ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟಾಟಾ ಮೋಟಾರ್ಸ್‌ನಿಂದ ಮುಂದಿನ ಪೀಳಿಗೆಯ 17 ಟ್ರಕ್‌ಗಳ ಬಿಡುಗಡೆ; ಸುರಕ್ಷತೆ, ಲಾಭದಾಯಕತೆ ಮತ್ತು ಪ್ರಗತಿಯಲ್ಲಿ ಹೊಸ ಮಾನದಂಡ ಸ್ಥಾಪನೆ

7 ರಿಂದ 55 ಟನ್‌ಗಳವರೆಗಿನ ವಿಭಾಗದ ಈ ಹೊಸ ಟ್ರಕ್ ಗಳು ಸುರಕ್ಷತೆ, ಲಾಭ ಮತ್ತು ಪ್ರಗತಿಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಲಿವೆ. ಈ ಸಮಗ್ರ ಉತ್ಪನ್ನ ಬಿಡುಗಡೆಯಲ್ಲಿ ಹೊಚ್ಚ ಹೊಸ 'ಅಜುರಾ' ಸರಣಿ, ಅತ್ಯಾಧುನಿಕ 'ಟಾಟಾ ಟ್ರಕ್ಸ್.ಇವಿ' ಶ್ರೇಣಿ ಮತ್ತು ಈಗಾಗಲೇ ಜನಪ್ರಿಯವಾಗಿರುವ ಪ್ರೈಮಾ, ಸಿಗ್ನಾ ಹಾಗೂ ಅಲ್ಟ್ರಾ ವಾಹನಗಳ ಸುಧಾರಿತ ಆವೃತ್ತಿಗಳನ್ನು ಪರಿಚಯಿಸಲಾಗಿದೆ.

ಟಾಟಾ ಮೋಟಾರ್ಸ್‌ನಿಂದ ಮುಂದಿನ ಪೀಳಿಗೆಯ 17 ಟ್ರಕ್‌ಗಳ ಬಿಡುಗಡೆ

-

Ashok Nayak
Ashok Nayak Jan 22, 2026 4:09 PM

ನವದೆಹಲಿ: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಇಂದು ಭಾರತೀಯ ಟ್ರಕ್ ಕ್ಷೇತ್ರವನ್ನೇ ಬದಲಿಸುವ ಮಹತ್ವದ ಹೆಜ್ಜೆಯಾಗಿ ಮುಂದಿನ ಪೀಳಿಗೆಯ 17 ಟ್ರಕ್‌ಗಳ ಶ್ರೇಣಿಯನ್ನು ಬಿಡುಗಡೆ ಮಾಡಿದೆ.

7 ರಿಂದ 55 ಟನ್‌ಗಳವರೆಗಿನ ವಿಭಾಗದ ಈ ಹೊಸ ಟ್ರಕ್ ಗಳು ಸುರಕ್ಷತೆ, ಲಾಭ ಮತ್ತು ಪ್ರಗತಿಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಲಿವೆ. ಈ ಸಮಗ್ರ ಉತ್ಪನ್ನ ಬಿಡುಗಡೆಯಲ್ಲಿ ಹೊಚ್ಚ ಹೊಸ 'ಅಜುರಾ' ಸರಣಿ, ಅತ್ಯಾಧುನಿಕ 'ಟಾಟಾ ಟ್ರಕ್ಸ್.ಇವಿ' ಶ್ರೇಣಿ ಮತ್ತು ಈಗಾಗಲೇ ಜನಪ್ರಿಯವಾಗಿರುವ ಪ್ರೈಮಾ, ಸಿಗ್ನಾ ಹಾಗೂ ಅಲ್ಟ್ರಾ ವಾಹನಗಳ ಸುಧಾರಿತ ಆವೃತ್ತಿಗಳನ್ನು ಪರಿಚಯಿಸಲಾಗಿದೆ. ಕಟ್ಟುನಿಟ್ಟಾದ ಜಾಗತಿಕ ಸುರಕ್ಷತಾ ಮಾನದಂಡಗಳಿಗೆ (ECE R29 03) ಅನುಗುಣವಾಗಿ ವಿನ್ಯಾಸ ಗೊಳಿಸಲಾದ ಈ ಟ್ರಕ್‌ಗಳು, ಬಳಕೆದಾರರ ಆದಾಯವನ್ನು ಹೆಚ್ಚಿಸುವುದಲ್ಲದೆ, ಮಾಲೀಕತ್ವದ ಒಟ್ಟು ವೆಚ್ಚವನ್ನು ತಗ್ಗಿಸುತ್ತವೆ ಮತ್ತು ವಾಹನದ ಕಾರ್ಯಕ್ಷಮತೆಯನ್ನು ಉತ್ತಮಪಡಿಸುತ್ತವೆ.

