PBKS vs RR: ಟೇಬಲ್ ಟಾಪರ್ ಪಂಜಾಬ್ ಕಿಂಗ್ಸ್‌ಗೆ ಶಾಕ್ ನೀಡಿದ ರಾಜಸ್ಥಾನ್ ರಾಯಲ್ಸ್!
PBKS vs RR Highlights: ಯಶಸ್ವಿ ಜೈಸ್ವಾಲ್ ಹಾಗೂ ಡೊನೊವಾನ್ ಫೆರೆರಾ ಅವರ ಅರ್ಧಶತಕಗಳ ಬಲದಿಂದ ರಾಜಸ್ಥಾನ್ ರಾಯಲ್ಸ್ ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಅಜೇಯ ಓಟಕ್ಕೆ ಬ್ರೇಕ್ ಹಾಕಿದೆ. ಈ ಪಂದ್ಯದಲ್ಲಿ ಆರ್‌ಆರ್ ಆರು ವಿಕೆಟ್‌ಗಳಿಂದ ಗೆದ್ದು ಬೀಗಿತು. ಈ ಪಂದ್ಯದ ಫಲಿತಾಂಶದ ಹೊರತಾಗಿಯೂ ಪಾಯಿಂಟ್ಸ್ ಟೇಬಲ್‌ನಲ್ಲಿ ಈ ಎರಡೂ ತಂಡಗಳು ತಮ್ಮ-ತಮ್ಮ ಸ್ಥಾನದಲ್ಲಿಯೇ ಉಳಿದಿವೆ.
ಪಂಜಾಬ್ ಕಿಂಗ್ಸ್ ಎದುರು ರಾಜಸ್ಥಾನ್‌ಗೆ ಜಯ. -
ಚಂಡೀಗಢ: ಯಶಸ್ವಿ ಜೈಸ್ವಾಲ್ ಹಾಗೂ ಡೊನೊವಾನ್ ಫೆರೆರಾ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ರಾಜಸ್ಥಾನ್ ರಾಯಲ್ಸ್ ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ. ರಿಯಾನ್ ಪರಾಗ್ ನಾಯಕತ್ವದ ರಾಜಸ್ಥಾನ್ ತಂಡ, 6 ವಿಕೆಟ್‌ಗಳಿಂದ ಪಂಜಾಬ್ ತಂಡವನ್ನು ಮಣಿಸಿತು. ಆ ಮೂಲಕ ಟೂರ್ನಿಯ ಪ್ಲೇಆಫ್ಸ್‌ಗೆ ಇನ್ನಷ್ಟು ಸನಿಹವಾಗಿದೆ. ಅಂದ ಹಾಗೆ ಈ ಪಂದ್ಯದ ಫಲಿತಾಂಶದ ಹೊರತಾಗಿಯೂ ಪಂಜಾಬ್ 13 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನದಲ್ಲಿ ಹಾಗೂ ಆರ್‌ಆರ್ ಮೂರನೇ ಸ್ಥಾನದಲ್ಲಿ ಮುಂದುವರಿದಿವೆ.
ಮಂಗಳವಾರ ಇಲ್ಲಿನ ಮಹಾರಾಜ ಯಧವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ್ದ 223 ರನ್‌ಗಳ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ತಂಡ, 19.2 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 228 ರನ್ ಗಳಿಸಿ ಗೆಲುವಿನ ದಡ ಸೇರಿತು. ಆರ್‌ಆರ್ ತಂಡದ ಚೇಸಿಂಗ್‌ನಲ್ಲಿ ಎಲ್ಲಾ ಬ್ಯಾಟ್ಸ್‌ಮನ್‌ಗಳು ಕೂಡ ಉಪಯುಕ್ತ ಕಾಣಿಕೆ ನೀಡಿದರು.
RCB vs DC ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಜತೆ ಆತ್ಮೀಯ ಸಂಭಾಷಣೆ ನಡೆಸಿದ್ದ ಅಂಪೈರ್ ಯಾರು ಗೊತ್ತೆ?
