Uma Shankari: ‘ಉಪ್ಪಿ ದಾದಾ MBBS’ ನಟಿ ಉಮಾಶಂಕರಿಗೆ ಕ್ಯಾನ್ಸರ್! ಭಾವನಾತ್ಮಕ ಪೋಸ್ಟ್ ವೈರಲ್
Uma Shankari Cancer: ನಿರ್ದೇಶಕ ಡಿ ರಾಜೇಂದ್ರ ಬಾಬು - ಹಿರಿಯ ನಟಿ ಸುಮಿತ್ರಾ ಅವರ ಹಿರಿಯ ಮಗಳು ಉಮಾಶಂಕರಿ. ಮದುವೆ ಬಳಿಕ ನಟಿ ಉಮಾ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ಮದುವೆ ನಂತರ ಎರಡ್ಮೂರು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಇದೀಗ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟಿ. 2ನೇ ಹಂತದ ಕಿಮೊಥೆರಪಿ, ಮ್ಯುನೊಥೆರಪಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಫೋಟೊ ಹಂಚಿಕೊಂಡಿದ್ದಾರೆ.
ನಟಿ ಉಮಾಶಂಕರಿ -
ಕನ್ನಡದಲ್ಲಿ ‘ಉಪ್ಪಿದಾದಾ ಎಂಬಿಬಿಎಸ್’ (Uppidada MBBS), ‘ಕಲ್ಲರಳಿ ಹೂವಾಗಿ’ ಮುಂತಾದ ಸಿನಿಮಾಗಳಲ್ಲಿ ನಾಯಕಿ ಆಗಿ ಮಿಂಚಿದ ಉಮಾಶಂಕರಿ (Umashankari) ಈಗ ಕ್ಯಾನ್ಸರ್ ಕಾಯಿಲೆಯಿಂದ (Cancer) ಬಳಲುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಕ್ಯಾನ್ಸರ್ ಜರ್ನಿ ಬಗ್ಗೆ ಬರೆದುಕೊಂಡಿದ್ದಾರೆ. 2ನೇ ಹಂತದ ಕಿಮೊಥೆರಪಿ, ಇಮ್ಯುನೊಥೆರಪಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಫೋಟೊ ಹಂಚಿಕೊಂಡಿದ್ದಾರೆ.
ಬದಲಾವಣೆ ಗೊತ್ತಾಗುತ್ತಿದೆ
"ದಿನದಿಂದ ದಿನಕ್ಕೆ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುತ್ತಿದ್ದೇನೆ. ಕಷ್ಟದ ದಿನಗಳನ್ನು ಹೇಗೆ ನಿಭಾಯಿಸಬೇಕೆಂದು ನಾನು ಕಲಿಯುತ್ತಿದ್ದೇನೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ನಾನು ಎಷ್ಟು ಬಲಶಾಲಿ ಎನ್ನುವುದು ಗೊತ್ತಾಗುತ್ತಿದೆ.
ಇದನ್ನೂ ಓದಿ: Aamir Khan: ಅಮೀರ್ ಖಾನ್‌ಗೆ ಸಂಕಷ್ಟ; ಫತ್ವಾ ಹೊರಡಿಸಿದ ಧರ್ಮಗುರು
ಸದಾ ನನ್ನೊಂದಿಗೆ ನಿಂತಿದ್ದಕ್ಕಾಗಿ ನನ್ನ ಕುಟುಂಬ ಹಾಗೂ ಅಭಿಮಾನಿಗಳಿಗೆ ಧನ್ಯವಾದಗಳು. ನಾನು ಧೈರ್ಯವಾಗಿ ಮುನ್ನಡೆಯುತ್ತಿದ್ದೇನೆ. ಚೇತರಿಸಿಕೊಳ್ಳುತ್ತಿದ್ದೇನೆ. ನನ್ನ ಆರೋಗ್ಯದ ಕಡೆ ಗಮನಹರಿಸುತ್ತಿದ್ದೇನೆ. ಸಂಪೂರ್ಣವಾಗಿ ಅಲ್ಲದೇ ಇದ್ದರೂ ಬದಲಾವಣೆ ಗೊತ್ತಾಗುತ್ತಿದೆ" ಎಂದು ನಟಿ ಉಮಾಶಂಕರಿ ಪೋಸ್ಟ್ ಮಾಡಿದ್ದಾರೆ.
ನಿರ್ದೇಶಕ ಡಿ ರಾಜೇಂದ್ರ ಬಾಬು - ಹಿರಿಯ ನಟಿ ಸುಮಿತ್ರಾ ಅವರ ಹಿರಿಯ ಮಗಳು ಉಮಾಶಂಕರಿ. ‘ಕರುಳಿನ ಕೂಗು’, ‘ಹಾಲುಂಡ ತವರು’, ‘ಒಲವಿನ ಉಡುಗೊರೆ’, ‘ರಾಮಾಚಾರಿ’ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶಿಸಿದವರು ದಿವಂಗತ ನಿರ್ದೇಶಕ ಡಿ ರಾಜೇಂದ್ರ ಬಾಬು.
ಮದುವೆ ಬಳಿಕ ನಟಿ ಉಮಾ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ಮದುವೆ ನಂತರ ಎರಡ್ಮೂರು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಇದೀಗ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟಿ.
ಬಿಎ, ಇಂಗ್ಲೀಷ್ ಲಿಟ್ರೇಚರ್ ಓದಿದ ಉಮಾಶಂಕರಿ 2000ನೇ ಇಸವಿಯಿಂದ ನಟನೆ ಆರಂಭಿಸಿದರು. 2005ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಉಪ್ಪಿ ದಾದಾ ಎಂಬಿಬಿಎಸ್’ ಚಿತ್ರದ ಮೂಲಕ ಕನ್ನಡಕ್ಕೆ ಉಮಾಶಂಕರಿ ಬಂದರು.
ಇದನ್ನೂ ಓದಿ: Samantha Ruth Prabhu : ತಾಯಿಯಾಗಬೇಕೆಂದು ಬಯಸಿದ್ದೆ! ಸಮಂತಾ ಮುಕ್ತ ಮಾತು
‘ಕಲ್ಲರಳಿ ಹೂವಾಗಿ’ ಚಿತ್ರದಲ್ಲಿ ಉಮಾಶಂಕರಿ ಮಿಂಚಿದರು. 2006ರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಎಚ್ ದುಶ್ಯಂತ್ ಅವರನ್ನ ಉಮಾಶಂಕರಿ ಮದುವೆಯಾದರು. ಉದಯ ಟಿವಿಯಲ್ಲಿ ಪ್ರಸಾರವಾದ ‘ಚಿಕ್ಕಮ್ಮ’ ಧಾರಾವಾಹಿಯಲ್ಲಿ ಉಮಾಶಂಕರಿ ನಟಿಸಿದ್ದರು.