ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bengaluru News: ಬೆಂಗಳೂರಿನಲ್ಲಿ ಬಾಂಗ್ಲಾದೇಶಕ್ಕೆ ಜೈಕಾರ ಹಾಕಿದ ಮಹಿಳೆ ಬಂಧನ

ಪಶ್ಚಿಮ ಬಂಗಾಳದ ಮೂಲದ ಸರ್ಬಾನು ಖಾತುನ್ ಎಂಬ ಮಹಿಳೆ ಜೈ ಬಾಂಗ್ಲಾ ಘೋಷಣೆ ಕೂಗಿದ್ದಾಳೆ. ಅಕ್ರಮ ವಲಸಿಗರ ತೆರವು ಕಾರ್ಯಾಚರಣೆ ಮಾಡುವಾಗ ಇಂಥದ್ದೊಂದು ಘಟನೆ ನಡೆದಿದೆ. ಬೆಂಗಳೂರಿನ ಹೆಬ್ಬಗೋಡಿ ಠಾಣೆಯ ಪೊಲೀಸರು ದೇಶವಿರೋಧಿ ಘೋಷಣೆ ಕೂಗಿದ ಮಹಿಳೆಯನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಬಾಂಗ್ಲಾದೇಶಕ್ಕೆ ಜೈಕಾರ ಹಾಕಿದ ಮಹಿಳೆ ಬಂಧನ

ಬಾಂಗ್ಲಾ ಪರ ಘೋಷಣೆ ಕೂಗಿದ ಮಹಿಳೆ -

ಹರೀಶ್‌ ಕೇರ
ಹರೀಶ್‌ ಕೇರ Jan 13, 2026 12:06 PM

ಬೆಂಗಳೂರು, ಜ.13: ಬೆಂಗಳೂರಿನಲ್ಲಿ (Bengaluru News) ದೇಶ ವಿರೋಧಿ ಜೈ ಬಾಂಗ್ಲಾ (Bangladesh slogan) ಘೋಷಣೆ ಕೂಗಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಹೆಬ್ಬಗೋಡಿ ಠಾಣೆಯ ಪೊಲೀಸರು ದೇಶವಿರೋಧಿ ಘೋಷಣೆ ಕೂಗಿದ ಮಹಿಳೆಯನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಮೂಲದ ಸರ್ಬಾನು ಖಾತುನ್ ಎಂಬ ಮಹಿಳೆ ಜೈ ಬಾಂಗ್ಲಾ ಘೋಷಣೆ ಕೂಗಿದ್ದಾಳೆ.

ಅಕ್ರಮ ವಲಸಿಗರ ತೆರವು ಕಾರ್ಯಾಚರಣೆ ಮಾಡುವಾಗ ಇಂಥದ್ದೊಂದು ಘಟನೆ ನಡೆದಿದೆ. ಜೆಸಿಬಿ ಬಳಸಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಸ್ಥಳೀಯ ವ್ಯಕ್ತಿಯೊಬ್ಬ ಅದನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ. ಈ ವೇಳೆ ಮುಸ್ಲಿಂ ಮಹಿಳೆಯೊಬ್ಬಳು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಅಲ್ಲಿಂದ ಹಾದುಹೋಗಿದ್ದಳು.

