RCBW vs DCW: ಸ್ಮೃತಿ ಮಂಧಾನಾ ಅಬ್ಬರ, ಡೆಲ್ಲಿ ಕ್ಯಾಪಿಟಲ್ಸ್‌ಗೆ ಶಾಕ್ ನೀಡಿದ ಆರ್‌ಸಿಬಿ ವನಿತೆಯರು!
RCB vs DCW Match Highlights: ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದು ಬೀಗಿತು. ಆಮ ಮೂಲಕ 2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ಮಂಧಾನಾ ಪಡೆ ಸತತ ನಾಲ್ಕನೇ ಗೆಲುವು ದಾಖಲಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ವನಿತೆಯರಿಗೆ 8 ವಿಕೆಟ್ ಜಯ. -
ನವಿ ಮುಂಬೈ: ಲಾರೆನ್ ಬೆಲ್ ಮಾರಕ ಬೌಲಿಂಗ್ ಹಾಗೂ ಸ್ಮೃತಿ ಮಂಧಾನಾ (Smriti mandhana) ಅಬ್ಬರದ ಬ್ಯಾಟಿಂಗ್ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCBW) ತಂಡ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2026ರ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಟೂರ್ನಿಯಲ್ಲಿ ಸ್ಮೃತಿ ಮಂಧಾನಾ ಪಡೆ ಸತತ ನಾಲ್ಕನೇ ಗೆಲುವು ಸಾಧಿಸಿತು. ಇದರೊಂದಿಗೆ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿತು. ಇನ್ನು ಜೆಮಿಮಾ ರೊಡ್ರಿಗಸ್ ನಾಯಕತ್ವದ ಡೆಲ್ಲಿ ಮೂರನೇ ಸೋಲು ಅನುಭವಿಸಿತು.
ಶನಿವಾರ ಇಲ್ಲಿನ ಡಿವೈ ಪಾಟೀಲ್ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 167 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ವನಿತೆಯರು, ಸ್ಮೃತಿ ಮಂಧಾನಾ (96 ರನ್) ಹಾಗೂ ಜಾರ್ಜಿಯಾ ವಾಲ್ (54 ರನ್) ಅವರ ಬ್ಯಾಟಿಂಗ್ ಬಲದಿಂದ 18.2 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 169 ರನ್‌ಗಳನ್ನು ಗಳಿಸಿ 8 ವಿಕೆಟ್‌ಗಳಿಂದ ಗೆದ್ದು ಬೀಗಿತು.
IPL 2026: ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ!
ಸ್ಮೃತಿ ಮಂಧಾನಾ ಅಬ್ಬರದ ಬ್ಯಾಟಿಂಗ್
ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ಪರ ಓಪನರ್ ಗ್ರೇಸ್ ಹ್ಯಾರಿಸ್ ಬಹುಬೇಗ ವಿಕೆಟ್ ಒಪ್ಪಿಸಿದರು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ಜಾರ್ಜಿಯಾ ವಾಲ್ ಹಾಗೂ ಸ್ಮೃತಿ ಮಂಧಾನಾ 91 ಎಸೆತಗಳಲ್ಲಿ 142 ರನ್‌ಗಳ ಜೊತೆಯಾಟವನ್ನು ಆಡಿ ತಂಡವನ್ನು ಗೆಲ್ಲಿಸಿದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ನಾಯಕಿ ಮಂಧಾನಾ, 61 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 13 ಬೌಂಡರಿಗಳೊಂದಿಗೆ 96 ರನ್‌ಗಳನ್ನು ಸಿಡಿಸಿದರು. ಇನ್ನೇನು ಶತಕ ಸಿಡಿಸುವ ಹೊತ್ತಿನಲ್ಲಿ ನಂದಿನಿ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ತಾಳ್ಮೆಯ ಆಟವನ್ನುಆಡಿದ ಜಾರ್ಜಿಯಾ ವಾಲ್ 42 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 54 ರನ್ ಗಳಿಸಿದರು.
