ರಾಮ ಮಂದಿರದ ಕದ್ದ ಹಣ ಶೌಚಾಲಯಗಳಲ್ಲಿ ಅಡಗಿಸಿಟ್ಟ ಆರೋಪಿ
ಅಯೋಧ್ಯೆಯ ರಾಮ ಮಂದಿರದಿಂದ ಕಳವಾಗಿದ್ದ ಕೋಟ್ಯಾಂತರ ರೂಪಾಯಿ ಹಣದ ಬಗ್ಗೆ ಬಂಧಿತ ಆರೋಪಿ ಅವಿನಾಶ್ ಶುಕ್ಲಾ ಪೊಲೀಸರಿಗೆ ಹಲವು ಮಹತ್ವಪೂರ್ಣ ಮಾಹಿತಿಗಳನ್ನು ನೀಡಿದ್ದಾನೆ. ಸುಮಾರು ಎರಡು ಗಂಟೆಗಳ ವಿಚಾರಣೆ ವೇಳೆಯಲ್ಲಿ ಆತ ಕದ್ದಿದ್ದ ಹಣವನ್ನು ಶೌಚಾಲಯಗಳಲ್ಲಿ ತಾತ್ಕಾಲಿಕವಾಗಿ ಅಡಗಿಸಿಟ್ಟಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಉತ್ತರಪ್ರದೇಶ: ಅಯೋಧ್ಯೆಯ (Ayodhya) ರಾಮ ಮಂದಿರದಿಂದ (ram mandir) ಕದ್ದ ಹಣವನ್ನು (donation theft case) ಶೌಚಾಲಯದೊಳಗೆ ತಾತ್ಕಾಲಿಕವಾಗಿ ಅಡಗಿಸಿಟ್ಟಿದ್ದೆವು ಎಂಬುದಾಗಿ ಬಂಧಿತ ಆರೋಪಿ ಅವಿನಾಶ್ ಶುಕ್ಲಾ ತಿಳಿಸಿದ್ದಾನೆ. ಅಯೋಧ್ಯೆ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಬಂಧಿಸಲಾಗಿರುವ ಎಂಟು ಆರೋಪಿಗಳಲ್ಲಿ ಒಬ್ಬನಾದ ಅವಿನಾಶ್ ಶುಕ್ಲಾನನ್ನು ನ್ಯಾಯಾಲಯದ ಅನುಮತಿ ಪಡೆದು ಮಂಗಳವಾರ ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂದರ್ಭದಲ್ಲಿ ಆತ ರಾಮ ಮಂದಿರದಿಂದ ಕಳವಾಗಿದ್ದ ಕೋಟ್ಯಾಂತರ ರೂಪಾಯಿ ಹಣದ ಬಗ್ಗ ಹಲವು ಮಹತ್ವಪೂರ್ಣ ಮಾಹಿತಿಗಳನ್ನು ಪೊಲೀಸರಿಗೆ ನೀಡಿದ್ದಾನೆ.
ಅಯೋಧ್ಯೆ ರಾಮ ಮಂದಿರದಿಂದ ಕೋಟ್ಯಾಂತರ ರೂಪಾಯಿಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿರುವ ಅವಿನಾಶ್ ಶುಕ್ಲಾ, ದೇಣಿಗೆ ಹಣವನ್ನು ಕದಿಯಲು ಎಣಿಕೆ ವ್ಯವಸ್ಥೆಯಲ್ಲಿ ಮಾಡಲಾಗಿರುವ ಲೋಪದೋಷಗಳ ಬಗ್ಗೆ ಪೊಲೀಸರಿಗೆ ವಿವರಿಸಿದ್ದಾನೆ.
