ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಾಡಹಗಲೇ ನಡುರಸ್ತೆಯಲ್ಲಿ ಪತ್ನಿಯನ್ನು ಗುಂಡಿಕ್ಕಿ ಕೊಂದು ಪತಿ ಪರಾರಿ; ಆರೋಪಿಗಾಗಿ ಪೊಲೀಸರಿಂದ ತಲಾಶ್

Crime News: ಹಾಡಹಗಲೇ ವ್ಯಕ್ತಿಯೊಬ್ಬ ತನ್ನ ಪರಿತ್ಯಕ್ತ ಪತ್ನಿಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ. ಪತ್ನಿಯ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ಶಬ್ಧ ಕೇಳಿ ನೆರೆಹೊರೆಯವರು ಧಾವಿಸಿದಾಗ, ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು.

ಹಾಡಹಗಲೇ ನಡುರಸ್ತೆಯಲ್ಲಿ ಪತ್ನಿಯನ್ನು ಗುಂಡಿಕ್ಕಿ ಹತ್ಯೆ

ಸಾಂದರ್ಭಿಕ ಚಿತ್ರ -

Priyanka P
Priyanka P Feb 21, 2026 6:59 PM

ಚಂಡೀಗಢ, ಫೆ. 21: ಹಾಡಹಗಲೇ ವ್ಯಕ್ತಿಯೊಬ್ಬ ತನ್ನ ಪರಿತ್ಯಕ್ತ ಪತ್ನಿಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ (Faridabad) ನಡೆದಿದೆ. ಶುಕ್ರವಾರ (ಫೆಬ್ರವರಿ 20) ರಾತ್ರಿ ಕೆಲವು ಕುಟುಂಬ ಸದಸ್ಯರೊಂದಿಗೆ ತನ್ನ ಪತ್ನಿಯ ಮನೆಗೆ ಬಂದಿದ್ದ ಆರೋಪಿ, ಆಕೆಯ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ಶಬ್ಧ ಕೇಳಿ ನೆರೆಹೊರೆಯವರು ಧಾವಿಸಿದಾಗ, ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು (Crime News).

ಬಸಂತಪುರ ಗ್ರಾಮದ ಸನ್‌ಲೈಟ್ ಕಾಲೋನಿಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸಂಗೀತಾ ದೇವಿ ಕೊಲೆಯಾದ ದುರ್ದೈವಿ. ದಂಪತಿಯ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. 30 ವರ್ಷದ ಸಂಗೀತಾ ದೇವಿ ಮತ್ತು ಅವರ ಇಬ್ಬರು ಮಕ್ಕಳು ಕೆಲವು ಸಮಯದಿಂದ ಪತಿ ಮತ್ತು ಅತ್ತೆ ಮಾವಂದಿರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ದಂಪತಿಯ ಮಧ್ಯೆ ಕೌಟುಂಬಿಕ ಕಲಹವಿತ್ತು ಎನ್ನಲಾಗಿದೆ.

ಸಂಗೀತಾ ದೇವಿಯ ಪತಿ ಮತ್ತು ಅತ್ತೆ-ಮಾವ ಅವಳ ಮನೆಗೆ ಹೋಗಿದ್ದರು. ಈ ವೇಳೆ ಸಂಗೀತಾ ಮನೆಯಲ್ಲಿ ಇರಲಿಲ್ಲ. ಅವಳು ಕಾಣದಿದ್ದಾಗ ಅವರು ಅಲ್ಲಿಂದ ಹಿಂದಿರುಗಿದ್ದಾರೆ. ಈ ವೇಳೆ ದಾರಿಮಧ್ಯೆ ಸಂಗೀತಾ ಸಿಕ್ಕಿದ್ದಾಳೆ. ಅವಳನ್ನು ನೋಡಿ ಅವರು ತಡೆದರು ಎಂದು ಸ್ಥಳೀಯರು ಹೇಳಿದ್ದಾರೆ.

ಹಾಗಲಕಾಯಿ ಖಾದ್ಯ ಮಾಡಿದ್ದಕ್ಕೆ ತಾಯಿಯನ್ನೇ ಕೊಂದ ಪಾಪಿ

ಈ ವೇಳೆ ದಂಪತಿ ನಡುವೆ ತೀವ್ರ ವಾಗ್ವಾದ ನಡೆದು, ಅದು ಶೀಘ್ರದಲ್ಲೇ ತಾರಕಕ್ಕೇರಿತು. ಸಂಗೀತಾ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಿ ಹಿಂದೆ ಸರಿದಳು. ಆಗ ಆಕೆಯ ಪತಿ ಆಕೆಯ ಮೇಲೆ ಮೂರು ಸುತ್ತು ಗುಂಡು ಹಾರಿಸಿದ. ಎರಡು ಗುಂಡುಗಳು ತಗುಲಿ ಸಂಗೀತಾ ರಸ್ತೆಗೆ ಬಿದ್ದು, ಗಂಭೀರ ಗಾಯಗೊಂಡಿದ್ದಳು. ಗುಂಡಿನ ಸದ್ದು ಕೇಳಿ ನೆರೆಹೊರೆಯವರು ತಮ್ಮ ಮನೆಗಳಿಂದ ಹೊರಬಂದರು. ಅಷ್ಟರಲ್ಲಾಗಲೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಸಂಗೀತಾ ತಂದೆ ಕೂಡ ಸ್ಥಳಕ್ಕೆ ಧಾವಿಸಿ, ನೆರೆಹೊರೆಯವರ ಸಹಾಯದಿಂದ ಗಾಯಗೊಂಡ ಆಕೆಯನ್ನು ಸೆಕ್ಟರ್ 31ರ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಆದರೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಿದರು.

ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಬಿಹಾರ ಮೂಲದ ಆರೋಪಿಯನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಗಂಡ ಮತ್ತು ಹೆಂಡತಿಯ ನಡುವಿನ ವಿಚ್ಛೇದನ ವಿವಾದ ಪತ್ತೆಯಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪಲ್ಲಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ಸತ್ಯ ಪ್ರಕಾಶ್ ತಿಳಿಸಿದ್ದಾರೆ.