tata M

ಹೊಸ ಟ್ರಕ್‌ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಟಾಟಾ ಮೋಟಾರ್ಸ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಓ ಆಗಿರುವ ಗಿರೀಶ್ ವಾಘ್, "ಪ್ರಗತಿಪರ ರಾಷ್ಟ್ರೀಯ ನೀತಿಗಳು, ಆಧುನಿಕ ಮೂಲ ಸೌಕರ್ಯ ಮತ್ತು ಸುರಕ್ಷಿತ, ಸ್ವಚ್ಛ ಹಾಗೂ ಹೆಚ್ಚು ಪರಿಣಾಮಕಾರಿ ಲಾಜಿಸ್ಟಿಕ್ಸ್‌ ಮೇಲಿನ ಬೇಡಿಕೆ ಹೆಚ್ಚಳದಿಂದಾಗಿ ಭಾರತದ ಟ್ರಕ್ ಕ್ಷೇತ್ರವು ಕ್ಷಿಪ್ರ ಬದಲಾವಣೆಗೆ ಒಳಗಾಗುತ್ತಿದೆ. ಉದ್ಯಮದ ಭವಿಷ್ಯವನ್ನು ರೂಪಿಸುವ ಮಾನದಂಡಗಳನ್ನು ಹಾಕುವಲ್ಲಿ ಟಾಟಾ ಮೋಟಾರ್ಸ್ ಯಾವಾಗಲೂ ಮುಂಚೂಣಿಯಲ್ಲಿದ್ದು, ಇದೀಗ ಮುಂದಿನ ಪೀಳಿಗೆಯ ಟ್ರಕ್ ಪೋರ್ಟ್‌ಫೋಲಿಯೋವನ್ನು ಪರಿಚಯಿಸುವ ಮೂಲಕ ನಾವು ಈ ಪರಂಪರೆಯನ್ನು ಮುಂದುವರಿಸುತ್ತಿದ್ದೇವೆ. ಇದರಲ್ಲಿ ಹೊಚ್ಚಹೊಸ ಅಜುರಾ ಸರಣಿ, ಎರಡು ಸುಧಾರಿತ ಉನ್ನತ-ದಕ್ಷತೆಯ ಪವರ್‌ಟ್ರೇನ್‌ಗಳು, ನಮ್ಮ ಹೊಸ ಐ-ಎಂಓಇವಿ ಆರ್ಕಿಟೆಕ್ಚರ್ ಅಡಿಯಲ್ಲಿ ಶೂನ್ಯ ಹೊಗೆಸೂಸುವ ಎಲೆಕ್ಟ್ರಿಕ್ ಟ್ರಕ್‌ಗಳು ಮತ್ತು ಟಿಪ್ಪರ್‌ಗಳು ಸೇರಿವೆ. ಜೊತೆಗೆ ಯುರೋಪಿಯನ್ ಗುಣಮಟ್ಟದ ಕ್ಯಾಬಿನ್‌ಗಳು, ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳು, ಹೆಚ್ಚಿನ ಪೇಲೋಡ್ ಸಾಮರ್ಥ್ಯ ಮತ್ತು ಇಂಧನ ದಕ್ಷತೆಯನ್ನು ಹೊಂದಿದ್ದು, ಇವೆಲ್ಲವನ್ನೂ ಫ್ಲೀಟ್ ಎಡ್ಜ್ ಡಿಜಿಟಲ್ ಸೇವೆಗಳೊಂದಿಗೆ ಸಂಯೋಜಿಸಲಾಗಿದೆ. 'ಬೆಟರ್ ಆಲ್ವೇಸ್' (ಸದಾ ಉತ್ತಮ) ತತ್ವದ ಅಡಿಯಲ್ಲಿ ಹೊಸ ಆವಿಷ್ಕಾರದ ಹಂಬಲ, ಪ್ರಾದೇಶೀಕರಣದ ಮೇಲೆ ಆಸಕ್ತಿ ಮತ್ತು ಗ್ರಾಹಕರ ಯಶಸ್ಸಿನ ಮೇಲೆ ಗಮನ ಹರಿಸುವ ನಮ್ಮ ಕ್ರಮವು 'ಆತ್ಮನಿರ್ಭರ ಭಾರತ'ದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಮತ್ತು ಇದು ಸ್ವಾವಲಂಬನೆ ಮತ್ತು ಸುಸ್ಥಿರ ಸಾರಿಗೆ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ಭಾರತದ ಆಕಾಂಕ್ಷೆಯನ್ನು ಮತ್ತಷ್ಟು ಬಲಪಡಿಸುತ್ತದೆ" ಎಂದು ಹೇಳಿದರು.

