನೆಯಾಗಿದೆ. ಈ ಇಬ್ಬರೂ ಇಂದು (ಭಾನುವಾರ) 8 ಓವರ್‌ ಬೌಲ್‌ ಮಾಡಿ 5 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಹಾಗೂ 45 ರಿಂದ 50 ರನ್‌ ನೀಡಿದ್ದಾರೆ. ಆದರೆ, ಈ ಇಬ್ಬರೂ ಅತ್ಯುತ್ತಮ ಜೊತೆಯಾಟವನ್ನು ಬೌಲ್‌ ಮಾಡಿದ್ದಾರೆ. ಮುಂದಿನ ಪಂದ್ಯದಲ್ಲಿ ನಾವು ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತೇವೆ," ಎಂದು ಸೂರ್ಯಕುಮಾರ್‌ ಯಾದವ್‌ ಭರವಸೆ ನೀಡಿದ್ದಾರೆ.