ವಾಹನ ಸವಾರರಿಗೆ ಗುಡ್ ನ್ಯೂಸ್; ನಯಾರಾದಲ್ಲಿ ಪೆಟ್ರೋಲ್ ಲೀಟರ್‌ಗೆ 5, ಡೀಸೆಲ್‌ಗೆ 3 ರೂ. ಕಡಿತ
ಕದ್ದ ಹಣವನ್ನು ಶೌಚಾಲಯಗಳಲ್ಲಿ ತಾತ್ಕಾಲಿಕವಾಗಿ ಬಚ್ಚಿಡಲಾಗಿತ್ತು ಎಂದ ಅವಿನಾಶ್ ಶುಕ್ಲಾ, ದೇವಾಲಯದ ದೇಣಿಗೆಯಿಂದ ಕೋಟ್ಯಂತರ ರೂಪಾಯಿಗಳನ್ನು ಕದ್ದಿರುವುದಾಗಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ದೇವಾಲಯದ ದೇಣಿಗೆ ನಿರ್ವಹಣೆ ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳ ಬಗ್ಗೆ ತನಿಖೆ ತೀವ್ರಗೊಂಡಿದ್ದು, ಈ ನಡುವೆ ಅನಿಲ್ ಮಿಶ್ರಾ ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಮ್ಮ ಹುದ್ದೆಗೆ ಇತ್ತೀಚೆಗೆ ರಾಜೀನಾಮೆ ನೀಡಿದ್ದಾರೆ. ಅವಿನಾಶ್ ಶುಕ್ಲಾ ವಿಚಾರಣೆಯ ಸಮಯದಲ್ಲಿ ದೇವಾಲಯದ ಟ್ರಸ್ಟಿ ಅನಿಲ್ ಮಿಶ್ರಾ ವಿರುದ್ದವೂ ಆರೋಪ ಕೇಳಿ ಬಂದಿದೆ. ಅನಿಲ್ ಮಿಶ್ರಾ ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವಿನಾಶ್ ಪೊಲೀಸರಿಗೆ ತಿಳಿಸಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಇತರ ಏಳು ಮಂದಿಗಳಲ್ಲಿ ಚಂಪತ್ ರಾಯ್ ಅವರ ಆಪ್ತ ಸಹಚರ ರಾಮಶಂಕರ್ ಅಲಿಯಾಸ್ ಟಿನ್ನು ಯಾದವ್ ಕೂಡ ಸೇರಿದ್ದಾನೆ. ಈತನೊಂದಿಗೆ ಎಣಿಕೆ ಉಸ್ತುವಾರಿ ಸುಭಾಷ್ ಶ್ರೀವಾಸ್ತವ, ಎಣಿಕೆ ಸಿಬ್ಬಂದಿ ಸದಸ್ಯರಾದ ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ರಾಮ್ ಶಂಕರ್ ಮಿಶ್ರಾ ಮತ್ತು ಕರುಣೇಶ್ ಪಾಂಡೆ ಎಂಬವರನ್ನು ಕೂಡ ಬಂಧಿಸಲಾಗಿದೆ. ಅವಿನಾಶ್ ಶುಕ್ಲಾ ಹೇಳಿದ್ದೇನು? .
ದೇಣಿಗೆ ಎಣಿಕೆ ಕೋಣೆಯ ಒಂದು ಕೀಲಿ ಟಿನ್ನು ಯಾದವ್ ಬಳಿ ಇತ್ತು. ಇನ್ನೊಂದು ಕೀಲಿಯನ್ನು ಬ್ಯಾಂಕ್ ನೌಕರರು ಹೊಂದಿದ್ದರು. ಹಲವಾರು ಮಂದಿ ಸೇರಿ ಕಳ್ಳತನ ನಡೆಸಲಾಗಿದೆ. ಒಬ್ಬ ವ್ಯಕ್ತಿ ಹಣ ತೆಗೆದುಕೊಂಡರೆ ಇತರರು ಆತನ ಸುತ್ತ ರಕ್ಷಣೆಗಾಗಿ ನಿಂತುಕೊಂಡಿದ್ದರು.