ಆರಂಭಿಕ ವೈಭವ್ ಸೂರ್ಯವಂಶಿ ಪವರ್‌ಪ್ಲೇನಲ್ಲಿ 16 ಎಸೆತಗಳಲ್ಲಿ 43 ರನ್ ಗಳಿಸಿ ಆರ್‌ಆರ್‌ಗೆ ಭರ್ಜರಿ ಆರಂಭ ಕೊಟ್ಟು ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಧ್ರುವ್ ಜುರೆಲ್ 16 ಕ್ಕೆ ಸೀಮಿತರಾದರು. ಆದರೆ, ಒಂದು ತುದಿಯಲ್ಲಿ ದೀರ್ಘವಾಗಿ ಬ್ಯಾಟ್ ಮಾಡಿದ್ದ ಯಶಸ್ವಿ ಜೈಸ್ವಾಲ್ 27 ಎಸೆತಗಳಲ್ಲಿ 51 ರನ್ ಗಳಿಸಿ ತಂಡದ ಮೊತ್ತವನ್ನು 120ರ ಗಡಿ ದಾಟಿಸಿ ವಿಕೆಟ್ ಒಪ್ಪಿಸಿದರು. ನಾಯಕ ರಿಯಾನ್ ಪರಾಗ್ 29 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು.
𝙁𝙚𝙧𝙧𝙚𝙞𝙧𝙖 𝙁𝙞𝙧𝙚 💥
— IndianPremierLeague (@IPL) April 28, 2026
A brilliant effort in the run chase from the @rajasthanroyals batter to earn the Player of the Match award 🔝👏
Scorecard ▶️ https://t.co/fBbdVnExPZ#TATAIPL | #KhelBindaas | #PBKSvRR pic.twitter.com/qSx0QCEGMI
ಆರ್‌ಆರ್‌ಗೆ ಗೆಲುವು ತಂದುಕೊಟ್ಟ ಫೆರೆರಾ-ಶುಭಮ್
ಯುಜ್ವೇಂದ್ರ ಚಹಲ್ ಮಧ್ಯಮ ಓವರ್‌ಗಳಲ್ಲಿ ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್ ಹಾಗೂ ರಿಯಾನ್ ಪರಾಗ್ ಅವರನ್ನು ಔಟ್ ಮಾಡಿ ಪಂಜಾಬ್ ತಂಡದ ಕಮ್‌ಬ್ಯಾಕ್ ನೆರವು ನೀಡಿದ್ದರು. ಆದರೆ, ಕೊನೆಯಲ್ಲಿ ಡೊನೊವಾನ್ ಪೆರೆರಾ ಹಾಗೂ ಶುಭಮ್ ದುಬೇ ಅವರನ್ನು ಕಟ್ಟಿ ಹಾಕುವಲ್ಲಿ ಪಂಜಾಬ್ ಬೌಲರ್‌ಗಳು ವಿಫಲರಾದರು. ಡೊನೊವಾನ್ ಫೆರೆರಾ ಸ್ಪೋಟಕ ಬ್ಯಾಟ್ ಮಾಡಿ 26 ಎಸೆತಗಳಲ್ಲಿ 52 ರನ್ ಹಾಗೂ ಶುಭಮ್ ದುಬೇ 12 ಎಸೆತಗಳಲ್ಲಿ 31 ರನ್‌ಗಳ ಜೊತೆಗೆ ಇವರಿಬ್ಬರೂ 32 ಎಸೆತಗಳಲ್ಲಿ 77 ರನ್‌ಗಳ ಜೊತೆಯಾಟವನ್ನು ಆಡಿ ರಾಜಸ್ಥಾನ್ ತಂಡವನ್ನು ಗೆಲ್ಲಿಸಿದರು.
A SIX to seal the 6️⃣th win of the season! 👊#RR claim two crucial points, ending #PBKS’ unbeaten streak in New Chandigarh 👏
— IndianPremierLeague (@IPL) April 28, 2026
Scorecard ▶️ https://t.co/fBbdVnExPZ#TATAIPL | #KhelBindaas | #PBKSvRR | @rajasthanroyals pic.twitter.com/YpTTgGwOfo
222 ರನ್ ಕಲೆ ಹಾಕಿದ್ದ ಪಂಜಾಬ್ ಕಿಂಗ್ಸ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ರಾಜಸ್ಥಾನ್ ರಾಯಲ್ಸ್ ತಂಡ, ಪ್ರಭ್‌ಸಿಮ್ರಾನ್ ಸಿಂಗ್ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 222 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ರಾಜಸ್ಥಾನ್ ರಾಯಲ್ಸ್‌ಗೆ 223 ರನ್‌ಗಳ ಗುರಿಯನ್ನು ನೀಡಿತ್ತು.
