ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

CM DK Shivakumar: ಕಾನೂನು ಚೌಕಟ್ಟಿನಲ್ಲಿ ಬರಗಾಲ ಪರಿಸ್ಥಿತಿ ಪರಾಮರ್ಶೆ, ಬರ ಪರಿಹಾರಕ್ಕೆ ಚಿಂತನೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕಲಬುರಗಿ ವಿಭಾಗದ ಪ್ರಗತಿ ಹಾಗೂ ಬರ ಪರಿಸ್ಥಿತಿಯ ಅವಲೋಕನಕ್ಕಾಗಿ ಆಗಮಿಸಿರುವ ಮುಖ್ಯ ಮಂತ್ರಿಗಳು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಸ್ವತಃ ಎಲ್ಲಾ ಜಿಲ್ಲೆಗಳ ಪ್ರವಾಸ ಕೈಗೊಂಡು ಜನರ ಹಾಗೂ ಜನಪ್ರತಿನಿಧಿಗಳ ಭೇಟಿ ಮಾಡಿ ಸ್ಥಳೀಯ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸುತ್ತಿದ್ದೇನೆ.

ಬರ ಪರಿಹಾರಕ್ಕೆ ಚಿಂತನೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

-

Profile
Ashok Nayak Jul 7, 2026 11:11 AM

ರೈತರ ಸಾಲ ಮನ್ನಾ ಕುರಿತು ಸಮಗ್ರ ಪರಿಶೀಲನೆ

ಜನರ ಸಮಸ್ಯೆ ನಿವಾರಣೆಗೆ 'ಪ್ರಜಾಸೇವೆ' ಇಲಾಖೆ ಆರಂಭ

ಕಲಬುರಗಿ: ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯನ್ನು ಎದುರಿಸಲು ಕಾನೂನು ಚೌಕಟ್ಟಿ ನೊಳಗೆ ಬರಗಾಲ ಘೋಷಣೆ ಮಾಡುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಲಿದೆ. ಆದರೆ, ಬರ ಪರಿಹಾರ ಘೋಷಣೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(Chief Minister D K Shivakumar) ಭರವಸೆ ನೀಡಿದರು.

ಕಲಬುರಗಿ ವಿಭಾಗದ ಪ್ರಗತಿ ಹಾಗೂ ಬರ ಪರಿಸ್ಥಿತಿಯ ಅವಲೋಕನಕ್ಕಾಗಿ ಆಗಮಿಸಿರುವ ಮುಖ್ಯ ಮಂತ್ರಿಗಳು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಸ್ವತಃ ಎಲ್ಲಾ ಜಿಲ್ಲೆಗಳ ಪ್ರವಾಸ ಕೈಗೊಂಡು ಜನರ ಹಾಗೂ ಜನಪ್ರತಿನಿಧಿಗಳ ಭೇಟಿ ಮಾಡಿ ಸ್ಥಳೀಯ ಪರಿಸ್ಥಿತಿ ಯನ್ನು ಖುದ್ದಾಗಿ ಪರಿಶೀಲಿಸುತ್ತಿದ್ದೇನೆ. ಕಲಬುರಗಿ ವಿಭಾಗದ ಉನ್ನತಾಧಿಕಾರಿಗಳ ಸಭೆಯ ಬಳಿಕ, ಮುಂದಿನ ಎರಡು-ಮೂರು ದಿನಗಳಲ್ಲಿ ಬೆಳಗಾವಿ ವಿಭಾಗಕ್ಕೂ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಾಮರ್ಶೆ ನಡೆಸಲಾಗುವುದು ಎಂದು ತಿಳಿಸಿದರು.

ಕೆಲವು ಕಡೆಗೆ ವಿಪರೀತ ಮಳೆ ಬರುತ್ತಿದೆ. ಇನ್ನು ಕೆಲವಡೆಗೆ ಮಳೆಯ ಕೊರತೆ ಇದೆ. ಹೀಗಾಗಿ, ಎಲ್ಲಾ ವಿಭಾಗೀಯ ಮಟ್ಟದಲ್ಲಿನ ಪರಿಸ್ಥಿತಿ ಗಮನಿಸಿ, ಬರಗಾಲ ಘೋಷಣೆ ಮಾಡಬೇಕು ಅಥವಾ ಇನ್ನೇ ನಾದರೂ ಕ್ರಮಕೈಗೊಳ್ಳಬೇಕೋ ಎನ್ನುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: Kalaburagi Transport App: ಕೈಕೊಟ್ಟ ನಮ್ಮ ಕಲಬುರಗಿ ಸಾರಿಗೆ App

ಸಾಲ ಮನ್ನಾ ಬಗ್ಗೆ ತಜ್ಞರೊಂದಿಗೆ ಚರ್ಚೆ

ರಾಜ್ಯದ ಕೆಲವಡೆ ಮಳೆಯ ಅಭಾವದಿಂದ ರೈತರ ಸಾಲ ಮನ್ನಾ ಮಾಡುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರೈತರ ಸಾಲ ಮನ್ನಾ ಮಾಡುವ ಬಗ್ಗೆ ಸರಕಾರ ಮುಕ್ತವಾಗಿದೆ. ಆದರೆ, ಯಾರ ಸಾಲ? ಯಾವ ರೀತಿಯ ಸಾಲ? ಮತ್ತು ಒಟ್ಟು ಎಷ್ಟು ಸಾಲ ಇದೆ? ಎಂಬ ಎಲ್ಲ ಆಯಾಮಗಳನ್ನು ಸಮಗ್ರವಾಗಿ ಪರಿಶೀಲಿಸಬೇಕಿದೆ. ಸಂಪೂರ್ಣ ವರದಿ ಪಡೆದ ಬಳಿಕವಷ್ಟೇ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಜನರ ದೂರಿಗೆ ಸ್ಪಂದಿಸಲು 'ಪ್ರಜಾಸೇವೆ' ಹೊಸ ಇಲಾಖೆ

ಜನರ ಕಷ್ಟಗಳಿಗೆ ತ್ವರಿತವಾಗಿ ಸ್ಪಂದಿಸಲು ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ. ಜನರ ಸಮಸ್ಯೆಗಳನ್ನು ಹತ್ತಿರದಿಂದ ಕೇಳಿ ತಿಳಿಯಲಾಗಿದೆ. ಇದಕ್ಕಾಗಿಯೇ ಸರಕಾರ 'ಪ್ರಜಾಸೇವೆ' ಎಂಬ ಹೊಸ ಇಲಾಖೆ ಪ್ರಾರಂಭಿಸಿದೆ. ಸಾರ್ವಜನಿಕರ ದೂರುಗಳಿಗೆ ತಕ್ಷಣ ಪರಿಹಾರ ಒದಗಿಸಲು ಈ ಇಲಾಖೆಗೆ ವಿಶೇಷ ಅಧಿಕಾರಿಯೊಬ್ಬರನ್ನು ಈಗಾಗಲೇ ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜನರ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪ್ರಜಾಸೇವೆ ಇಲಾಖೆಯ ಮೂಲಕವೇ ಶಾಶ್ವತ ಪರಿಹಾರ ಕಲ್ಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.