Self Harming: ಶಾಲೆಗೆ ಹೋಗು ಎಂದದ್ದಕ್ಕೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ
ಬಾಲಕ ಜಗದೀಶನ ತಾಯಿಯ ಕುಟುಂಬ ಅಯ್ಯಪ್ಪ ಮಾಲೆ ಹಾಕಿದ್ದರು. ಈ ಸಂಬಂಧ ಅಲ್ಲಿಗೆ ಹೋಗಿ ಜಗದೀಶ್ ವಾಪಸ್ ಬಂದಿದ್ದ. ನಂತರ ಶಾಲೆಗೆ ಹೋಗಲು ನಿರಾಕರಿಸಿದ್ದ. ಇದರಿಂದ ತಂದೆ ಬುದ್ದಿವಾದ ಹೇಳಿದ್ದಕ್ಕೆ ಶಾಲೆಗೆ ತೆರಳಿದ್ದ ಬಾಲಕ ಗೆಳೆಯನ ಜೊತೆಗೆ ಮನೆಗೆ ವಾಪಸ್ ಬರುವಾಗ ಗೆಳೆಯನನ್ನು ಕಳಿಸಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಜಗದೀಶ್ -
ತುಮಕೂರು, ಜ.13: ಶಾಲೆಗೆ ತಪ್ಪದೇ ಹೋಗು, ಚೆನ್ನಾಗಿ ಓದುಬರಹ ಕಲಿ ಎಂದಿದ್ದಕ್ಕೆ ಬಾಲಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ (Student Self harming) ಮಾಡಿಕೊಂಡ ದುರಂತಮಯ ಘಟನೆ ತುಮಕೂರು (Tumakuru news ಜಿಲ್ಲೆಯಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಚೆನ್ನಕಾಟಯ್ಯನ ಗುಡ್ಲು ಗ್ರಾಮದಲ್ಲಿ ಜಗದೀಶ್ (14) ಎಂಬ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜಗದೀಶ್ ಕೆಂಕೆರೆ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ. ಬಾಲಕನ ತಾಯಿಯ ಕುಟುಂಬ ಅಯ್ಯಪ್ಪ ಮಾಲೆ ಹಾಕಿದ್ದರು. ಈ ಸಂಬಂಧ ಅಲ್ಲಿಗೆ ಹೋಗಿ ಜಗದೀಶ್ ವಾಪಸ್ ಬಂದಿದ್ದ. ನಂತರ ಶಾಲೆಗೆ ಹೋಗಲು ನಿರಾಕರಿಸಿದ್ದ. ಇದರಿಂದ ತಂದೆ ಬುದ್ದಿವಾದ ಹೇಳಿದ್ದಕ್ಕೆ ಶಾಲೆಗೆ ತೆರಳಿದ್ದ ಬಾಲಕ ಗೆಳೆಯನ ಜೊತೆಗೆ ಮನೆಗೆ ವಾಪಸ್ ಬರುವಾಗ ಗೆಳೆಯನನ್ನು ಕಳಿಸಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಾಡಿಗೆ ಮನೆಯಲ್ಲಿದ್ದ ಮಹಿಳೆಗೆ ಕಿರುಕುಳ, ಮನೆ ಓನರ್ ಬಂಧನ
ಬೆಂಗಳೂರು: ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಗೃಹಿಣಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮನೆ ಮಾಲೀಕನನ್ನು ಬಂಡೇಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಧು ಬಂಧಿತ ಮನೆಯ ಮಾಲೀಕನಾಗಿದ್ದಾನೆ. ಹೊಸಪಾಳ್ಯದ ನಿವಾಸಿಯಾದ 22 ವರ್ಷದ ಗೃಹಿಣಿ ನೀಡಿದ ದೂರಿನನ್ವಯ ಮನೆಯ ಮಾಲೀಕ ಮಧು ಎಂಬಾತನನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಟ್ಟೆ ಕರಿ ಮಾಡದ್ದಕ್ಕೆ ಪತ್ನಿಯೊಂದಿಗೆ ಜಗಳ; ಅವಮಾನಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಪತಿ
ಮನೆಯನ್ನು ಬಾಡಿಗೆಗೆ ಪಡೆಯಲು 2025 ರ ಸೆ.24 ರಂದು ಮನೆಯ ಮಾಲೀಕ ಮಧು ಅವರಿಗೆ ಗೃಹಿಣಿ ಕರೆ ಮಾಡಿದ್ದು, ಅಂದಿನಿಂದ ಮಾಲೀಕ ಅವರ ನಂಬರ್ ಅನ್ನು ಸೇವ್ ಮಾಡಿಕೊಂಡು ಮೆಸೇಜ್ ಮಾಡಲು ಪ್ರಾರಂಭಿಸಿದ್ದ. ಅಲ್ಲದೇ ಕಳೆದ 15-20 ದಿನಗಳಿಂದ ಅಸಭ್ಯವಾಗಿ ಮೆಸೇಜ್ ಮಾಡಲು ಪ್ರಾರಂಭಿಸಿದ್ದ. ಇದರಿಂದ ನೊಂದ ಗೃಹಿಣಿ ತನ್ನ ಪತಿಗೆ ಈ ವಿಷಯವನ್ನು ತಿಳಿಸಿ, ಅವರ ಸಲಹೆಯಂತೆ ಮಧು ಅವರ ನಂಬರ್ ಅನ್ನು ಬ್ಲಾಕ್ ಮಾಡಿದ್ದರು. ಜ.8ರಂದು ಗೃಹಿಣಿಯ ಪತಿ ಇಲ್ಲದಿರುವ ವೇಳೆಯಲ್ಲಿ ಮಧು, ಬಾಡಿಗೆ ಕೇಳುವ ನೆಪದಲ್ಲಿ ಮನೆಗೆ ಬಂದು ಮಹಿಳೆಯ ಕೈಯನ್ನು ಬಲವಾಗಿ ಹಿಡಿದುಕೊಂಡು, ಅಸಭ್ಯವಾಗಿ ವರ್ತಿಸಿದ್ದ ಎಂದು ತಿಳಿದುಬಂದಿದೆ.