ಇದನ್ನೂ ಓದಿ: Tata Motors: ವಿದ್ಯುತ್ ವಾಣಿಜ್ಯ ವಾಹನಗಳ ಗುತ್ತಿಗೆ ನೀಡುವ ವ್ಯವಸ್ಥೆ ಕಲ್ಪಿಸಲು ವರ್ಟೆಲೋ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಟಾಟಾ ಮೋಟಾರ್ಸ್

ಅಜುರಾ ಪರಿಚಯ - ಐಎಲ್ಎಂಸಿವಿ ವಿಭಾಗದಲ್ಲಿ ಉತ್ಕೃಷ್ಟ ಪರಿಕಲ್ಪನೆ

ಟಾಟಾ ಮೋಟಾರ್ಸ್ ಹೊಚ್ಚ ಹೊಸದಾದ 'ಅಜುರಾ' ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಮಧ್ಯಮ ಮತ್ತು ಹಗುರವಾದ ವಾಣಿಜ್ಯ ವಾಹನ (ಐಎಲ್ಎಂಸಿವಿ) ವಿಭಾಗದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ, ಹೆಚ್ಚಿನ ಸೌಕರ್ಯ ಮತ್ತು ಹೆಚ್ಚಿನ ಅವಧಿ ಕೆಲಸ ಮಾಡುವ ಸಾಮರ್ಥ್ಯವನ್ನು (ಅಪ್ ಟೈಮ್) ಒದಗಿಸಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಉತ್ಪಾದಕತೆ, ಸುರಕ್ಷತೆ ಮತ್ತು ಆರಾಮದಾಯಕ ಚಾಲನೆಗೆ ಒತ್ತು ನೀಡಿ ಸಿದ್ಧಪಡಿಸಲಾದ ಅಜುರಾ, ಆಯಾಸರಹಿತ ಚಾಲನಾ ಅನುಭವ ಒದಗಿಸುತ್ತದೆ. ಇದು ಸೌಂದರ್ಯ ಮತ್ತು ಉಪಯುಕ್ತತೆ ಎರಡೂ ಸಂಯೋಜನೆಗೊಂಡಿರುವ ಆಕರ್ಷಕ ಸರಣಿಯಾಗಿದೆ

ಅಜುರಾದ ಮುಖ್ಯಾಂಶಗಳು

ü ಹೊಸ 3.6-ಲೀಟರ್ ಡೀಸೆಲ್ ಎಂಜಿನ್: ತನ್ನ ವರ್ಗದಲ್ಲೇ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ಹೊಂದಿದೆ.

ü ವೈವಿಧ್ಯಮಯ ಸಂರಚನೆ: 7 ರಿಂದ 19 ಟನ್ ಸಾಮರ್ಥ್ಯದ ವಾಹನಗಳು ಲಭ್ಯ.

ü ಆಧುನಿಕ ವಿನ್ಯಾಸ: ಆಕರ್ಷಕ ಗ್ರಿಲ್, ಸ್ಟೈಲಿಶ್ ಪ್ಯಾನಲ್‌ಗಳು ಮತ್ತು ಸಂಸ್ಥೆಯ ವಿಶಿಷ್ಟವಾದ 'ಟ್ರಸ್ಟ್ ಬಾರ್' ಒಳಗೊಂಡ ಸಮಕಾಲೀನ ವಿನ್ಯಾಸ.

