ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಐಟಿಆರ್ ಸಲ್ಲಿಕೆಗೆ ಕೊನೆಯ ಅವಕಾಶ: ಯಾರೆಲ್ಲ ಇವತ್ತೇ ಸಲ್ಲಿಸಬೇಕು?

ITR Filing Last Date: ಆದಾಯ ತೆರಿಗೆ ರಿಟರ್ನ್ ಪಡೆಯಲು ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ. ಇದು ವ್ಯಾಪಾರ ಅಥವಾ ವೃತ್ತಿಪರ ಆದಾಯವನ್ನು ಒಳಗೊಂಡಿರುವವರಿಗೆ ಅನ್ವಯವಾಗುತ್ತದೆ. ತಮ್ಮ ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಬೇಕಾಗಿಲ್ಲದ ವ್ಯವಹಾರ ಅಥವಾ ವೃತ್ತಿಪರ ಆದಾಯ ಹೊಂದಿರುವ ವ್ಯಕ್ತಿಗಳು ಮತ್ತು ಇತರ ತೆರಿಗೆದಾರರು ತಮ್ಮ ಐಟಿಆರ್ ಸಲ್ಲಿಕೆಯನ್ನು ಇವತ್ತು ಪೂರ್ಣಗೊಳಿಸಬೇಕು. ಇಲ್ಲವಾದರೆ ದಂಡ ಪಾವತಿಸಬೇಕಾಗುವುದು.

ಐಟಿಆರ್ ಸಲ್ಲಿಕೆಗೆ ಇಂದು ಕೊನೆ ದಿನ

ಸಂಗ್ರಹ ಚಿತ್ರ -

ನವದೆಹಲಿ: ವ್ಯಾಪಾರ ಅಥವಾ ವೃತ್ತಿಪರ ಆದಾಯವನ್ನು (Business, Professional Taxpayers) ಹೊಂದಿರುವವರ ಖಾತೆಗಳನ್ನು ತೆರಿಗೆ ಲೆಕ್ಕಪರಿಶೋಧನೆಗೆ ಒಳಪಡಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ. 2026-27ರ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್‌ಗಳನ್ನು (ITR Filing Last Date) ಸಲ್ಲಿಸಲು ಇವತ್ತು ಕೊನೆಯ ದಿನವಾಗಿದೆ. ಹೆಚ್ಚಿನ ತೆರಿಗೆದಾರರನ್ನು (Taxpayers) ಒಳಗೊಂಡಿರುವ ವ್ಯವಹಾರ ಅಥವಾ ವೃತ್ತಿಪರ ಆದಾಯ ಹೊಂದಿರುವ ವ್ಯಕ್ತಿಗಳು ಮತ್ತು ಇತರ ತೆರಿಗೆದಾರರು ತಮ್ಮ ಐಟಿಆರ್ (ITR) ಸಲ್ಲಿಕೆಯನ್ನು ಇವತ್ತು ಪೂರ್ಣಗೊಳಿಸದಿದ್ದರೆ ಮುಂದೆ ದಂಡ ಪಾವತಿಸಬೇಕಾಗುತ್ತದೆ.

ಐಟಿಆರ್ ಗೆ 2026-27ರ ಮೌಲ್ಯಮಾಪನ ವರ್ಷಕ್ಕೆ ಈಗಾಗಲೇ 7 ಕೋಟಿಗೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದೆ. ಲೆಕ್ಕ ಪರಿಶೋಧನೆಗೆ ಒಳಪಡದ ವ್ಯವಹಾರ ಅಥವಾ ವೃತ್ತಿಪರ ಆದಾಯ ಹೊಂದಿರುವ ತೆರಿಗೆದಾರರು ಆಗಸ್ಟ್ 31ರೊಳಗೆ ತಮ್ಮ ರಿಟರ್ನ್ಸ್ ಸಲ್ಲಿಸುವಂತೆ ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಫ್ಲೈ-ಓವರ್‌ʼಗಳ ಮೇಲೆ ದ್ವಿಚಕ್ರ ವಾಹನ, ಆಟೋಗೆ ನಿರ್ಬಂಧ

ಯಾರು ಸಲ್ಲಿಸಬೇಕು?

