ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಲಕ್ನೋದಲ್ಲಿ ಬಿರಿಯಾನಿ ಅಂಗಡಿಯ ಫ್ರೀಜರ್‌ನಲ್ಲಿ ಯುವಕನ ಶವ ಪತ್ತೆ: ಬೆಚ್ಚಿಬಿದ್ದ ಮಾಲೀಕ

ವೆಜ್ ಬಿರಿಯಾನಿ ಅಂಗಡಿಯ ಫ್ರೀಜರ್‌ನಲ್ಲಿ ಯುವಕನ ಶವವೊಂದು ಪತ್ತೆಯಾಗಿದ್ದು ಇದನ್ನು ಗಮನಿಸಿದ ಪೊಲೀಸರೇ ದಿಗ್ಭ್ರಮೆಗೊಂಡಿದ್ದಾರೆ. ಜಿಸಿಆರ್‌ಜಿ ಕಾಲೇಜು ಗೇಟ್‌ನ ಎದುರಿನ ಅಂಗಡಿ ಇರುವ ಬಕ್ಷಿ ಕಾ ತಲಾಬ್ ಪ್ರದೇಶದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಮೃತ ವ್ಯಕ್ತಿಯನ್ನು ಯಾರೆಂದು ಇನ್ನೂ ಗುರುತಿಸಲಾಗಿಲ್ಲ.

ದೇಶವೇ ಬೆಚ್ಚಿಬೀಳಿಸುವ ಘಟನೆ: ಬಿರಿಯಾನಿ ಅಂಗಡಿಯ ಫ್ರೀಜರ್‌ನಲ್ಲಿ ಶವ ಪತ್ತೆ!

ಫ್ರೀಜರ್‌ನಲ್ಲಿ ಯುವಕನ ಶವ ಪತ್ತೆ -

Profile
Pushpa Kumari Mar 2, 2026 1:21 PM

ಲಕ್ನೋ,ಮಾ. 2: ಉತ್ತರ ಪ್ರದೇಶದ ಲಕ್ನೋದಲ್ಲಿ (Lucknow) ಆಘಾತಕಾರಿ ಘಟನೆಯೊಂದು ನಡೆದಿದೆ. ವೆಜ್ ಬಿರಿಯಾನಿ ಅಂಗಡಿಯ ಫ್ರೀಜರ್‌ನಲ್ಲಿ ಯುವಕನ ಶವವೊಂದು ಪತ್ತೆಯಾಗಿದ್ದು ಇದನ್ನು ಗಮನಿಸಿದ ಪೊಲೀಸರೇ ದಿಗ್ಭ್ರಮೆಗೊಂಡಿದ್ದಾರೆ. ಜಿಸಿಆರ್‌ಜಿ ಕಾಲೇಜು ಗೇಟ್‌ನ ಎದುರಿನ ಅಂಗಡಿ ಇರುವ ಬಕ್ಷಿ ಕಾ ತಲಾಬ್ ಪ್ರದೇಶದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಮೃತ ವ್ಯಕ್ತಿಯನ್ನು ಯಾರೆಂದು ಇನ್ನೂ ಗುರುತಿಸಲಾಗಿಲ್ಲ.

ಬಕ್ಷಿ ಕಾ ತಾಲಾಬ್ (BKT) ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಾಹಿತಿ ಪ್ರಕಾರ, ಅಂಗಡಿ ಮಾಲೀಕರೊಬ್ಬರು ತಮ್ಮ ತಂದೆಯ ಅಂತ್ಯಕ್ರಿಯೆ ಸಲುವಾಗಿ ಅಂಗಡಿಯನ್ನು ಕೆಲವು ದಿನಗಳವರೆಗೆ ಮುಚ್ಚಿದ್ದರು. ಆದರೆ ನಾಲ್ಕು ದಿನಗಳ ನಂತರ ಅವರು ಹಿಂತಿರುಗಿ ಅಂಗಡಿ ತೆರೆದಾಗ, ಅವರು ತಮ್ಮ ದಿನಚರಿಯ ಭಾಗವಾಗಿ ಫ್ರೀಜರ್ ಅನ್ನು ಪರಿಶೀಲಿಸಿದ್ದಾರೆ. ಆದರೆ ಡೀಪ್ ಫ್ರೀಜರ್‌ನಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದ್ದು, ಅಲ್ಲಿದ್ದ ಜನರಲ್ಲಿ ಆತಂಕ ಸೃಷ್ಟಿಸಿದೆ‌.

Bengaluru Crime: ಬೆಂಗಳೂರಿನಲ್ಲಿ ಭೀಕರ ಅತ್ಯಾಚಾರ ದಂಧೆ, ಡ್ರಗ್ಸ್‌ ನೀಡಿ 19 ಕಾಲೇಜು ಯುವತಿಯರ ಮೇಲೆ ದೌರ್ಜನ್ಯ

ಯುವಕನ ಶವವನ್ನು ಗಮನಿಸಿದ ಮಾಲೀಕ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಯುವಕ ಹೇಗೆ ಸಾವನ್ನಪ್ಪಿದ್ದಾನೆ ಅಥವಾ ಶವ ಫ್ರೀಜರ್ ಒಳಗೆ ಹೇಗೆ ಬಂದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲಿರುವ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಮೃತರ ಗುರುತನ್ನು ಸ್ಥಾಪಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ.‌ ಈ ಘಟನೆ ಹೇಗೆ ನಡೆದಿದೆ ಎಂದು ಸಂಪೂರ್ಣವಾಗಿ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮುನ್ನೆಚ್ಚರಿಕೆಯಾಗಿ ಪ್ರದೇಶದಲ್ಲಿ ಕಣ್ಗಾವಲು ತೀವ್ರಗೊಳಿಸಲಾಗಿದೆ. ಮೃತಪಟ್ಟ ಯುವಕ ಯಾರು ಎಂಬುದು ಇನ್ನು ತಿಳಿದುಬಂದಿಲ್ಲ. ಸುತ್ತಮುತ್ತಲ ಪ್ರದೇಶಗಳಲ್ಲಿ ಯಾರಾದರೂ ನಾಪತ್ತೆ ಯಾಗಿದ್ದಾರೆಯೇ ಎಂದು ಪರಿಶೀಲನೆ ಮಾಡುತ್ತಿದ್ದಾರೆ.