ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಾರಿವಾಳ ತೋರಿಸುವ ನೆಪದಲ್ಲಿ ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ: ಕೃತ್ಯ ಎಸಗಿದ 41 ವರ್ಷದ ವ್ಯಕ್ತಿಗೆ ಕಠಿಣ ಶಿಕ್ಷೆ

Palghar Court: ಪಾರಿವಾಳ ತೋರಿಸುವ ನೆಪದಲ್ಲಿ 14 ವರ್ಷದ ಅಪ್ರಾಪ್ತ ಬಾಲಕನನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 41 ವರ್ಷದ ವ್ಯಕ್ತಿಗೆ ಮಹಾರಾಷ್ಟ್ರದ ವಿಶೇಷ ಪೋಕ್ಸೋ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಜೈಲು ಶಿಕ್ಷೆ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Sep 24, 2026 10:32 PM

ಮುಂಬೈ, ಸೆ. 24: ಅಪ್ರಾಪ್ತ ಬಾಲಕನಿಗೆ ಪಾರಿವಾಳ ತೋರಿಸುವುದಾಗಿ ನಂಬಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ 41 ವರ್ಷದ ವ್ಯಕ್ತಿಗೆ ಮಹಾರಾಷ್ಟ್ರದ ಪಾಲ್ಘರ್‌ನ ವಿಶೇಷ ಪೋಕ್ಸೋ (POCSO) ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. 2020ರಲ್ಲಿ ನಡೆದಿದ್ದ ಈ ಘೋರ ಕೃತ್ಯದ ಆರೋಪಿ ಮಧು ಧರ್ಮ ಗೋವಾರಿಗೆ ಶಿಕ್ಷೆಯ ಜತೆಗೆ ₹ 30,000 ದಂಡವನ್ನು ವಿಧಿಸಲಾಗಿದ್ದು, ಈ ಮೊತ್ತವನ್ನು ಸಂತ್ರಸ್ತ ಬಾಲಕನ ಪುನರ್ವಸತಿಗೆ ನೀಡುವಂತೆ ಆದೇಶಿಸಲಾಗಿದೆ.

ಘಟನೆಯು 2020ರ ಡಿಸೆಂಬರ್ 12ರಂದು ವಸೈ ತಾಲೂಕಿನಲ್ಲಿ ನಡೆದಿತ್ತು. 14 ವರ್ಷದ ಸಂತ್ರಸ್ತ ಬಾಲಕ ತನ್ನ ಮನೆಯ ಬಳಿ ಪಾರಿವಾಳಗಳಿಗೆ ಆಹಾರ ಹಾಕುತ್ತಿದ್ದಾಗ, ನೆರೆಮನೆಯ ಆರೋಪಿ ಮಧು, ಮರಿ ಪಾರಿವಾಳಗಳನ್ನು ತೋರಿಸುವುದಾಗಿ ನಂಬಿಸಿ ಬಾಲಕನನ್ನು ಟೆರೇಸ್‌ಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ಬಾಲಕನ ಬಾಯಿಗೆ ಬಟ್ಟೆ ಹಾಕಿ, ಕೈಗಳನ್ನು ಕಟ್ಟಿ ಕೊಠಡಿಯೊಳಗೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಕೃತ್ಯದ ಬಳಿಕ ಯಾರಿಗೂ ಹೇಳದಂತೆ ಹಣದ ಆಮಿಷ ಒಡ್ಡಿ ಬೆದರಿಕೆ ಹಾಕಿದ್ದ. ಆದರೆ ಆರೋಪಿಯಿಂದ ಹೇಗೋ ತಪ್ಪಿಸಿಕೊಂಡ ಬಾಲಕ ತನ್ನ ಚಿಕ್ಕಮ್ಮನಿಗೆ ವಿಷಯ ತಿಳಿಸಿದ್ದು, ಅದೇ ದಿನ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಆರು ವರ್ಷಗಳ ನಂತರ ಪ್ರಕರಣ ಬೆಳಕಿಗೆ, ಮದರಸಾ ಶಿಕ್ಷಕನ ಬಂಧನ

