ಹುಟ್ಟುಹಬ್ಬದ ದಿನ ದೇವಸ್ಥಾನಕ್ಕೆ ಹೊರಟ್ಟಿದ್ದವಳ ಮೇಲೆ ಸಾಮೂಹಿಕ ಅತ್ಯಾಚಾರ; ಪೊಲೀಸರ ಮುಂದೆ ಕರಾಳ ಯಾತನೆ ಹಂಚಿಕೊಂಡ ಬಾಲಕಿ
ದೆಹಲಿಯ ಉದ್ಯಾನದಲ್ಲಿ 17 ವರ್ಷದ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಸೆಪ್ಟೆಂಬರ್ 21 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆ ದಿನ ತಾನು ಅನುಭವಿಸಿದ ಕರಾಳ ಯಾತನೆ ಬಗ್ಗೆ ಬಾಲಕಿ ಪೊಲೀಸರ ಮುಂದೆ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಸಂಗ್ರಹ ಚಿತ್ರ -
ದೆಹಲಿ: ಹುಟ್ಟುಹಬ್ಬವಾದ್ದರಿಂದ ಸ್ನೇಹಿತನೊಂದಿಗೆ ದೇವಸ್ಥಾನಕ್ಕೆ ಹೊರಟಿದ್ದ ವೇಳೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ (physically abuses) ನಡೆಸಲಾಗಿದೆ ಎಂದು 17 ವರ್ಷದ ಬಾಲಕಿಯೊಬ್ಬಳು ದೆಹಲಿ (delhi crime) ಪೊಲೀಸರಿಗೆ (delhi police) ದೂರು ನೀಡಿದ್ದಾಳೆ. ಈ ಘಟನೆ ದೆಹಲಿಯ ಆಸ್ಥಾ ಕುಂಜ್ ಉದ್ಯಾನವನದಲ್ಲಿ (Aastha Kunj Park) ಸೆಪ್ಟೆಂಬರ್ 21 ರಂದು ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮಾರಕ ಆಯುಧಗಳನ್ನು ತೋರಿಸಿ ಬಾಲಕಿಯ ಸ್ನೇಹಿತನನ್ನು ಥಳಿಸಿ ಆಕೆಯ ಮೇಲೆ 30 ರಿಂದ 35 ವರ್ಷ ವಯಸ್ಸಿನ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಾಲಕಿಯ ಹುಟ್ಟುಹಬ್ಬವಾದ್ದರಿಂದ ಆಕೆ ತನ್ನ ಸ್ನೇಹಿತನೊಂದಿಗೆ ಇಸ್ಕಾನ್ ದೇವಾಲಯಕ್ಕೆಂದು ಮನೆಯಲ್ಲಿ ಹೇಳಿ ಹೊರಟಿದ್ದಳು. ಅವರಿಬ್ಬರೂ ಇಸ್ಕಾನ್ ಗೆ ತೆರಳುವ ದಾರಿ ಮಧ್ಯೆ 'ಆಸ್ಥಾ ಕುಂಜ್' ಉದ್ಯಾನವನಕ್ಕೆ ಗೇಟ್ ಸಂಖ್ಯೆ 7 ರ ಮೂಲಕ ಬಂದಿದ್ದಾರೆ. ಅಲ್ಲಿ ಸ್ವಲ್ಪ ವಿರಮಿಸಿ ಹೋಗುವವರಿದ್ದರು. ಆದರೆ ಇದು ಅವರಿಗೆ ಕರಾಳ ದಿನವನ್ನಾಗಿ ಮಾಡಿತ್ತು.
ಪಾರಿವಾಳ ತೋರಿಸುವ ನೆಪದಲ್ಲಿ ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ: ಕೃತ್ಯ ಎಸಗಿದ 41 ವರ್ಷದ ವ್ಯಕ್ತಿಗೆ ಕಠಿಣ ಶಿಕ್ಷೆ
ಕಲ್ಕಾಜಿ ದೇವಸ್ಥಾನಕ್ಕೆ ಭೇಟಿ ನೀಡಲು ಮನೆಯಿಂದ ಹೊರಟಿದ್ದ ಬಾಲಕಿ ಮತ್ತು ಸ್ನೇಹಿತ ಬಳಿಕ ಹತ್ತಿರವೇ ಇದ್ದ ಇಸ್ಕಾನ್ ದೇವಾಲಯಕ್ಕೆ ಹೊರಟರು, ದಾರಿ ಮಧ್ಯೆ ಉದ್ಯಾನಕ್ಕೆ ಹೋದ ಅವರನ್ನು ಸುಮಾರು 30 ರಿಂದ 35 ವರ್ಷ ವಯಸ್ಸಿನ ಮೂವರು ಪೊಲೀಸರಂತೆ ನಟಿಸಿ, ಆಯುಧಗಳನ್ನು ತೋರಿಸಿ ಬೆದರಿಸಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ.