Innings Break!
— IndianPremierLeague (@IPL) April 28, 2026
A power-packed finish from Marcus Stoinis takes #PBKS to 2⃣2⃣2⃣/4 🔥💪
Will #RR chase this down? Or will PBKS continue their winning run? 🤔
Scorecard ▶️ https://t.co/fBbdVnF5Fx#TATAIPL | #KhelBindaas | #PBKSvRR pic.twitter.com/WaqdZxibnC
ಇನಿಂಗ್ಸ್ ಆರಂಭಿಸಿದ ಪ್ರಿಯಾಂಶ್ ಆರ್ಯ, ಕಳೆದ ಪಂದ್ಯದಂತೆ ಈ ಹಣಾಹಣಿಯಲ್ಲಿಯೂ 11 ಎಸೆತಗಳಲ್ಲಿ 29 ರನ್ ಗಳಿಸಿ ಪಡೆದಿದ್ದ ಉತ್ತಮ ಆರಂಭದಲ್ಲಿ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಇವರನ್ನು ಜೋಫ್ರಾ ಆರ್ಚರ್ ಬುದ್ದಿವಂತಿಕೆಯಿಂದ ಔಟ್ ಮಾಡಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಕೂಪರ್ ಕನೋಲಿ ಅವರು 14 ಎಸೆತಗಳಲ್ಲಿ 30 ರನ್ ಗಳಿಸುವ ಜೊತೆಗೆ ಪ್ರಭ್‌ಸಿಮ್ರನ್ ಜೊತೆಗೆ 59 ರನ್ ಜೊತೆಯಾಟವನ್ನು ಆಡಿ, ಪಂಜಾಬ್‌ಗೆ ಉತ್ತಮ ಆರಂಭ ನೀಡಿದ ಬಳಿಕ ವಿಕೆಟ್ ಒಪ್ಪಿಸಿದರು.
ವೈಭವ್ ಸೂರ್ಯವಂಶಿ ಬ್ಯಾಟ್‌ನಲ್ಲಿ 'AI ಚಿಪ್'? ಕ್ಯಾತೆ ತೆಗೆದ ಪಾಕಿಸ್ತಾನಿ ತಜ್ಞ!
281.82ರ ಸ್ಟ್ರೈಕ್ ರೇಟ್‌ನಲ್ಲಿ 62 ರನ್ ಚಚ್ಚಿದ ಸ್ಟೋಯ್ನಿಸ್
27 ಎಸೆತಗಳಲ್ಲಿ 30 ರನ್ ಗಳಿಸಿದ ಬಳಿಕ ನಾಯಕ ಶ್ರೇಯಸ್ ಅಯ್ಯರ್ ವಿಕೆಟ್ ಒಪ್ಪಿಸಿದರು. ಇದಕ್ಕೂ ಮುನ್ನ ಪ್ರಭ್‌ಸಿಮ್ರನ್ ಸಿಂಗ್ ಸ್ಪೋಟಕ ಬ್ಯಾಟ್ ಮಾಡಿ 44 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 59 ರನ್ ಗಳಿಸಿ ತಂಡದ ಮೊತ್ತವನ್ನು 150ರ ಸನಿಹ ತಂದು ಪೆವಿಲಿಯನ್‌ಗೆ ಮರಳಿದರು. ಇದಾದ ಬಳಿಕ ಡೆತ್ ಓವರ್‌ಗಳಲ್ಲಿ ಅಬ್ಬರಿಸಿದ ಮಾರ್ಕಸ್ ಸ್ಟೋಯ್ನಿಸ್, ಕೇವಲ 22 ಎಸೆತಗಳಲ್ಲಿ ಬರೋಬ್ಬರಿ 6 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 62 ರನ್ ಚಚ್ಚಿದರು. ಆ ಮೂಲಕ ತಂಡದ ಮೊತ್ತವನ್ನು 220ರ ಗಡಿ ದಾಟಿಸಿದರು. ಇದರಲ್ಲಿ ಸ್ಟೋಯ್ನಿಸ್ ಅವರ 281.82ರ ಸ್ಟ್ರೈಕ್ ರೇಟ್ ಆರ್‌ಆರ್ ಬೌಲರ್‌ಗಳಿಗೆ ಭೀತಿ ಹುಟ್ಟಿಸಿತು.