ಬಗೆದಷ್ಟೂ ಹೊರ ಬರುತ್ತಿದೆ ರಾಮ ಮಂದಿರದಲ್ಲಿನ ಹಗರಣ; ಹಣಕೊಟ್ಟು ಕೆಲಸಕ್ಕೆ ಸೇರಿದ್ದ ಹಲವು ಸಿಬ್ಬಂದಿ: ತನಿಖೆಯ ಹೊಸ ಅಪ್‌ಡೇಟ್ ಇಲ್ಲಿದೆ
ಅಯೋಧ್ಯೆಯ ರಾಮ ಮಂದಿರದಲ್ಲಿ ಉದ್ಯೋಗ ಪಡೆಯಲು ತನ್ನ ಸಂಬಂಧಿಕರು ಸೇರಿದಂತೆ 125 ಮಂದಿಗೆ ರಾಮ ಮಂದಿರ ಟ್ರಸ್ಟ್ ಟ್ರಸ್ಟಿ ಅನಿಲ್ ಮಿಶ್ರಾ ಶಿಫಾರಸ್ಸು ಮಾಡಿದ್ದರು. ಇದಕ್ಕಾಗಿ ಅವರು ಲಂಚ ಪಡೆದಿದ್ದರು ಎನ್ನುವ ಆರೋಪವೂ ಕೇಳಿ ಬಂದಿದೆ. ಕಳೆದ ವಾರ ಅನಿಲ್ ಮಿಶ್ರಾ ಅವರು ಟ್ರಸ್ಟ್‌ನ ಟ್ರಸ್ಟಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಇದೀಗ ಅವರನ್ನು ವಿಶೇಷ ತನಿಖಾ ತಂಡ ವಿಚಾರಣೆಗೆ ಒಳಪಡಿಸಿದೆ.
ಸಂಗ್ರಹ ಚಿತ್ರ -
ಉತ್ತರಪ್ರದೇಶ: ಅಯೋಧ್ಯೆಯ ರಾಮ ಮಂದಿರದಲ್ಲಿ (ayodhya Ram Mandir) ನಡೆದ ದೇಣಿಗೆ ಹಣ ಕಳ್ಳತನ (donation theft) ಪ್ರಕರಣಕ್ಕೆ ಸಂಬಂಧಿಸಿ ರಾಮ ಮಂದಿರದ ಮಾಜಿ ಟ್ರಸ್ಟಿ ಅನಿಲ್ ಮಿಶ್ರಾ (trustee Anil Mishra) ಅವರನ್ನು ವಿಶೇಷ ತನಿಖಾ ತಂಡ (SIT) ವಿಚಾರಣೆಗೆ ಒಳಪಡಿಸಿದೆ. ಅನಿಲ್ ಮಿಶ್ರಾ ಅವರ ಶಿಫಾರಸುಗಳನ್ನು ಪಡೆದು ರಾಮ ಮಂದಿರದಲ್ಲಿ ಸುಮಾರು 125 ಮಂದಿ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಇದಕ್ಕಾಗಿ ಅವರು ಲಂಚ ಪಡೆದಿದ್ದರು ಎನ್ನುವ ಆರೋಪವು ಕೇಳಿ ಬಂದಿದೆ. ರಾಮ ಮಂದಿರದ ದೇಣಿಗೆ ದುರುಪಯೋಗಕ್ಕೂ ಅನಿಲ್ ಮಿಶ್ರಾ ಶಿಫಾರಸು ಮಾಡಿರುವ ಸಿಬ್ಬಂದಿಗೂ ಸಂಬಂಧವಿದೆಯೇ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ.
ಅಯೋಧ್ಯೆ ರಾಮ ಮಂದಿರದ ಹಣ ದುರುಪಯೋಗಕ್ಕೆ ಸಂಬಂಧಿಸಿ ತನಿಖೆ ತೀವ್ರಗೊಂಡಿದ್ದು, ಬಂಧಿತ ಆರೋಪಿಗಳ ವಿಚಾರಣೆ ವೇಳೆ ರಾಮ ಮಂದಿರದ ಟ್ರಸ್ಟಿ ಅನಿಲ್ ಮಿಶ್ರಾ ವಿರುದ್ಧ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಅವರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಲಾಗಿದೆ.
ರಾಮ ಮಂದಿರದ ಕದ್ದ ಹಣ ಶೌಚಾಲಯಗಳಲ್ಲಿ ಅಡಗಿಸಿಟ್ಟ ಆರೋಪಿ
ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರೊಂದಿಗೆ ಅನಿಲ್ ಮಿಶ್ರಾ ಕೂಡ ಕಳೆದ ವಾರ ರಾಮ ಮಂದಿರ ಟ್ರಸ್ಟ್‌ನ ಟ್ರಸ್ಟಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ನಡುವೆ ವಿಶೇಷ ತನಿಖಾ ತಂಡ ರಾಮ ಮಂದಿರದ ಹೆಚ್ಚಿನ ಉದ್ಯೋಗಿಗಳನ್ನು ಅನಿಲ್ ಮಿಶ್ರಾ ಅವರ ಶಿಫಾರಸಿನ ಮೇರೆಗೆ ನೇಮಕ ಮಾಡಿಕೊಳ್ಳಲಾಗಿದೆ ಎಂಬುದನ್ನು ಕಂಡುಕೊಂಡಿದ್ದರಿಂದ ಅವರನ್ನು ವಿಚಾರಣೆಗೆ ಒಳಪಡಿಸಿದೆ.
