ಜಾನಿ ಅಲ್ಲ ಜಾವೇದ್ ಖಾನ್! ಇನ್‌ಸ್ಟಾಗ್ರಾಮ್ ಫೇಕ್ ಐಡಿ ಮೂಲಕ ಹಿಂದೂ ಯುವತಿಯನ್ನು ಬಲೆಗೆ ಬೀಳಿಸಿ ಮದುವೆಯಾದ ಮುಸ್ಲಿಂ ವ್ಯಕ್ತಿ; ಮತಾಂತರಕ್ಕೆ ಒತ್ತಡ
Love Jihad: ಇನ್‌ಸ್ಟಾಗ್ರಾಮ್‌ನಲ್ಲಿ ಹಿಂದೂ ಎಂದು ಪರಿಚಯಿಸಿಕೊಂಡು, ಬಳಿಕ ಯುವತಿಯೊಬ್ಬಳನ್ನು ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ ಮುಸ್ಲಿಂ ವ್ಯಕ್ತಿಯೊಬ್ಬನ ಅಸಲಿ ಬಣ್ಣ ಬಯಲಾಗಿದೆ. ಪತಿಯ ಮುಖವಾಡ ಕಳಚಿ ಬಿದ್ದ ಮೇಲೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.
ಚಾಟ್‌ಜಿಪಿಟಿ ರಚಿತ ಚಿತ್ರ ಮತ್ತು ಪತಿಯೊಂದಿಗೆ ಸಂತ್ರಸ್ತೆ -
ಚಂಡೀಗಢ, ಅ. 7: ಇನ್‌ಸ್ಟಾಗ್ರಾಮ್‌ನಲ್ಲಿ ತಾನು ಹಿಂದೂ ಎಂದು ಪರಿಚಯಿಸಿಕೊಂಡು, ಬಳಿಕ ಯುವತಿಯೊಬ್ಬಳನ್ನು ಪ್ರೀತಿಸಿ, ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ ಮುಸ್ಲಿಂ ವ್ಯಕ್ತಿಯೊಬ್ಬನ ಅಸಲಿ ಬಣ್ಣ ಬಯಲಾಗಿದೆ. ಆತ ತನ್ನ ನಿಜವಾದ ಗುರುತನ್ನು ಮರೆಮಾಚಿದ್ದಲ್ಲದೆ, ಈಗಾಗಲೇ ವಿವಾಹಿತನಗಿದ್ದು, ಮೂರು ಮಕ್ಕಳನ್ನು ಹೊಂದಿದ್ದ ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಹರಿಯಾಣದ ಸೋನಿಪತ್‌ನಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೋಳಿಸರು ತನಿಖೆ ಆರಂಭಿಸಿದ್ದಾರೆ.
ಸಂತ್ರಸ್ತೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಜಾನಿ ಎಂಬ ಹೆಸರಿನಿಂದ ವ್ಯಕ್ತಿಯೊಬ್ಬ ಪರಿಚಯವಾಗಿದ್ದ. ತಾನು ಹಿಂದೂ ಧರ್ಮದವನೆಂದು ಹೇಳಿಕೊಂಡಿದ್ದ ಈತ, ಆಕೆಯೊಂದಿಗೆ ನಿಕಟ ಸಂಪರ್ಕ ಬೆಳೆಸಿ ಬಳಿಕ ಪ್ರೀತಿಯ ಬಲೆಯಲ್ಲಿ ಕೆಡವಿದ್ದ. ಇಬ್ಬರ ನಡುವೆ ಪ್ರೀತಿ ಮುಂದುವರಿದು, ಆಕೆಯನ್ನು ನಂಬಿಸಿದ ಜಾನಿ, ಹಿಂದೂ ವೈದಿಕ ಸಂಪ್ರದಾಯದಂತೆಯೇ ವಿವಾಹವಾಗಿದ್ದ. ಮದುವೆಯ ನಂತರ ಇಬ್ಬರೂ ದಂಪತಿಯಾಗಿ ವಾಸಿಸಲು ಪ್ರಾರಂಭಿಸಿದ್ದರು. ವಿವಾಹವಾದ ಕೆಲ ಸಮಯದ ನಂತರ, ಪತಿಯ ನಡವಳಿಕೆಯಲ್ಲಿ ಸಂಶಯ ಬಂದು ಆತನ ಆಧಾರ್ ಕಾರ್ಡ್ ಪರಿಶೀಲಿಸಿದಾಗ ಅಸಲಿ ಹೆಸರು ಜಾವೇದ್ ಖಾನ್ ಹಾಗೂ ಆತ ಮುಸ್ಲಿಂ ಸಮುದಾಯದವನೆಂಬ ಆಘಾತಕಾರಿ ಸತ್ಯ ಸಂತ್ರಸ್ತೆಗೆ ತಿಳಿದುಬಂತು. ಅಷ್ಟೇ ಅಲ್ಲದೆ, ಆತನಿಗೆ ಈಗಾಗಲೇ ಮೊದಲ ಮದುವೆಯಾಗಿದ್ದು, ಮೂವರು ಮಕ್ಕಳು ಬೇರೆ ಇದ್ದಾರೆ.
