New Rule: ಐಟಿಆರ್ ಗಡುವು ಮುಕ್ತಾಯ, ಎಫ್‌ಡಿ ನಿಯಮ; ಸೆಪ್ಟೆಂಬರ್ 1ರಿಂದ ಹಲವು ಬದಲಾವಣೆ
New rule September 2026: ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿ ಸೆಪ್ಟೆಂಬರ್ 1ರಿಂದ ಹಲವು ನಿಯಮಗಳು ಬದಲಾಗಲಿದೆ. ಐಟಿಆರ್ ಫೈಲಿಂಗ್, ಎಫ್‌ಡಿ ನಿಯಮಗಳಿಗೆ ಸಂಬಂಧಿಸಿ ಕೆಲವು ನಿಯಮಗಳು ಜಾರಿಯಾಗಲಿದೆ. ಇದು ಐಟಿಆರ್ ಸಲ್ಲಿಕೆ, ಮನೆಯ ವೆಚ್ಚ, ಬ್ಯಾಂಕ್ ಠೇವಣಿ, ವಿಮಾನ ಪ್ರಯಾಣದ ಮೇಲೆ ಪರಿಣಾಮ ಬೀರಲಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಆದಾಯ ತೆರಿಗೆ ರಿಟರ್ನ್ ಅರ್ಜಿ (Income tax return) ಸಲ್ಲಿಕೆ ಗಡುವು, ಮನೆಯ ವೆಚ್ಚ, ಬ್ಯಾಂಕ್ ಠೇವಣಿ, ವಿಮಾನ ಪ್ರಯಾಣಕ್ಕೆ ಸಂಬಂಧಿಸಿ ಹೊಸ ನಿಯಮಗಳು (new rule September 2026) ಆಗಸ್ಟ್ ತಿಂಗಳಾಂತ್ಯ ಅಥವಾ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ (September 1 rule changes) ಜಾರಿಗೆ ಬರಲಿದೆ. ಇವುಗಳಲ್ಲಿ ಕೆಲವು ಜನ ಸಾಮಾನ್ಯರ ಜೇಬಿಗೆ ಹೊರೆಯಾದರೆ ಇನ್ನು ಕೆಲವು ಹೊರೆಯನ್ನು ತಗ್ಗಿಸಲಿದೆ. ಹೀಗಾಗಿ ಸೆಪ್ಟೆಂಬರ್ ತಿಂಗಳ ಆರಂಭದಿಂದ ಏನೆಲ್ಲಾ ಬದಲಾಗಲಿದೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಐಟಿಆರ್ ಗಡುವು
ವ್ಯವಹಾರ ಅಥವಾ ವೃತ್ತಿಪರ ಆದಾಯ ಹೊಂದಿರುವ ತೆರಿಗೆದಾರರು ಆಗಸ್ಟ್ 31ರೊಳಗೆ 2026-27ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನವಾಗಿದೆ. ಸುಗಮ್ ಐಟಿಆರ್-4ನಲ್ಲಿ ನಿಗದಿತ ಷರತ್ತು ಮತ್ತು ಆದಾಯ ಮಿತಿಗಳಿಗೆ ಒಳಪಟ್ಟು ಪೂರ್ವಭಾವಿ ತೆರಿಗೆ ಯೋಜನೆಯನ್ನು ಆಯ್ಕೆ ಮಾಡುವ ಅರ್ಹತೆಯನ್ನು ಪಡೆದಿರುತ್ತಾರೆ.
'ನಿಮ್ಮನ್ನು ನೀವು ದೇವರೆಂದುಕೊಂಡಿದ್ದೀರಾ'? ಆಹಾರ ಸುರಕ್ಷತಾ ಸಂಸ್ಥೆ FDAಯನ್ನು ತರಾಟೆ ತೆಗೆದುಕೊಂಡ ಬಾಂಬೆ ಹೈಕೋರ್ಟ್
ಸುಗಮ್ ಐಟಿಆರ್-4 ಸಾಮಾನ್ಯವಾಗಿ ಐಟಿಆರ್-3, ಐಟಿಆರ್-4 ಅನ್ನು ಬಳಸಲು ಅರ್ಹತೆ ಪಡೆಯದ ವ್ಯವಹಾರ ಅಥವಾ ವೃತ್ತಿಪರ ಆದಾಯ ಹೊಂದಿರುವ ವ್ಯಕ್ತಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬಗಳಿಗೆ ಅನ್ವಯಿಸುತ್ತದೆ.
