Physical Assault: ಇನ್‌ಸ್ಟಾಗ್ರಾಮ್‌ನಲ್ಲಿ ಬಾಲಕಿಗೆ ಫುಲ್ ಟಾರ್ಚರ್! 45,000 ರೂ. ವಸೂಲಿ ಮಾಡಿದ ಕಿಡಿಗೇಡಿ
ಉತ್ತರ ಪ್ರದೇಶದ ಲಖನೌದಲ್ಲಿ 13 ವರ್ಷದ ಬಾಲಕಿಯೊಬ್ಬಳನ್ನು ಸಾಮಾಜಿಕ ಮಾಧ್ಯಮದ ಮೂಲಕ ವಂಚಿಸಿ, ಬೆದರಿಕೆ ಹಾಕಿ, ಹಣ ವಸೂಲಿ ಮಾಡಿದ ಆರೋಪದಡಿ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಆರ್ಯನ್ ಸಿಂಗ್ ಎಂಬಾತನ ವಿರುದ್ಧ ಬಾಲಕಿಯ ತಂದೆ ದೂರು ದಾಖಲಿಸಿದ ಬಳಿಕ ಎಫ್‌ಐಆರ್ ದಾಖಲಾಗಿದೆ.

ಆರೋಪಿ ಆರ್ಯನ್ ಸಿಂಗ್ -

ಲಖನೌ: ಉತ್ತರ ಪ್ರದೇಶದ (Uttar Pradesh) ಲಖನೌದಲ್ಲಿ (Lucknow) 13 ವರ್ಷದ ಬಾಲಕಿಯೊಬ್ಬಳನ್ನು ಸಾಮಾಜಿಕ ಮಾಧ್ಯಮದ ಮೂಲಕ ವಂಚಿಸಿ, ಬೆದರಿಕೆ ಹಾಕಿ (Blackmailed), ಹಣ ವಸೂಲಿ ಮಾಡಿದ ಆರೋಪದಡಿ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಆರ್ಯನ್ ಸಿಂಗ್ ಎಂಬಾತನ ವಿರುದ್ಧ ಬಾಲಕಿಯ ತಂದೆ ದೂರು ದಾಖಲಿಸಿದ ಬಳಿಕ ಎಫ್‌ಐಆರ್ ದಾಖಲಾಗಿದೆ.
ನಾಕಾ ಹಿಂದೋಲಾ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, ಆರ್ಯನ್ ಸಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ಬಾಲಕಿಗೆ ರಿಕ್ವೆಸ್ಟ್ ಕಳುಹಿಸಿ ಸಂಪರ್ಕಕ್ಕೆ ಬಂದಿದ್ದ. ಬಾಲಕಿಯ ವಿಶ್ವಾಸ ಗಳಿಸಿದ ನಂತರ, ಆತ ಆಕೆಗರಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕಿಯು ಆರ್ಯನ್‌ನ ಸಹೋದರಿಗೆ ಈ ವಿಷಯವನ್ನು ತಿಳಿಸಲು ಯತ್ನಿಸಿದಾಗ, ಆತ ಆಕೆಯನ್ನು ನಿಂದಿಸಿ, ಕೊಲೆ ಬೆದರಿಕೆ ಒಡ್ಡಿದ್ದಾನೆ.
ಈ ಸುದ್ದಿಯನ್ನು ಓದಿ: Nandamuri Balakrishna: 50 ವರ್ಷದ ಸಿನಿ ಪಯಣ ಪೂರೈಸಿದ ಬಾಲಯ್ಯಗೆ ತಲೈವಾ ಸ್ಪೆಷಲ್ ವಿಶ್
ಬಾಲಕಿಯ ತಂದೆಯ ಪ್ರಕಾರ, ಆರ್ಯನ್ ಕುಟುಂಬಕ್ಕೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿ, ಬಾಲಕಿಯಿಂದ 45,000 ರಿಂದ 50,000 ರೂಪಾಯಿಗಳನ್ನು ವಸೂಲಿ ಮಾಡಿದ್ದಾನೆ. ಆಗಸ್ಟ್ 29 ರಂದು ಆತ ಮತ್ತೆ 50,000 ರೂಪಾಯಿ ಅಥವಾ ಆಭರಣಗಳನ್ನು ನೀಡುವಂತೆ ಒತ್ತಾಯಿಸಿದ್ದಾನೆ, ತಾನು ಬುಲೆಟ್ ಬೈಕ್ ಖರೀದಿಸಲು ಬಯಸುವುದಾಗಿ ಹೇಳಿದ್ದಾನೆ. ಬಾಲಕಿ ಹಣ ಕೊಡಲು ನಿರಾಕರಿಸಿಗ, ಆರ್ಯನ್ ಬಾಲಕಿಯ ಮನೆಗೆ ಬಂದಿದ್ದಾನೆ. ಆಗ ಕುಟುಂಬದವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಾಕಾ ಹಿಂದೋಲಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಈ ಘಟನೆಯನ್ನು ದೃಢೀಕರಿಸಿದ್ದು, ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣದ ಸಂಪೂರ್ಣ ತನಿಖೆ ನಡೆಯುತ್ತಿದೆ. ಈ ಘಟನೆಯು ಸಾಮಾಜಿಕ ಮಾಧ್ಯಮಗಳ ಮೂಲಕ ಮಕ್ಕಳ ಮೇಲೆ ದುರುಪಯೋಗದ ಬಗ್ಗೆ ಗಂಭೀರ ಆತಂಕವನ್ನು ಮೂಡಿಸಿದೆ. ಪೊಲೀಸರು ಆರೋಪಿಯ ಹಿನ್ನೆಲೆ ಮತ್ತು ಇತರ ಸಂಭಾವ್ಯ ತಪ್ಪಿತಸ್ಥರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.