ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗ್ಯಾಂಗ್ ವಾರ್‌ಗೆ ಕೆನಡಾದಲ್ಲಿ ಭಾರತೀಯ ಮೂಲದ ಯುವಕ ಬಲಿ

ಭಾರತೀಯ ಮೂಲದ ಯುವಕನೊಬ್ಬ ಕೆನಡಾದಲ್ಲಿ ಗ್ಯಾಂಗ್ ವಾರ್ ಗೆ ಬಲಿಯಾಗಿರುವ ಘಟನೆ ನಡೆದಿದೆ. ಮೃತನನ್ನು ವ್ಯಾಂಕೋವರ್ ನಿವಾಸಿ ದಿಲ್ರಾಜ್ ಸಿಂಗ್ ಗಿಲ್ ಎಂದು ಗುರುತಿಸಲಾಗಿದೆ. ಪೊಲೀಸರಿಗೆ ಗಿಲ್, ಕೆನಡಾದ ಬರ್ನಾಬಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ. ಘಟನೆಗೆ ಏನು ಕಾರಣ ಎಂಬುದನ್ನು ತಿಳಿಯಲು ತನಿಖೆ ನಡೆಸುತ್ತಿರುವುದಾಗಿ ಕೆನಡಾ ಪೊಲೀಸರು ತಿಳಿಸಿದ್ದಾರೆ.

ಭಾರತೀಯ ಮೂಲದ ಯುವಕ ಕೆನಡಾದಲ್ಲಿ ಸಾವು

ಸಂಗ್ರಹ ಚಿತ್ರ -

ಕೆನಡಾ: ಗ್ಯಾಂಗ್ ವಾರ್ (Gang War) ಗೆ ಕೆನಡಾದಲ್ಲಿ (Canada) ಭಾರತೀಯ ಮೂಲದ ಯುವಕನೊಬ್ಬ (Indian Origin Man) ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ಕೆನಡಾದ ಬರ್ನಾಬಿಯಲ್ಲಿ ಗುಂಡಿನ ದಾಳಿಯಾಗಿದ್ದು, ಇದು ಗ್ಯಾಂಗ್ ವಾರ್ ಆಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮೃತನನ್ನು ಭಾರತೀಯ ಮೂಲದ ಯುವಕ, ವ್ಯಾಂಕೋವರ್ ನಿವಾಸಿ ದಿಲ್ರಾಜ್ ಸಿಂಗ್ ಗಿಲ್ (28) ಎಂದು ಗುರುತಿಸಲಾಗಿದೆ. ಗಿಲ್ ಪೊಲೀಸರಿಗೆ ಪರಿಚಿತನಾಗಿದ್ದು, ಘಟನೆಗೆ ಕಾರಣ ಏನು ಎಂದು ತಿಳಿಯಲು ತನಿಖೆ ನಡೆಸುತ್ತಿರವುದಾಗಿ ಪೊಲೀಸರು ತಿಳಿಸಿದ್ದಾರೆ.

ಜನವರಿ 22ರಂದು ಸಂಜೆ 5.30ರ ಸುಮಾರಿಗೆ ಕೆನಡಾ ವೇಯ 3700 ಬ್ಲಾಕ್ ಬಳಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಬರ್ನಾಬಿ ಆರ್‌ಸಿಎಂಪಿ ಅಧಿಕಾರಿಗಳು ವರದಿ ಮಾಡಿದ್ದಾರೆ. ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಗಿಲ್ ಗುರುತು ಪತ್ತೆ ಮಾಡಿದ್ದಾರೆ. ಆತನ ಪ್ರಾಣ ಉಳಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ಮಾಜಿ ಪ್ರಿಯಕರನ ಪತ್ನಿಗೆ ಎಚ್‌ಐವಿ ಇಂಜೆಕ್ಟ್ ಮಾಡಿದ ಭಗ್ನ ಪ್ರೇಮಿ; ಇದೆಂಥಾ ಹುಚ್ಚಾಟ

ಈ ಘಟನೆಯ ಬಳಿಕ ಬಕ್ಸ್ಟನ್ ಸ್ಟ್ರೀಟ್‌ನ 5000 ಬ್ಲಾಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಲ್ಲಿ ವಾಹನವೊಂದು ಹೊತ್ತಿ ಉರಿದಿದೆ. ಗಿಲ್ ಮೇಲೆ ನಡೆದ ಗುಂಡಿನ ದಾಳಿಗೂ ಇದಕ್ಕೂ ಸಂಬಂಧವಿದೆಯೇ ಎಂಬುದನ್ನು ಪತ್ತೆ ಮಾಡಲು ಇಂಟಿಗ್ರೇಟೆಡ್ ಹೋಮಿಸೈಡ್ ಇನ್ವೆಸ್ಟಿಗೇಷನ್ ತಂಡ ತನಿಖೆ ನಡೆಸಲಾಗುತ್ತಿದೆ ಎಂದು ಬ್ರಿಟಿಷ್ ಕೊಲಂಬಿಯಾದ ಬರ್ನಾಬಿಯ ಪೊಲೀಸರು ತಿಳಿಸಿದ್ದಾರೆ.

ಜೈಲು ಬೆಂಗಾವಲು ಪಡೆ ಮೇಲೆ ಬಾಂಬ್ ದಾಳಿ: ಕುಖ್ಯಾತ ರೌಡಿ ಪಾರು, ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯ

ಈ ಕುರಿತು ಮಾಹಿತಿ ನೀಡಿದ ಸಾರ್ಜೆಂಟ್ ಫ್ರೆಡಾ ಫಾಂಗ್, ಬಕ್ಸ್ಟನ್ ಸ್ಟ್ರೀಟ್‌ನ 5000 ಬ್ಲಾಕ್‌ನಲ್ಲಿ ವಾಹನವೊಂದು ಸುಟ್ಟು ಹೋಗಿದ್ದು, ಇದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದೆ ಎಂಬುದನ್ನು ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದಕ್ಕಾಗಿ ತನಿಖಾಧಿಕಾರಿಗಳು ಬರ್ನಾಬಿ ಆರ್‌ಸಿಎಂಪಿ, ಲೋವರ್ ಮೇನ್‌ಲ್ಯಾಂಡ್ ಡಿಸ್ಟ್ರಿಕ್ಟ್ ಇಂಟಿಗ್ರೇಟೆಡ್ ಫೋರೆನ್ಸಿಕ್ ಐಡೆಂಟಿಫಿಕೇಶನ್ ಸರ್ವಿಸ್ (ಐಎಫ್‌ಐಎಸ್) ಮತ್ತು ಬಿ.ಸಿ. ಕರೋನರ್ಸ್ ಸರ್ವಿಸ್‌ ತಂಡದೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಂಕಿತರನ್ನು ಗುರುತಿಸಲು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.