ವ್ಯವಹಾರ ಅಥವಾ ವೃತ್ತಿಪರ ಆದಾಯವನ್ನು ಹೊಂದಿರುವ ತೆರಿಗೆದಾರರಿಗೆ ಇದು ಅನ್ವಯವಾಗುತ್ತದೆ. ಹಿಂದೂ ಅವಿಭಜಿತ ಕುಟುಂಬಗಳು ಐಟಿಆರ್ -3 ಅನ್ನು ಸಲ್ಲಿಸುವ ತೆರಿಗೆದಾರರು ಮತ್ತು ಐಟಿಆರ್ -4 (ಸುಗಮ್) ಸಲ್ಲಿಸುವ ಅರ್ಹ ತೆರಿಗೆದಾರರನ್ನು ಇದು ಒಳಗೊಂಡಿರುತ್ತದೆ.

ಐಟಿಆರ್-3 ಐಟಿಆರ್-1, ಐಟಿಆರ್-2 ಅಥವಾ ಐಟಿಆರ್-4 ಅನ್ನು ಬಳಸಲು ಅರ್ಹವಲ್ಲದ ವ್ಯವಹಾರ ಅಥವಾ ವೃತ್ತಿಯಿಂದ ಆದಾಯಪಡೆಯುವವರಿಗೆ ಇದು ಅನ್ವಯವಾಗುತ್ತದೆ.

ನಿಗದಿತ ಷರತ್ತುಗಳನ್ನು ಪೂರೈಸುವ ಮತ್ತು 44ಎಡಿ, 44Aಡಿಎ ಅಥವಾ 44ಎಇ ವಿಭಾಗಗಳ ಅಡಿಯಲ್ಲಿ ಪೂರ್ವಭಾವಿ ತೆರಿಗೆಯನ್ನು ಆಯ್ಕೆ ಮಾಡಿಕೊಳ್ಳುವ ಅರ್ಹ ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬಗಳು ಮತ್ತು ಸಂಸ್ಥೆಗಳಿಗೆ ಐಟಿಆರ್ -4 ಲಭ್ಯವಿದೆ.

ತೆರಿಗೆದಾರರ ಆರ್ಥಿಕ ಪರಿಸ್ಥಿತಿ ಮತ್ತು ಆದಾಯದ ಸ್ವರೂಪವನ್ನು ಅವಲಂಬಿಸಿ ಐಟಿಆರ್-5 ಮತ್ತು ಐಟಿಆರ್ -7 ಸೇರಿದಂತೆ ಇತರ ಅನ್ವಯವಾಗುವ ರಿಟರ್ನ್ ಫಾರ್ಮ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು. ಆದಾಯ ತೆರಿಗೆ ಇಲಾಖೆಯು ಐಟಿಆರ್ -3, ಐಟಿಆರ್ -4, ಐಟಿಆರ್ -5 ಮತ್ತು ಐಟಿಆರ್ -7 ಅನ್ನು ಬಳಸುವ ಆಡಿಟ್ ಅಲ್ಲದ ತೆರಿಗೆದಾರರು ತಮ್ಮ ಫೈಲಿಂಗ್ ಅನ್ನು ಆಗಸ್ಟ್ 31 ಕೊನೆಯ ದಿನವಾಗಿದೆ.

ಸಂಬಳ ಪಡೆಯುವ ತೆರಿಗೆದಾರರಿಗೆ ಈಗಾಗಲೇ ಜುಲೈ 31ರ ಗಡುವು ವಿಧಿಸಲಾಗಿದ್ದು, ಅಂತಿಮ ದಿನಾಂಕದ ವೇಳೆಗೆ 5.9 ಕೋಟಿಗೂ ಹೆಚ್ಚು ಐಟಿಆರ್ -1 ಮತ್ತು ಐಟಿಆರ್ -2 ರಿಟರ್ನ್‌ಗಳನ್ನು ಸಲ್ಲಿಸಲಾಗಿದೆ. ಹೀಗಾಗಿ ಆಗಸ್ಟ್ 31 ಎಲ್ಲರಿಗೂ ಲಭ್ಯವಿರುವ ಅವಕಾಶವಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಸ್ವತಂತ್ರೋದ್ಯೋಗಿಗಳು, ಸಲಹೆಗಾರರು ಮತ್ತು ವೃತ್ತಿಪರರಲ್ಲಿ ಪೂರ್ವಭಾವಿ ತೆರಿಗೆಯನ್ನು ಆಯ್ಕೆ ಮಾಡುವ ತೆರಿಗೆದಾರನು ಫಾರ್ಮ್‌ನ ಎಲ್ಲಾ ಷರತ್ತುಗಳನ್ನು ಪೂರೈಸಿದರೆ ಐಟಿಆರ್-4 ಅನ್ನು ಸಲ್ಲಿಸಬಹುದು. ಒಟ್ಟು ಆದಾಯವು 50 ಲಕ್ಷ ರೂ. ಮೀರದಿರುವ ಅರ್ಹ ವ್ಯವಹಾರ ಅಥವಾ ವೃತ್ತಿಪರ ಆದಾಯ ಹೊಂದಿರುವವರಿಗೆ ಇದರಲ್ಲಿ ಅವಕಾಶವಿದೆ. ಐಟಿಆರ್-4 ಗೆ ಅರ್ಹತೆ ಪಡೆಯದವರು ಐಟಿಆರ್-3 ಅಥವಾ ಇತರ ಅನ್ವಯವಾಗುವ ರಿಟರ್ನ್ ಅನ್ನು ಸಲ್ಲಿಸಬೇಕಾಗಬಹುದು.

