Gudibande News: ಕಾಮಗಾರಿ ಬಿಲ್ ಮಾಡಲು 3.5 ಲಕ್ಷ ಲಂಚ: ಗುಡಿಬಂಡೆ ಪಿಡಿಒ ವೀಡಿಯೋ ವೈರಲ್
ತಾಲೂಕಿನ ತಿರುಮಣಿ ಮತ್ತು ಹಂಪಸಂದ್ರ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿ ಯಾಗಿ (ಪಿಡಿಒ) ಕಾರ್ಯ ನಿರ್ವಹಿಸುತ್ತಿರುವ ಶ್ರೀನಿವಾಸ ಮೂರ್ತಿ, ಪಂಚಾಯಿತಿಯಲ್ಲಿ ನಡೆದ ಕಾಮಗಾರಿಗಳ ಬಿಲ್ ಪಾವತಿಸಲು ಗುತ್ತಿಗೆದಾರರಿಂದ ಸುಮಾರು 3 ಲಕ್ಷ 50 ಸಾವಿರ ರೂಪಾಯಿ ಲಂಚ ಪಡೆಯುವಾಗ ಕ್ಯಾಮರಾದಲ್ಲಿ ಸಿಕ್ಕಿಬಿದ್ದಿದ್ದಾರೆ.
ತಿರುಮಣಿ ಗ್ರಾಪಂ ಪಿಡಿಒ ಶ್ರೀನಿವಾಸಮೂರ್ತಿ. -
ಗುಡಿಬಂಡೆ: ಗ್ರಾಮ ಪಂಚಾಯಿತಿ ಕಾಮಗಾರಿಗಳ ಬಿಲ್ ಮಂಜೂರು ಮಾಡಲು ಗುತ್ತಿಗೆ ದಾರರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದ ಅಧಿಕಾರಿಯೊಬ್ಬರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ತಾಲೂಕಿನ ತಿರುಮಣಿ ಮತ್ತು ಹಂಪಸಂದ್ರ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿ ಯಾಗಿ (ಪಿಡಿಒ) ಕಾರ್ಯ ನಿರ್ವಹಿಸುತ್ತಿರುವ ಶ್ರೀನಿವಾಸ ಮೂರ್ತಿ, ಪಂಚಾಯಿತಿಯಲ್ಲಿ ನಡೆದ ಕಾಮಗಾರಿಗಳ ಬಿಲ್ ಪಾವತಿಸಲು ಗುತ್ತಿಗೆದಾರರಿಂದ ಸುಮಾರು 3 ಲಕ್ಷ 50 ಸಾವಿರ ರೂಪಾಯಿ ಲಂಚ ಪಡೆಯುವಾಗ ಕ್ಯಾಮರಾದಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಇದನ್ನೂ ಓದಿ: Bribery Case: ಬಿಜೆಪಿ ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?; ಸ್ವಾಮೀಜಿ ಆಡಿಯೊ ವೈರಲ್!
ಈ ಲಂಚದ ಹಣವನ್ನು ಪಿಡಿಒ ಅವರು ತಮ್ಮ ಖಾಸಗಿ ಕಚೇರಿಯಲ್ಲಿ ಸ್ವೀಕರಿಸುತ್ತಿದ್ದರು ಎನ್ನಲಾಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ, ಅಧಿಕಾರಿ ಹಣ ಪಡೆಯುತ್ತಿರುವ ದೃಶ್ಯ ದ ಜೊತೆಗೆ ಕಾಮಗಾರಿಗಳಿಗೆ ಸಂಬAಧಿಸಿದ ಸರಕಾರಿ ಕಡತಗಳು ಮಂಚದ ಮೇಲೆ ಅಸ್ತವ್ಯಸ್ತವಾಗಿ ಬಿದ್ದಿರುವುದು ಕಂಡುಬAದಿದೆ. ಇದು ಪಂಚಾಯಿತಿ ಕಚೇರಿಯಲ್ಲಿ ನಡೆಯ ಬೇಕಿದ್ದ ಆಡಳಿತಾತ್ಮಕ ಕೆಲಸಗಳು ಅಧಿಕಾರಿಯ ಖಾಸಗಿ ಅಡ್ಡಾದಲ್ಲಿ ನಡೆಯುತ್ತಿರುವು ದಕ್ಕೆ ಸಾಕ್ಷಿಯಾಗಿದೆ.
ವೀಡಿಯೋ ಬಹಿರಂಗಗೊಂಡು ಸದ್ದು ಮಾಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪಿಡಿಒ ಶ್ರೀನಿವಾಸ ಮೂರ್ತಿ ಅವರು ಸದ್ಯ ಕಚೇರಿಗೂ ಬಾರದೆ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಫೋನ್ ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿದು ಬಂದಿದೆ.
ಅಧಿಕಾರಿಯ ಈ ಭ್ರಷ್ಟಾಚಾರದ ವಿರುದ್ಧ ತಿರುಮಣಿ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲಾಡಳಿತವು ತಕ್ಷಣವೇ ಮಧ್ಯಪ್ರವೇಶಿಸಿ, ಭ್ರಷ್ಟ ಅಧಿಕಾರಿ ಯನ್ನು ಸೇವೆಯಿಂದ ಅಮಾನತುಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದ್ದಾರೆ.