Dharwad Murder Case: ದಪ್ಪಗಿದ್ದಾಳೆ ಎಂದು ಹೆಂಡತಿಯನ್ನೇ ಕತ್ತು ಹಿಸುಕಿ ಕೊಂದ ಪಾಪಿ ಪತಿ!
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ಘಟನೆ ನಡೆದಿದೆ. ವಿವಾಹವಾದ ಒಂದೇ ವರ್ಷಕ್ಕೆ ತವರುಮನೆಯಿಂದ ಬಂಗಾರ ತರುವಂತೆ ಗಂಡ ಕಿರುಕುಳ ನೀಡುತಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೇ ನೀನು ದಪ್ಪ ಇದ್ದಿಯಾ, ಗರ್ಭಿಣಿ ಆಗಲ್ಲ ಅಂತ ಹೇಳಿ ಗಂಡ ಕೊಲೆಗೈದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
-
ಧಾರವಾಡ: ಹೆಂಡತಿ ದಪ್ಪಗಿದ್ದಾಳೆ ಎಂದು ಪತ್ನಿಯನ್ನೇ ಪಾಪಿ ಪತಿ ಕತ್ತು ಹಿಸುಕಿ ಕೊಲೆಗೈದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ನಡೆದಿದೆ. ಪ್ರಿಯಾಂಕಾ ಕಮಲಾಕರ್ (29) ಕೊಲೆಯಾದ ಮಹಿಳೆ. ಬಸವರಾಜ್ ವಡ್ಡರ್ ಕೊಲೆ ಮಾಡಿದ ಪತಿ.
2024ರಲ್ಲಿ ಪ್ರಿಯಾಂಕಾ ಮತ್ತು ಬಸವರಾಜ್ ಮದುವೆಯಾಗಿತ್ತು. ವಿವಾಹವಾದ ಬಳಿಕ ತವರುಮನೆಯಿಂದ ಬಂಗಾರ ತರುವಂತೆ ಕಿರುಕುಳ ನೀಡುತಿದ್ದ ಎನ್ನಲಾಗಿದೆ. ಬಂಗಾರ, ಹಣ ತರುವಂತೆ ಕಿರುಕುಳ ನೀಡಿದ್ದಲ್ಲದೇ, ನೀನು ದಪ್ಪ ಇದ್ದಿಯಾ, ಗರ್ಭಿಣಿ ಆಗಲ್ಲ ಅಂತ ಕೊಲೆಗೈದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಮಂಗಳವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದ ನಂತರ ಕೊಲೆಯಾದ ಮಹಿಳೆಯ ಪೋಷಕರಿಗೆ ಈ ಮಾಹಿತಿ ನೀಡಲಾಗಿದೆ. ಪೋಷಕರು ಮಂಗಳವಾರ ತಡರಾತ್ರಿ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೃತ ಮಹಿಳೆಯ ಪತಿ ಬಸವರಾಜ್ ವಡ್ಡರ್, ರೇಣವ್ವ, ಸುಭಾಷ್, ಸಿದ್ದರಾಮೇಶ್ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಕಟ್ಟಡ ಕಾಮಗಾರಿ ವೇಳೆ ವಿದ್ಯುತ್ ತಂತಿ ತಗುಲಿ ಇಬ್ಬರು ಕಾರ್ಮಿಕರಿಗೆ ಗಾಯ
ಹಾವೇರಿ : ಕಟ್ಟಡ ಕಾಮಗಾರಿ ವೇಳೆ ವಿದ್ಯುತ್ ಶಾಕ್ ತಗುಲಿ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾವೇರಿ ನಗರದ ತಾಲೂಕು ಪಂಚಾಯಿತಿ ಕಚೇರಿ ಬಳಿ ನಡೆದಿದೆ. ಕಾರ್ಮಿಕರು ಹಿಡಿದಿದ್ದ ಕಬ್ಬಿಣದ ರಾಡ್‌ಗೆ ವಿದ್ಯುತ್ ತಂತಿ ಸ್ಪರ್ಶಿಸಿ, ಅವಘಡ ನಡೆದಿದೆ.
Haveri Clash: ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ರೈತನ ಕೈ ಕಟ್; ಎರಡು ಕೋಮುಗಳ ನಡುವೆ ಮಾರಾಮಾರಿ, 8 ಮಂದಿಗೆ ಗಾಯ
ಗಾಯಾಳುಗಳ ಪೈಕಿ ಮಹಮ್ಮದ್ ಮುಜಾಮಿಲ್ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮತ್ತೊಬ್ಬ ಗಾಯಾಳು ಕಾರ್ಮಿಕ ಶಂಕರಪ್ಪನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಕಾಮಗಾರಿ ವೇಳೆ ಸುರಕ್ಷತಾ ಕ್ರಮ ಕೈಗೊಳ್ಳದಿದ್ದರಿಂದ ಈ ಒಂದು ಅವಘಡ ಸಂಭವಿಸಿದೆ.