ನೀರು ಬಿಟ್ಟು ರಸ್ತೆಗೆ ಬಂದ ದೈತ್ಯ ಮೊಸಳೆ; ಜನವಸತಿ ಪ್ರದೇಶದಲ್ಲಿನ ಓಡಾಟದ ಭಯಾನಕ ವಿಡಿಯೊ ವೈರಲ್
Viral Video: ಮುಂಬೈನ ಪವಾಯಿ NITIE ಬಳಿ ದೈತ್ಯಕಾರದ ಮೊಸಳೆಯೊಂದು ಕಾಣಿಸಿಕೊಂಡಿದ್ದು ಅಲ್ಲಿನ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಮೊಸಳೆ ರಕ್ಷಣೆ ಮಾಡಿದ್ದಾರೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ಮುಂಬೈನ ಜನಸಂದಣಿ ಪ್ರದೇಶದಲ್ಲೇ ಮೊಸಳೆಯ ಓಡಾಟ -
ಮುಂಬೈ,ಜು.7: ಇತ್ತೀಚೆಗೆ ಕೆಲವೆಡೆ ಮಳೆಯ ಪ್ರಮಾಣ ಹೆಚ್ಚಾಗಿದೆ. ಮುಂಬೈನಲ್ಲೂ ಮಳೆಯ ತೀವ್ರತೆ ಹೆಚ್ಚಾಗಿದ್ದು ಜಲಚರ ಪ್ರಾಣಿಗಳು ನೀರಿನಲ್ಲಿ ತೇಲಾಡುತ್ತ ಜನಪ್ರದೇಶದತ್ತ ಧಾವಿಸುತ್ತೀವೆ. ಇದೀಗ ಮುಂಬೈನ ಪವಾಯಿ NITIE ಬಳಿ ದೈತ್ಯಕಾರದ ಮೊಸಳೆಯೊಂದು ಕಾಣಿಸಿಕೊಂಡಿದ್ದು ಅಲ್ಲಿನ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಮೊಸಳೆ ರಕ್ಷಣೆ ಮಾಡಿದ್ದಾರೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ಹೆಚ್ಚು ಜನ ಸಂದಣಿ ಸೇರುವ ಪ್ರದೇಶಕ್ಕೆ ಮೊಸಳೆ ಎಂಟ್ರಿ ಕೊಟ್ಟಿದೆ. ಅಲ್ಲಿನ ಸ್ಥಳೀಯರೊಬ್ಬರು ಪವಾಯಿ NITIE ಪ್ರದೇಶದಲ್ಲಿ ಮೊಸಳೆ ಇರುವ ವಿಡಿಯೋವನ್ನು ಹಂಚಿಕೊಂಡು, ಬೃಹನ್ಮುಂಬೈ ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆ ಯನ್ನು ಟ್ಯಾಗ್ ಮಾಡಿದ್ದರು. ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಡುತ್ತಿದ್ದಂತೆ, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ತಕ್ಷಣವೇ ಪ್ರತಿಕ್ರಿಯೆ ನೀಡಿದ್ದು ರಕ್ಷಣಾ ತಂಡಗಳು ವಿಳಂಬವಿಲ್ಲದೆ ಸ್ಥಳಕ್ಕೆ ತಲುಪಿತು.
ವಿಡಿಯೋ ನೋಡಿ:
Crocodile 🐊 Spotted at Powai Nitie Area ! @IndiaWeatherMan @mybmc @powaiinfo @tv@MahaForest #MumbaiTak #powai #mumbairains pic.twitter.com/0ht97OyeXl
— Anand (@anand_ingle89) July 7, 2026
ಈ ಬೆನ್ನಲ್ಲೇ ಪಾಲಿಕೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಮೊಸಳೆಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ಸಮಯದಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು ಮೊಸಳೆಯನ್ನು ತೊಂದರೆಯಿಲ್ಲದೆ ಸುರಕ್ಷಿತವಾಗಿ ಹಿಡಿದು ಬೇರೆಡೆಗೆ ಸ್ಥಳಾಂತರಿಸ ಲಾಗಿದೆ ಎಂದು ನಂತರದ ಪೋಸ್ಟ್‌ನಲ್ಲಿ ಖಚಿತಪಡಿಸಿದ್ದಾರೆ.
ಪೊವೈ ಸರೋವರ ಹಾಗೂ ಹತ್ತಿರದ ಜಲಮೂಲಗಳ ಸುತ್ತಲೂ ಮೊಸಳೆಗಳು ಕಾಣಿಸಿಕೊಳ್ಳುವುದು ವಿಶೇಷವೆನಲ್ಲ. ಮಳೆ ಗಾಲದಲ್ಲಿ, ಹೆಚ್ಚುತ್ತಿರುವ ನೀರಿನ ಮಟ್ಟಗಳು ಹಾಗೂ ಜಲಚರ ಪ್ರಾಣಿ ಸೂಕ್ತವಾದ ಆಶ್ರಯ ಹುಡುಕಲು ಜಲಮಾರ್ಗಗಳ ಮೂಲಕ ಹಾದುಹೋಗುತ್ತವೆ. ಅಧಿಕಾರಿಗಳ ಸಮಯ ಪ್ರ ಜ್ಞೆಯಿಂದ ಸುತ್ತಲೂ ಯಾವುದೇ ಅಪಾಯ ಉಂಟಾಗಿಲ್ಲ..