ವಯಸ್ಸಿನ ಕಾರಣಕ್ಕೆ ಮದುವೆ ರದ್ದು: ಸಿಟ್ಟಿಗೆದ್ದ ವ್ಯಕ್ತಿಯಿಂದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ, ತಾಯಿ ಕೊಲೆ
Crime News: ಮದುವೆ ರದ್ದಿನಿಂದ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಯುವತಿ ಪ್ರೇಯಸಿ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯನ್ನು ಕಾಪಾಡಲು ಮುಂದಾದ ತಾಯಿ ಕೊಲೆಯಾದ ದುರ್ಘಟನೆ ತಮಿಳುನಾಡಿನ ವಿರುಧುನಗರದಲ್ಲಿ ನಡೆದಿದೆ. ಘಟನೆಯಲ್ಲಿ ಯುವತಿ ವರ್ಷಾಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾಂದರ್ಭಿಕ ಚಿತ್ರ -
ಚೆನ್ನೈ, ಜು.15: ಮದುವೆ ರದ್ದಾಗಿದ್ದಕ್ಕೆ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಪ್ರೇಯಸಿ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯನ್ನು ಕಾಪಾಡಲು ಮುಂದಾದ ತಾಯಿ ಕೊಲೆಯಾದ ದುರ್ಘಟನೆ ತಮಿಳುನಾಡಿನ (Tamil Nadu) ವಿರುಧುನಗರದಲ್ಲಿ ನಡೆದಿದೆ. ವಯಸ್ಸಿನ ವ್ಯತ್ಯಾಸದ ಕಾರಣ ಮದುವೆಯನ್ನು ರದ್ದುಗೊಳಿಸಿದ ಕಾರಣ 32 ವರ್ಷದ ವ್ಯಕ್ತಿಯೊಬ್ಬ 21 ವರ್ಷದ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಸಂತ್ರಸ್ತೆಯ ಮನೆಯಲ್ಲಿ ನಡೆದ ಈ ಘಟನೆ ವೇಳೆ ಯುವತಿಯ ತಾಯಿ ಮಗಳನ್ನು ರಕ್ಷಿಸಲು ಮುಂದಾಗಿದ್ದಾಳೆ. ಈ ವೇಳೆ ಮಹಿಳೆಯನ್ನು ಆರೋಪಿ ಹತ್ಯೆಗೈದಿದ್ದಾನೆ. ಆರೋಪಿಯನ್ನು ಯುವರಾಜ್ ಎಂದು ಗುರುತಿಸಲಾಗಿದೆ (crime news).
ಘಟನೆಯಲ್ಲಿ ಯುವತಿ ವರ್ಷಾಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಯುವರಾಜ್, ಯುವತಿಯ ಮನೆಗೆ ನುಗ್ಗಿ ಆಕೆಯನ್ನು ಕೊಲ್ಲಲು ಯತ್ನಿಸಿದ್ದಾನೆ. ಜ್ಯೋತಿ ತನ್ನ ಮಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಆಕೆಯನ್ನು ಕೊಂದಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ವರ್ಷಾ ತನ್ನ ಸಂಬಂಧಿ ಯುವರಾಜ್‌ನನ್ನು ಮದುವೆಯಾಗಲು ನಿರಾಕರಿಸಿದ್ದಳು ಎಂದು ತಿಳಿದುಬಂದಿದೆ.
ಕೆಲವು ತಿಂಗಳ ಹಿಂದಷ್ಟೇ ಅವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಆದರೆ ನಂತರ ವಯಸ್ಸಿನ ವ್ಯತ್ಯಾಸ ಕಾರಣದಿಂದ ಯುವತಿ ಮದುವೆಯನ್ನು ಮುಂದುವರಿಸಲು ನಿರಾಕರಿಸಿದರು ಎಂದು ವರದಿಯಾಗಿದೆ. ಇದರ ನಂತರ, ಆಕೆಯ ಕುಟುಂಬವು ಯುವರಾಜ್ ಜೊತೆಗಿನ ಸಂಪರ್ಕವನ್ನು ಕಡಿತಗೊಳಿಸಿತ್ತು.
