ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bribery Case: ಬಿಜೆಪಿ ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?; ಸ್ವಾಮೀಜಿ ಆಡಿಯೊ ವೈರಲ್!

ಶಿರಹಟ್ಟಿ ತಾಲೂಕಿನ ಆದರಹಳ್ಳಿ ಕುಮಾರ ಮಹಾರಾಜ ಸ್ವಾಮೀಜಿ ಹಾಗೂ ಬಿಜೆಪಿ ಕಾರ್ತಕರ್ತರೊಬ್ಬರು ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗಿದೆ. ತಮ್ಮದೇ ಸಮುದಾಯದ ಶಾಸಕರ ವಿರುದ್ಧ ಬಂಜಾರ ಸಮಾಜದ ಸ್ವಾಮೀಜಿ ಷಡ್ಯಂತ್ರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?; ಆಡಿಯೊ ವೈರಲ್

ಶಾಸಕ ಚಂದ್ರು ಲಮಾಣಿ ಮತ್ತು ಆದರಹಳ್ಳಿ ಕುಮಾರ ಮಹಾರಾಜ ಸ್ವಾಮೀಜಿ. -

Prabhakara R
Prabhakara R Feb 22, 2026 9:19 PM

ಗದಗ: ಲಂಚ ಸ್ವೀಕಾರ ಪ್ರಕರಣದಲ್ಲಿ (Bribery Case) ಅರೆಸ್ಟ್‌ ಆಗಿರುವ ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ (Chandru Lamani) ಸದ್ಯ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿ ಸ್ಫೋಟಕ ಆಡಿಯೊವೊಂದು ವೈರಲ್‌ ಆಗಿದ್ದು, ಶಾಸಕನನ್ನು ಲಂಚ ಪ್ರಕರಣದಲ್ಲಿ ಸಿಲುಕಿಸಲು ಸ್ವಾಮೀಜಿಯೊಬ್ಬರ ಕೈವಾಡ ಇರುವ ಆರೋಪ ಕೇಳಿಬಂದಿದೆ. ಶಿರಹಟ್ಟಿ ತಾಲೂಕಿನ ಆದರಹಳ್ಳಿ ಕುಮಾರ ಮಹಾರಾಜ ಸ್ವಾಮೀಜಿ ಹಾಗೂ ಬಿಜೆಪಿ ಕಾರ್ತಕರ್ತರೊಬ್ಬರು ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗಿದೆ. ತಮ್ಮದೇ ಸಮುದಾಯದ ಶಾಸಕರ ವಿರುದ್ಧ ಬಂಜಾರ ಸಮಾಜದ ಸ್ವಾಮೀಜಿ ಷಡ್ಯಂತ್ರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಆಡಿಯೊದಲ್ಲಿ ಏನಿದೆ?

ಇವನ ಧೈರ್ಯ ಏನು ಇರಬಹುದು?, ಮುಂದೆ ಇವನಿಗೆ ಟಿಕೆಟ್ ತಪ್ಪಿಸಲೇಬೇಕು ರೀ ಎಂದು ಸ್ವಾಮೀಜಿ ಹೇಳುತ್ತಾರೆ. ಇದಕ್ಕೆ ವ್ಯಕ್ತಿ, ತಾನೇ ಮಾಡಿಕೊಳ್ಳುತ್ತಾನೆ ಬಿಡ್ರಿ ಎನ್ನುತ್ತಾನೆ.

ಆಗ ಸ್ವಾಮೀಜಿ, ಅದನ್ನು ಮಾಡದೆ ನನಗೆ ಸಮಾಧಾನವಿಲ್ಲ. ಇಲ್ಲದಿದ್ದರೆ ನಾಳೆ ಸಮಸ್ಯೆ ಆಗುತ್ತೆ, ನಾವು ದೊಡ್ಡ ತೊಂದರೆ ಒಳಗೆ ಬೀಳುತ್ತೇವೆ. ಈಗ ಐದು ವರ್ಷದಲ್ಲಿ ಮೂರು ವರ್ಷ ಹೋಗಿದೆ, ಇನ್ನು ಎರಡು ವರ್ಷವಿದೆ. ಸಣ್ಣ ಹುಡುಗರೂ ಬೈಯ್ಯುತ್ತಾರೆ, ಯಾವ ರೋಡ್ ಶುದ್ಧ ಇವೆ ಹೇಳ್ರಿ, ರೋಡ್​ಗೆ ಒಂದು ಹಿಡಿ ಮಣ್ಣು ಹಾಕಿಲ್ಲ , ಕಾಂಕ್ರೀಟ್ ಬೇಡ, ಡಾಂಬರು ಬೇಡ ಮಣ್ಣು ಆದರೂ ಹಾಕಬೇಕಿತ್ತು ಎಂದಿದ್ದಾರೆ.

ಈ ವೇಳೆ ವ್ಯಕ್ತಿ ಮಣ್ಣಿನ ಬಿಲ್ ತೆಗೆದಿರುತ್ತಾರೆ ಅಲ್ಲ ರೀ ಎನ್ನುತ್ತಾನೆ. ಅದಕ್ಕೆ ಸ್ವಾಮೀಜಿ, ಮಣ್ಣು ಹಾಕಿದ್ದೇವೆ ಅಂತ ಹಣ ತೆಗೆದುಕೊಳ್ಳುತ್ತಾರೆ ಇವರು. ಬೇರೆ ಸೂತ್ರ ಹಮ್ಮಿದ್ದೇವೆ.‌ ನಾವು ನೀವು ಕೂತು ಮಾತಾಡೋಣ ಎಂದು ಸ್ವಾಮೀಜಿ ಹೇಳುತ್ತಾರೆ.

