ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪತ್ನಿಯನ್ನು ಕೊಂದು ಪೊಲೀಸರ ಮುಂದೆ ಶರಣಾದ ವ್ಯಕ್ತಿ

ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಪೊಲೀಸರ ಮುಂದೆ ಶರಣಾದ ಘಟನೆ ಕಾನ್ಪುರದ ಮಹಾರಾಜಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆ ಮಾಡಿದ ನಾಲ್ಕು ಗಂಟೆಗಳ ಬಳಿಕ ಪೊಲೀಸರ ಮುಂದೆ ಶರಣಾದ ಆರೋಪಿ, ಕೊಲೆ ಮಾಡಿ ಓಡಿ ಹೋಗುವ ಬಗ್ಗೆ ಯೋಚಿಸಿದ್ದಾಗಿ ಹೇಳಿದ್ದಾನೆ.

ಪತ್ನಿಯನ್ನು ಕೊಂದು ಶರಣಾದ

ಸಂಗ್ರಹ ಚಿತ್ರ -

ಕಾನ್ಪುರ: ಪತ್ನಿಯನ್ನು ಕೊಂದ (Murder case) ವ್ಯಕ್ತಿಯೊಬ್ಬ ಪೊಲೀಸರ ಮುಂದೆ ಶರಣಾದ ಘಟನೆ ಕಾನ್ಪುರದಲ್ಲಿ(kanpur) ನಡೆದಿದೆ. ಯುವಕನೊಬ್ಬ ಶನಿವಾರ ಬೆಳಗ್ಗೆ ಮಹಾರಾಜಪುರ ಪೊಲೀಸ್ ಠಾಣೆಗೆ (Maharajpur police station) ಅಳುತ್ತಾ ಬಂದು, ಸರ್ ನಾನು ನನ್ನ ಹೆಂಡತಿಯನ್ನು ಕತ್ತು ಹಿಸುಕಿ ಕೊಂದಿದ್ದೇನೆ. ಅವಳ ಶವವನ್ನು ಕಂಬಳಿಯಲ್ಲಿ ಸುತ್ತಿ ಮನೆಯಲ್ಲಿ ಇಟ್ಟಿದ್ದೇನೆ. ಆಕೆಯನ್ನು ಕೊಂದ ಬಳಿಕ ಓಡಿ ಹೋಗಲು ಪ್ರಯತ್ನಿಸಿದೆ. ಆದರೆ ಬಳಿಕ ಅಪರಾಧಿ ಪ್ರಜ್ಞೆ ಕಾಡಿದ್ದರಿಂದ ಇಲ್ಲಿಗೆ ಬಂದಿದ್ದಾಗಿ ಹೇಳಿದ್ದಾನೆ.

ಫತೇಪುರ್ ಜಿಲ್ಲೆಯ ಮೋಹನಪುರ ಗ್ರಾಮದ ಸಚಿನ್ (22) ಎಂಬಾತ ತನ್ನ ಪತ್ನಿ ಶ್ವೇತಾಳನ್ನು ಕೊಂದಿದ್ದಾನೆ. ಪೊಲೀಸರಿಗೆ ಶರಣಾಗುವ ಮೊದಲು ನಾಲ್ಕು ಗಂಟೆಗಳ ಕಾಲ ನಗರದಲ್ಲಿ ಅಲೆದಾಡಿದ ಆತ ಮೊದಲು ಓಡಿಹೋಗುವ ಪ್ರಯತ್ನ ಮಾಡಿದ್ದಾಗಿಯೂ ಹೇಳಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ಅಪರಾಧ ಸ್ಥಳಕ್ಕೆ ಧಾವಿಸಿದ್ದು, ಅಲ್ಲಿ ಕಂಬಳಿಯಲ್ಲಿ ಸುತ್ತಿದ್ದ ಶ್ವೇತಾಳ ಶವವನ್ನು ವಶಕ್ಕೆ ಪಡೆದರು.

Devanahalli Accident: ದೇವನಹಳ್ಳಿಯಲ್ಲಿ ಭೀಕರ ಹಿಟ್‌ ಆ್ಯಂಡ್‌ ರನ್‌; ಮೂವರು ಯುವಕರ ದುರ್ಮರಣ

ಸಚಿನ್ ಮತ್ತು ಶ್ವೇತಾ ತಮ್ಮ ಕುಟುಂಬಗಳ ಇಚ್ಛೆಗೆ ವಿರುದ್ಧವಾಗಿ ನ್ಯಾಯಾಲಯದಲ್ಲಿ ವಿವಾಹವಾಗಿದ್ದರು. ಮೊದಲು ಸೂರತ್‌ಗೆ ತೆರಳಿ ವಾಸವಾಗಿದ್ದರು. ಅಲ್ಲಿ ಸಚಿನ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಕಾನ್ಪುರಕ್ಕೆ ಬಂದ ಅವರು ಕೊಠಡಿಯೊಂದನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು. ಕಾನ್ಪುರಕ್ಕೆ ಬಂದ ಸಚಿನ್ ಜೀವನ ಸಾಗಿಸಲು ಆಟೋರಿಕ್ಷಾ ಓಡಿಸಲು ಪ್ರಾರಂಭಿಸಿದ್ದನು.

