ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಾಚ್‌ಮ್ಯಾನ್‌ ಕೊಂದು ಬಾಲಾಪರಾಧಿ ಕೇಂದ್ರದಿಂದ ತಪ್ಪಿಸಿಕೊಂಡ ನಾಲ್ವರು ಅಪ್ರಾಪ್ತರು; ಬಾಲಕರ ಮೃಗೀಯ ವರ್ತನೆಗೆ ಬೆಚ್ಚಿಬಿದ್ದ ದೇಶ

Juvenile Home: 40 ವರ್ಷದ ವಾಚ್‌ಮ್ಯಾನ್‌ನನ್ನು ಕೊಂದು ನಾಲ್ವರು ಅಪ್ರಾಪ್ತ ಬಾಲಕರು ಬಾಲಾಪರಾಧಿ ಕೇಂದ್ರದಿಂದ ತಪ್ಪಿಸಿಕೊಂಡಿರುವ ಘಟನೆ ಛತ್ತೀಸ್‌ಗಢದಲ್ಲಿ ಸೋಮವಾರ (ಜುಲೈ 13) ನಡೆದಿದೆ. ತಪ್ಪಿಸಿಕೊಂಡ ಬಾಲಕರ ಪತ್ತೆಗಾಗಿ ಈಗಾಗಲೇ ಶೋಧ ಕಾರ್ಯ ಆರಂಭಿಸಲಾಗಿದೆ.

ಬಾಲಾಪರಾಧಿ ಕೇಂದ್ರದಿಂದ ತಪ್ಪಿಸಿಕೊಂಡ ನಾಲ್ವರು ಅಪ್ರಾಪ್ತರು

ಚಾಟ್‌ಜಿಪಿಟಿ ರಚಿತ ಚಿತ್ರ -

Ramesh Ballamoole
Ramesh Ballamoole Jul 13, 2026 11:47 PM

ರಾಯ್‌ಪುರ, ಜು. 13: 40 ವರ್ಷದ ವಾಚ್‌ಮ್ಯಾನ್‌ನನ್ನು ಕೊಂದು ನಾಲ್ವರು ಅಪ್ರಾಪ್ತ ಬಾಲಕರು ಬಾಲಾಪರಾಧಿ ಕೇಂದ್ರದಿಂದ ತಪ್ಪಿಸಿಕೊಂಡಿರುವ ಘಟನೆ ಛತ್ತೀಸ್‌ಗಢದಲ್ಲಿ ಸೋಮವಾರ (ಜುಲೈ 13) ನಡೆದಿದೆ (Juvenile Inmates). ತಪ್ಪಿಸಿಕೊಂಡ ಬಾಲಕರ ಪತ್ತೆಗಾಗಿ ಈಗಾಗಲೇ ಶೋಧ ಕಾರ್ಯ ಆರಂಭಿಸಲಾಗಿದೆ. ಛತ್ತೀಸ್‌ಗಢದ ಬಿಲಾಸ್ಪುರ ಜಿಲ್ಲೆಯಲ್ಲಿನ ಸರ್ಕಾರಿ ಬಾಲಾಪರಾಧಿ ಕೇಂದ್ರದಲ್ಲಿ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿದೆ. ಬಾಲಕರ ಈ ಕ್ರೂರ ಕೃತ್ಯ ಬೆಳಕಿಗೆ ಬಂದ ಬಳಿಕ ದೇಶವೇ ಬೆಚ್ಚಿ ಬಿದ್ದಿದೆ.

ʼʼಸರ್ಕಂಡ ಪೊಲೀಸ್‌ ಠಾಣೆಯ ವ್ಯಾಪ್ತಿಯ ವೀಕ್ಷಣಾ ಗೃಹದಲ್ಲಿ ಮುಂಜಾನೆ 2 ಗಂಟೆ ವೇಳೆಗೆ ವಾಚ್‌ಮ್ಯಾನ್‌ ಅನ್ನು ಕೊಲೆಗೈದು ನಾಲ್ವರು ತಪ್ಪಿಸಿಕೊಂಡಿದ್ದಾರೆ. ಬೆಳಗ್ಗೆ 8 ಗಂಟೆಗೆ ಈ ವಿಚಾರ ಬೆಳಕಿಗೆ ಬಂದಿದ್ದು, ತಪ್ಪಿಸಿಕೊಂಡ ಬಾಲಕರ ಪತ್ತೆಗಾಗಿ ಬಲೆ ಬೀಸಲಾಗಿದೆ. ಘಟನೆ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆʼʼ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬಿಲಾಸ್ಪುರ ಎಸ್‌ಪಿ ರಜನೀಶ್‌ ಸಿಂಗ್‌ ಈ ಬಗ್ಗೆ ಮಾಹಿತಿ ನೀಡಿ, ʼʼಮೃತ ವಾಚ್‌ಮ್ಯಾನ್‌ ಅನ್ನು ನರೇಂದ್ರ ಕುಮಾರ್‌ ಖಾಂಡೆ ಎಂದು ಗುರುತಿಸಲಾಗಿದೆ. ಅವರು ಬಿಲಾಸ್ಪುರ ಜಿಲ್ಲೆಯ ತಖಾತ್ಪುರದ ಅರೈಬಂದ್‌ ಗ್ರಾಮದ ನಿವಾಸಿ. ಬಾಲಾಪರಾಧಿ ಕೇಂದ್ರದ ವಾಚ್‌ಮ್ಯಾನ್‌ ಆಗಿ ಕೆಲವು ಸಮಯಗಳಿಂದ ಕಾರ್ಯ ನಿರ್ವಹಿಸುತ್ತಿದ್ದರುʼʼ ಎಂದು ಹೇಳಿದ್ದಾರೆ.