ಪೊಲೀಸ್ ಕಸ್ಟಡಿಯಲ್ಲಿದ್ದ ವಿಶೇಷ ಚೇತನ ವ್ಯಕ್ತಿ ಸಾವು: ಜೈಲು ವಾರ್ಡನ್ ಬಂಧನ
ವರ್ಷಾ ಮತ್ತು ಯುವರಾಜ್ ನಡುವೆ ಮದುವೆ ನಿಶ್ಚಯವಾಗಿತ್ತು. ಆದರೆ, ವಯಸ್ಸಿನ ವ್ಯತ್ಯಾಸದಿಂದಾಗಿ 21 ವರ್ಷದ ವರ್ಷಾ 32 ವರ್ಷದ ಯುವರಾಜ್‌ನನ್ನು ಮದುವೆಯಾಗಲು ನಿರಾಕರಿಸಿದರು. ಕುಟುಂಬವು ಅವರೊಂದಿಗಿನ ಸಂಪರ್ಕವನ್ನು ಕಡಿತಗೊಳಿಸಿತು. ಇದರಿಂದ ಹತಾಶೆಗೊಂಡ ಯುವರಾಜ್, ವರ್ಷಾ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಸ್ಥಿತಿ ಗಂಭೀರವಾಗಿದೆ. ಆಕೆಯ ತಾಯಿ ವಿನಾಯಕ ಜ್ಯೋತಿ ಅವರನ್ನು ರಕ್ಷಿಸಲು ಪ್ರಯತ್ನಿಸಿದರು. ಈ ವೇಳೆ ದಾಳಿಯಲ್ಲಿ ಅವರು ಮೃತಪಟ್ಟರು ಎಂದು ವಿರುಧುನಗರ ಪೊಲೀಸ್ ವರಿಷ್ಠಾಧಿಕಾರಿ ಗೌತಮ್ ಗೋಯಲ್ ಹೇಳಿದ್ದಾರೆ.
ಮೊಬೈಲ್ ಫೋನ್‌ನಿಂದ ಪತಿಯ ತಲೆಗೆ ಹೊಡೆದು ಕೊಂದ ಪತ್ನಿ
ಕೌಟುಂಬಿಕ ಜಗಳದ ಬಳಿಕ ಪತಿ ಸಾವಿಗೀಡಾದ ಘಟನೆ ಒಡಿಶಾದ ಬೋಲಂಗಿರ್ ಜಿಲ್ಲೆಯಲ್ಲಿ ನಡೆದಿದೆ. ಜಗಳದ ವೇಳೆ ಪತ್ನಿಯು ಮೊಬೈಲ್ ಫೋನ್‌ನಿಂದ ಪತಿ ತಲೆಗೆ ಹೊಡೆದಿದ್ದಾಳೆ ಎಂದು ಆರೋಪಿಸಲಾಗಿದೆ. ಶನಿವಾರ (ಜು. 11) ದಂಪತಿ ತಮ್ಮ ನಿವಾಸದಲ್ಲಿ ತೀವ್ರ ಜಗಳವಾಡಿದರು. ಘರ್ಷಣೆಯ ಸಮಯದಲ್ಲಿ, ಪತ್ನಿ ಮೊಬೈಲ್ ಫೋನ್‌ನಿಂದ ಪತಿಯ ತಲೆಗೆ ಹೊಡೆದಿದ್ದಾಳೆ. ಇದರಿಂದ ಪತಿಯ ತಲೆಗೆ ಗಂಭೀರ ಗಾಯಗಳಾಗಿದ್ದವು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಪತಿ ಮೃತಪಟ್ಟಿದ್ದಾರೆ.
ಪತ್ನಿಯ ದಾಳಿಯಿಂದ ತಲೆಗೆ ಗಾಯಗೊಂಡ ವ್ಯಕ್ತಿಯನ್ನು ತಕ್ಷಣವೇ ಬೋಲಂಗೀರ್‌ನಲ್ಲಿರುವ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು. ನಂತರ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ವೈದ್ಯರು ಗಮನಿಸಿದ ನಂತರ ಡಿಸ್ಚಾರ್ಜ್ ಮಾಡಿ ಮನೆಗೆ ಮರಳಲು ಅನುಮತಿ ನೀಡಿದರು. ಆದರೆ ಮನೆಗೆ ತಲುಪಿದ ಕೂಡಲೇ ಅವರ ಆರೋಗ್ಯ ಅನಿರೀಕ್ಷಿತವಾಗಿ ಹದಗೆಟ್ಟಿತು. ಕುಟುಂಬ ಸದಸ್ಯರು ತುರ್ತು ವೈದ್ಯಕೀಯ ಆರೈಕೆಗಾಗಿ ಅವರನ್ನು ಮತ್ತೆ ಅದೇ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರ ಪ್ರಯತ್ನಗಳ ಹೊರತಾಗಿಯೂ, ಅವರು ಮೃತಪಟ್ಟರು.