ü ಸಂಪೂರ್ಣ ಹೊಸ 'ವಾಕ್‌ಥ್ರೂ' ಕ್ಯಾಬಿನ್: ಸುಧಾರಿತ ಒಳಾಂಗಣ ವಿನ್ಯಾಸದೊಂದಿಗೆ ಆರಾಮದಾಯಕ ಮತ್ತು ಸುರಕ್ಷಿತ ಕ್ಯಾಬಿನ್. ಇದು ಡಿ+2 (ಚಾಲಕ + ಇಬ್ಬರು) ಸೀಟಿಂಗ್ ವ್ಯವಸ್ಥೆ, ವಾಲಿಸಬಹುದಾದ ಸೀಟುಗಳು ಮತ್ತು ಹೆಚ್ಚಿನ ಸ್ಥಳಾವಕಾಶವನ್ನು ಹೊಂದಿದೆ. ಆಯಾಸವಿಲ್ಲದೆ ಚಾಲನೆ ಮಾಡಲು ಪೂರಕವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ನೀಡುವ ಹೊಸ 3.6-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಅಜುರಾ, ವಿಶ್ವಾಸಾರ್ಹತೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ. ಅಜುರಾ ಶ್ರೇಣಿಯು 7 ರಿಂದ 19 ಟನ್ ಸಾಮರ್ಥ್ಯಗಳಲ್ಲಿ ಲಭ್ಯವಿದ್ದು, ಇ-ಕಾಮರ್ಸ್, ಎಫ್‌ಎಮ್‌ಸಿಜಿ, ಗೃಹೋಪಯೋಗಿ ವಸ್ತುಗಳ ವಿತರಣೆ, ನಿರ್ಮಾಣ ಸಾಮಗ್ರಿ ಸಾಗಣೆ, ಕೃಷಿ ಮತ್ತು ಕೈಗಾರಿಕಾ ಸರಕುಗಳ ಸಾಗಣೆ ಹಾಗೂ ಅಂತರ್- ನಗರ ಸಾಗಣೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಸೂಕ್ತವಾಗಿದೆ.

ಭಾರತೀಯ ರಸ್ತೆಗಳಿಗೆ ವಿಶ್ವದರ್ಜೆಯ ಸುರಕ್ಷತೆಯ ಪರಿಚಯ

ಟಾಟಾ ಮೋಟಾರ್ಸ್ ತನ್ನ ಸಂಪೂರ್ಣ ಟ್ರಕ್ ಪೋರ್ಟ್‌ಫೋಲಿಯೋವನ್ನು (ಸಿಗ್ನಾ, ಪ್ರೈಮಾ, ಅಲ್ಟ್ರಾ ಮತ್ತು ಹೊಚ್ಚ ಹೊಸ ಅಜುರಾ ಸರಣಿ ಸೇರಿದಂತೆ) ECE R29 03 ಜಾಗತಿಕ ಕ್ರ್ಯಾಶ್ ಸೇಫ್ಟಿ ಮಾನದಂಡಗಳಿಗೆ (ಯುರೋ ಕ್ರ್ಯಾಶ್ ನಿಯಮಗಳು) ಅನುಗುಣವಾಗಿ ಮೇಲ್ದರ್ಜೆಗೇರಿಸುವ ಮೂಲಕ ರಸ್ತೆ ಸುರಕ್ಷತೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಟ್ರಕ್‌ಗಳ ಕ್ಯಾಬಿನ್‌ಗಳನ್ನು ಮುಖಾಮುಖಿ ಡಿಕ್ಕಿ, ವಾಹನ ಉರುಳುವಿಕೆ ಮತ್ತು ಪಾರ್ಶ್ವಗಳಲ್ಲಿ ಆಗುವ ಡಿಕ್ಕಿಗಳಿಂದ ರಕ್ಷಣೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಜೊತೆಗೆ, ಇವುಗಳಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ವಾರ್ನಿಂಗ್ ಮತ್ತು ಕೊಲಿಷನ್ ಮಿಟಿಗೇಷನ್ ಸಿಸ್ಟಮ್‌ಗಳಂತಹ ಭಾರತೀಯ ರಸ್ತೆಗಳಿಗೆ ಪೂರಕವಾದ 23 ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಮುಂದಿನ ಪೀಳಿಗೆಯ ಕನೆಕ್ಟೆಡ್ ವೆಹಿಕಲ್ ಪ್ಲಾಟ್‌ಫಾರ್ಮ್ ಆದ 'ಫ್ಲೀಟ್ ಎಡ್ಜ್' ಮೂಲಕ ಚಾಲನಾ ವರ್ತನೆಯನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಬಹುದಾಗಿದೆ. ಈ ಮೂಲಕ ತನ್ನ ಟ್ರಕ್‌ಗಳನ್ನು ಈ ಪ್ರತಿಷ್ಠಿತ ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸಿದ ಏಕೈಕ ಭಾರತೀಯ ತಯಾರಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಟಾಟಾ ಮೋಟಾರ್ಸ್ ಪಾತ್ರವಾಗಿದೆ.