ವಿಮಾನ ಪ್ರಯಾಣ
ಭಾರತದಿಂದ ಹೊರಡುವ ಅಂತಾರಾಷ್ಟ್ರೀಯ ಪ್ರಯಾಣಿಕರು ಸೆಪ್ಟೆಂಬರ್ 1 ರಿಂದ ವಲಸೆ ಕೌಂಟರ್‌ಗಳಲ್ಲಿ ವಲಸೆ ಕ್ಲಿಯರೆನ್ಸ್ ಸಮಯದಲ್ಲಿ ಬೋರ್ಡಿಂಗ್ ಪಾಸ್‌ಗಳನ್ನು ಸ್ಟ್ಯಾಂಪ್ ಮಾಡಿಸಬೇಕಾಗಿಲ್ಲ ಎಂದು ವಲಸೆ ಬ್ಯೂರೋ ತಿಳಿಸಿದೆ. ಪ್ರಯಾಣಿಕರು ವಲಸೆ ವೇಳೆ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಬರುವ ಎಲೆಕ್ಟ್ರಾನಿಕ್ ಬೋರ್ಡಿಂಗ್ ಪಾಸ್ ಅನ್ನು ತೋರಿಸಬಹುದು. ಭೌತಿಕ ಬೋರ್ಡಿಂಗ್ ಪಾಸ್ ಹೊಂದಿರುವವರು ಸಹ ಇದನ್ನು ಬಳಸಬಹುದು. ಇದಕ್ಕಾಗಿ ವಲಸೆ ಅಧಿಕಾರಿಗಳ ಮುಂದೆ ದಾಖಲೆ ಮುದ್ರೆ ಮಾಡಬೇಕಿಲ್ಲ. ಇದು ವಲಸೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಭೌತಿಕ ಬೋರ್ಡಿಂಗ್ ಪಾಸ್‌ಗಳನ್ನು ಕೊಂಡೊಯ್ಯುವುದು ಮತ್ತು ಸ್ಟ್ಯಾಂಪ್ ಮಾಡುವುದರಿಂದ ಉಂಟಾಗುವ ಅನಗತ್ಯ ಸಮಯವನ್ನು ಉಳಿಸುತ್ತದೆ.
ಇಕೆವೈಸಿ ಗಡುವು
ಎಲ್ ಪಿಜಿ ಗ್ರಾಹಕರು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲದಿದ್ದರೆ ಆಗಸ್ಟ್ 31 ಕೊನೆಯ ಗಡುವಾಗಿದೆ. ಸೆಪ್ಟೆಂಬರ್ ಒಂದರಿಂದ ದೇಶೀಯ ಎಲ್ ಪಿಜಿ ಸಂಪರ್ಕಗಳಿಗೆ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ಅಗತ್ಯವಾಗಿದೆ. ಇದರಿಂದ ಮಾತ್ರ ಗ್ರಾಹಕರು ಎಲ್ ಪಿಜಿಯ ನಿರಂತರ ಸೇವೆಗಳು ಮತ್ತು ಸಬ್ಸಿಡಿ, ದೇಶೀಯ ದರದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಎಫ್ ಡಿ ಹೂಡಿಕೆ
ಪ್ರಮುಖ ಸ್ಥಿರ ಠೇವಣಿಗೆ ಸಮಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಪರಿಷ್ಕೃತ ನಿಯಮಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಇದರ ಅಡಿಯಲ್ಲಿ 3 ಕೋಟಿ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಬೃಹತ್ ಠೇವಣಿಗಳನ್ನು ಹೊಂದಿರುವವರಿಗೆ ಅನ್ವಯವಾಗುವ ಬಡ್ಡಿ ದರಗಳನ್ನು ಬಹಿರಂಗಪಡಿಸಬೇಕಾಗುತ್ತದೆ. ಬ್ಯಾಂಕುಗಳು ಒಂದೇ ದಿನ ಶಾಖೆಗಳಲ್ಲಿ ಒಂದೇ ಠೇವಣಿ ಮೊತ್ತಕ್ಕೆ ಒಂದೇ ದರವನ್ನು ಅನುಸರಿಸಬೇಕು ಎಂದು ಹೇಳಿದೆ. ಇದರಿಂದ ಹೆಚ್ಚಿನ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬಹುದು ಎಂದು ತಿಳಿಸಿದೆ.
ಇಂಧನ ದರ
ಸೆಪ್ಟೆಂಬರ್ 1ರಿಂದ ಸಾಮಾನ್ಯ ಮಾಸಿಕ ದರಗಳು ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಇದರಿಂದ ಎಲ್ ಪಿಜಿ ಸಿಲಿಂಡರ್ ಬೆಲೆ, ವಾಯುಯಾನ ಟರ್ಬೈನ್ ಇಂಧನ ಬೆಲೆ, ಬ್ಯಾಂಕಿಂಗ್ ಅಥವಾ ಎಟಿಎಂಗೆ ಸಂಬಂಧಿಸಿದ ಶುಲ್ಕಗಳಲ್ಲಿ ಬದಲಾವಣೆಗಳು ಆಗಲಿವೆ. ಇವುಗಳು ಪರೋಕ್ಷವಾಗಿ ಜೇಬಿನ ಮೇಲೆ ಹೊರೆಯಾಗಬಹುದು.