ವಿಚಾರಣೆ ವೇಳೆ ಆರೋಪಿ ಪರ ವಕೀಲರು, ಕೃತ್ಯಕ್ಕೆ ಸಂಬಂಧಿಸಿದ ಸ್ಥಳವು ಜನನಿಬಿಡ ಪ್ರದೇಶವಾಗಿದ್ದು, ಇಂತಹ ಸ್ಥಳದಲ್ಲಿ ದೌರ್ಜನ್ಯ ಎಸಗಲು ಸಾಧ್ಯವಿಲ್ಲ, ಇದು ಸುಳ್ಳು ಆರೋಪ ಎಂದು ವಾದಿಸಿದ್ದರು. ಆದರೆ ಈ ವಾದವನ್ನು ತಳ್ಳಿಹಾಕಿದ ನ್ಯಾಯಾಧೀಶರು, ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ಜನರ ಉಪಸ್ಥಿತಿ ಸಾಮಾನ್ಯ. ಸ್ಥಳ ಜನನಿಬಿಡವಾಗಿತ್ತು ಎಂಬ ಕಾರಣಕ್ಕೆ ಸಂತ್ರಸ್ತ ಬಾಲಕನ ಸಾಕ್ಷ್ಯವನ್ನು ಅನುಮಾನಿಸಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದರು. ಜತೆಗೆ, ಸಂತ್ರಸ್ತ ಬಾಲಕನ ಉಡುಪಿನ ಮೇಲಿದ್ದ ವೀರ್ಯದ ಕಲೆಗಳ ವಿಧಿವಿಜ್ಞಾನ ಪರೀಕ್ಷೆಯ ವರದಿಯು ಆರೋಪಿಯ ಡಿಎನ್‌ಎ ಜತೆ ಸಂಪೂರ್ಣವಾಗಿ ತಾಳೆಯಾಗಿದ್ದು, ಪ್ರಕರಣಕ್ಕೆ ಬಲವಾದ ಸಾಕ್ಷಿಯಾಯಿತು.

ನ್ಯಾಯಾಲಯ ಆರೋಪಿಗೆ ನೀಡಿದ ಶಿಕ್ಷೆ

ನ್ಯಾಯಾಲಯವು ಆರೋಪಿಗೆ ಪಕ್ಸೋ ಕಾಯ್ದೆಯಡಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ, ಐಪಿಸಿ ಸೆಕ್ಷನ್‌ 377 ಅಸ್ವಾಭಾವಿಕ ಲೈಂಗಿಕ ದೌರ್ಜನ್ಯಯಡಿ 10 ವರ್ಷಗಳ ಜೈಲು ಶಿಕ್ಷೆ ಮತ್ತು 30 ಸಾವಿರ ರೂಪಾಯಿ ದಂಡ ವಿಧಿಸಲಾಗಿದ್ದು, ಈ ಹಣವನ್ನು ಸಂತ್ರಸ್ತ ಬಾಲಕನ ಪುನರ್ವಸತಿಗೆ ನೀಡುವಂತೆ ಆದೇಶಿಸಲಾಗಿದೆ. ಠಾಣೆಯ ಜಿಲ್ಲಾ ಸೇವೆಗಳ ಪ್ರಾಧಿಕಾರಕ್ಕೆ ಸಂತ್ರಸ್ತ ಬಾಲಕನಿಗೆ ಸರ್ಕಾರದ ನಿಯಾವಳಿಗಳ ಪ್ರಕಾರ ಹೆಚ್ಚುವರಿ ಪರಿಹಾರ ಒದಗಿಸುವಂತೆ ಕೋರ್ಟ್‌ ಸೂಚಿಸಿದೆ.