ಸೋನು ಲಮಾಣಿ ಅಂತ ನಮ್ಮಲ್ಲಿ ದೊಡ್ಡ ಲೀಡರ್ ಇದ್ದಾನೆ. ಅವನಿಗೆ ಬೇರೆ ಬೇರೆ ವೈಯಕ್ತಿಕ ದಂಧೆಗಳಿವೆ. ಪಪ್ಪಿ ಅವರು ಪಾರ್ಟ್ನರ್ ಇವರು. ಕ್ಯಾಸಿನೋ ಇಂತಹವುಗಳಲ್ಲಿ ಇದ್ದಾರೆ. ಅವರು ನಮ್ಮ ಭಕ್ತರು.‌ ಅವರಿಗೆ ಶಿರಾ ಶಾಸಕ ಹೀಗೆ ಮಾಡಿದ್ದ.‌ ಅವರಿಗೆ ಸೂತ್ರದ ಗಾಳದಲ್ಲಿ ಸಿಲುಕಿಸಿದ್ದ. ಬೆಂಗಳೂರು ಟೀಂ ಇದು, ಕೆಲಸ ಕೊಡ್ರಿ ಅಂತ ಬರ್ತಾರೆ ಅವರು. ನೋಟಿಗೆ ಕೆಮಿಕಲ್ ಹಚ್ಚಿ ಐಟಿಗೆ ಸಿಲುಕಿಸಿಬಿಟ್ಟಿದ್ದಾರೆ. ನಾಳೆ ಕುಂತು ಮಾತಾಡೋಣ ಬನ್ನಿ ಎಂದು ಹೇಳಿರುವುದು ಆಡಿಯೊದಲ್ಲಿದೆ.

ಈ ಆಡಿಯೊ ಇದೀಗ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದ್ದು, ಡಾ. ಚಂದ್ರು ಲಮಾಣಿ ಅವರು ಲೋಕಾ ಬಲೆಗೆ ಬೀಳಲು ಆದರಹಳ್ಳಿ ಕವಿ ಮಠದ ಕುಮಾರ ಮಹಾರಾಜ ಸ್ವಾಮೀಜಿ ಮತ್ತು ಆಡಿಯೊದಲ್ಲಿ ಮಾತನಾಡಿರುವ ವ್ಯಕ್ತಿ ಸಂಚು ರೂಪಿಸಿದ್ದರಾ ಎಂಬ ಪ್ರಶ್ನೆ ಮೂಡಿದೆ.

ಸ್ವಾಮೀಜಿ ಸ್ಪಷ್ಟನೆ ಏನು?

ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ಆರೋಪ ಕೇಳಿಬಂದ ವಿಚಾರಕ್ಕೆ ಆದರಹಳ್ಳಿ ಗವಿಮಠದ ಕುಮಾರ ಮಹಾರಾಜ ಸ್ವಾಮಿಜಿ ಸ್ಪಷ್ಟನೆ ನೀಡಿದ್ದಾರೆ.

ಆಡಿಯೊದಲ್ಲಿ ನಾನು ಮಾತನಾಡಿದ್ದು ಸತ್ಯ. ಆದರೆ ಲೋಕಾಯುಕ್ತ ಪ್ರಕರಣಕ್ಕೂ, ನನಗೂ ಸಂಬಂಧವಿಲ್ಲ. ಮಾತನಾಡಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳಲ್ಲ. ಆಗ ಜಗಳದ ಸಮಯದಲ್ಲಿ ಶಾಸಕರು ಒತ್ತಡ ಕೊಟ್ಟಿದ್ದಕ್ಕೆ ಸಿಟ್ಟಿನಲ್ಲಿ ಮಾತನಾಡಿದ್ದೇನೆ ನಿಜ. ಆದರೆ ಈ ಪ್ರಕರಣಕ್ಕೆ ನನಗೂ ಸಂಬಂಧ ಇಲ್ಲ ಎಂದಿದ್ದಾರೆ.

ಲಂಚ ಪ್ರಕರಣ; ಶಾಸಕ ಚಂದ್ರು ಲಮಾಣಿಗೆ ಮಾ.2ರವರೆಗೆ ನ್ಯಾಯಾಂಗ ಬಂಧನ

ಮೈಸೂರು ಕಾರ್ಯಕ್ರಮ ನಂತರ ಗದಗಕ್ಕೆ ಬಂದು ಪ್ರೆಸ್ ಮೀಟ್ ಮಾಡಿ ಹೇಳುತ್ತೇನೆ. ನಾನು ಭಾಗಿಧಾರ ಇದ್ದೀನಿ ಎಂದರೆ ನನ್ನ ಎರಡೂ ಮೊಬೈಲ್ ತೆಗೆದುಕೊಂಡು ಚೆಕ್ ಮಾಡಿ ಅಂತ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಭಕ್ತರು ಭಯ ಪಡುವ ಅಗತ್ಯ ಇಲ್ಲ ಎಂದಿದ್ದಾರೆ.