ಲೆಕ್ಕಪರಿಶೋಧನೆಗೆ ಒಳಪಡಬೇಕಾದ ಖಾತೆಗಳನ್ನು ಹೊಂದಿರುವ ತೆರಿಗೆದಾರರಿಗೆ 2026-27 ನೇ ಸಾಲಿನ ಹಣಕಾಸು ವರ್ಷ 2025- 26 ರ ತೆರಿಗೆ ಆಡಿಟ್ ವರದಿಯನ್ನು ಸೆಪ್ಟೆಂಬರ್ 30ರೊಳಗೆ ಸಲ್ಲಿಸಬೇಕು. ಆದರೆ ಆಡಿಟ್ ಪ್ರಕರಣಗಳಿಗೆ ಅನುಗುಣವಾದ ಐಟಿಆರ್ ಸಲ್ಲಿಕೆಯ ಗಡುವು

ಒಂದು ವೇಳೆ ಗಡುವಿನೊಳಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗಿಲ್ಲವಾದರೆ 5,000 ರೂ. ವರೆಗಿನ ವಿಳಂಬ ಸಲ್ಲಿಕೆ ಶುಲ್ಕ ಅನ್ವಯವಾಗಲಿದೆ. ತಡವಾಗಿ ಸಲ್ಲಿಸುವುದರಿಂದ ಕೆಲವು ನಷ್ಟಗಳು ಉಂಟಾಗುತ್ತದೆ. ಮುಂದೆ ಇದು ಪರಿಣಾಮ ಬೀರಲಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ರಿಟರ್ನ್ ಸಲ್ಲಿಕೆ ಬಳಿಕ ಅದು ಯಶಸ್ವಿಯಾಗಿ ಪರಿಶೀಲಿಸಲಾಗಿದೆಯೆ ಎಂದು ತೆರಿಗೆದಾರರು ಖಚಿತಪಡಿಸಿಕೊಳ್ಳಬೇಕು. ನಿಗದಿತ ಅವಧಿಯೊಳಗೆ ಪರಿಶೀಲನೆ ಪೂರ್ಣಗೊಳ್ಳದಿದ್ದರೆ ಸಲ್ಲಿಸಲಾದ ಆದರೆ ಪರಿಶೀಲನೆಗಾಗಿ ಬಾಕಿ ಉಳಿದಿರುವ ಐಟಿಆರ್ ನಿಂದ ಸಮಸ್ಯೆಗಳಾಗಬಹುದು.

ನೇಪಾಳದ ಬಳಿಕ ಅಮೆರಿಕದಲ್ಲಿಯೂ ಭೀಕರ ಪ್ರವಾಹ; 20 ಜನರು ನಾಪತ್ತೆ

ಆಗಸ್ಟ್ 31ರಂದು ಆದಾಯ ತೆರಿಗೆ ಇಲಾಖೆಯು ಇ-ಫೈಲಿಂಗ್ ಗೆ ದಿನದ 24 ಗಂಟೆ ಅವಕಾಶ ನೀಡಿದೆ. ಇ-ಫೈಲಿಂಗ್ ಪೋರ್ಟಲ್‌ ಆಗಸ್ಟ್ 31ರಂದು ರಾತ್ರಿ 11.59 ರವರೆಗೆ ಕಾರ್ಯ ನರಿವಹಿಸುತ್ತದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.