ಅಸ್ಸಾಂ ವಿದ್ಯಾರ್ಥಿನಿ ನಿಮಿಷಾ ಕೊಲೆ ಆರೋಪಿ ಆಸಿಫ್ ಅಲಿ ಪರಾರಿಯಾಗಲು ಯತ್ನ
ಸಂತ್ರಸ್ತೆಯ ಪ್ರಕಾರ, ಜಾವೇದ್ ಖಾನ್‌ನ ಮೊದಲ ಹೆಂಡತಿ ಅವರು ವಾಸವಿದ್ದ ಸ್ಥಳಕ್ಕೆ ಬಂದಾಗ ಈ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತು. ಮೊದಲ ಪತ್ನಿ ತನ್ನೊಂದಿಗೆ ಜಗಳವಾಡಿ, ನಂತರ ಜಾವೇದ್‌ನನ್ನು ಕರೆದೊಯ್ದಳು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ʼʼಕೆಲವು ದಿನಗಳ ನಂತರ ಜಾವೇದ್ ಹಿಂತಿರುಗಿ, ನಿನ್ನೊಂದಿಗೆ ವಾಸಿಸಬಾರದು ಎಂದು ನನ್ನ ಕುಟುಂಬದವರು ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದ್ದ. ಇದಾದ ನಂತರವೂ ನಾವಿಬ್ಬರೂ ಒಟ್ಟಿಗೆ ವಾಸಿಸುವುದನ್ನು ಮುಂದುವರಿಸಿದೆವು. ಆಮೇಲೆ ಉತ್ತರ ಪ್ರದೇಶದ ಬುಧಾನಗೆ ತೆರಳಿ ಅಲ್ಲಿ ಕೆಲವು ದಿನಗಳ ಕಾಲ ವಾಸವಿದ್ದೆವು. ಅಲ್ಲಿದ್ದಾಗಲೇ ಒಂದು ಮಗು ಜನಿಸಿತ್ತು. ಮತ್ತೆ ಸೋನಿಪತ್‌ಗೆ ಮರಳಿ ಅಲ್ಲಿಯೇ ವಾಸಿಸುವುದನ್ನು ಮುಂದುವರಿಸಿದೆವುʼʼ ಎಂದು ಆಕೆ ವಿವರಿಸಿದ್ದಾಳೆ.
ಧರ್ಮ ಪರಿವರ್ತನೆಗೆ ಒತ್ತಡ
ತನ್ನ ಅಸಲಿ ಗುರುತು ಬಹಿರಂಗಗೊಂಡ ನಂತರ ಪತಿ ಹಾಗೂ ಆತನ ಕುಟುಂಬದವರು ಯುವತಿಯ ಮೇಲೆ ಧರ್ಮ ಪರಿವರ್ತನೆ ಮಾಡಿಕೊಳ್ಳುವಂತೆ ತೀವ್ರ ಒತ್ತಡ ಹೇರಲು ಹೇರಿದ್ದರು. ಜತೆಗೆ ಆಕೆಯ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಕಂಗೆಟ್ಟ ಸಂತ್ರಸ್ತೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮತ್ತು ಆತನ ಕುಟುಂಬದವರ ಪತ್ತೆಗೆ ಜಾಲ ಬೀಸಿದ್ದಾರೆ. ನಕಲಿ ಗುರುತಿನ ಮೂಲಕ ವಂಚನೆ, ಹಲ್ಲೆ ಹಾಗೂ ಬೆದರಿಕೆ ಸೇರಿ ಹಲವು ಕಾಯ್ದೆಗಳಡಿ ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.