ಪ್ರೇಯಸಿಯನ್ನು ಕೊಂದು ಶವ ಕತ್ತರಿಸಿ ವಿಲೇವಾರಿ ಮಾಡಿದ ಪ್ರಿಯಕರ
ಮೊಬೈಲ್ ಚಾಟ್ ವಿಚಾರಕ್ಕೆ ಸಂಬಂಧಿಸಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ವಿವಾಹಿತ ಮಹಿಳೆಯನ್ನು ಕೊಂದ ಪ್ರಿಯಕರ ಬಳಿಕ ಆಕೆಯ ಶವವನ್ನು ಕತ್ತರಿಸಿ ವಿವಿಧ ಭಾಗಗಳಲ್ಲಿ ಎಸೆದಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ.
ಸಂಗ್ರಹ ಚಿತ್ರ -
ಉತ್ತರಪ್ರದೇಶ: ವಿವಾಹಿತ ಮಹಿಳೆಯೊಬ್ಬರನ್ನು ಪ್ರಿಯಕರ ಕೊಂದು ತುಂಡುಗಳಾಗಿ ಕತ್ತರಿಸಿ ಭಾಗಗಳನ್ನು ವಿವಿಧ ಸ್ಥಳಗಳಲ್ಲಿ ಎಸೆದಿರುವ ಘಟನೆ ಉತ್ತರಪ್ರದೇಶ (Uttar pradesh) ಜೌನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ರೇಷ್ಮಾ ಖಾನ್ ಅಲಿಯಾಸ್ ಸನಾ (38) ಮೃತ ಮಹಿಳೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಗುಜರಾತ್‌ನ ಹೇಮಲ್ ಖಖಾರಿಯಾ ಅಲಿಯಾಸ್ ದಿಲೀಪ್ (42) ನನ್ನು ಭಾನುವಾರ ರಾತ್ರಿ ಬಂಧಿಸಲಾಗಿದೆ. ರೇಷ್ಮಾ ಮತ್ತು ಹೇಮಲ್ ನಡುವೆ ಮೊಬೈಲ್ ಚಾಟ್ (Mobile chat) ವಿಚಾರಕ್ಕೆ ಸಂಬಂಧಿಸಿ ಜಗಳವಾಗಿದ್ದು, ಇದು ಕೊಲೆಯಲ್ಲಿ (UP crime) ಅಂತ್ಯವಾಗಿದೆ. ಈ ಕುರಿತು ಮಡಿಯಾಹು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ರೇಷ್ಮಾ ಮತ್ತು ಹೇಮಲ್ ನಡುವೆ ಮೊಬೈಲ್ ಚಾಟ್ ವಿಚಾರದಲ್ಲಿ ಜಗಳವಾಗಿದ್ದು, ಈ ನಡುವೆ ರೇಷ್ಮಾಳನ್ನು ಕೊಂದ ಹೇಮಲ್ ಬಳಿಕ ಆಕೆಯ ಶವವನ್ನು ತುಂಡರಿಸಿ ಶವವನ್ನು ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾನೆ. ಆರೋಪಿ ಹೇಮಲ್ ಖಖಾರಿಯಾ ಅಲಿಯಾಸ್ ದಿಲೀಪ್ ನನ್ನು ಭಾನುವಾರ ರಾತ್ರಿ ಪೊಲೀಸ್ ಎನ್‌ಕೌಂಟರ್ ಬಳಿಕ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
Horrific road accident: ಭೀಕರ ರಸ್ತೆ ಅಪಘಾತ: ಲಾರಿಗೆ ಬಸ್ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು
ಆರೋಪಿಯು ರೇಷ್ಮಾಳನ್ನು ವಾರಣಾಸಿಯ ಬಬತ್‌ಪುರದಿಂದ ಮಡಿಯಾಹು ಪೊಲೀಸ್ ಠಾಣೆ ಪ್ರದೇಶದ ಟೀಚರ್ಸ್ ಕಾಲೋನಿಯಲ್ಲಿರುವ ವಸತಿ ನಿಲಯಕ್ಕೆ ಕರೆದುಕೊಂಡು ಬಂದಿದ್ದನು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮೊಬೈಲ್ ಫೋನ್ ಚಾಟ್ ವಿಚಾರದಲ್ಲಿ ಜಗಳವಾಗಿದೆ. ಈ ಸಂದರ್ಭದಲ್ಲಿ ತೀವ್ರವಾಗಿ ಕೋಪಗೊಂಡ ಹೇಮಲ್ ನಿದ್ದೆ ಮಾಡುತ್ತಿದ್ದ ರೇಷ್ಮಾಳ ಮೇಲೆ ದಾಳಿ ನಡೆಸಿ, ಚಾಕುವಿನಿಂದ ಆಕೆಯ ಕತ್ತು ಸೀಳಿದ್ದಾನೆ. ಬಳಿಕ ಆಕೆಯ ದೇಹವನ್ನು ಕತ್ತರಿಸಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಎಸೆದಿದ್ದಾನೆ ಎಂದು ವಿಚಾರಣೆ ವೇಳೆ ಹೇಮಲ್ ತಿಳಿಸಿರುವುದಾಗಿ ಸ್ಟೇಷನ್ ಹೌಸ್ ಅಧಿಕಾರಿ ದೀಪೇಂದ್ರ ಸಿಂಗ್ ಹೇಳಿದ್ದಾರೆ.