ಬಾಲಕಿ ನೀಡಿರುವ ಎಫ್‌ಐಆರ್ ಮಾಹಿತಿ ಪ್ರಕಾರ ಆ ದಿನ ನನ್ನ ಹುಟ್ಟುಹಬ್ಬವಾಗಿತ್ತು. ಕಲ್ಕಾಜಿ ದೇವಸ್ಥಾನಕ್ಕೆಂದು ಸ್ನೇಹಿತನೊಬ್ಬನೊಂದಿಗೆ ಹೊರಟಿದ್ದೆ. ಸಂಜೆ 5 ಗಂಟೆ ಸುಮಾರಿಗೆ ಮನೆಯಿಂದ ಹೊರಟು 5.45ರ ಸುಮಾರಿಗೆ ದೇವಸ್ಥಾನ ತಲುಪಿದರು ಅಲ್ಲಿಂದ ಸಂಜೆ 7 ಗಂಟೆಗೆ ಇಸ್ಕಾನ್ ದೇವಾಲಯಕ್ಕೆಂದು ಹೊರಟಿದ್ದೆವು.
ದಾರಿ ಮಧ್ಯೆ ಆಸ್ಥಾ ಕುಂಜ್ ಉದ್ಯಾನಕ್ಕೆ ಬಂದು ಸ್ವಲ್ಪ ಹೊತ್ತು ಕುಳಿತು ಹೊರಡುವವರಿದ್ದೆವು. ಅಷ್ಟರಲ್ಲಿ 30 ರಿಂದ 35 ವರ್ಷ ವಯಸ್ಸಿನ ಮೂವರು ವ್ಯಕ್ತಿಗಳು ಬಂದು ಸ್ನೇಹಿತನಿಗೆ ಕಪಾಳಮೋಕ್ಷ ಮಾಡಿದರು. ಅವರು ಯಾರೆಂದು ಅವರಿಬ್ಬರೂ ಕೇಳಿದಾಗ ತಾವು ಪೊಲೀಸರೆಂದು ಹೇಳಿಕೊಂಡರು. ಉದ್ಯಾನದಲ್ಲಿ ಪ್ರವೇಶಕ್ಕೆ ಅನುಮತಿಯಿಲ್ಲದಿದ್ದರೂ ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಿದರು.
ಒಬ್ಬಾತ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡು ನಿರ್ಜನ ಪ್ರದೇಶವೊಂದರ ಕಡೆಗೆ ನನ್ನನ್ನು ತೆರಳಲು ಒತ್ತಾಯಿಸಿದನು. ಆಕೆ ಭಯದಿಂದ ನಿರಾಕರಿಸಿ ತನ್ನ ತಾಯಿಯೊಂದಿಗೆ ಮಾತಾಡುವಂತೆ ಹೇಳಿದಳು. ಆದರೆ ಅವರು ಕಪ್ಪು ಬಣ್ಣದ ಪಿಸ್ತೂಲ್ ತೋರಿಸಿ ಆಕೆಯನ್ನು ಉದ್ಯಾನದ ನಿರ್ಜನ ಮತ್ತು ಕತ್ತಲೆ ಪ್ರದೇಶಕ್ಕೆ ಕರೆದೊಯ್ದು ಒಬ್ಬರ ನಂತರ ಒಬ್ಬರಂತೆ ಮೂವರು ಆರೋಪಿಗಳು ಸಾಮೂಹಿಕ ಅತ್ಯಾಚಾರವೆಸಗಿದರು. ಕೂಗಾಡದಂತೆ ಚಾಕುವಿನಿಂದ ಬೆದರಿಸಿದರು. ತೀವ್ರ ನೋವಿನಿಂದಾಗಿ ಅಳುತ್ತಿದ್ದರೂ, ಅವರು ತಮ್ಮ ಕೃತ್ಯವನ್ನು ನಿಲ್ಲಿಸಲಿಲ್ಲ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
ಬಳಿಕ ತಕ್ಷಣವೇ ಬಟ್ಟೆ ಧರಿಸುವಂತೆ ಆದೇಶಿಸಿ, ಸ್ನೇಹಿತನನ್ನು ಕರೆದು ನನ್ನನ್ನು ಕರೆದುಕೊಂಡು ಹೋಗುವಂತೆ ಹೇಳಿದರು. ಮೊಬೈಲ್ ಫೋನ್‌ಗಳನ್ನು ಹಿಂತಿರುಗಿಸಿ ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ಬಾಲಕಿ ಆರೋಪಿಸಿದ್ದಾಳೆ.
ಮಣಿಪುರದಲ್ಲಿ ಅಪರಿಚಿತರಿಂದ ದಾಳಿ: 4 ಮಂದಿ ಸಾವು, 24 ಗಂಟೆಗಳ ಬಂದ್ ಘೋಷಣೆ
ಉದ್ಯಾನದಿಂದ ಹೊರಬಂದ ಬಳಿಕ ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದರು. ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದರು. ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.