ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

21ನೇ ಶತಮಾನದಲ್ಲಿಯೂ ಹೋಗಿಲ್ಲ ಜಾತಿ ಪದ್ಧತಿ! ಮಡಿಕೆಯಿಂದ ನೀರು ಕುಡಿದ ದಲಿತನಿಗೆ ಥಳಿತ

ಮಡಿಕೆಯಿಂದ ನೀರು ಕುಡಿದ ಎನ್ನುವ ಕಾರಣಕ್ಕೆ ದಲಿತನೊಬ್ಬನನ್ನು ಥಳಿಸಿರುವ ಘಟನೆ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯಲ್ಲಿ ನಡೆದಿದೆ. ಖಾಸಗಿ ಆಸ್ಪತ್ರೆಯ ಹೊರಗೆ ಇರಿಸಲಾಗಿದ್ದ ಪಾತ್ರೆಯಿಂದ ದಲಿತ ವ್ಯಕ್ತಿಯೊಬ್ಬ ನೀರು ತೆಗೆದು ಕುಡಿದದ್ದು ಹಿಂಸಾಚಾರಕ್ಕೆ ಕಾರಣವಾಯಿತು. ಪ್ರಕರಣಕ್ಕೆ ಸಂಬಂಧಿಸಿ ಎಫ್ ಐಆರ್ ದಾಖಲಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಮಡಿಕೆಯಿಂದ ನೀರು ಕುಡಿದ ದಲಿತ ಕಾರ್ಮಿಕನಿಗೆ ಥಳಿತ

ಸಂಗ್ರಹ ಚಿತ್ರ -

ಉತ್ತರಪ್ರದೇಶ: ಆಸ್ಪತ್ರೆಯ ಹೊರಗೆ ಇರಿಸಲಾಗಿದ್ದ ಮಣ್ಣಿನ ಮಡಿಕೆಯಿಂದ ನೀರು ತೆಗೆದು ಕುಡಿದ ದಲಿತ ಕಾರ್ಮಿಕನನ್ನು (Dalit labour) ಥಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ (Uttar Pradesh crime) ನಡೆದಿದೆ. ಭದೋಹಿ ಜಿಲ್ಲೆಯ (Bhadohi district) ಖಾಸಗಿ ಕ್ಲಿನಿಕ್‌ನ (private clinic) ಹೊರಗೆ ಮಣ್ಣಿನ ಮಡಿಕೆಯಲ್ಲಿ ಕುಡಿಯಲೆಂದು ನೀರು ಇಡಲಾಗಿತ್ತು. ಇದನ್ನು ದಲಿತ ಕಾರ್ಮಿಕನೊಬ್ಬ ಬಳಸಿದ್ದು, ಇದಕ್ಕಾಗಿ ಆತನನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಲಾಗಿದೆ. ದಲಿತ ಬಳಸಿದ್ದರಿಂದ ಪಾತ್ರೆಯು ಕಲುಷಿತವಾಗಿದೆ ಎಂದು ಆರೋಪಿಗಳು ಹೇಳಿದ್ದಾರೆ. ಪ್ರಕ್ರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ.

ಭದೋಹಿ ಜಿಲ್ಲೆಯಲ್ಲಿ ಜೂನ್ 23ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಓಂ ಪ್ರಕಾಶ್ ವಿಶ್ವಕರ್ಮ ಅವರೊಂದಿಗೆ ಬಣ್ಣ ಬಳಿಯುವ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಸಹ ಕಾರ್ಮಿಕ ಭೋಲಾ ಗೌತಮ್ ತಲೆನೋವಿನಿಂದ ಬಳಲುತ್ತಿದ್ದರು. ಇದಕ್ಕಾಗಿ ಔಷಧ ಪಡೆಯಲು ಖಾಸಗಿ ಆಸ್ಪತ್ರೆಗೆ ಬಂದಿದ್ದಾರೆ.

ಕೇತನ್ ಅಗರ್ವಾಲ್ ಕೊಲೆಗೆ ಸಂಚು ರೂಪಿಸುವ ಮೊದಲೇ ಮದುವೆಯಾಗಿದ್ದರಾ ಸಿಯಾ-ಚೇತನ್? ವಾಟ್ಸಾಪ್ ಚಾಟ್‌ನಲ್ಲಿ ಬಹಿರಂಗವಾಗಿದ್ದೇನು?

ಔಷದ ತೆಗೆದುಕೊಳ್ಳುವ ಸಲುವಾಗಿ ಅವರು ನೀರು ಕೇಳಿದ್ದು ಅದಕ್ಕೆ ಆಸ್ಪತ್ರೆ ಹೊರಗೆ ಇರಿಸಿದ್ದ ಪಾತ್ರೆಯಿಂದ ತೆಗೆಯುವಂತೆ ಹೇಳಲಾಗಿದೆ. ಅವರು ಆ ನೀರನ್ನು ಕುಡಿದುದನ್ನು ನೋಡಿದ ಹತ್ತಿರದ ಅಂಗಡಿಯವನಾದ ಸುಭಾಷ್ ಬಿಂದ್ ನಿಂದಿಸಿದ್ದು, ಕೆಳ ಜಾತಿಯ ವ್ಯಕ್ತಿ ಪಾತ್ರೆಯನ್ನು ಹೇಗೆ ಬಳಸಬಹುದು ಎಂದು ಪ್ರಶ್ನಿಸಿದ್ದಾನೆ ಎನ್ನಲಾಗಿದೆ.

ಇದರ ಬಳಿಕ ಗೌತಮ್‌ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ್ದಾನೆ. ದಲಿತನೊಬ್ಬ ಪಾತ್ರೆಯ ನೀರು ಕುಡಿದುದರಿಂದ ಪಾತ್ರೆ ಕಲುಷಿತವಾಗಿದೆ. ಎಂದು ಹೇಳಿ ಆತನನ್ನು ಕೊಲ್ಲುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶುಭಂ ಅಗರ್ವಾಲ್, ಗೌತಮ್ ಅವರನ್ನು ಅವರ ಸಹೋದ್ಯೋಗಿ ಮತ್ತು ಇತರರು ರಕ್ಷಿಸಿದರು. ಅವರ ತಲೆ, ಹೊಟ್ಟೆ, ಬೆನ್ನು ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಾರಣಾಸಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿತ್ತು.

ಪ್ರೇಯಸಿಯ ಮನೆಗೆ ಪತ್ನಿಯನ್ನು ಕರೆದೊಯ್ದು ಗುಂಡಿಟ್ಟು ಕೊಂದ ಪತಿ: ನೇಪಾಳಕ್ಕೆ ಪರಾರಿಯಾದ ಜೋಡಿ ಹಕ್ಕಿ ಸಿಕ್ಕಿ ಬಿದ್ದಿದ್ದಿ ಹೇಗೆ?

ಸುಮಾರು 12 ದಿನಗಳ ಕಾಲ ಚಿಕಿತ್ಸೆ ಪಡೆದ ಅವರು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಸೋಮವಾರ ತಡರಾತ್ರಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸುಭಾಷ್ ಬಿಂದ್ ಸೇರಿದಂತೆ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.