ಅತ್ಯುತ್ತಮ ಪೇಲೋಡ್ ಸಾಮರ್ಥ್ಯ, ಇಂಧನ ದಕ್ಷತೆ ಮತ್ತು ವಾಹನ ನಿರ್ವಹಣೆ ಮೂಲಕ ಲಾಭದ ಹೆಚ್ಚಳ

ಬಳಕೆದಾರರ ಆದಾಯ ಗಳಿಕೆ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಮಾಲೀಕತ್ವದ ಒಟ್ಟು ವೆಚ್ಚವನ್ನು ತಗ್ಗಿಸಲು ವಿನ್ಯಾಸಗೊಳಿಸಲಾದ ಟಾಟಾ ಮೋಟಾರ್ಸ್ ಟ್ರಕ್ ಶ್ರೇಣಿಯ ಸುಧಾರಣೆ ಗಳು ನೇರವಾಗಿ ಲಾಭದಾಯಕತೆಯನ್ನು ಹೆಚ್ಚಿಸುತ್ತವೆ. ಸ್ಮಾರ್ಟ್ ಅಪ್‌ಗ್ರೇಡ್‌ಗಳ ಮೂಲಕ ಪೇಲೋಡ್ (ಸರಕು ಸಾಗಣೆ) ಸಾಮರ್ಥ್ಯವನ್ನು 1.8 ಟನ್‌ಗಳವರೆಗೆ ಹೆಚ್ಚಿಸಲಾಗಿದೆ. ಇನ್ನು ಸುಧಾರಿತ 6.7-ಲೀಟರ್ ಕಮ್ಮಿನ್ಸ್ ಡೀಸೆಲ್ ಎಂಜಿನ್ ಒಳಗೊಂಡಿರುವ ಡ್ರೈವ್‌ಟ್ರೇನ್ ಅಪ್‌ಗ್ರೇಡ್‌ ಗಳು ಇಂಧನ ದಕ್ಷತೆಯನ್ನು ಶೇಕಡಾ 7 ರಷ್ಟು ಸುಧಾರಿಸಿವೆ.

ಈ ತಾಂತ್ರಿಕ ಸುಧಾರಣೆಗಳಿಗೆ ಪೂರಕವಾಗಿ, ಡಿಜಿಟಲ್ ಬೆಂಬಲಿತ ವ್ಯವಸ್ಥೆಯು ವಾಹನಗಳ ಮೇಲ್ವಿಚಾರಣೆ ಮತ್ತು ಅವುಗಳ ಕಾರ್ಯನಿರ್ಹಣಾ ಅವಧಿಯನ್ನು ಹೆಚ್ಚಿಸುತ್ತದೆ. 'ಫ್ಲೀಟ್ ಎಡ್ಜ್ ಪ್ರಯಾರಿಟಿ' ಪರಿಚಯದೊಂದಿಗೆ, ಗ್ರಾಹಕರು ಈಗ ತಮ್ಮ ವಾಹನಗಳ ಬಗ್ಗೆ ಹೆಚ್ಚಿನ ಮಾಹಿತಿ ಗಳನ್ನು ಪಡೆಯಬಹುದು. ಇದರಲ್ಲಿ ವಾಹನದ ಸ್ಥಿತಿಗತಿಯ ನೈಜ ಸಮಯದ ಮಾಹಿತಿ, ಮುನ್ಸೂಚನಾ ವಿಶ್ಲೇಷಣೆ ಮತ್ತು ಟ್ರಿಪ್ ನಿರ್ವಹಣೆಯನ್ನು ಉತ್ತಮಗೊಳಿಸುವ ಸಲಹೆಗಳು ಸೇರಿವೆ.

ಟಾಟಾ ಟ್ರಕ್ಸ್.ಇವಿ

ü ಅಲ್ಟ್ರಾ ಇವಿ ಶ್ರೇಣಿಯ ಬಿಡುಗಡೆ: ನಗರ, ಪ್ರಾದೇಶಿಕ ಮತ್ತು ಕ್ಲೋಸ್ಡ್-ಲೂಪ್ ವಿಭಾಗಗಳಲ್ಲಿ ದಕ್ಷ, ಶೂನ್ಯ-ಹೊರಸೂಸುವಿಕೆಯ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ ಭಾರತದ ಅತ್ಯಾಧುನಿಕ ಎಲೆಕ್ಟ್ರಿಕ್ ಲಘು ಟ್ರಕ್‌ಗಳು.

