Chikkaballapur News: ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಕಲ್ಪಿಸಿ ಕೃಷಿ ಅಭಿವೃದ್ಧಿಗೆ ಸಹಕಾರ: ವಿ.ಮಧುಚಂದ್ರ
ಸಂಘವು 78 ವರ್ಷಗಳಿಂದ ರೈತರಿಗೆ ಸಕಾಲದಲ್ಲಿ ಬೆಳೆ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಾ ಬಂದಿದೆ. ಪ್ರಸ್ತುತ ಅಧ್ಯಕ್ಷ ಚೆನ್ನಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಷೇರುದಾರರು ಹಾಗೂ ರೈತರಿಗೆ ಕೆಸಿಸಿ ಸಾಲ, ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಸ್ತ್ರೀಶಕ್ತಿ ಸಾಲ ಹಾಗೂ ಸಣ್ಣ ವ್ಯಾಪಾರಸ್ಥರಿಗೆ ವ್ಯಾಪಾರ ಸಾಲ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
-
ಚಿಕ್ಕಬಳ್ಳಾಪುರ: ರೈತರು ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಸಾಲವನ್ನು ಪಡೆದು ಸಮರ್ಪಕ ವಾಗಿ ಬಳಸಿಕೊಂಡು ಹೆಚ್ಚಿನ ಲಾಭ ಪಡೆಯಬೇಕು. ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವುದರಿಂದ ಸಹಕಾರ ಸಂಘದ ವ್ಯವಹಾರ ವೃದ್ಧಿಯಾಗಿ ಸಂಘವೂ ಆರ್ಥಿಕವಾಗಿ ಬಲಿಷ್ಠ ವಾಗಲಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಕಸಬಾ) ನಿರ್ದೇಶಕ ವಿ.ಮಧುಚಂದ್ರ ಹೇಳಿದರು.
ನಗರದ ಹಳೆ ಸಂತೆ ಬೀದಿಯಲ್ಲಿರುವ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ 78ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದರು.
ಸಂಘವು 78 ವರ್ಷಗಳಿಂದ ರೈತರಿಗೆ ಸಕಾಲದಲ್ಲಿ ಬೆಳೆ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯ ಗಳನ್ನು ಒದಗಿಸುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಾ ಬಂದಿದೆ. ಪ್ರಸ್ತುತ ಅಧ್ಯಕ್ಷ ಚೆನ್ನಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಷೇರುದಾರರು ಹಾಗೂ ರೈತರಿಗೆ ಕೆಸಿಸಿ ಸಾಲ, ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಸ್ತ್ರೀಶಕ್ತಿ ಸಾಲ ಹಾಗೂ ಸಣ್ಣ ವ್ಯಾಪಾರಸ್ಥರಿಗೆ ವ್ಯಾಪಾರ ಸಾಲ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ಇದನ್ನೂ ಓದಿ: Chikkaballapur News: ಹೆದ್ದಾರಿ ಅಗಲೀಕರಣಕ್ಕೆ ಜೆಸಿಬಿ ಗರ್ಜನೆ; ಎರಡು ತಿಂಗಳಲ್ಲಿ ರಸ್ತೆ ಪೂರ್ಣ
ಸ್ತ್ರೀಶಕ್ತಿ ಸಾಲ ಪಡೆದ ಮಹಿಳೆಯರು ಟೈಲರಿಂಗ್, ಬ್ಯೂಟಿಷಿಯನ್, ಫ್ಯಾನ್ಸಿ ಸ್ಟೋರ್, ಸೀರೆ ವ್ಯಾಪಾರ, ಆಟಿಕೆ ಹಾಗೂ ಗೊಂಬೆ ತಯಾರಿಕೆ ಸೇರಿದಂತೆ ವಿವಿಧ ಸ್ವಉದ್ಯೋಗ ಚಟುವಟಿಕೆಗಳಿಗೆ ಸಾಲವನ್ನು ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಉಪಾಧ್ಯಕ್ಷ ಎಂ. ದೇವರಾಜು, ನಿರ್ದೇಶಕರಾದ ಕೆ.ಎಂ. ರಾಮಚಂದ್ರ, ಕೆ.ಬಿ. ಚಂದ್ರನಾಥ್, ಪಿ.ಎಸ್. ಶ್ರೀನಿವಾಸ್, ಎನ್. ಮಂಜುನಾಥ್, ಜಿ.ಆರ್. ಸುನಿಲ್ ಕುಮಾರ್, ಜೂಲ್ ಮುನಿಯಪ್ಪ, ಎಂ. ಕೃಷ್ಣಪ್ಪ, ಮಹಿಳಾ ನಿರ್ದೇಶಕರಾದ ಮಂಚನಬೆಲೆ ನಾರಾಯಣಮ್ಮ, ಲಕ್ಷ್ಮಮ್ಮ ಹಾಗೂ ಇತರರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಶ್ರೀನಿವಾಸ್, ಕ್ಯಾಶಿಯರ್ ಎನ್. ಸುನಿತಾ, ಕಂಪ್ಯೂಟರ್ ಸಹಾಯಕ ಶಶಿಧರ್ ಸೇರಿದಂತೆ ಸಂಘದ ನಿರ್ದೇಶಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಷೇರುದಾರರಾದ ರೈತರು ಭಾಗವಹಿಸಿದ್ದರು.