ಈ ವೇಳೆ ವಿಡಿಯೋ ಮಾಡುತ್ತಿದ್ದ ಸ್ಥಳೀಯ ವ್ಯಕ್ತಿ, ಆಕೆಯನ್ನು ಮಾತನಾಡಿಸಿ, ಭಾರತ್ ಮಾತಾ ಕೀ ಜೈ ಎನ್ನುತ್ತಾನೆ. ಜೊತೆಗೆ ಭಾರತ್ ಮಾತಾ ಕೀ ಜೈ ಅಂತ ಹೇಳು ಅಂತ ಹೇಳುತ್ತಾನೆ. ಆಗ ಸಿಟ್ಟಿಗೆದ್ದ ಮಹಿಳೆ ಬಾಂಗ್ಲಾಗೆ ಜೈ ಎನ್ನುತ್ತಾ ಅಲ್ಲಿಂದ ಹೊರಡುತ್ತಾಳೆ. ಈ ವೇಳೆ ಸ್ಥಳೀಯರು ಆಕೆಯ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಸ್ಥಳೀಯರು ಮತ್ತೆ ಮಹಿಳೆ ಬಳಿ ಭಾರತ್ ಮಾತಾ ಕೀ ಜೈ ಅಂತ ಹೇಳಿಸಿದ್ದಾರೆ ಎನ್ನಲಾಗಿದೆ.

ಬಾಡಿಗೆ ಮನೆಯಲ್ಲಿದ್ದ ಮಹಿಳೆಗೆ ಕಿರುಕುಳ, ಮನೆ ಓನರ್‌ ಬಂಧನ

ಬೆಂಗಳೂರು: ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಗೃಹಿಣಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮನೆ ಮಾಲೀಕನನ್ನು ಬಂಡೇಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಧು ಬಂಧಿತ ಮನೆಯ ಮಾಲೀಕನಾಗಿದ್ದಾನೆ. ಹೊಸಪಾಳ್ಯದ ನಿವಾಸಿಯಾದ 22 ವರ್ಷದ ಗೃಹಿಣಿ ನೀಡಿದ ದೂರಿನನ್ವಯ ಮನೆಯ ಮಾಲೀಕ ಮಧು ಎಂಬಾತನನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಟ್ಟೆ ಕರಿ ಮಾಡದ್ದಕ್ಕೆ ಪತ್ನಿಯೊಂದಿಗೆ ಜಗಳ; ಅವಮಾನಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಪತಿ

ಮನೆಯನ್ನು ಬಾಡಿಗೆಗೆ ಪಡೆಯಲು 2025 ರ ಸೆ.24 ರಂದು ಮನೆಯ ಮಾಲೀಕ ಮಧು ಅವರಿಗೆ ಗೃಹಿಣಿ ಕರೆ ಮಾಡಿದ್ದು, ಅಂದಿನಿಂದ ಮಾಲೀಕ ಅವರ ನಂಬರ್ ಅನ್ನು ಸೇವ್ ಮಾಡಿಕೊಂಡು ಮೆಸೇಜ್ ಮಾಡಲು ಪ್ರಾರಂಭಿಸಿದ್ದ. ಅಲ್ಲದೇ ಕಳೆದ 15-20 ದಿನಗಳಿಂದ ಅಸಭ್ಯವಾಗಿ ಮೆಸೇಜ್ ಮಾಡಲು ಪ್ರಾರಂಭಿಸಿದ್ದ. ಇದರಿಂದ ನೊಂದ ಗೃಹಿಣಿ ತನ್ನ ಪತಿಗೆ ಈ ವಿಷಯವನ್ನು ತಿಳಿಸಿ, ಅವರ ಸಲಹೆಯಂತೆ ಮಧು ಅವರ ನಂಬರ್ ಅನ್ನು ಬ್ಲಾಕ್ ಮಾಡಿದ್ದರು. ಜ.8ರಂದು ಗೃಹಿಣಿಯ ಪತಿ ಇಲ್ಲದಿರುವ ವೇಳೆಯಲ್ಲಿ ಮಧು, ಬಾಡಿಗೆ ಕೇಳುವ ನೆಪದಲ್ಲಿ ಮನೆಗೆ ಬಂದು ಮಹಿಳೆಯ ಕೈಯನ್ನು ಬಲವಾಗಿ ಹಿಡಿದುಕೊಂಡು, ಅಸಭ್ಯವಾಗಿ ವರ್ತಿಸಿದ್ದ ಎಂದು ತಿಳಿದುಬಂದಿದೆ.