9⃣6⃣ runs
— Women's Premier League (WPL) (@wplt20) January 17, 2026
6⃣1⃣ balls
1⃣3⃣ fours
3⃣ sixes
For her outstanding captain's knock, Smriti Mandhana is named the Player of the Match 🏅
Relive her knock ▶️ https://t.co/QxnVr2MXnT#TATAWPL | #KhelEmotionKa | #DCvRCB | @mandhana_smriti pic.twitter.com/0Z7n9rWd5P
ಡೆಲ್ಲಿಗೆ ಆರಂಭಿಕ ಆಘಾತ ನೀಡಿದ್ದ ಬೆಲ್, ಸಯಾಲಿ
ಇದಕ್ಕೂ ಮುನ್ನ ಟಾಸ್ ಸೋತು ಮುನ್ನ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನಾ ಅವರ ನಿರ್ಧಾರವನ್ನು ಬೌಲರ್‌ಗಳು ಸಮರ್ಥಿಸಿಕೊಂಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೊತ್ತ 10 ರನ್ ಇರುವಾಗಲೇ ಪ್ರಮುಖ ನಾಲ್ಕು ಬ್ಯಾಟರ್‌ಗಳನ್ನು ಹೊಸ ಚೆಂಡಿನ ಬೌಲರ್‌ಗಳಾದ ಲಾರೆನ್ ಬೆಲ್ ಹಾಗೂ ಸಯಾಲಿ ಸಾತ್ಘರೆ ಅವರು ಔಟ್ ಮಾಡಿದ್ದರು. ಆ ಮೂಲಕ ಆರ್‌ಸಿಬಿ ಆರಂಭಿಕ 9 ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿತ್ತು.
Making winning a habit 🥳@RCBTweets marching bold as they make it 4⃣ in 4⃣ ❤️
— Women's Premier League (WPL) (@wplt20) January 17, 2026
A convincing 8⃣-wicket victory to wrap up the Navi Mumbai leg 🙌
Scorecard ▶️ https://t.co/NnuH8NbLG5 #TATAWPL | #KhelEmotionKa | #DCvRCB pic.twitter.com/cDbPBCVqo6
ಕ್ಯಾಪಿಟಲ್ಸ್‌ಗೆ ಶಫಾಲಿ ವರ್ಮಾ ಆಸರೆ
ಒಂದು ತುದಿಯಲ್ಲಿ ಬ್ಯಾಟರ್‌ಗಳು ಪೆವಿಲಿಯನ್‌ಗೆ ಪೆರೆಡ್ ನಡೆಸುತ್ತಿದ್ದರೆ, ಮತ್ತೊಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಆರ್‌ಸಿಬಿ ಬೌಲರ್‌ಗಳನ್ನು ಶಫಾಲಿ ವರ್ಮಾ ದಂಡಿಸಿದರು. 17ನೇ ಓವರ್‌ವರೆಗೂ ಏಕಾಂಗಿಯಾಗಿ ಹೋರಾಟ ನಡೆಸಿದ ಶಫಾಲಿ, 41 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 62 ರನ್‌ಗಳನ್ನು ಸಿಡಿಸಿದರು. ಆ ಮೂಲಕ ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು. ಇನ್ನೇನು ಡೆತ್ ಓವರ್‌ಗಳಲ್ಲಿ ತಂಡದ ಮೊತ್ತವನ್ನು ಹೆಚ್ಚಿಸಬೇಕೆಂದು ಆಡುತ್ತಿದ್ದಾಗ ಶಫಾಲಿ ವರ್ಮಾ ಅವರನ್ನು ಲಾರೆನ್ ಬೆಲ್ ಔಟ್ ಮಾಡಿದರು.
WPL 2026: ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 50 ವಿಕೆಟ್ ಪೂರ್ಣಗೊಳಿಸಿದ ಅಮೇಲಿಯಾ ಕೆರ್!
ಕೊನೆಯಲ್ಲಿ ಸ್ನೇಹಾ ರಾಣಾ ನಿರ್ಣಾಯಕ 22 ರನ್ ಗಳಿಸಿದರೆ, ಲ್ಯೂಸಿ ಹ್ಯಾಮಿಲ್ಟನ್ ಅವರು ಸ್ಪೋಟಕ ಬ್ಯಾಟ್ ಮಾಡಿ 19 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಮೂರು ಬೌಂಡರಿಗಳೊಂದಿಗೆ 36 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 160ರ ಗಡಿ ದಾಟಿಸಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 166 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಆರ್‌ಸಿಬಿಗೆ 167 ರನ್‌ಗಳ ಗುರಿಯನ್ನು ನೀಡಿತ್ತು.
ಆರ್‌ಸಿಬಿ ಪರ ಉತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದ ಲಾರೆನ್ ಬೆಲ್ ಹಾಗೂ ಸಯಾಲಿ ಸಾತ್ಘರೆ ಅವರು ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಪ್ರೇಮಾ ರಾವತ್ ಎರಡು ವಿಕೆಟ್ ಕಿತ್ತರೆ, ಇನ್ನುಳಿದ ಒಂದು ವಿಕೆಟ್ ಅನ್ನು ನದಿನ್ ಡಿ ಕ್ಲರ್ಕ್ ಕಿತ್ತರು.