ಈ ನಡುವೆ ಇವರಿಬ್ಬರ ಸಂಬಂಧವು ಅನುಮಾನದಿಂದ ಹದಗೆಟ್ಟಿತು. ಶ್ವೇತಾಳ ಬಗ್ಗೆ ಸಚಿನ್ ಅನುಮಾನ ವ್ಯಕ್ತಪಡಿಸಲು ಪ್ರಾರಂಭಿಸಿದ ಬಳಿಕ ಅವರಿಬ್ಬರ ಮಧ್ಯೆ ಜಗಳ ಉಂಟಾಗಿತ್ತು. ಶ್ವೇತಾಳ ಖಾತೆಗೆ ಆಗಾಗ್ಗೆ ಹಣ ಜಮೆಯಾಗುತ್ತಿತ್ತು. ಇದನ್ನು ಸಚಿನ್ ಪ್ರಶ್ನಿಸಿದ್ದು, ಅದನ್ನು ತನ್ನ ಅಜ್ಜಿ ಹಾಕಿದ್ದಾಗಿ ಹೇಳಿದ್ದಾಳೆ. ಆದರೆ ನಮ್ಮ ಮನೆಯ ಎದುರು ವಾಸಿಸುವ ವಿದ್ಯಾರ್ಥಿಗಳು ಅವಳಿಗೆ ಹಣ ನೀಡುತ್ತಿದ್ದರು ಎಂದು ಸಚಿನ್ ಅನುಮಾನಗೊಂಡಿದ್ದನು.

ಒಂದು ದಿನ ಶ್ವೇತಾಳನ್ನು ಪರೀಕ್ಷಿಸಲು ಮುಂದಾದ ಸಚಿನ್ ಇದಕ್ಕಾಗಿ ಒಂದು ಯೋಜನೆಯನ್ನು ರೂಪಿಸಿದರು. ಹೆಂಡತಿಗೆ ಕರೆ ಮಾಡಿ ತಾನು ಸ್ನೇಹಿತರೊಂದಿಗೆ ಪಾರ್ಟಿಯಲ್ಲಿದ್ದೇನೆ, ರಾತ್ರಿ ಬರುವುದಿಲ್ಲ ಎಂದು ಹೇಳಿದ್ದಾನೆ. ಬಳಿಕ ಅನಿರೀಕ್ಷಿತವಾಗಿ ಮನೆಗೆ ಬಂದು ನೋಡಿದಾಗ ಅವನ ಹೆಂಡತಿ ನೆರೆಹೊರೆಯ ಇಬ್ಬರು ಯುವಕರೊಂದಿಗೆ ಇರುವುದನ್ನು ನೋಡಿದ್ದಾನೆ. ಇದರಿಂದ ಇಬ್ಬರ ನಡುವೆ ಜಗಳವಾಗಿದೆ. ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರಿಬ್ಬರನ್ನು ಠಾಣೆಗೆ ಕರೆದೊಯ್ದು ಸಮಸ್ಯೆಗಳನ್ನು ಪರಿಹರಿಸಲು ಸಲಹೆ ನೀಡಿ ಕಳುಹಿಸಿದರು.

ಅವರಿಬ್ಬರು ಮನೆಗೆ ಮರಳಿದ ಬಳಿಕ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದು, ಶ್ವೇತಾ ತನಗೆ ಬೆದರಿಕೆ ಹಾಕಿದ್ದಾಳೆ ಎಂದು ಸಚಿನ್ ಹೇಳಿದ್ದಾನೆ. ಕೋಪದಿಂದ ಸಚಿನ್ ಅವಳ ಕತ್ತು ಹಿಸುಕಿದ್ದಾನೆ. ಭಯದಿಂದ ಆಕೆಯ ಶವವನ್ನು ಕಂಬಳಿಯಲ್ಲಿ ಸುತ್ತಿ ಇಟ್ಟಿದ್ದಾನೆ. ಅನಂತರ ಸಚಿನ್ ಕ್ಲಾಕ್ ಟವರ್ ಪ್ರದೇಶಕ್ಕೆ ಓಡಿ ಹೋಗಿ ಅಲ್ಲಿ ಹಲವಾರು ಗಂಟೆಗಳ ಕಾಲ ಕುಳಿತಿದ್ದನು.

ಅಪ್ರಾಪ್ತನನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿಸಿದರು, ಸಹಾಯಕ್ಕಾಗಿ ಅಂಗಲಾಚಿದರು ಯಾರೂ ಬರಲಿಲ್ಲ..

ತಾವಿಬ್ಬರು ಓಡಿ ಹೋಗಿ ಮದುವೆಯಾಗಿದ್ದರಿಂದ ತಮಗೆ ಈಗ ಯಾರೂ ಇಲ್ಲ ಎಂದು ಅರಿತು, ಪಶ್ಚತ್ತಾಪದಿಂದ ಬಂದು ಪೊಲೀಸರಿಗೆ ಶರಣಾಗಿರುವುದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ. ಶ್ವೇತಾಳ ದೇಹವನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.