ü ಪ್ರೈಮಾ E.55S ಪ್ರೈಮ್ ಮೂವರ್ ಪರಿಚಯ: ರಾಜಿ ಇಲ್ಲದ ಕಾರ್ಯಕ್ಷಮತೆ ಮತ್ತು ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಭಾರೀ ಸರಕು ಸಾಗಣೆ ಕಾರ್ಯಾಚರಣೆಗಳನ್ನು ಸಾಧ್ಯವಾಗಿಸುತ್ತದೆ.

ü ಐ-ಎಂಓಇವಿ ಆರ್ಕಿಟೆಕ್ಚರ್: ಇಂಟೆಲಿಜೆಂಟ್ ಮಾಡ್ಯುಲರ್ ಎಲೆಕ್ಟ್ರಿಕ್ ವೆಹಿಕಲ್ ಆರ್ಕಿಟೆಕ್ಚರ್: ಇಂಟೆಲಿಜೆಂಟ್. ಮಾಡ್ಯುಲರ್. ಭಾರತದ ಪ್ರಗತಿಗಾಗಿ ನಿರ್ಮಿತ.

ü ಪ್ರೈಮಾ E.28K ಟಿಪ್ಪರ್ ಬಿಡುಗಡೆ: ಗಣಿಗಾರಿಕೆ ಮತ್ತು ನಿರ್ಮಾಣ ಕಾರ್ಯಾಚರಣೆಗಳನ್ನು ಇಂಗಾಲಮುಕ್ತಗೊಳಿಸಲು ವಿನ್ಯಾಸಗೊಳಿಸಲಾದ ಶಕ್ತಿಯುತ, ಹೈ-ಟಾರ್ಕ್ ಎಲೆಕ್ಟ್ರಿಕ್ ಟಿಪ್ಪರ್. ಇದು ಅತ್ಯುತ್ತಮ ಸಾಮರ್ಥ್ಯ, ವೇಗದ ಕಾರ್ಯನಿರ್ವಹಣೆ ಮತ್ತು ಶೂನ್ಯ ಹೊರಸೂಸುವಿಕೆಯ ಸಾಮರ್ಥ್ಯ ಹೊಂದಿದೆ.

ಒಟ್ಟಾರೆಯಾಗಿ, ಈ ಎಲ್ಲಾ ಹೊಸತನಗಳು ಸಾರಿಗೆದಾರರಿಗೆ ಹೆಚ್ಚಿನ ಪೇಲೋಡ್ ಪ್ರಯೋಜನ, ಗಣನೀಯ ಇಂಧನ ಉಳಿತಾಯ ಮತ್ತು ವಾಹನಗಳ ಸಮರ್ಪಕ ಬಳಕೆಯನ್ನು ಸಾಧ್ಯವಾಗಿಸುತ್ತವೆ ಮತ್ತು ಇದು ಪ್ರತಿಯೊಂದು ಹೂಡಿಕೆಯ ಮೇಲೆ ಹೆಚ್ಚಿನ ಲಾಭವನ್ನು ಗಳಿಸಲು ನೆರವಾಗುತ್ತದೆ.

ಟಾಟಾ ಟ್ರಕ್ಸ್.ಇವಿ: ಟ್ರಕ್ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ಕ್ರಾಂತಿಗೆ ಚಾಲನೆ