ದೇವಾಲಯದ ವಿವಿಧ ಕೆಲಸ ಕಾರ್ಯಗಳಿಗೆ ತಮ್ಮ ಸಂಬಂಧಿಗಳು ಸೇರಿದಂತೆ ಕನಿಷ್ಠ 125 ಸಿಬ್ಬಂದಿ ನೇಮಕಕ್ಕೆ ಅನಿಲ್ ಮಿಶ್ರಾ ಅವರು ಶಿಫಾರಸ್ಸು ಮಾಡಿದ್ದರು. ಇದಕ್ಕಾಗಿ ಅನಿಲ್ ಮಿಶ್ರಾ ಅವರು ಲಂಚ ಪಡೆದಿದ್ದರೆ ಎನ್ನುವ ಆರೋಪವೂ ಇದೆ. ಅನಿಲ್ ಮಿಶ್ರಾಗೆ ಸಂಬಂಧಿಸಿದ ಹಲವಾರು ಆಸ್ತಿಗಳನ್ನು ತನಿಖೆ ವೇಳೆ ಬಹಿರಂಗಪಡಿಸಲಾಗಿದೆ. ಅವರು ಮಂದಿರದ ಟ್ರಸ್ಟಿಯಾದ ಬಳಿಕ ಹೆಚ್ಚಿಸಿಕೊಂಡಿರುವ ಆಸ್ತಿಯ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದೆ.
ರಾಮ ಮಂದಿರದ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಆರೋಪಿಗಳಲ್ಲಿ ಅನಿಲ್ ಮಿಶ್ರಾ ಅವರ ಸಂಬಂಧಿಗಳಾದ ಅನುಕಲ್ಪ್ ಮಿಶ್ರಾ ಮತ್ತು ಲವ್ ಕುಶ್ ಮಿಶ್ರಾ ಕೂಡ ಸೇರಿದ್ದಾರೆ. ಇವರೊಂದಿಗೆ ಅವಿನಾಶ್ ಶುಕ್ಲಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಅವರನ್ನು ಮಂಗಳವಾರ ಎಸ್‌ಐಟಿ ತಂಡ ಹಲವಾರು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.
ರಾಮ ಮಂದಿರದ ದೇಣಿಗೆಎಣಿಕೆ ಕಾರ್ಯಕ್ಕಾಗಿ ಎಸ್‌ಬಿಐ ಖಾಸಗಿ ಏಜೆನ್ಸಿಯನ್ನು ನೇಮಿಸಿಕೊಂಡಿದೆ. ನಗದು ಕಾಣಿಕೆಗಳನ್ನು ನಾಲ್ಕು ದೇಣಿಗೆ ಪೆಟ್ಟಿಗೆಗಳಲ್ಲಿ ಹಾಕಲಾಗುತ್ತದೆ. ಇದನ್ನು 11 ಬ್ಯಾಂಕ್ ಸಿಬ್ಬಂದಿ ಮತ್ತು ದೇವಾಲಯದ ಟ್ರಸ್ಟ್‌ನ ಮೂವರು ಸೇರಿದಂತೆ ಒಟ್ಟು 14 ಜನರ ತಂಡವು ಎಣಿಕೆ ಮಾಡುತ್ತದೆ.
Haveri Clash: ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ರೈತನ ಕೈ ಕಟ್; ಎರಡು ಕೋಮುಗಳ ನಡುವೆ ಮಾರಾಮಾರಿ, 8 ಮಂದಿಗೆ ಗಾಯ
ದೇವಾಲಯದಲ್ಲಿ ದೇಣಿಗೆ ಎಣಿಕೆಯಲ್ಲಿಯೂ ಭಾಗಿಯಾಗಿದ್ದ ಅನಿಲ್ ಮಿಶ್ರಾ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ತಮಗೆ ಕಳ್ಳತನ ಮಾಡಲು ಅವಕಾಶ ನೀಡಿತ್ತು. ಅವರನ್ನು ಪ್ರಶ್ನಿಸುವವರು ಯಾರೂ ಇರಲಿಲ್ಲ. ಎಲ್ಲೆಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು ಎಂಬುದು ಅವರಿಗೆ ಗೊತ್ತಿತ್ತು. ಕಳವು ಪ್ರಕರಣ ಪ್ರಮುಖ ಆರೋಪಿಯಾಗಿರುವ ಟಿನ್ನು ಯಾದವ್ ಮತ್ತು ಬ್ಯಾಂಕ್ ನೌಕರರು ಕದ್ದ ಹಣದ ಒಂದು ಪಾಲನ್ನು ಪಡೆದುಕೊಂಡಿದ್ದಾರೆ ಎಂದು ವಿಚಾರಣೆ ವೇಳೆ ಆರೋಪಿಗಳು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.