ಪೊಲೀಸರ ಮೇಲೆ ಹಲ್ಲೆ ನಡೆಸಿ ಬಾಲಾಪರಾಧಿ ಗೃಹದಿಂದ ಇಬ್ಬರು ಪಾಕಿಸ್ತಾನಿ ಬಾಲಕರು ಸೇರಿ ಮೂವರು ಪರಾರಿ

ʼʼಪ್ರಾಥಮಿಕ ತನಿಖೆಯ ಪ್ರಕಾರ, ನಾಲ್ವರು ಬಾಲಾಪರಾಧಿಗಳು ಖಾಂಡೆ ಮೇಲೆ ಹಲ್ಲೆ ನಡೆಸಿ, ಕೈಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕತ್ತು ಹಿಸುಕಿ ಕೊಂದು ಪರಾರಿಯಾಗಿದ್ದಾರೆ. ಪರಾರಿಯಾಗಿರುವ ಬಾಲಾಪರಾಧಿಗಳಲ್ಲಿ ಮೂವರು ರಾಯ್‌ಗಢ ಜಿಲ್ಲೆಯವರಾಗಿದ್ದರೆ, ಮತ್ತೋರ್ವ ಕೊರ್ಬಾ ಜಿಲ್ಲೆಯವನು. ನಾಲ್ವರ ವಿರುದ್ಧ ಗಂಭೀರ ಅಪರಾಧ ಪ್ರಕರಣ ದಾಖಲಾಗಿದೆʼʼ ಎಂದು ತಿಳಿಸಿದ್ದಾರೆ.

"ಕೊಲೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಬಾಲಾಪರಾಧಿಗಳು ಆರಂಭದಲ್ಲಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ವಾಚ್‌ಮ್ಯಾನ್‌ ಬಳಿ ರಿಮಾಂಡ್ ಹೋಮ್ ಗೇಟ್‌ಗಳ ಕೀ ಕೇಳಿದ್ದಾರೆ. ವಾಚ್‌ಮ್ಯಾನ್‌ ಕೀ ನೀಡಲು ನಿರಾಕರಿಸಿದಾಗ ಕೊಲೆ ಮಾಡಿ ಓಡಿ ಹೋಗಿದ್ದಾರೆ" ಎಂದು ರಜನೀಶ್‌ ಸಿಂಗ್‌ ವಿವರಿಸಿದ್ದಾರೆ.

ತನಿಖೆ ಆರಂಭ

ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳವೂ ಆಗಮಿಸಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಪೊಲೀಸರು ಸುಳಿವುಗಳಿಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೂನ್ 23ರಂದು ಸುರ್ಗುಜಾ ಜಿಲ್ಲೆಯ ಸರ್ಕಾರಿ ಸ್ವಾಮ್ಯದ ಬಾಲಾಪರಾಧಿ ಗೃಹದಿಂದ 11 ಬಾಲಾಪರಾಧಿಗಳು ತಪ್ಪಿಸಿಕೊಂಡ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ.

ಈ ವರ್ಷಾರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಬಾಲಾಪರಾಧಿ ಗೃಹದಲ್ಲಿದ್ದ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ ಮೂವರು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಂಡಿರುವ ಘಟನೆ ನಡೆದಿತ್ತು. ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಮೂವರು ಅಪರಾಧಿಗಳು ಪರಾರಿಯಾಗಿದ್ದರು. ಜಮ್ಮುವಿನ ಆರ್‌.ಎಸ್. ಪುರದಲ್ಲಿರುವ ಜೈಲಿನಲ್ಲಿ ನಿಯೋಜಿಸಲಾದ ಕಾವಲುಗಾರರ ಮೇಲೆ ಕೈದಿಗಳು ದಾಳಿ ಮಾಡಿ ಕಸ್ಟಡಿಯಿಂದ ಪಲಾಯನ ಮಾಡಿದ್ದರು.

ಬಾಲಾಪರಾಧಿ ಗೃಹದಲ್ಲಿ ಪೈಶಾಚಿಕ ಕೃತ್ಯ! ಬಾಲಕರ ಮೇಲೆ ಮೇಲೆ ಲೈಂಗಿಕ ದೌರ್ಜನ್ಯ

image

ಬಿಲಾಸ್ಪುರ್ ಬಾಲಾಪರಾಧಿ ಗೃಹದಲ್ಲಿ ಕಾವಲುಗಾರನ ಹತ್ಯೆಯ ನಂತರ ನಾಲ್ವರು ಅಪ್ರಾಪ್ತರು ಪರಾರಿಯಾಗಿದ್ದಾರೆ. ಘಟನೆ ಬಗ್ಗೆ ತನಿಖೆ ಮುಂದುವರಿದಿದ್ದು, ಅವರನ್ನು ಪತ್ತೆಹಚ್ಚಲು ಪ್ರಯತ್ನ ನಡೆಯುತ್ತಿದೆ. ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು.

-ರಜನೀಶ್‌ ಸಿಂಗ್‌, ಬಿಲಾಸ್ಪುರ ಎಸ್‌ಪಿ