ಭಾರತವು ಹಸಿರು ಲಾಜಿಸ್ಟಿಕ್ಸ್‌ ವಿಭಾಗದತ್ತ ಸಾಗುವ ಪ್ರಕ್ರಿಯೆಯನ್ನು ವೇಗಗೊಳಿಸಲು, ಟಾಟಾ ಮೋಟಾರ್ಸ್ ತನ್ನ ಹೊಸ ಟಾಟಾ ಟ್ರಕ್ಸ್.ಇವಿ ಬ್ರಾಂಡ್ ಅಡಿಯಲ್ಲಿ 7 ರಿಂದ 55 ಟನ್ ಸಾಮರ್ಥ್ಯ ದ ಎಲೆಕ್ಟ್ರಿಕ್ ಟ್ರಕ್‌ಗಳ ಸಮಗ್ರ ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಇವು ಹೊಸ ಐ-ಎಂಓಇವಿ (ಇಂಟೆಲಿಜೆಂಟ್ ಮಾಡ್ಯುಲರ್ ಎಲೆಕ್ಟ್ರಿಕ್ ವೆಹಿಕಲ್) ಆರ್ಕಿಟೆಕ್ಚರ್ ಅನ್ನು ಆಧರಿಸಿಕೊಂಡು ಸಿದ್ಧವಾಗಿದ್ದು, ಈ ಟ್ರಕ್‌ಗಳನ್ನು ಇ-ಕಾಮರ್ಸ್, ನಿರ್ಮಾಣ ಮತ್ತು ಬಂದರು ವಲಯದ ಸುಸ್ಥಿರ ಕಾರ್ಯಾಚರಣೆಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಈ ಎಲೆಕ್ಟ್ರಿಕ್ ಟ್ರಕ್ ಗಳಲ್ಲಿ ಒಂದಾಗಿರುವ ಅಲ್ಟ್ರಾ ಇವಿ ಸರಣಿಯು 7, 9 ಮತ್ತು 12 ಟನ್ ಸಾಮರ್ಥ್ಯಗಳಲ್ಲಿ ಲಭ್ಯವಿದ್ದು, ಇವು ಭಾರತದ ಅತ್ಯಂತ ಸುಧಾರಿತ ಎಲೆಕ್ಟ್ರಿಕ್ ಲಘು ಟ್ರಕ್‌ ಗಳಾಗಿವೆ. ಇವು ನಗರ, ಪ್ರಾದೇಶಿಕ ಸಾಗಣೆ ಮತ್ತು ಕ್ಲೋಸ್ಡ್-ಲೂಪ್ ವಿಭಾಗಗಳಿಗೆ ಶೂನ್ಯ ಹೊರ ಸೂಸುವಿಕೆಯ ದಕ್ಷತೆಯನ್ನು ಒದಗಿಸುತ್ತವೆ. ಮತ್ತೊಂದೆಡೆ, ಪ್ರೈಮಾ E.55S ಪ್ರೈಮ್ ಮೂವರ್ 470 kW ಪವರ್ ಮತ್ತು 453 kWh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಹೆವಿ ಡ್ಯೂಟಿ ಕಾರ್ಯಕ್ಷಮತೆ ಮತ್ತು ಕಡಿಮೆ ನಿರ್ವಹಣಾ ವೆಚ್ಚದ ಲಾಭ ಒದಗಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಗಣಿಗಾರಿಕೆ ಮತ್ತು ನಿರ್ಮಾಣ ಕ್ಷೇತ್ರಕ್ಕಾಗಿ ವಿನ್ಯಾಸಗೊಳಿಸಲಾದ ಪ್ರೈಮಾ E.28K ಟಿಪ್ಪರ್, ಹೆಚ್ಚಿನ ಟಾರ್ಕ್ ಮತ್ತು ದೃಢತೆಯನ್ನು ಹೊಂದಿದ್ದು, ವೇಗದ ಕಾರ್ಯಾಚರಣೆ ಮತ್ತು ಪರಿಸರ ಸ್ನೇಹಿ ಗಣಿಗಾರಿಕೆಯನ್ನು ಸಾಧ್ಯವಾಗಿಸುತ್ತದೆ..

ಟಾಟಾ ಟ್ರಕ್ಸ್.ಇವಿ ಶ್ರೇಣಿಯನ್ನು ಸುಧಾರಿತ ಇವಿ ಆರ್ಕಿಟೆಕ್ಚರ್‌ಗಳು, ಬದ್ಧಿವಂತ ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್‌ಗಳು ಮತ್ತು ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಬಿಡಿಭಾಗಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಇದು ಎಲೆಕ್ಟ್ರಿಕ್ ಟ್ರಕ್ ವಿಭಾಗವನ್ನು ಅನ್ನು ಭಾರತೀಯ ಉದ್ಯಮಗಳ ವೈವಿಧ್ಯಮಯ ಅಗತ್ಯಗಳಿಗೆ ಮತ್ತು ರಸ್ತೆ ಪರಿಸ್ಥಿತಿಗಳಿಗೆ ಅನುಗುಣವಾಗಿ ಹೆಚ್ಚು ಲಭ್ಯವಾಗುವಂತೆ ಮತ್ತು ವಿಶ್ವಾಸಾರ್ಹವಾಗುವಂತೆ ಮಾಡುತ್ತದೆ. ಈ ಉತ್ಪನ್ನ ಅಭಿವೃದ್ಧಿಯ ಪ್ರಯತ್ನಗಳಿಗೆ ಪೂರಕವಾಗಿ, ಕಸ್ಟಮೈಸ್ ಮಾಡಿದ ಹಣಕಾಸು ಆಯ್ಕೆಗಳು ಮತ್ತು ರಾಷ್ಟ್ರವ್ಯಾಪಿ ಬೆಳೆಯುತ್ತಿರುವ ಚಾರ್ಜಿಂಗ್ ವ್ಯವಸ್ಥೆಯ ಬೆಂಬಲವೂ ಇದೆ.

