ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕೊಲಂಬೊದಲ್ಲಿ ಮಳೆ ಅಬ್ಬರ; ಪಾಕ್‌-ಕಿವೀಸ್‌ ಸೂಪರ್-‌8 ಪಂದ್ಯ ರದ್ದು ಸಾಧ್ಯತೆ

T20 World Cup 2026 Super Eights: 8:10 ರಿಂದ ಓವರ್‌ಗಳನ್ನು ಕಳೆದುಕೊಳ್ಳಲು ಪ್ರಾರಂಭವಾಗುತ್ತದೆ. 5 ಓವರ್‌ಗಳ ಸ್ಪರ್ಧೆಗೆ ಕಟ್-ಆಫ್ ಸಮಯ ರಾತ್ರಿ 10:16. ಆ ನಂತರ ಪಂದ್ಯವನ್ನು ರದ್ದು ಎಂದು ಘೋಷಿಸಲಾಗುತ್ತದೆ. ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.

ಮಳೆ ಅಬ್ಬರ; ಪಾಕ್‌-ಕಿವೀಸ್‌ ಸೂಪರ್-‌8 ಪಂದ್ಯ ರದ್ದು ಸಾಧ್ಯತೆ

Rain arrived in Colombo -

Abhilash BC
Abhilash BC Feb 21, 2026 8:59 PM

ಕೊಲಂಬೊ, ಫೆ.21: ಟಿ20 ವಿಶ್ವಕಪ್‌ನ ಆರಂಭಿಕ ಸೂಪರ್‌-8(T20 World Cup 2026 Super Eights) ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್(NZ vs PAK) ಮತ್ತು ಪಾಕಿಸ್ತಾನ ನಡುವಣ ಪಂದ್ಯ ಸದ್ಯ ಮಳೆಯಿಂದ ಸ್ಥಗಿತಗೊಂಡಿದೆ. ಮಳೆ ಸುರಿಯುತ್ತಿದ್ದು ಅಂಪೈರ್‌ಗಳ ಪಂದ್ಯದ ಕಟ್‌-ಆಫ್ ಸಮಯವನ್ನು ಪ್ರಕಟಿಸಿದ್ದಾರೆ.

ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ಬ್ಯಾಟಿಂಗ್‌ ಆಯ್ದುಕೊಂಡಿತು. ಆದರೆ ಪಂದ್ಯ ಆರಂಭದ ವೇಳೆ ಜೋರಾಗಿ ಮಳೆ ಸುರಿಯಲಾರಂಭಿಸಿತು. ನ್ಯೂಜಿಲ್ಯಾಂಡ್‌ ಪರ ಮೂರು ಬದಲಾವಣೆ ಮಾಡಲಾಯಿತು. ನಾಯಕ ಮಿಚೆಲ್ ಸ್ಯಾಂಟ್ನರ್ ಸ್ವತಃ ಆಡುವ ಬಳಗಕ್ಕೆ ಮರಳಿದರು. ಇಶ್ ಸೋಧಿ ಮತ್ತು ಲಾಕಿ ಫರ್ಗುಸನ್ ಕೂಡ ಅವಕಾಶ ಪಡೆದರು.



ಮತ್ತೊಂದೆಡೆ, ಪಾಕಿಸ್ತಾನ ತಂಡವು ಆಡುವ XI ನಲ್ಲಿ ಒಂದು ಬದಲಾವಣೆ ಮಾಡಿದೆ. ಫಖರ್ ಜಮಾನ್ ಅಂತಿಮವಾಗಿ ತಂಡಕ್ಕೆ ಮರಳಿದರು. ಬಾಬರ್ ಅಜಮ್ ಪಂದ್ಯಾವಳಿಯಲ್ಲಿ ಇನ್ನೂ ತಮ್ಮ ಫಾರ್ಮ್ ಕಂಡುಕೊಳ್ಳದ ಕಾರಣ ಅವರನ್ನು ಕೈಬಡಲಾಯಿತು.

ಸೂಪರ್‌ ಸಂಡೆಯಲ್ಲಿ ಹರಿಣಗಳ ವಿರುದ್ಧ ಭಾರತಕ್ಕೆ ಸೂಪರ್‌-8 ಸವಾಲು

8:10 ರಿಂದ ಓವರ್‌ಗಳನ್ನು ಕಳೆದುಕೊಳ್ಳಲು ಪ್ರಾರಂಭವಾಗುತ್ತದೆ. 5 ಓವರ್‌ಗಳ ಸ್ಪರ್ಧೆಗೆ ಕಟ್-ಆಫ್ ಸಮಯ ರಾತ್ರಿ 10:16. ಆ ನಂತರ ಪಂದ್ಯವನ್ನು ರದ್ದು ಎಂದು ಘೋಷಿಸಲಾಗುತ್ತದೆ. ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.

ಉಭಯ ತಂಡಗಳು

ನ್ಯೂಜಿಲ್ಯಾಂಡ್:‌ ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಫಿನ್ ಅಲೆನ್, ರಾಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಜೇಮ್ಸ್ ನೀಶಮ್, ಮ್ಯಾಟ್ ಹೆನ್ರಿ, ಇಶ್ ಸೋಧಿ, ಲಾಕಿ ಫರ್ಗುಸನ್.

ಪಾಕಿಸ್ತಾನ: ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಸಲ್ಮಾನ್ ಅಘಾ (ನಾಯಕ), ಬಾಬರ್ ಅಜಮ್, ಫಖರ್ ಜಮಾನ್, ಉಸ್ಮಾನ್ ಖಾನ್ (ವಿ.ಕೀ.), ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಸಲ್ಮಾನ್ ಮಿರ್ಜಾ, ಉಸ್ಮಾನ್ ತಾರಿಕ್.