ಆರೋಪಿಗಳು ಸಂಕೀರ್ಣದ ಒಳಗೆ ಅಳವಡಿಸಲಾದ ಕೆಮರಾಗಳ ಸ್ಥಳದ ಬಗ್ಗೆ ತಿಳಿದಿದ್ದರು. ಹೀಗಾಗಿ ಕೆಮರಾದಲ್ಲಿ ಸೆರೆಯಾಗುವುದನ್ನು ತಪ್ಪಿಸುವುದನ್ನು ಕೂಡ ಅವರು ತಿಳಿದಿದ್ದರೂ. ಅವಕಾಶ ಸಿಕ್ಕಾಗಲೆಲ್ಲಾ ಕದ್ದ ಹಣವನ್ನು ಬಚ್ಚಿಡಲು ಸ್ನಾನಗೃಹಕ್ಕೆ ಹೋಗುತ್ತಿದ್ದರು. ಟ್ರಸ್ಟ್‌ಗೆ ಸಂಬಂಧಿಸಿದ ಜನರೊಂದಿಗಿನ ಹೆಚ್ಚಿನ ಸಂಪರ್ಕವಿದ್ದುದರಿಂದ ಯಾರಿಗೂ ಯಾರ ಮೇಲೂ ಅನುಮಾನ ಬರಲಿಲ್ಲ ಮತ್ತು ಯಾರೂ ಕೂಡ ತಮ್ಮ ಮೇಲೆ ನಿಗಾ ಇರಿಸಲಿಲ್ಲ ಎಂದು ಶುಕ್ಲಾ ಪೊಲೀಸರಿಗೆ ತಿಳಿಸಿದ್ದಾನೆ.
ದೇವಾಲಯ ಸಂಕೀರ್ಣದೊಳಗೆ ಅಳವಡಿಸಲಾದ ಕೆಮರಗಳನ್ನು ನಿಯಂತ್ರಣ ಕೊಠಡಿಯಿಂದ ಮೇಲ್ವಿಚಾರಣೆ ನಡೆಸಲಾಗುತ್ತಿದ್ದರೂ ಕಣ್ಗಾವಲು ಸಿಬ್ಬಂದಿ ಅವರ ಚಲನವಲನಗಳನ್ನು ಸಕ್ರಿಯವಾಗಿ ಪತ್ತೆಹಚ್ಚುತ್ತಿರಲಿಲ್ಲ ಎಂದು ತಿಳಿಸಿರುವ ಶುಕ್ಲಾ, ಕದ್ದ ಹಣದಲ್ಲಿ ಭೂಮಿ ಮತ್ತು ಮನೆ ಖರೀದಿ ಮಾಡಿರುವುದಾಗಿ ಹೇಳಿದ್ದಾನೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಂಡಾಯ: ‘ʼನಾವು ಪಾಕಿಸ್ತಾನದ ಭಾಗವಲ್ಲʼ’ ಎಂದ ಸ್ಥಳೀಯರು
ಅಯೋಧ್ಯೆ ರಾಮ ಮಂದಿರದ ದೇಣಿಗೆ ಹಣ ಕಳ್ಳತನದ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಜೂನ್ 13 ರಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಇದಕ್ಕೂ ಮೊದಲು ಅಂದರೆ ಜೂನ್ ತಿಂಗಳ ಆರಂಭದಲ್ಲಿ ರಾಮ ಜನ್ಮ ಭೂಮಿ ಟ್ರಸ್ಟ್ ಜೂನ್ 5 ರಂದು ಅವಿನಾಶ್ ಶುಕ್ಲಾ ಮನೆಯಿಂದ 58 ಲಕ್ಷ ರೂ.ಗಳನ್ನು ವಶಕ್ಕೆ ಪಡೆದಿದೆ. ಇದರ ಬಳಿಕ ಎಫ್‌ಐಆರ್ ದಾಖಲಿಸಲಾಗಿತ್ತು. ಹಣ ಕಳವು ಪ್ರಕರಣದ ಕಾನೂನು ಪ್ರಕ್ರಿಯೆ ಆರಂಭಕ್ಕೂ ಮೊದಲೇ ಹಣ ಮರುಪಡೆಯಲು ಟ್ರಸ್ಟ್ ಕಾರ್ಯ ಪ್ರಾರಂಭಿಸಿದೆ ಎನ್ನುವುದು ತನಿಖೆ ವೇಳೆ ಕಂಡು ಬಂದಿದೆ.