ಟಾಟಾ ಮೋಟಾರ್ಸ್ ಪ್ರಯೋಜನ: ಸಂಪೂರ್ಣ ನೆಮ್ಮದಿಯ ಭರವಸೆ

ವಿಶ್ವದರ್ಜೆಯ ಟ್ರಕ್‌ಗಳು ಮತ್ತು ಡಿಜಿಟಲ್ ಪರಿಹಾರಗಳ ಜೊತೆಗೆ, ಗ್ರಾಹಕರು ಟಾಟಾ ಮೋಟಾರ್ಸ್‌ ನ 'ಸಂಪೂರ್ಣ ಸೇವಾ 2.0' ವ್ಯವಸ್ಥೆ ಮತ್ತು ವ್ಯಾಪಕವಾದ ಸೇವಾ ಜಾಲದ ಪ್ರಯೋಜನವನ್ನು ಪಡೆಯುತ್ತಾರೆ. ಇದು 24x7 ಬೆಂಬಲ, ಬಿಡಿಭಾಗಗಳ ಲಭ್ಯತೆಯ ಖಾತರಿ, ಕನೆಕ್ಟೆಡ್ 'ಫ್ಲೀಟ್ ಎಡ್ಜ್' ಸೇವೆಗಳು, ಚಾಲಕರ ತರಬೇತಿಯನ್ನು ಒಳಗೊಂಡ ವಾರ್ಷಿಕ ನಿರ್ವಹಣಾ ಒಪ್ಪಂದ ಮತ್ತು ದಕ್ಷ ವಾಹನ ನಿರ್ವಹಣೆಗಾಗಿ ವಿಶೇಷ ಹಣಕಾಸು ಸೌಲಭ್ಯಗಳನ್ನು ಒದಗಿಸುತ್ತದೆ.

  • ಅಜುರಾ ಸರಣಿಯ ಪರಿಚಯ: ಐಎಲ್ಎಂಸಿವಿ (ಮಧ್ಯಮ ಮತ್ತು ಹಗುರವಾದ ವಾಣಿಜ್ಯ ವಾಹನ) ವಿಭಾಗದಲ್ಲಿ ಶ್ರೇಷ್ಠ ತಯಾರಿಕೆ.
  • ಐ-ಎಂಓಇವಿ ಆರ್ಕಿಟೆಕ್ಚರ್ (ಇಂಟೆಲಿಜೆಂಟ್ ಮಾಡ್ಯುಲರ್ ಎಲೆಕ್ಟ್ರಿಕ್ ವೆಹಿಕಲ್ ಆರ್ಕಿಟೆಕ್ಚರ್) ಆಧಾರಿತವಾದ ಭಾರತದ ಅತಿ ದೊಡ್ಡ ಎಲೆಕ್ಟ್ರಿಕ್ ಟ್ರಕ್ ಸರಣಿಯಾದ ಟಾಟಾ ಟ್ರಕ್ಸ್.ಇವಿ ಅನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್
  • ಭಾರತೀಯ ರಸ್ತೆಗಳಿಗೆ ವಿಶ್ವದರ್ಜೆಯ ಸುರಕ್ಷತೆ: ಯುರೋಪಿಯನ್ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಭಾರತೀಯ ರಸ್ತೆಗಳಿಗೆ ಈ ಟ್ರಕ್‌ಗಳನ್ನು ನಿರ್ಮಿಸಲಾಗಿದೆ.
  • ಗ್ರಾಹಕರ ಲಾಭದಾಯಕತೆಗೆ ಬೆಂಬಲ: ಅತ್ಯುತ್ತಮ ಪೇಲೋಡ್, ಇಂಧನ ದಕ್ಷತೆ ಮತ್ತು 'ಫ್ಲೀಟ್ ಎಡ್ಜ್' ಡಿಜಿಟಲ್ ಸೇವೆಗಳ ಮೂಲಕ ಲಾಭದ ಹೆಚ್ಚಳ.