.ಮಾರುಕಟ್ಟೆಯಿಂದ ಖರೀದಿ ಮಾಡಿದ ಕಪ್ಪು ಪಾಲಿಥಿನ್ ಚೀಲಗಳಲ್ಲಿ ಮೃತ ಮಹಿಳೆಯ ದೇಹದ ಭಾಗಗಳನ್ನು ತುಂಬಿ ವಿಲೇವಾರಿ ಮಾಡಿದ್ದಾನೆ. ಭಾನುವಾರ ಬೆಳಗ್ಗೆ ಮಡಿಯಾಹು ಪೊಲೀಸ್ ಠಾಣೆ ಪ್ರದೇಶದ ರಾಣಿಪುರ ಬೈಪಾಸ್ ಬಳಿಯ ಪೊದೆಗಳಲ್ಲಿ ಮಹಿಳೆಯ ವಿರೂಪಗೊಂಡ ಶವ ಪತ್ತೆಯಾಗಿದ್ದು, ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ತನಿಖೆ ಪ್ರಾರಂಭಿಸಿದ ಪೊಲೀಸರು ರಾಮನಗರ ಬ್ಲಾಕ್ ಗೇಟ್ ಬಳಿ ಖಖಾರಿಯಾನನ್ನು ತಡೆದರು. ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಗುಂಡಿನ ದಾಳಿ ನಡೆಸಿದ್ದಾರೆ. ಎನ್‌ಕೌಂಟರ್‌ನಲ್ಲಿ ಗಾಯಗೊಂಡ ಆತನನ್ನು ಭಾನುವಾರ ಮಧ್ಯರಾತ್ರಿ ಬಂಧಿಸಲಾಗಿದೆ.
ಆತ ಮೃತದೇಹದ ತುಂಡುಗಳನ್ನು ರಾಣಿಪುರ ಬೈಪಾಸ್, ರಾಮನಗರ ಬ್ಲಾಕ್ ತಿರುವಿನ ಬಳಿಯ ಕಲ್ವರ್ಟ್ ಬಳಿ ಎಸೆದಿರುವುದಾಗಿ ಹೇಳಿದ್ದಾನೆ. ಆರೋಪಿಯಿಂದ 32 ಬೋರ್ ದೇಶೀಯ ನಿರ್ಮಿತ ಪಿಸ್ತೂಲ್, ಎರಡು ಜೀವಂತ ಕಾರ್ಟ್ರಿಡ್ಜ್‌ಗಳು, ಎರಡು ಬಳಕೆಯಾದ ಕಾರ್ಟ್ರಿಡ್ಜ್, ಕೊಲೆಗೆ ಬಳಸಲಾದ ಚಾಕು, ಮೊಬೈಲ್ ಫೋನ್ ಮತ್ತು ಮೋಟಾರ್ ಸೈಕಲ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ತನಿಖೆಯನ್ನು ಮುಂದುವರಿಸಲಾಗಿದೆ ಎಂದು ದೀಪೇಂದ್ರ ಸಿಂಗ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಆಂಧ್ರ ಸಾರಿಗೆ ಸಂಸ್ಥೆಯ ಬಸ್ ಭೀಕರ ಅಪಘಾತ; ಇಬ್ಬರು ಸಾವು
ಕಳೆದ ಏಪ್ರಿಲ್‌ನಲ್ಲಿ ಇಂತಹ ಇನ್ನೊಂದು ಘಟನೆ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ನಡೆದಿತ್ತು. 19 ವರ್ಷದ ಮಹಿಳೆಯೊಬ್ಬರನ್ನು ಕೊಲೆ ಮಾಡಲಾಗಿತ್ತು. ಬಾರಯೋನ್ ದಿಹ್ ಗ್ರಾಮದಲ್ಲಿ ಗುಡಿಸಲಿನ ಬಳಿ ಮಹಿಳೆಯ ಶವ ಇದ್ದದ್ದು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಮಾಹಿತಿ ಪ್ರಕಾರ 2023ರಿಂದ ಉತ್ತರ ಪ್ರದೇಶದಲ್ಲಿ ಸುಮಾರು 7.93 ಲಕ್ಷ ಅಪರಾಧ ಪ್ರಕರಣಗಳು ದಾಖಲಾಗಿವೆ.